ಅಪಘಾತ

ಕಾರುಗಳೆರಡು ಅಪಘಾತ : ಓರ್ವರಿಗೆ ಗಂಭೀರ ಗಾಯ !

ಪುತ್ತೂರು: ಕಾರುಗಳೆರಡರ ನಡುವೆ ಭೀಕರ ಅಪಘಾತ ನಡೆದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಶೇಖಮಲೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಪಘಾತದ ಪರಿಣಾಮ ಕಾರುಗಳೆರಡು ಜಖಂ ಗೊಂಡಿದೆ. ಪುತ್ತೂರಿನಿಂದ ಬರುತ್ತಿದ್ದ ಕಾರಿನಲ್ಲಿದ್ದ ಚಾಲಕ ಕತ್ಯಾಡಿ ನಿವಾಸಿಯೊಬ್ಬರಿಗೆ ತೀವು ಗಾಯವಾಗಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಕಾರುಗಳೆರಡು ಅಪಘಾತ : ಓರ್ವರಿಗೆ ಗಂಭೀರ ಗಾಯ ! Read More »

ಕಾರ್ಕಳ : ಅನ್ಯಕೋಮಿನವರಿಂದ ಯುವತಿ ಮೇಲೆ ಗ್ಯಾಂಗ್‌ರೇಪ್‌

ಬಿಯರ್‌ಗೆ ಮತ್ತು ಬರಿಸುವ ಔಷಧ ಬೆರೆಸಿ ಕುಡಿಸಿ ಕೃತ್ಯ ಕಾರ್ಕಳ: ಅನ್ಯಕೋಮಿನ ಯುವಕರ ತಂಡ ಯುವತಿಯೊಬ್ಬಳಿಗೆ ಬಿಯರ್‌ನಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಕುಡಿಸಿ ಕಾಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಿನ್ನೆ ಕಾರ್ಕಳದಲ್ಲಿ ಸಂಭವಿಸಿದೆ.ರೇಷ್ಮೆ ಕೃಷಿ ಮಾಡಿಕೊಂಡಿರುವ ಬೋವಿ ಸಮುದಾಯದ 21ರ ಹರೆಯದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ರಾತ್ರಿಯೇ ಆಸ್ಪತ್ರೆ ಎದುರು ಹಿಂದು ಕಾರ್ಯಕರ್ತರು ಜಮಾಯಿಸಿ ನ್ಯಾಯಕ್ಕಾಗಿ

ಕಾರ್ಕಳ : ಅನ್ಯಕೋಮಿನವರಿಂದ ಯುವತಿ ಮೇಲೆ ಗ್ಯಾಂಗ್‌ರೇಪ್‌ Read More »

ನೇಪಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಬಸ್ | 14 ಭಾರತೀಯರು ಮೃತ್ಯು

ನೇಪಾಳ:  40 ಮಂದಿ ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ನೇಪಾಳದ ತನಾಹುನ್ ಜಿಲ್ಲೆಯಲ್ಲಿ ನಡೆದಿದೆ. ನೇಪಾಳದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಲಿ ನದಿಗೆ ಬಸ್ ಉರುಳಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಎಫ್‌ಟಿ 7623 ನಂಬ‌ರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಬಿದ್ದಿದೆ. ತನಾಹುನ್ ಜಿಲ್ಲೆಯ ಡಿಎಸ್‌ಪಿ ದೀಪ್‌ಕುಮಾರ್ ರಾಯಾ ದೂರವಾಣಿಯ ಮೂಲಕ ದೃಢಪಡಿಸಿದ್ದಾರೆ. 40 ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ ತೆರಳುತ್ತಿತ್ತು.

ನೇಪಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಬಸ್ | 14 ಭಾರತೀಯರು ಮೃತ್ಯು Read More »

ರಿಕ್ಷಾ-ಕಾರು ಡಿಕ್ಕಿ | ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು: ರಿಕ್ಷಾ ಹಾಗೂ ಕಾರು ಡಿಕ್ಕಿ ಹೊಡೆದುಕೊಂಡ ಘಟನೆ  ಹಾರಾಡಿ ಸಮೀಪ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಪುತ್ತೂರಿನಿಂದ ತೆರಳುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದುಕೊಂಡಿದೆ.

ರಿಕ್ಷಾ-ಕಾರು ಡಿಕ್ಕಿ | ವಿದ್ಯಾರ್ಥಿಗಳಿಗೆ ಗಾಯ Read More »

ಬಸ್-ಲಾರಿ ಡಿಕ್ಕಿ

ಪುತ್ತೂರು : ಸರಕಾರಿ ಬಸ್ ಹಾಗೂ ಲಾರಿ ಡಿಕ್ಕಿ ಹೊಡೆದುಕೊಂಡ ಘಟನೆ ಕಬಕ ಸಮೀಪ ನಡೆದಿದೆ. ಮಂಗಳೂರಿನಿಂದ ಪುತ್ತೂರು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂಬದಿಯಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ವಾಹನಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬಸ್-ಲಾರಿ ಡಿಕ್ಕಿ Read More »

ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ ಕ್ಷೌರಿಕ ಸುರೇಶ್‍ ಭಂಡಾರಿ ಮೃತ್ಯು

ಪುತ್ತೂರು: ಬೈಕ್‍ ಹಾಗೂ ಪಿಕಪ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಅಮ್ಮಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡೂರು ಗ್ರಾಮದ ಕಾವು ಬಜಿಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ (45) ಅಪಘಾತದಿಂದ ಮೃತಪಟ್ಟವರು. ಸುರೇಶ್‍ ಭಂಡಾರಿ ಇಂದು ಬೆಳಗ್ಗೆ ಬೈಕ್‌ನಲ್ಲಿ ಅಮ್ಚಿನಡ್ಕದ ಸೆಲೂನ್ ಅಂಗಡಿಗೆ ತೆರಳುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಕಾವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಪಿಕಪ್ ನಡುವೆ

ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ ಕ್ಷೌರಿಕ ಸುರೇಶ್‍ ಭಂಡಾರಿ ಮೃತ್ಯು Read More »

ಸ್ಕೂಟರ್ ಅಪಘಾತ : ಯುವಕ‌ ಸ್ಥಳದಲ್ಲೇ ಮೃತ್ಯು

ಕಟಪಾಡಿ : ಬೆಳಪು‌ ವಿನಯ‌ನಗರ ಸ್ಮಶಾನದ ಬಳಿ ಸ್ಕೂಟರ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಎಲ್ಲೂರು ಗ್ರಾಮದ ಕುಂಡೇಲು ಬಂಡಸಾಲೆ ನಿವಾಸಿ ಮೇಸ್ತ್ರಿ ಅಶೋಕ್ ಮೂಲ್ಯ ಎಂಬವರ ಪುತ್ರ ಜಗದೀಶ್ (33) ಮೃತ ಯುವಕ. ಪುಂಚಲಕಾಡುವಿಗೆ ತೆರಳಿದ್ದ ಅವರು  ಅಲ್ಲಿಂದ ಬೆಳಪು ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ವೇಳೆ ತಿರುವಾದ ರಸ್ತೆಯಲ್ಲಿ ಅವರು ಚಲಾಯಿಸುತ್ತಿದ್ದ‌ ಜುಪಿಟರ್  ಸ್ಕೂಟಿ ಸ್ಕಿಡ್ ಆಗಿ ಮೋರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.  ಢಿಕ್ಕಿಯ ರಭಸಕ್ಕೆ ಮೋರಿಗೆ ಬಡಿದು

ಸ್ಕೂಟರ್ ಅಪಘಾತ : ಯುವಕ‌ ಸ್ಥಳದಲ್ಲೇ ಮೃತ್ಯು Read More »

ಪಾದಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದು ಪರಾರಿ : ಪ್ರಕರಣ ದಾಖಲು

ಪುತ್ತೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಸವಾರ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಉಪ್ಪಿನಂಗಡಿ ಎಸ್.ಬಿ.ಐ ಬ್ಯಾಂಕ್ ಬಳಿ ನಡೆದಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ಸ್ಕೂಟರ್ ಸವಾರ ಉಪ್ಪಿನಂಗಡಿಯ ಎಸ್.ಬಿ.ಐ ಬ್ಯಾಂಕ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಡಾಮಾರು ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಪಡಿಸಿದ್ದು, ಅಪಘಾತದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದು ಸಣ್ಣ

ಪಾದಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದು ಪರಾರಿ : ಪ್ರಕರಣ ದಾಖಲು Read More »

ತರಕಾರಿ ಲಾರಿ-ಖಾಸಗಿ ಬಸ್ ಡಿಕ್ಕಿ | ಲಾರಿ ಚಾಲಕ ಮೃತ್ಯು, ಹಲವರಿಗೆ ಗಾಯ

ಉಪ್ಪಿನಂಗಡಿ: ಖಾಸಗಿ ಬಸ್ಸು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ, ಲಾರಿ ಚಾಲಕ ಮೃತಪಟ್ಟು, ಬಸ್ಸಿನಲ್ಲಿದ್ದ ಹಲವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಅಫಘಾತದಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಪಟ್ಟಿರುವುದಾಗಿ ತಿಳಿದು ಬಂದಿದೆ. ಖಾಸಗಿ ಬಸ್ ಹಾಗೂ ಕ್ಯಾಂಟರ್ ವಾಹನದ ನಡುವೆ ಈ ಢಿಕ್ಕಿ ಸಂಭವಿಸಿದೆ. ಖಾಸಗಿ ಬಸ್ಸು ಮಂಗಳೂರಿನಿಂದ ಬೆಂಗಳೂರಿಗೆ ಸಮಚರಿಸುತಿತ್ತು. ಕ್ಯಾಂಟರ್ ವಾಹನ ತರಕಾರಿ

ತರಕಾರಿ ಲಾರಿ-ಖಾಸಗಿ ಬಸ್ ಡಿಕ್ಕಿ | ಲಾರಿ ಚಾಲಕ ಮೃತ್ಯು, ಹಲವರಿಗೆ ಗಾಯ Read More »

ಬೈಕ್‌ ಅಪಘಾತ ದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ : ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತಾಲೂಕಿನ ಬೆಳಾಲು ಗ್ರಾಮದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಓದುತ್ತಿದ್ದ ವಿಧ್ಯಾರ್ಥಿ ಜೀವಾ ಮೃತಪಟ್ಟವರು. ಆಗಸ್ಟ್ 13ರ ಬೆಳಿಗ್ಗೆ ಕಾಲೇಜಿಗೆ ಬೈಕ್ ನಲ್ಲಿ ಹೋಗುವಾಗ ನಡೆದ ಟೆಂಪೋ ಮತ್ತು ಬೈಕ್‌ ನಡುವಿನ ಭೀಕರ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಉಮೇಶ್ ಮಂಜೊತ್ತು ಮತ್ತು ಕವಿತಾ ದಂಪತಿ ಪುತ್ರ ಅಪಘಾತಕ್ಕೆ ಈಡಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೈಕ್‌ ಅಪಘಾತ ದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು Read More »

error: Content is protected !!
Scroll to Top