ಅಪಘಾತ

ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ! | ಅಂಗಡಿ, ದ್ವಿಚಕ್ರ ವಾಹನಕ್ಕೆ ಹಾನಿ!

ವಿಟ್ಲ: ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಂಬಳಬೆಟ್ಟು ದರ್ಗಾದ ಬಳಿ ನಡೆದಿದೆ. ಸುಳ್ಯ ಮೂಲದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಓಮ್ನಿ ಕಾರು ನಿಯಂತ್ರಣ ತಪ್ಪಿ ತರಕಾರಿ ಅಂಗಡಿಗೆ ನುಗ್ಗಿದೆ ಎನ್ನಲಾಗಿದೆ. ಅಂಗಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯುಂಟಾಗಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ! | ಅಂಗಡಿ, ದ್ವಿಚಕ್ರ ವಾಹನಕ್ಕೆ ಹಾನಿ! Read More »

ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ

ಉಪ್ಪಿನಂಗಡಿ: ಕೆಲವೇ ಕ್ಷಣಗಳೊಳಗೆ ಪೆರ್ನೆಯ ಒಂದೇ ಪ್ರದೇಶದಲ್ಲಿ ಎರಡು ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಜ.8 ಸೋಮವಾರ ಸಂಜೆ ಪೆರ್ನೆ ಜಂಕ್ಷನ್‍ನಿಂದ ಕೆಲವೇ ಅಂತರ ದೂರದಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್‍ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಹಾಗೂ ಗ್ಯಾರೇಜ್‍ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ ಮೇಲಿನ ಘಟನೆ ನಡೆದ

ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ Read More »

ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!!

ಉತ್ತರಪ್ರದೇಶ: ಮೈನ್‌ಪುರಿ ಜಿಲ್ಲೆಯಲ್ಲಿ ಅಜಾಗರೂಕತೆಯಿಂದ ಭೀಕರ ಅಪಘಾತವೇ ಸಂಭವಿಸಿದೆ. ಮಂಚಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ತಿಂಗಳ ಅವಳಿ ಕಂದಮ್ಮಗಳು ಸಜೀವ ದಹನವಾಗಿದ್ದಾರೆ. ಮೈನ್‌ಪುರಿ ಜಿಲ್ಲೆಯ ಬೆಂಚಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೈನ್ಪುರಿ ರಸ್ತೆ ಬಳಿ ವಾಸಿಸುವ ಗೌರವ್ ಅಲಿಯಾಸ್ ದಿಲೀನ್ ಕುಮಾರ್ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಲ್ಲಿ ಅವರ ಪತ್ನಿ ರಜನಿ ಅವರ ಆರು ತಿಂಗಳ ಅವಳಿ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಇದ್ದರು. ರಜನಿ ಟೆರೇಸ್​​​​ನಲ್ಲಿರುವ ಕೋಣೆಯಲ್ಲಿ ನೇವಾರ್ ಕಾಟ್

ಚಳಿ ಕಾಯಿಸಲು ಹಾಕಿದ್ದ ಬೆಂಕಿಗೆ ಅವಳಿ ಕಂದಮ್ಮಗಳು ಸಜೀವ ದಹನ!! Read More »

ಯಶ್ ಹುಟ್ಟುಹಬ್ಬದ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್! | ಮೂವರು ಅಭಿಮಾನಿಗಳು ಮೃತ್ಯು!!

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಅಂಗವಾಗಿ ಕಟೌಟ್ ಕಟ್ಟಲು ಹೋಗಿದ್ದ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಹನುಮಂತ ಹರಿಜನ್, ಮುರಳಿ ನಡವಿನಮನಿ  ಮತ್ತು ನವೀನ್ ಗಾಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶ್ ಮೇಲಿನ ಅಭಿಮಾನದಿಂದ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಲು ಇವರೆಲ್ಲರೂ ಯೋಜಿಸಿದ್ದರು ಎನ್ನಲಾಗಿದೆ. ಈ ವೇಳೆ ಯಶ್ ಫೋಟೋವುಳ್ಳ ಬೃಹತ್ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಈ ಸಂಬಂಧ

ಯಶ್ ಹುಟ್ಟುಹಬ್ಬದ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್! | ಮೂವರು ಅಭಿಮಾನಿಗಳು ಮೃತ್ಯು!! Read More »

ಟಾಟಾ ಸುಮೋ, ಅಂಗಡಿ ಮೇಲೆ ಬಿದ್ದ ಮರ | ಇಬ್ಬರಿಗೆ ಗಾಯ

ಕಡಬ: ಚಲಿಸುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಜಂಕ್ಷನ್ ನಲ್ಲಿ ಸೋಮವಾರ ನಡೆದಿದೆ. ವಾಹನ ಚಾಲಕ ಬಿಳಿನೆಲೆ ನಿವಾಸಿ ಶೇಖ‌ರ್ ಹಾಗೂ ಮತ್ತೋರ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸುಬ್ರಹ್ಮಣ್ಯದಿಂದ ನೆಟ್ಟಣ ಕಡೆಗೆ ತೆರಳುತ್ತಿದ್ದ ಟಾಟಾ ಸುಮೋ ಹಾಗೂ ಕೈಕಂಬ ಜಂಕ್ಷನ್ ನಲ್ಲಿದ್ದ ಗೂಡಂಗಡಿಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ

ಟಾಟಾ ಸುಮೋ, ಅಂಗಡಿ ಮೇಲೆ ಬಿದ್ದ ಮರ | ಇಬ್ಬರಿಗೆ ಗಾಯ Read More »

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು | ಕೃಷಿ ಭೂಮಿ ನಾಶ

ಚೆನ್ನಾವರ : ಶನಿವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಚೆನ್ನಾವರ ಬಳಿಯ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನ ಒಂದು ಪಾರ್ಶ್ವ ಒಡೆದು ಅಪಾರ ಪ್ರಮಾಣದ ಕೃಷಿ ಭೂಮಿ‌ ನಷ್ಟವಾಗಿದೆ. ತೋಟಕ್ಕೆ ನೀರು ಹರಿದು ಮಣ್ಣು ಕುಸಿದಿದ್ದು, ಅಡಕೆ ಮರಗಳು ಧರೆಗುರುಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದರು.

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು | ಕೃಷಿ ಭೂಮಿ ನಾಶ Read More »

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು !

ಪುತ್ತೂರು: ಹೋಂಡಾ ಆಕ್ಟೀವಾ ಹಾಗೂ ಕಾರು ಅಪಘಾತದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕ್ಟೀವಾ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಇರ್ದೆ ಗ್ರಾಮದ ಉಪ್ಪಳಿಗೆ ನಾರಾಯಣ ನಾಯ್ಕ ಹಾಗೂ ಕಲ್ಯಾಣ ದಂಪತಿ ಪುತ್ರ ಪ್ರವೀಣ (18) ಮೃತ ಯುವಕ. ಡಿ.31 ರಂದು ಪ್ರವೀಣ್ ಪುತ್ತೂರಿನಿಂದ ಮನೆಯತ್ತ ಹಿಂದಿರುಗುತ್ತಿದ್ದಾಗ ಮುಕ್ರಂಪಾಡಿ ಬಳಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಸ್ತೆಗೆಸೆಯಲ್ಪಟ್ಟ ಸಹಸವಾರ ಪ್ರವೀಣ್ ತೀವ್ರ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು ! Read More »

ಸ್ಕೂಟಿಗೆ ಲಾರಿ ಡಿಕ್ಕಿ : ಗಂಭೀರ ಗಾಯ!

ಪುತ್ತೂರು: ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿ ತೆಂಕಿಲ ಬಳಿ ನಡೆದಿದೆ. ಸುಳ್ಯ ಕಡೆಗೆ ಮೀನು ಮಾರಾಟ ಮಾಡುತ್ತಿದ್ದ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಮುಂದುಗಡೆಯಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಚಾಲಕನ ಅಜಾಗರೂಕತೆ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಕೂಟಿಗೆ ಲಾರಿ ಡಿಕ್ಕಿ : ಗಂಭೀರ ಗಾಯ! Read More »

ಬಸ್ ಪಲ್ಟಿ : ಪ್ರಯಾಣಿಕರಿಗೆ ಗಾಯ

ನೆಲ್ಯಾಡಿ : ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಯಲ್ಲಿ ಪಲ್ಟಿಯಾಗಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಬಸ್‍ ನಲ್ಲಿ ಪ್ರಯಾಣಿಸುತ್ತಿದ್ದ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ.

ಬಸ್ ಪಲ್ಟಿ : ಪ್ರಯಾಣಿಕರಿಗೆ ಗಾಯ Read More »

ವಿದ್ಯುತ್ ಶಾಕ್ : ಲೈನ್‍ ಮ್ಯಾನ್ ಮೃತ್ಯು

ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್‌ ಓರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಳ್ಪದ ಪಾದೆ ಎಂಬಲ್ಲಿ ಶುಕ್ರವಾರ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ರಘು ಎಸ್‍.ಆರ್‍. (32) ಮೃತಪಟ್ಟವರು. ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್‌ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ

ವಿದ್ಯುತ್ ಶಾಕ್ : ಲೈನ್‍ ಮ್ಯಾನ್ ಮೃತ್ಯು Read More »

error: Content is protected !!
Scroll to Top