ಅಪಘಾತ

ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿ

ಸುಳ್ಯ: ಓಮ್ನಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹಾಲೆಮಜಲು ಬಸ್ ತಂಗುದಾಣದ ಬಳಿ ಹೆದ್ದಾರಿ ತಿರುವಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಹರಿಹರದಿಂದ ಹಾಲೆಮಜಲು ಓಮ್ಮಿ ಬರುತ್ತಿದ್ದು, ಚಾಲಕ ಸೇರಿದಂತೆ ಓಮ್ಮಿಯಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿ Read More »

ಹಾಡಹಗಲೇ ಕಾಡು ಹಂದಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು

ಸವಣೂರು:ಹಾಡಹಗಲೇ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ಸವಣೂರಿನ ಅಗರಿ ಎಂಬಲ್ಲಿ ನಡೆದಿದೆ. ಅಗರಿ ನಿವಾಸಿ ರತ್ನಾಕರ ಗಂಭೀರ ಗಾಯಗೊಂಡವರು. ಇಂದು ಮಧ್ಯಾಹ್ನ ಮನೆ ಸಮೀಪ ಹಠತ್ತನೇ ಕಾಡು ಹಂದಿಯೊಂದು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೃಷಿಕರ ಕೋವಿ ಠೇವಣಾತಿಯಿಂದಾಗಿ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಕೃಷಿಕರಿಗೆ ಅಸಾಧ್ಯವಾಗಿದೆ. ಈ ಕುರಿತು

ಹಾಡಹಗಲೇ ಕಾಡು ಹಂದಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು Read More »

ಲೋಕಸಭೆ ರ್ಯಾಲಿ ವೇಳೆ‌‌ ಅಪಘಾತ : ಬಿಜೆಪಿ ಕಾರ್ಯಕರ್ತ ಪ್ರಕಾಶ್ ಮೃತ್ಯು

ಬೆಂಗಳೂರು: ಉತ್ತರ  ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ಶೋಭಾ ಕರಂದ್ಲಾಜೆ  ಅವರ ರ್ಯಾಲಿ ನಡೆಯುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಓರ್ವರು ಮೃತಪಟ್ಟ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಪ್ರಕಾಶ್ ಅಪಘಾತದಿಂದ ಮೃತಪಟ್ಟವರು. ಪ್ರಕಾಶ್ ಇಂದು ಬೆಳಗ್ಗೆ ಹೋಂಡಾ ಆ್ಯಕ್ಟಿವಾ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಮುಖಂಡರೊಬ್ಬರು ಕಾರು ರಸ್ತೆಯಲ್ಲಿ ಪಾರ್ಕ್‌ ಮಾಡಿ ಹಿಂದೆ ಮುಂದೆ ನೋಡದೇ ಏಕಾಏಕಿ ಬಾಗಿಲು ತೆರೆದಿದ್ದು, ಅದು ಬೈಕ್‌ಗೆ ತಾಗಿದೆ. ಪರಿಣಾಮ ಪ್ರಕಾಶ್ ಕೆಳಗೆ ಬಿದ್ದಿದ್ದಾರೆ.

ಲೋಕಸಭೆ ರ್ಯಾಲಿ ವೇಳೆ‌‌ ಅಪಘಾತ : ಬಿಜೆಪಿ ಕಾರ್ಯಕರ್ತ ಪ್ರಕಾಶ್ ಮೃತ್ಯು Read More »

ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ | ಅಪಾಯದಿಂದ ಪಾರು

ಬಂಟ್ವಾಳ:  ಕಾರೊಂದಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ಇಂದು ಬೆಳಿಗ್ಗೆ ಮೂಡುಬಿದಿಯ ರಾಯಿ ಕಂಗಿತ್ತಿಲು ಎಂಬಲ್ಲಿ ನಡೆದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಇಳಿದಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಏಳಿಂಜೆಗುತ್ತು ಕೊಲ್ಲೆಟ್ಟು ಶರತ್ ಶೆಟ್ಟಿ ಅವರಿಗೆ ಸೇರಿದ ಡಸ್ಟರ್ ಕಾರಿನಲ್ಲಿ ಶಾರ್ಟ್‍ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾರಿನಲ್ಲಿ ಮಗು ಸಹಿತ ನಾಲ್ಕು ಮಂದಿ ಇದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು

ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ | ಅಪಾಯದಿಂದ ಪಾರು Read More »

ಗುತ್ತಿಗಾರಿನ ಯುವಕ ರೈಲಿನಡಿಗೆ ಬಿದ್ದು ಮೃತ್ಯು

ಮಂಗಳೂರು: ಸುಳ್ಯ ತಾಲೂಕಿನ ಗುತ್ತಿಗಾರಿನ ಯುವಕನೋರ್ವ ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಗುತ್ತಿಗಾರು ಗ್ರಾಮದ ಚನಿಲ ನಿವಾಸಿ ಸುಪ್ರೀತ್ ನಾಯ್ಕ ಮೃತ ಪಟ್ಟ ಯುವಕ. ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಗುತ್ತಿಗಾರಿನ ಯುವಕ ರೈಲಿನಡಿಗೆ ಬಿದ್ದು ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ !

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಮಗುಚಿ ಬಿದ್ದ ಘಟನೆ ಜೋಡುಪಾಲ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿ ಲಭಿಸಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ! Read More »

ಕಂಟೈನರ್-ಖಾಸಗಿ ಬಸ್ ಡಿಕ್ಕಿ | 20 ಮಂದಿಗೆ ಗಾಯ

ನೆಲ್ಯಾಡಿ: ಕಂಟೈನರ್ ಹಾಗೂ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಹಲವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪ ಇಂದು ನಡೆದಿದೆ. ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಫತ್ರೆಗೆ ದಾಖಲಿಸಲಾಗಿದೆ ವರನ ಮದುವೆ ದಿಬ್ಬಣದ ಖಾಸಗಿ ಬಸ್ಸು ಪಿರಿಯಾಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತಿತ್ತು ಎನ್ನಲಾಗಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿ ಗಾಯಗೊಂಡು ಅವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕಂಟೈನರ್-ಖಾಸಗಿ ಬಸ್ ಡಿಕ್ಕಿ | 20 ಮಂದಿಗೆ ಗಾಯ Read More »

ಹರ್ಷ ಶೋ ರೂಂನ ಗೋದಾಮಿನಲ್ಲಿ ಬೆಂಕಿ | ಕೋಟ್ಯಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ

ಪುತ್ತೂರು: ದರ್ಬೇಯಲ್ಲಿ ಕಾರ್ಯಾಚರಿಸುತ್ತಿರುವ ಗೃಹೋಪಯೋಗಿ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳ ಮಳಿಗೆ  ಹರ್ಷ ಶೋ ರೂಂ, ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಇಂದು ಮುಂಜಾನೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಅವಘಡಕ್ಕೆ ಕಾರಣಗಳು ತಿಳಿದು ಬರಬೇಕಿದೆ.

ಹರ್ಷ ಶೋ ರೂಂನ ಗೋದಾಮಿನಲ್ಲಿ ಬೆಂಕಿ | ಕೋಟ್ಯಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ Read More »

ಅಕ್ರಮ ಗೋಸಾಗಾಟ ಕಾರು ಪಾದಚಾರಿಗೆ ಡಿಕ್ಕಿ | ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ವಶಕ್ಕೆ

ಪುತ್ತೂರು: ಅಕ್ರಮ ಗೋ ಸಾಗಾಟದ ಕಾರು ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಶನಿವಾರ ತಡರಾತ್ರಿ ವಿಠಲ ರೈ ಎಂಬವರು ತನ್ನ ಕಾರನ್ನು ಮರ್ದಾಳ ಪೇಟೆಯಲ್ಲಿ ರಸ್ತೆ ಬದಿ ನಿಲ್ಲಿಸಿ ರಸ್ತೆ ದಾಟುತಿದ್ದ ಸಂದರ್ಭ ಸುಬ್ರಹ್ಮಣ್ಯ ಕಡೆಯಿಂದ ಅಕ್ರಮ ಗೋಸಾಗಾಟ ಮಾಡಿಕೊಂಡು ಬರುತ್ತಿದ್ದ ಮಾರುತಿ 800 ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತಕ್ಷಣ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಆದಾಗಲೇ ಮೃತಪಟ್ಟಿದ್ದರು.

ಅಕ್ರಮ ಗೋಸಾಗಾಟ ಕಾರು ಪಾದಚಾರಿಗೆ ಡಿಕ್ಕಿ | ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ವಶಕ್ಕೆ Read More »

ಅಕ್ರಮ ದನ ಸಾಗಾಟದ ಕಾರು ಪಾದಚಾರಿಗೆ ಡಿಕ್ಕಿ | ಸ್ಥಳದಲ್ಲೇ ಪಾದಚಾರಿ ಮೃತ್ಯು | ಹಿಂದೂ ಸಂಘಟನೆಗಳಿಂದ ಆರೋಪಿಗಳನ್ನು ಬಂಧಿಸುವಂತೆ ತಡರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ

ಕಡಬ: ಅಕ್ರಮ ದನ ಸಾಗಾಟದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಡಬದ ಮರ್ದಾಳದ ನೆಕ್ಕಿತ್ತಡ್ಕ ಸಮೀಪ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಅವರು ರಾತ್ರಿ ವೇಳೆ ತನ್ನ ಕಾರನ್ನು ನಿಲ್ಲಿಸಿ  ರಸ್ತೆ ದಾಟುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಕಡೆಯಿಂದ ಬಂದ ಅಕ್ರಮ ದನ ಸಾಗಾಟದ ಮಾರುತಿ 800 ಡಿಕ್ಕಿ ಹೊಡೆದು

ಅಕ್ರಮ ದನ ಸಾಗಾಟದ ಕಾರು ಪಾದಚಾರಿಗೆ ಡಿಕ್ಕಿ | ಸ್ಥಳದಲ್ಲೇ ಪಾದಚಾರಿ ಮೃತ್ಯು | ಹಿಂದೂ ಸಂಘಟನೆಗಳಿಂದ ಆರೋಪಿಗಳನ್ನು ಬಂಧಿಸುವಂತೆ ತಡರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ Read More »

error: Content is protected !!
Scroll to Top