ಕಾರು ಪಲ್ಟಿ : ಪ್ರಯಾಣಿಕರು ಅಪಾಯದಿಂದ ಪಾರು
ಪುತ್ತೂರು: ಕಾರೊಂದು ಪಲ್ಟಿಯಾದ ಘಟನೆ ಕೌಡಿಚ್ಚಾರು ಬಳಿ ಇಂದು ಮುಂಜಾನೆ ನಡೆದಿದೆ. ಅಲ್ವಿನ್ ಡಿ’ಸೋಜಾ ಹಾಗೂ ಕಾರ್ತಿಕ್ ಶೆಟ್ಟಿ ಕಾರ್ಕಳ ಎಂಬವರು ಮಡಿಕೇರಿ ಕಡೆಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ತಕ್ಷಣ ಸಾರ್ವಜನಿಕರು ರಕ್ಷಿಸಿದ್ದಾರೆ ಎನ್ನಲಾಗಿದೆ. ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿದರು.
ಕಾರು ಪಲ್ಟಿ : ಪ್ರಯಾಣಿಕರು ಅಪಾಯದಿಂದ ಪಾರು Read More »