ಅಪಘಾತ

ಇಸ್ರೇಲ್ – ಹಮಾಸ್ ಘರ್ಷಣೆ: ಕೇರಳ ಮೂಲದ ನರ್ಸ್’ಗೆ ಗಂಭೀರ ಗಾಯ

ಗಾಜಾ ಪಟ್ಟಿ: ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಘರ್ಷಣೆಯ ವೇಳೆ ಕೇರಳ ಮೂಲದ ನರ್ಸ್ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ಮೂಲದ ಮಹಿಳೆ ಶೀಜಾ ಆನಂದ್ ಭಾರತದಲ್ಲಿ ವಾಸಿಸುತ್ತಿರುವ ತನ್ನ ಪತಿಯೊಂದಿಗೆ ವೀಡಿಯೊ ಕರೆ ಮಾಡಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಪ್ಯಾಲೆಸ್ತೀನಿನ ಹಮಾಸ್‌ ದಾಳಿ ಮಾಡಿದ್ದು ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿರುವ ಶೀಜಾ ಆನಂದ್ ಶನಿವಾರ ಮುಂಜಾನೆ ಇಸ್ರೇಲ್‌ನ ಮೇಲೆ ಹಮಾಸ್ ಅನಿರೀಕ್ಷಿತ […]

ಇಸ್ರೇಲ್ – ಹಮಾಸ್ ಘರ್ಷಣೆ: ಕೇರಳ ಮೂಲದ ನರ್ಸ್’ಗೆ ಗಂಭೀರ ಗಾಯ Read More »

ಹೊಸಪೇಟೆಯಲ್ಲಿ ಭೀಕರ ಅಪಘಾತ: 7ಕ್ಕೂ ಹೆಚ್ಚು ಮಂದಿ ಸಾವು

ವಿಜಯನಗರ : ಇಲ್ಲಿನ ಹೊಸಪೇಟೆ ಹಾಗೂ ಮರಿಯಮ್ಮನಹಳ್ಳಿ ಮಧ್ಯೆ ಲಾರಿ ಮತ್ತು ಕ್ರೂಸರ್ ನಡುವೆ ಅಪಘಾತ ಸಂಭವಿಸಿದ್ದು, 7ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೊಸಪೇಟೆಯಿಂದ ಮರಿಯಮ್ಮನ ಹಳ್ಳಿಯತ್ತ ಲಾರಿ ಹೊರಟಿತ್ತು. ಈ ವೇಳೆ ಮರಿಯಮ್ಮನ ಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮತ್ತೊಂದು ಲಾರಿ ಹಾಗೂ ಕ್ರೂಸರ್ ಬರುತ್ತಿತ್ತು. ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲ ಬದಿ ಬರುತ್ತಿದ್ದ ಕ್ರೂಸರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಲಾರಿ ಮಧ್ಯೆ ಸಿಕ್ಕಿಹಾಕಿಕೊಂಡ ಕ್ರೂಸರ್ ವಾಹನ ಅಪ್ಪಚ್ಚಿ ಆಗಿದೆ.

ಹೊಸಪೇಟೆಯಲ್ಲಿ ಭೀಕರ ಅಪಘಾತ: 7ಕ್ಕೂ ಹೆಚ್ಚು ಮಂದಿ ಸಾವು Read More »

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್??

ಟೆಲ್ ಅವಿವ್: ಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಯುದ್ಧಕ್ಕಿಳಿದಿದ್ದು, ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು. ಆದರೆ ಉತ್ತರ ಇಸ್ರೇಲ್ನಲ್ಲಿ ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು. ಗಾಜಾದಿಂದ ಅನಿರೀಕ್ಷಿತ ದಾಳಿಯ 24 ಗಂಟೆಗಳ ನಂತರ ಇನ್ನೂ ದಾಳಿ ಮುಂದುವರಿದಿದೆ. ಇದರಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ನ ಭದ್ರತಾ ತಡೆಗೋಡೆಯನ್ನು ಭೇದಿಸಿ ಮತ್ತು ಹತ್ತಿರದ ಸ್ಥಳಗಳ ಮೂಲಕ ಆಗಮಿಸಿದರು. ಇಸ್ರೇಲ್ನಲ್ಲಿ ಕನಿಷ್ಠ 600

ಇಸ್ರೇಲ್’ನಲ್ಲಿ 600 ದಾಟಿದ ನಾಗರಿಕರ ಸಾವು, ಗಾಜಾದಲ್ಲಿ 300ಕ್ಕೂ ಹೆಚ್ಚು ಮೃತ್ಯು! | ಗುಪ್ತಚರ ವೈಫಲ್ಯಕ್ಕೆ ಬಲಿಯಾಯಿತೇ ಇಸ್ರೇಲ್?? Read More »

ಬೈಕ್‍ ಗೆ ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಸಚಿನ್ ಕುಮಾರ್ ಆಚಾರ್ಯ ಸ್ಥಳದಲ್ಲೇ ಮೃತ್ಯು

ಕೈಕಂಬ: ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ 169 ರ ಗಂಜಿಮಠ ಮುಚ್ಚಾರು ಕ್ರಾಸ್ ನಲ್ಲಿ ನಡೆದಿದೆ. ಗುರುಪುರ ಹೊಸಮನೆ ನಿವಾಸಿ, ಎಚ್‍ಡಿಎಫ್ ಸಿ ಉದ್ಯೋಗಿ ಸಚಿನ್ ಕುಮಾರ್ ಆಚಾರ್ಯ (33) ಮೃತಪಟ್ಟವರು. ಸಚಿನ್ ಸಂಜೆ ಕೆಲಸ ಮುಗಿಸಿ ಗುರುಪುರಕ್ಕೆ ಬೈಕ್‍ ನಲ್ಲಿ ಬರುತ್ತಿದ್ದ ಸಂದರ್ಭ ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಸಚಿನ್ ನ ತಲೆಗೆ ಗಂಭೀರ

ಬೈಕ್‍ ಗೆ ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಸಚಿನ್ ಕುಮಾರ್ ಆಚಾರ್ಯ ಸ್ಥಳದಲ್ಲೇ ಮೃತ್ಯು Read More »

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿಗಳು, 3 ಸಾವು

ಬೆಂಗಳೂರು: ಪಟಾಕಿ ಅನ್’ಲೋಡ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು, 3 ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ವರದಿಯಾಗಿದೆ. ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ್ದು, 4-5 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಂಗಡಿಯ ಎದುರು ನಿಲ್ಲಿಸಿದ್ದ 3 ಬೈಕ್’ಗಳು

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿಗಳು, 3 ಸಾವು Read More »

ಲಘು ವಿಮಾನ ಪತನ: ಇಬ್ಬರು ಭಾರತೀಯರು ಸೇರಿ ಮೂರು ಸಾವು

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ಸಣ್ಣ ವಿಮಾನ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ವರದಿಯಾಗಿದೆ. ಅವಳಿ ಎಂಜಿನ್‌ನ ಲಘು ಪೈಪರ್ ಪಿಎ-34 ಸೆನೆಕಾ ವಿಮಾನವು ಮರಗಳು ಮತ್ತು ಪೊದೆಗಳಿಗೆ ಅಪ್ಪಳಿಸಿತು ಎಂದು ರಾಯಿಟರ್ಸ್ ವರದಿಯಾಗಿದೆ. ವ್ಯಾಂಕೋವರ್‌’ನಿಂದ ಪೂರ್ವಕ್ಕೆ 100 ಕಿಲೋ ಮೀಟರ್ ದೂರದಲ್ಲಿರುವ ಚಿಲ್ಲಿವಾಕ್‌’ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ವರದಿಗಳ ಆಧಾರದ ಮೇಲೆ, ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಘಟನೆಯ ತನಿಖೆಗೆ ತನಿಖಾಧಿಕಾರಿಗಳನ್ನು

ಲಘು ವಿಮಾನ ಪತನ: ಇಬ್ಬರು ಭಾರತೀಯರು ಸೇರಿ ಮೂರು ಸಾವು Read More »

ಪುತ್ತೂರು: ಹೋಟೆಲಿಗೆ ಆವರಿಸಿದ ಗ್ಯಾಸ್ ಸಿಲಿಂಡರ್ ಬೆಂಕಿ!!

ಪುತ್ತೂರು: ಇಲ್ಲಿನ ಪಡೀಲ್ ಬಳಿಯ ಹೊಟೇಲೊಂದರಲ್ಲಿ ಶನಿವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರಿಗೆ ಬೆಂಕಿ ತಗುಲಿ, ಹೋಟೆಲಿಗೆ ಬೆಂಕಿ ಆವರಿಸಿಕೊಂಡಿತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಜನರು ಜಮಾಯಿಸಿದ್ದು, ಸ್ಥಳೀಯರು ಬೆಂಕಿ ನಂದಿಸಿದರು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

ಪುತ್ತೂರು: ಹೋಟೆಲಿಗೆ ಆವರಿಸಿದ ಗ್ಯಾಸ್ ಸಿಲಿಂಡರ್ ಬೆಂಕಿ!! Read More »

ಕಾರು ಢಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ಉಡುಪ ದುರ್ಮರಣ

ಬಂಟ್ವಾಳ: ಬೈಕ್ ಗೆ ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾಮಾಜೆ ಕ್ರಾಸ್ ಬಳಿ ಇಂದು ನಡೆದಿದೆ. ವಾಮದಪದವು ಸಮೀಪದ ಪಾಂಗಲ್ಪಾಡಿ ನಿವಾಸಿ ಶ್ರೀನಿವಾಸ ಉಡುಪ (58) ಮೃತಪಟ್ಟ ವ್ಯಕ್ತಿ. ವಾಮದಪದವನಿಂದ ಬಿಸಿರೋಡಿಗೆ ಬರುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಶ್ರೀನಿವಾಸ ಅವರು ಬಂಟ್ವಾಳ ದಿಂದ ಬರುತ್ತಿದ್ದು, ಕಾಮಾಜೆ ಕ್ರಾಸ್ ಬಳಿ ತಿರುಗಿಸಿದ ವೇಳೆ ಹಿಂಬದಿಯಿಂದ ಕಾರು ಢಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಉಡುಪರನ್ನು ತುಂಬೆ ಖಾಸಗಿ

ಕಾರು ಢಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ಉಡುಪ ದುರ್ಮರಣ Read More »

ವಿಟ್ಲದಲ್ಲಿ ಪಲ್ಟಿಯಾದ ಮಾರ್ಬಲ್ ತುಂಬಿದ್ದ ಲಾರಿ: ಕಾರ್ಮಿಕರ ಕೈ-ಕಾಲು ಛಿದ್ರ ಛಿದ್ರ!!

ವಿಟ್ಲ: ಅನ್ ಲೋಡ್ ಮಾಡುತ್ತಿದ್ದ ಸಂದರ್ಭ ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿಯಾಗಿ ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಕನ್ಯಾನ ಸಮೀಪದ ಒಡಿಯೂರಿನಲ್ಲಿ ನಡೆದಿದೆ. ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು, ಅವರು ನಾಲ್ಕು ಆ್ಯಂಬುಲೆನ್ಸ್’ಗಳ ಸಹಾಯದಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಬಲ್ ತುಂಬಿದ್ದ ಲಾರಿಯನ್ನು ಅನ್’ಲೋಡ್ ಮಾಡಲೆಂದು ರಿವರ್ಸ್ ತೆಗೆಯುತ್ತಿದ್ದಾಗ ಅವಘಡ ಸಂಭವಿಸಿದೆ. ಲಾರಿಯಲ್ಲಿದ್ದ ಕಾರ್ಮಿಕರ ಕೈ – ಕಾಲು ಛಿದ್ರ ಛಿದ್ರವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ

ವಿಟ್ಲದಲ್ಲಿ ಪಲ್ಟಿಯಾದ ಮಾರ್ಬಲ್ ತುಂಬಿದ್ದ ಲಾರಿ: ಕಾರ್ಮಿಕರ ಕೈ-ಕಾಲು ಛಿದ್ರ ಛಿದ್ರ!! Read More »

ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಬಸ್ | 21 ಮಂದಿ ಪ್ರವಾಸಿಗರ ದಾರುಣ ಸಾವು

ವೆನಿಸ್: ಕ್ಯಾಂಪ್‌ಗ್ರೌಂಡ್‌ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಉತ್ತರ ಇಟಲಿಯ ವೆನಿಸ್ ಬಳಿಯ ಮೇಲ್ಸೇತುವೆಯಿಂದ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 21 ಪ್ರವಾಸಿಗರು ಮೃತಪಟ್ಟಿದ್ದಾರೆ. ಸೇತುವೆ ಮೇಲಿಂದ 30 ಅಡಿ ಆಳಕ್ಕೆ ಬೀಳುವ ವೇಳೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಬಸ್ಸಿಗೆ ಬೆಂಕಿ ಹತ್ತಿಕೊಂಡು ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್ ಅವಘಡಕ್ಕೆ ಸಂಬಂಧಿಸಿ ”ವೆನಿಸ್‌ನ ಮೇಯರ್ ಲುಯಿಗಿ ಬ್ರುಗ್ನಾರೊ ಟ್ವಿಟರ್ ಎಕ್ಸ್‌ನಲ್ಲಿ ಇದೊಂದು ಭೀಕರ ಅವಘಡ. ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಬಸ್ | 21 ಮಂದಿ ಪ್ರವಾಸಿಗರ ದಾರುಣ ಸಾವು Read More »

error: Content is protected !!
Scroll to Top