ಅಪಘಾತ

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೊಮ್ಮೆ ಭಾರೀ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ. ಭೂಕುಸಿತದ ಹಿನ್ನಲೆಯಲ್ಲಿ ಮಂಗಳೂರು – ಬೆಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿದೆ. ಆದ್ದರಿಂದ ತುರ್ತು ತೆರಳುವವರು ಸಂಪಾಜೆ – ಮಡಿಕೇರಿಯಾಗಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ತೆರಳಬಹುದು ಎಂದು ಮಾಹಿತಿ ಲಭ್ಯವಾಗಿದೆ.

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್ Read More »

ಕೇರಳದ ವಯನಾಡ್‍ ನಲ್ಲಿ ಭಾರೀ ಭೂಕುಸಿತ

ವಯನಾಡ್: ಭಾರೀ ಭೂಕುಸಿತ ಸಂಭವಿಸಿದ ಪರಿಣಾಮ ಹಲವಾರು ಮಂದಿ ಸಿಲುಕಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ನಡೆದಿದೆ. ಹಲವಾರು ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಭೂಕುಸಿತ ಸಂಭವಿಸಿದ್ದು, ವರದಿಗಳ ಪ್ರಕಾರ, ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ಮತ್ತು ಎನ್ಸಿಆರ್ಎಫ್ ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಮತ್ತೊಂದು ಎನ್ಸಿಆರ್‌ಎಫ್ ತಂಡವು ವಯನಾಡಿಗೆ ತೆರಳುತ್ತಿದ್ದು. ಹೆಚ್ಚುವರಿಯಾಗಿ ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು

ಕೇರಳದ ವಯನಾಡ್‍ ನಲ್ಲಿ ಭಾರೀ ಭೂಕುಸಿತ Read More »

ಬಿಬಿಎಂಪಿ ಲಾರಿಯಡಿ ಸಿಲುಕಿ ಬೈಕ್ ಸವಾರರಿಬ್ಬರು ಮೃತ್ಯು  

ಬೆಂಗಳೂರು: ಬಿಬಿಎಂಪಿ ಲಾರಿಯಡಿಗೆ ಸಿಲುಕಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕೆ.ಆರ್‍.ಸರ್ಕಲ್ ಬಳಿ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಯುವತಿ ಶಿಲ್ಪಾ ಹಾಗೂ ಪ್ರಶಾಂತ್ ಮೃತಪಟ್ಟವರು. ನಿನ್ನೆ ರಾತ್ರಿ ಪ್ರಶಾಂತ್ (25) ಮತ್ತು ಶಿಲ್ಪ (25) ಬೈಕ್​ನಲ್ಲಿ ಚಲಿಸುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ

ಬಿಬಿಎಂಪಿ ಲಾರಿಯಡಿ ಸಿಲುಕಿ ಬೈಕ್ ಸವಾರರಿಬ್ಬರು ಮೃತ್ಯು   Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಪ್ರಯಾಣಿಕರು ಪಾರು

ಪುತ್ತೂರು: ಕಾರೊಂದು ಪಲ್ಟಿಯಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಪೇಟೆಯಲ್ಲಿ ಇಂದು ನಡೆದಿದೆ. ಕಾರು ಪಲ್ಟಿಯಾಗಿ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಬ್ಬಿಣದ ತಡೆ ಬೇಲಿಗೆ ಕ್ರೇಟಾ ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದು ಓರ್ವ ಮಹಿಳೆಯ ಮುಖಕ್ಕೆ ಅಲ್ಪ ಗಾಯವಾಗಿರುವುದು ಬಿಟ್ಟರೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಸ್ತೆ ಬದಿಯ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಪ್ರಯಾಣಿಕರು ಪಾರು Read More »

ಹೊಸದಾಗಿ ನಿರ್ಮಿಸಿದ ಮನೆಯಲ್ಲಿ ಬೆಂಕಿ ಅವಘಡ

ಕಾರ್ಕಳ : ಹೊಸದಾಗಿ ನಿರ್ಮಿಸಿರುವ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು ಎರಡು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿರುವ ಘಟನೆ ಕುಕ್ಕುಂದೂರು ಗ್ರಾಮ ಪಂಚಾಯತ್ ವಾಪ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯ ಬಳಿ ನಡದಿದೆ. ಆಲ್ಫಾ ಕಾಟೇಜ್ ಆಯೀಝ್ ಹಬೀದ್ ಖಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಕ್ಷಣ ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದೌಡಾಯಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿರುತ್ತಾರೆ. ಈ ಮೂಲಕ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಮಾಣದ

ಹೊಸದಾಗಿ ನಿರ್ಮಿಸಿದ ಮನೆಯಲ್ಲಿ ಬೆಂಕಿ ಅವಘಡ Read More »

ಬೈಕ್‍ ಗೆ ಬೊಲೆರೋ ಡಿಕ್ಕಿ | ಪುತ್ರಿ ಮೃತ್ಯು, ತಂದೆಗೆ ಗಂಭೀರ ಗಾಯ

ಬೆಳ್ತಂಗಡಿ : ಬೈಕ್‍ ಗೆ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತಂದೆಯ ಜೊತೆ ಹೋಗುತ್ತಿದ್ದ ಮಗಳು ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಮುಂಡಾಜೆಯಲ್ಲಿ ನಡೆದಿದೆ. ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಎಂಬವರ ಪುತ್ರಿ  ಅನರ್ಥ್ಯ (9) ಮೃತಪಟ್ಟ ಬಾಲಕಿ. ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗಳು ಅನರ್ಥ್ಯ ಉಜಿರೆಯಿಂದ ಬೈಕ್‌ನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಬೊಲೆರೊ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ವಾಹನವನ್ನು

ಬೈಕ್‍ ಗೆ ಬೊಲೆರೋ ಡಿಕ್ಕಿ | ಪುತ್ರಿ ಮೃತ್ಯು, ತಂದೆಗೆ ಗಂಭೀರ ಗಾಯ Read More »

ಶಿರಾಡಿ ಘಾಟ್‍ ನ ದೋಣಿಗಲ್‍ ನಲ್ಲಿ ಗುಡ್ಡ ಕುಸಿತ | ಸಾಲುಗಟ್ಟಿ ನಿಂತ ವಾಹನಗಳು

ಶಿರಾಡಿ: ಶಿರಾಡಿ ಘಾಟ್ ನ ದೋಣಿಗಲ್ ನಲ್ಲಿ ಗುಡ್ಡ ಕುಸಿತದ ಪರಿಣಾಮ ಮಂಗಳೂರು – ಬೆಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಶಿರಾಡಿ ಘಾಟ್’ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶುಕ್ರವಾರ ಶಿರಾಡಿ ಘಾಟ್ ನಲ್ಲಿ ರೈಲು ಸಂಪರ್ಕ ಕಡಿತಗೊಂಡಿತ್ತು. ದೋಣಿಗಲ್ ಬಳಿ ಗುಡ್ಡವೊಂದು ಕುಸಿಯುತ್ತಿದ್ದು, ರಸ್ತೆಯನ್ನು ಸಂಪೂರ್ಣ ಆವರಿಸಿಕೊಂಡಿತ್ತು. ಕುಸಿದ ಮಣ್ಣನ್ನು ಸರಿಸುವಲ್ಲಿ ಜೆಸಿಬಿ ಮೂಲಕ ಕಾರ್ಯ ನಿರ್ವಹಿಸಿ, ವಾಹನ ಸಾಗಾಟಕ್ಕೆ ಅನುವು ಮಾಡಿಕೊಡಲಾಯಿತು. ಸಂಚಾರಕ್ಕೆ ಸಂಪೂರ್ಣ ತೊಡಕ್ಕಾಗಿದ್ದು ಮಂಗಳೂರು ಕಡೆಯಿಂದ ಹೋಗಿರುವ ವಾಹನಗಳು ಸರತಿ ಸಾಲಿನಲ್ಲಿ

ಶಿರಾಡಿ ಘಾಟ್‍ ನ ದೋಣಿಗಲ್‍ ನಲ್ಲಿ ಗುಡ್ಡ ಕುಸಿತ | ಸಾಲುಗಟ್ಟಿ ನಿಂತ ವಾಹನಗಳು Read More »

ಆವರಣ ಇಲ್ಲದ ಬಾವಿಗೆ ಬಿದ್ದು ವೃದ್ಧೆ ಮೃತ್ಯು

ಉಪ್ಪಿನಂಗಡಿ: ಆವರಣ ಇಲ್ಲದ ಬಾವಿಗೆ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಡೆದಿದೆ. ನೂಜಿ ನಿವಾಸಿ ಹೊನ್ನಮ್ಮ (65) ಮೃತಪಟ್ಟವರು. ಹೊನ್ನಮ್ಮ ಶುಕ್ರವಾರ ಸಂಜೆ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದಾಗ ಮನೆಯ ಆವರಣ ಗೋಡೆಯಿಲ್ಲದ ಬಾವಿಯ ಬಳಿ ಇವರ ಕೊಡೆ ಪತ್ತೆಯಾಗಿತ್ತು. ಬಾವಿಯಲ್ಲಿ ನೋಡಿದಾಗ ಮೃತದೇಹ ಬಾವಿಯಲ್ಲಿ ತೇಲುತ್ತಿತ್ತು. ಯಾರೂ ಇಲ್ಲದ ಸಂದರ್ಭ ಇವರು ಬಾವಿಗೆ ಇಣುಕಿ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ರಾತ್ರಿ ಇವರ ಮೃತದೇಹವನ್ನು ಅಡೆಕ್ಕಲ್ ಸಂತು ಹಾಗೂ

ಆವರಣ ಇಲ್ಲದ ಬಾವಿಗೆ ಬಿದ್ದು ವೃದ್ಧೆ ಮೃತ್ಯು Read More »

ಶಿರೂರು ಗುಡ್ಡ ಕುಸಿತದಲ್ಲಿ ಅರ್ಜುನ್ ಲಾರಿ 20 ಅಡಿ ಆಳದಲ್ಲಿ ಸಿಲುಕಿರುವ ಶಂಕೆ | ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಶಿರೂರಿಗೆ

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮತ್ತು ಲಾರಿ ನದಿಯ ಸುಮಾರು 20 ಅಡಿ ಆಳದಲ್ಲಿ ಸಿಲುಕಿರುವ ಮಾಹಿತಿ ದೊರೆತ ಬೆನ್ನಲ್ಲೇ ಕರಾವಳಿಯ ಮುಗುಳು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಶಿರೂರಿಗೆ ಇಂದು ಆಗಮಿಸುತ್ತಿದೆ ಎಂದು ತಿಳಿದು ಬಂದಿದೆ. ಶಿರೂರು ಗುಡ್ಡ ಕುಸಿತ ಪ್ರಕರಣ ನಡೆದು12 ದಿನವಾಗಿದ್ದು, ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ದುರಂತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಸದ್ಯ ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆದಿದೆ. ಆದರೂ ಪತ್ತೆಯಾಗಿಲ್ಲ. ಮುಳುಗು ತಜ್ಞರಿಂದ ನೀರಿನಲ್ಲಿರುವ ಲಾರಿ

ಶಿರೂರು ಗುಡ್ಡ ಕುಸಿತದಲ್ಲಿ ಅರ್ಜುನ್ ಲಾರಿ 20 ಅಡಿ ಆಳದಲ್ಲಿ ಸಿಲುಕಿರುವ ಶಂಕೆ | ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಶಿರೂರಿಗೆ Read More »

ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೇಲೆ ಗುಡ್ಡ ಕುಸಿತ | ಸಂಚಾರದಲ್ಲಿ ಬದಲಾವಣೆ

ಹಾಸನ:  ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಹಳಿಯಿಂದ ಜಾರಿದ ಘಟನೆ ಇಂದು ಮುಂಜಾನೆ ಹಾಸನದ ಶಾಂತಿಗ್ರಾಮದ ಬಳಿ ನಡೆದಿದೆ.   ಇಂದು ಮುಂಜಾನೆ ಸುಮಾರು 5.45ರ ಹೊತ್ತಿಗೆ ಟ್ರ್ಯಾಕ್ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಹಾಸನ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಆಗಿದೆ.

ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೇಲೆ ಗುಡ್ಡ ಕುಸಿತ | ಸಂಚಾರದಲ್ಲಿ ಬದಲಾವಣೆ Read More »

error: Content is protected !!
Scroll to Top