ಅಪಘಾತ

ನದಿಯಲ್ಲಿ ಮುಳುಗಿ ಓರ್ವ ಮೃತ್ಯು !

ಸುಳ್ಯ: ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪ ನದಿಯಲ್ಲಿ ನಡೆದಿದೆ. ಈಶ್ವರಮಂಗಲ ಪ್ರವೀಣ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈಶ್ವರಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪ ಹೊಳೆಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ಮೃತಪಟ್ಟ ವ್ಯಕ್ತಿ ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ನದಿಯಲ್ಲಿ ಮುಳುಗಿ ಓರ್ವ ಮೃತ್ಯು ! Read More »

ಹಿಮ್ಮುಖವಾಗಿ ಚಲಿಸಿದ ಪಿಕಪ್ ವಾಹನ : ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಮೃತ್ಯು

ಬೆಳ್ತಂಗಡಿ: ಚಾಲಕನ ಅಜಾಗರೂಕತೆಯಿಂದ ಪಿಕಪ್ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿಬಾಜೆ ಗ್ರಾಮದ ತಂದ್ಲಾಜೆಯಲ್ಲಿ ನಡೆದಿದೆ. ರುಕ್ಕ ಮುಗೇರ ಮೃತಪಟ್ಟರು ಎಂದು ಗುರುತಿಸಲಾಗಿದೆ. ಪಿಕಪ್ ಚಾಲಕ ಜಯೇಶ್ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಬದಿ ನಿಂತಿದ್ದ ರುಕ್ಷ್ಯ ಮುಗೇರ ಅವರಿಗೆ ಢಿಕ್ಕಿ ಹೊಡೆದಿದ್ದಾರೆ. ಅವಘಾತದ ಪರಿಣಾಮ, ರುಕ್ಷ್ಯ ಮುಗೇರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಉಜಿರೆಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ,

ಹಿಮ್ಮುಖವಾಗಿ ಚಲಿಸಿದ ಪಿಕಪ್ ವಾಹನ : ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಮೃತ್ಯು Read More »

ಕಾರು ಅಪಘಾತ : ನಾಲ್ವರಿಗೆ ಗಾಯ

ಸುಳ್ಯ: ಕಾರೊಂದು ಅಪಘಾತ ಸಂಭವಿಸಿ ನಾಲ್ವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಹೇಮಂತ್, ಜೀತೇಶ್ ಕೆರ್ಪಳ, ಗಿರೀಶ್  ಹಾಗೂ ಧನುಷ್ ಗಾಯಗೊಂಡವರು. ಆನೆಗುಂಡಿ ತಿರುವಿನ ಬಳಿ ಈ ಅಪಘಾತ ಸಂಭವಿಸಿದ್ದು, ಚಾಲಕನ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿವುದಾಗಿ ತಿಳಿದುಬಂದಿದೆ. ಗಾಯಾ:ಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಅಪಘಾತ : ನಾಲ್ವರಿಗೆ ಗಾಯ Read More »

ಬೈಕ್‍ ಗೆ ಜೀಪು ಡಿಕ್ಕಿ : ಬೈಕ್ ಸವಾರ ಮೃತ್ಯು, ಇಬ್ಬರು ಗಂಭೀರ

ಪುತ್ತೂರು: ಬೈಕ್‍ ಗೆ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ. ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್(48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ

ಬೈಕ್‍ ಗೆ ಜೀಪು ಡಿಕ್ಕಿ : ಬೈಕ್ ಸವಾರ ಮೃತ್ಯು, ಇಬ್ಬರು ಗಂಭೀರ Read More »

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ

ಕಡಬ:  ಆಟೋ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ವರ್ಷ ಮಗುವೊಂದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ರಾಮಕುಂಜದಲ್ಲಿ ಇಂದು ನಡೆದಿದೆ. ಸಾತ್ವಿಕ್ (4) ರಸ್ತೆಗೆಸೆಯಲ್ಪಟ್ಟು  ಗಾಯಗೊಂಡ ಮಗು. ಆಟೋರಿಕ್ಷಾ ಚಾಲಕ ಶಿವಪ್ರಸಾದ್ ಎಂಬವರು ಆಟೋವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಬ್ರೇಕ್ ಹಾಕಿದಾಗ ಆಟೋರಿಕ್ಷಾದಲ್ಲಿದ್ದ ಮಗು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದೆ ಎನ್ನಲಾಗಿದೆ. ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಏಕಾಏಕಿ ಬ್ರೇಕ್ ಹಾಕಿದ ಆಟೋ ಚಾಲಕ | ನಾಲ್ಕು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ Read More »

ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

ಸುಳ್ಯ : ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೊಗುತ್ತಿದ್ದ ಸುಳ್ಯ ಜಟ್ಟಿಪಳ್ಳ ನಿವಾಸಿ ಗೋಪಾಲ ಎಂಬವರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬುಧವಾರ ಮುಂಜಾನೆ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೊಗುತ್ತಿದ್ದ ಸಂದರ್ಭದಲ್ಲಿ ಕಾರು ಗುದ್ದಿದರೆನ್ನಲಾಗಿದೆ.ಸ್ಥಳಕ್ಕೆ ಆಗಮಿಸಿದ ಪ್ರಗತಿ ಅಂಬ್ಯುಲೆನ್ಸ್ ಚಾಲಕ ಅಚ್ಚು ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಗೋಪಾಲ ಅವರು ಜಟ್ಟಿಪಳ್ಳ ನಿವಾಸಿಯಾಗಿದ್ದು ಹಲವಾರು ವರ್ಷಗಳಿಂದ ಮೇಸ್ತ್ರಿ ವೃತಿಯನ್ನು ಮಾಡುತ್ತಿದ್ದರು.

ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮೃತ್ಯು Read More »

ಕಾರಿಗೆ ಕಂಟೈನರ್‌ ಡಿಕ್ಕಿ : ಕಾರು ಜಖಂ

ಸುಳ್ಯ: ಗಾಂಧಿನಗರ ಮಸೀದಿಯ ಮುಂಭಾಗ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದಾಗಿ ವರದಿಯಾಗಿದೆ. ಏ.16ರಂದು ಮುಂಜಾನೆ ಈ ಘಟನೆ ನಡೆದಿದೆ. ಗಾಂಧಿನಗರ ಪೆಟ್ರೋಲ್ ಬಂಕ್ ಮಾಲಕ ಮುಜೀಬ್‌ ರವರು ಬೆಳಗ್ಗೆ 5ರ ಸುಮಾರಿಗೆ ಮಸೀದಿಗೆ ಕಾರಿನಲ್ಲಿ ಬಂದಿದ್ದರು. ಕಾರನ್ನು ಮಸೀದಿಯ ಎದುರಿನ ರಸ್ತೆಯ ಇನ್ನೊಂದು ಬದಿಯಲ್ಲಿ ಗಾಂಧಿನಗರ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದರು. ಸುಮಾರು 5.30ರ ವೇಳೆಗೆ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತಿದ್ದ ಕಂಟೈನರ್ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ

ಕಾರಿಗೆ ಕಂಟೈನರ್‌ ಡಿಕ್ಕಿ : ಕಾರು ಜಖಂ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಸುಳ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಬೆಂಗಳೂರಿನಿಂದ ತೊಡಿಕಾನಕ್ಕೆ ಬರುತ್ತಿದ್ದ ಕಾರು ಚಾಲಕ ನಿದ್ರೆಯ ಮಂಪರಿನಲ್ಲಿದ್ದರು ಎನ್ನಲಾಗಿದ್ದು, ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಮೋದಿ ರೋಡ್ ಶೋ | ಕೆಲ ಹೊತ್ತಿನ ಮುಂಚೆ ಕಟ್ಟಡದಲ್ಲಿ ಅಗ್ನಿದುರಂತ

ಮಂಗಳೂರು : ಮಂಗಳೂರಿನಲ್ಲಿ  ಇಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದ ಬಳಿ ಕಟ್ಟಡವೊಂದರಲ್ಲಿ ಅಗ್ನಿ ದುರಂತವಾದ ಘಟನೆ  ನಡೆದಿದೆ. ಭಾನುವಾರ ಸಂಜೆ ರೋಡ್ ಶೋ ಆರಂಭವಾಗುವ ಕೆಲ‌ಹೊತ್ತಿನ ಮುಂಚೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರಲ್ಲಿ ಅಗ್ನಿ ದುರಂತವಾಗಿದೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸು ಕಾರ್ಯ ನಡೆಸಿದ್ದಾರೆ.

ಮೋದಿ ರೋಡ್ ಶೋ | ಕೆಲ ಹೊತ್ತಿನ ಮುಂಚೆ ಕಟ್ಟಡದಲ್ಲಿ ಅಗ್ನಿದುರಂತ Read More »

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ

ಸುಳ್ಯ: ಕಾರೊಂದು ಕ್ಯಾಂಟಿನ್‌ಗೆ ನುಗ್ಗಿದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪೆರಾಜೆ ಪೀಚೆಯ ಲಿಖಿತ್, ಪೀಚೆ ಸುಮನ್ ಹಾಗೂ ಹೋಟೆಲ್ ಮಾಲಕ ನೌಫಲ್ ಗಾಯಗೊಂಡವರು. ಕ್ಯಾಂಟಿನ್‌ಗೆ ನುಗ್ಗಿ ಡಿಕ್ಕಿ ಹೊಡೆದ ಕಾರಣ ಚಹಾ ಕುಡಿಯುತ್ತಿದ್ದ ಇಬ್ಬರು ಹಾಗೂ ಕ್ಯಾಂಟೀನ್ ಮಾಲಕರು ಗಾಯಗೊಂಡಿದ್ದಾರೆ. ಅರಂತೋಡು ಕಡೆಗೆ ಹೋಗಿದ್ದ ಪೀಚೆ ಮನೆ ಲಿಖಿತ್ ಮತ್ತು ಸುಮನ್  ನೌಫಲ್ ರ ಹೋಟೆಲ್ ನಲ್ಲಿ ಚಾ ಕುಡಿಯುತ್ತಿದ್ದ ವೇಳೆ  ವೇಗವಾಗಿ ಬಂದ ರಿಡ್ಜ್ ಕಾರು ಕ್ಯಾಂಟಿನ್ ಗೆ ನುಗ್ಗಿ ಅನಾಹುತ

ಕ್ಯಾಂಟಿನ್ ಗೆ ನುಗ್ಗಿದ ಕಾರು : ಮೂವರಿಗೆ ಗಾಯ, ಓರ್ವ ಗಂಭೀರ Read More »

error: Content is protected !!
Scroll to Top