ಉಪ್ಪಿನಂಗಡಿಯಲ್ಲಿ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ ಕಾರ್ಯಕ್ರಮವಾಗಿ ಪೆರಿಯಡ್ಕ ಮದುವನದಲ್ಲಿ ಮಧುರ ಮನಸು ಸ್ನೇಹಕೂಟವೆಂಬ ವಿಶೇಷ ಕಾರ್ಯಕ್ರಮ ಜರಗಿತು. ತೀರ್ಥರೂಪರಾದ ದಿ. ತಿರುಮಲೇಶ್ವರ ಭಟ್ ಕಟ್ಟದಮೂಲೆ ಸಂಸ್ಮರಣೆಯನ್ನು ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರೊಫೆಸರ್ ಬಿ. ವಿ ಆರ್ತಿಕಜೆ  ಪುತ್ತೂರು, ನೀ.ಸು.ಮಧ್ಯಸ್ಥ, ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು, ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ.ಆಚಾರ್ಯ […]

ಉಪ್ಪಿನಂಗಡಿಯಲ್ಲಿ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ Read More »

ಅಕ್ಷಯ ಕಾಲೇಜಿನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನೆ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗ ಮತ್ತುಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ   ಸ್ಪೋಕನ್ ಇಂಗ್ಲೀಷ್  ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು. ಸುಳ್ಯ ಎನ್ಎಂಸಿ ಕಾಲೇಜು ಪ್ರಾಂಶುಪಾಲ ಮಿಥಾಲಿ ಪಿ. ರೈ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಭಾರತದ ರಾಷ್ಟ್ರ ಭಾಷೆ ಹಿಂದಿಯಾದರು  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಭಾಷೆ ಇಂಗ್ಲೀಷ್ ಆಗಿದೆ.  ಈ ನಿಟ್ಟಿನಲ್ಲಿ ನಮ್ಮ ಮಾತೃಭಾಷೆಯ ರೀತಿ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಯುವುದು

ಅಕ್ಷಯ ಕಾಲೇಜಿನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನೆ Read More »

ನಾಗಮಂಗಲ ಕೋಮುಗಲಭೆ ಹಿಂದೆ ಕೇರಳದ ಪಿಎಫ್‌ಐ ಕಾರ್ಯಕರ್ತರು?

ಎನ್‌ಐಎ ತನಿಖೆಗೆ ವಿಶ್ವ ಹಿಂದು ಪರಿಷತ್‌ ಆಗ್ರಹ ಬೆಂಗಳೂರು : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲುತೂರಿದ ಘಟನೆ ಪೂರ್ವ ಯೋಜಿತ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿವಬೆವೆ. ಜೊತೆಗೆ ಇದರಲ್ಲಿ ಕೇರಳದ ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಕೋಮುಗಲಭೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕೆಂಬ ಕೂಗು ಕೇಳಿಬಂದಿದೆ.ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್‌ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ

ನಾಗಮಂಗಲ ಕೋಮುಗಲಭೆ ಹಿಂದೆ ಕೇರಳದ ಪಿಎಫ್‌ಐ ಕಾರ್ಯಕರ್ತರು? Read More »

ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಆರು ಮಂದಿ ಮೃತ್ಯು

ನವದೆಹಲಿ: ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಕಾರೊಂದು  ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೈಪುರ ರಾಷ್ಟ್ರೀಯ ಹೆದ್ದಾರಿಯ ಹಿಂದೋಲಿ ಬಳಿ ಇಂದು ಮುಂಜಾನೆ 4:30 ರ ಸುಮಾರಿಗೆ ಯಾತ್ರಿಕರು – ಉತ್ತರ ಪ್ರದೇಶದ ದೇವಾಸ್ ನಿವಾಸಿಗಳು – ಸಿಕಾರ್ ಜಿಲ್ಲೆಯ ಖತು ಶ್ಯಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾರುತಿ ಸುಜುಕಿ ಇಕೋ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು

ರಾಜಸ್ಥಾನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಆರು ಮಂದಿ ಮೃತ್ಯು Read More »

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌: ಬುಧವಾರದ ತನಕ ಇಲ್ಲ ದಂಡ

ಇನ್ನು ಡೆಡ್‌ಲೈನ್‌ ವಿಸ್ತರಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅಂತಿಮ ಗಡು ಭಾನುವಾರಕ್ಕೆ ಮುಕ್ತಾಯವಾಗಲಿದೆ. ಸಾರಿಗೆ ಇಲಾಖೆ ಈ ಹಿಂದೆ ಹೇಳಿದ ಪ್ರಕಾರ ಸೆ.16ರಿಂದ ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳಿಂದ ದಂಡ ವಸೂಲಿ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ ಸೆ.18ರ ತನಕ ಕಠಿಣ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆ ಪೊಲೀಸರಿಗೆ ಸೂಚಿಸಿದೆ.ಇಂದು ಕೂಡ ನೋದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಂಡವರಿಗೆ ಮುಂದೆ ದಂಡ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌: ಬುಧವಾರದ ತನಕ ಇಲ್ಲ ದಂಡ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ನಲ್‌ ಹ್ಯಾಕಥಾನ್‌ ಗೆ ವಿಧ್ಯುಕ್ತ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ ಹಾಗೂ ಗಣಕವಿಜ್ಞಾನ ವಿಭಾಗಗಳ ವತಿಯಿಂದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಗೆ ಭಾಗವಹಿಸುವ ಪೂರ್ವತಯಾರಿಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇಂಟರ್ ನಲ್‌ ಹ್ಯಾಕಥಾನ್‌ ಉದ್ಘಾಟಿಸಲಾಯಿತು. ಮಂಗಳೂರು ಸೈಂಟ್‌ ಜೋಸೆಫ್‌ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ, ಗ್ಲೆನ್ಸನ್‌ ಟೋನಿ ಚಾಲನೆ ನೀಡಿ ಮಾತನಾಡಿ, ಭಾರತದ ಉತ್ಕೃಷ್ಟ ಸಂಪನ್ಮೂಲಗಳನ್ನು ಬಳಸಿ ಉನ್ನತ ವಿದ್ಯಾಭ್ಯಾಸ ನಡೆಸಿದ ಅದೆಷ್ಟೋ ಪ್ರತಿಭಾವಂತ ಜನರು ಉದ್ಯೋಗಗಳನ್ನರಸಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಈ ಪ್ರತಿಭಾ ಪಲಾಯನವನ್ನು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ನಲ್‌ ಹ್ಯಾಕಥಾನ್‌ ಗೆ ವಿಧ್ಯುಕ್ತ ಚಾಲನೆ Read More »

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು

ಢಾಕಾ: ಬಾಂಗ್ಲಾದೇಶದಲ್ಲಿ ಹಿಜಾಬ್​ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಿದ್ಧ ಕಾಕ್ಸ್​ ಬಜಾರ್​ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದ್ದು, ಬಾಂಗ್ಲಾದೇಶ ಇನ್ನೊಂದು ಅಫಘಾನಿಸ್ಥಾನವಾಗುತ್ತಿದೆ ಎಂದು ಆತಂಕ ವ್ಯಕ್ತವಾಗಿದೆ.ಹಿಜಾಬ್‌ ಧರಿಸದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರ ಗುಂಪೊಂದು ದಾಳಿ ನಡೆಸುತ್ತಿರುವುದು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಕಾಣಿಸುತ್ತಿದೆ. ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆಗೆ ಸಿಟ್​-ಅಪ್ ಶಿಕ್ಷೆ

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು Read More »

ಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌ ಕಸ್ಟಡಿಗೆ

ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣದಲ್ಲಿ ಸೆರೆಯಾಗಿರುವ ಎಂಎಲ್‌ಎ ಬೆಂಗಳೂರು : ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಬಂಧಿತವಾಗಿರುವ ಆರ್​. ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ನ್ಯಾಯಾಲಯ ಎರಡು ದಿನದ ಮಟ್ಟಿಗೆ ಪೊಲೀಸ್​ ಕಸ್ಟಡಿಗೆ ನೀಡಿದೆ. ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿದ್ದಾರೆ. ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.ಪೊಲೀಸರು ಒಂದು ವಾರ ಕಸ್ಟಡಿಗೆ ನೀಡುವಂತೆ

ಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌ ಕಸ್ಟಡಿಗೆ Read More »

ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು

ಪ್ರಾಥಮಿಕ ಶಿಕ್ಷಣಕ್ಕೆ ಕೋಟಿ ಕೋಟಿ ದುಡ್ಡು ಸುರಿಯುತ್ತಿದೆ ಅಜೀಂ ಪ್ರೇಂಜಿ ಫೌಂಡೇಷನ್ ಅಜೀಂ ಪ್ರೇಂಜಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನದೇ ವಿಪ್ರೊ ಕಂಪನಿಯ ಮೂಲಕ ಜಗತ್ತಿನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ಅವರು. 1945 ಜುಲೈ 24ರಂದು ಜನಿಸಿದ ಅಜೀಂ ಪ್ರೇಂಜಿ ಅವರು ಅತ್ಯಂತ ಪರಿಶ್ರಮದಿಂದ ಈ ಎತ್ತರವನ್ನು ತಲುಪಿದವರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು. ಅವರೇ ಸ್ಥಾಪನೆ ಮಾಡಿದ ವಿಪ್ರೊ ಸಾಫ್ಟ್‌ವೇರ್

ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು Read More »

ನಿವೃತ್ತ ಆರ್ಮಿ ಉದ್ಯೋಗಿ ಸುಂದರ ಗೌಡ ಅಂಗಣ ನಿಧನ

ಕಡಬ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತರಾದ ಕಡಬ ತಾಲೂಕಿನ ಸುಂದರ ಗೌಡ ಅಂಗಣ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಆರ್ಮಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಅವರು ನಿವೃತ್ತರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸರಕಾರಿ ಗೌರವದೊಂದಿಗೆ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು (ಶನಿವಾರ) ನಡೆಯಿತು.

ನಿವೃತ್ತ ಆರ್ಮಿ ಉದ್ಯೋಗಿ ಸುಂದರ ಗೌಡ ಅಂಗಣ ನಿಧನ Read More »

error: Content is protected !!
Scroll to Top