ಆಟೋ ರಿಕ್ಷಾ-ಓಮ್ನಿ ಡಿಕ್ಕಿ : ರಿಕ್ಷಾ ಚಾಲಕ ಮೃತ್ಯು
ಸುಳ್ಯ: ಓಮ್ನಿ ಹಾಗೂ ಅಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಜಾಲ್ಸೂರು ಗ್ರಾಮದ ಅರಿಯಡ್ಕ ನಿವಾಸಿ ಬಾಬು ಪಾಟಾಳಿ ಅಪಘಾತದಿಂದ ಮೃತಪಟ್ಟವರು. ಜಾಲ್ಲೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಬಾಬು ಪಾಟಾಳಿಯವರು ಚಲಾಯಿಸುತ್ತಿದ್ದ ಅಟೋರಿಕ್ಷಾ ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಮುಂಭಾಗದಿಂದ ಬರುತ್ತಿದ್ದ ಓಮ್ಮಿಗೆ ಢಿಕ್ಕಿ ಹೊಡೆದಿದ್ದು, ಚಾಲಕ ಬಾಬು ಪಾಟಾಳಿ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ […]
ಆಟೋ ರಿಕ್ಷಾ-ಓಮ್ನಿ ಡಿಕ್ಕಿ : ರಿಕ್ಷಾ ಚಾಲಕ ಮೃತ್ಯು Read More »