ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್‍ ಶ್ರೀ ಬುದ್ಧ ಜಯಂತಿ ಆಚರಣೆ

ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗವಾನ್ ಶ್ರೀ ಬುದ್ಧ ಜಯಂತಿ ಆಚರಣೆ ತಾಲೂಕು ಆಡಳಿತ ಸೌಧದಲ್ಲಿರುವ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ  ಸೋಮವಾರ ನಡೆಯಿತು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್‍  ಪುರಂದರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ಎಳೆಯ  ವಯಸ್ಸಿನಲ್ಲೇ ಎಲ್ಲವನ್ನೂ ತ್ಯಜಿಸಿ ತಪಸ್ಸನ್ನಾಚರಿಸಿ ಸಮಾಜ, ದೇಶದ ಉದ್ಘಾರ ಆಗಬೇಕು ಎಂಬುದನ್ನು ಜಗತ್ತಿಗೆ ಸಾರಿದವರು. ಇಂತಹ ಮಾಹಾತ್ಮರ ಸ್ಮರಣೆ ಮೂಲಕ ಜಯಂತಿ ಆಚರಣೆ ಮಾಡುವುದು […]

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಗವಾನ್‍ ಶ್ರೀ ಬುದ್ಧ ಜಯಂತಿ ಆಚರಣೆ Read More »

ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 75ನೇ ಕಾರ್ಯಕ್ರಮವಾಗಿ ಗಾಂಡಿವ ನಿಂದನೆ ತಾಳಮದ್ದಳೆ ಇಚ್ಚ್ಯೂರು  ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು. ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ರಾವ್ ಬಿ, ನಿತೀಶ್ ಕುಮಾರ್ ವೈ, ಪದ್ಮನಾಭ ಕುಲಾಲ್ ಇಳಂತಿಲ ಹೀಮ್ಮೆಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ  ಹಾಗೂ ಅರ್ಥಧಾರಿಗಳಾಗಿ ಜಬ್ಬಾರ್ ಸಮೊ (ಅರ್ಜುನ), ದಿವಾಕರ ಆಚಾರ್ಯ

ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ Read More »

30 ಶತಕ, 31 ಅರ್ಧಶತಕ, 9230 ರನ್ : ಟೆಸ್ಟ್‌ನಲ್ಲಿ ಕೊಹ್ಲಿ ಸಾಧನೆ

ಟೆಸ್ಟ್‌ ಪಂದ್ಯಗಳಿಗೆ ವಿದಾಯ ದೃಢಪಡಿಸಿದ ಕಿಂಗ್‌ ಕೊಹ್ಲಿ ಮುಂಬಯಿ: ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದು ದೃಢಪಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದು, ಕಿಂಗ್ ಕೊಹ್ಲಿಯ 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಂತಾಗಿದೆ. ಕೆಲ ದಿನಗಳ ಹಿಂದೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಬಿಸಿಸಿಐ ಅವರ ಮನವೊಲಿಸಲು ಮುಂದಾಗಿತ್ತು. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ

30 ಶತಕ, 31 ಅರ್ಧಶತಕ, 9230 ರನ್ : ಟೆಸ್ಟ್‌ನಲ್ಲಿ ಕೊಹ್ಲಿ ಸಾಧನೆ Read More »

ಸರಕಾರಿ ಬಸ್ಸಿನಿಂದ ಎಸೆಯಲ್ಪಟ್ಟ ಪ್ರಯಾಣಿಕ

ಪುತ್ತೂರು: ಪ್ರಯಾಣಿಕರೋರ್ವರು ಕೆಎಸ್ ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟ ಘಟನೆ ಸೋಮವಾರ ದರ್ಬೆಯಲ್ಲಿ ನಡೆದಿದೆ. ದರ್ಬೆ ಜಂಕ್ಷನ್ ಬಳಿ ಪ್ರಯಾಣಿಕರೋರ್ವರು ಬಸ್ ಗೆ ಹತ್ತಿದ್ದರು. ಬಸ್ ಸ್ವಲ್ಪ ಮುಂದೆ ಹೋಗಿತ್ತಷ್ಟೇ, ಅಷ್ಟರಲ್ಲೇ ಪ್ರಯಾಣಿಕ ಬಸ್ ನಿಂದ ಎಸೆಯಲ್ಪಟ್ಟಿದ್ದಾರೆ. ಗಾಯಗೊಂಡ ಅವರನ್ನು ಬಸ್ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು.

ಸರಕಾರಿ ಬಸ್ಸಿನಿಂದ ಎಸೆಯಲ್ಪಟ್ಟ ಪ್ರಯಾಣಿಕ Read More »

ನಾಳೆ (ಮೇ. 13) :  ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ –  ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ

ಪುತ್ತೂರು : ಮುಳಿಯದ ಹೊಸ ವಿನೂತನ ಶೋರೂಮ್ ಉದ್ಘಾಟನಾ ಸಮಾರಂಭದ ಅಂಗವಾಗಿ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ  ಸಂಘ ಇವರಿಂದ ಮೇ 13 ರಂದು ಸಂಜೆ .6.30 ಕ್ಕೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬೊಂಬೆಯಾಟ ನಡೆಯಲಿದೆ . ಗೊಂಬೆಯಾಟ  ಅತೀ ಪುರಾತನ ಜಾನಪದ ಕಲೆಯಾಗಿದೆ. ನೂರು ವರ್ಷಗಳ ಹಿಂದೆ ನಮ್ಮ ಕರಾವಳಿಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಬೊಂಬೆಯಾಟ ತಂಡಗಳಿದ್ದುವು. ಆದರೆ  ಆಧುನಿಕ ಮಾಧ್ಯಮಗಳ ಹಾವಳಿಯಿಂದ ಈ ಜಾನಪದ ಕಲೆಯೂ ಅವನತಿಯ ಅಂಚಿನತ್ತ ಧಾವಿಸುತ್ತಿದೆ. ಇಂದು ಕೇವಲ ಎರಡು ತಂಡಗಳು

ನಾಳೆ (ಮೇ. 13) :  ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ –  ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ Read More »

ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಟಿಪ್ಪರ್

ಸುಳ್ಯ : ಪಿಕಪ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಿನ್ನೆ (ಮೇ. 11) ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರು ಎಂಬಲ್ಲಿ ನಡೆದಿದೆ. ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ನೆಟ್ಟಾರು ತಿರುವು ಬಳಿ ಸಮೀಪಿಸುತ್ತಿದ್ದಂತೆ ಮುಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಚಾಲಕನು ಕೂಡಲೇ ವಾಹನ ನಿಲ್ಲಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಗ್ನಿಯ ತೀವ್ರತೆಗೆ ಪಿಕಪ್ ವಾಹನ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ

ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಟಿಪ್ಪರ್ Read More »

ಮುಗಿದಿಲ್ಲ ಆಪರೇಷನ್‌ ಸಿಂದೂರ : ಪಾಕ್‌ ಜೊತೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲ

ಒಂದೇ ಒಂದು ಗುಂಡು ಹಾರಿದರೆ ಮತ್ತೆ ದಾಳಿ ಎಂದು ಖಡಕ್‌ ಎಚ್ಚರಿಕೆ ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆರಂಭಿಸಿರುವ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ಥಾನದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲದ ಕಾರಣ ಆಪರೇಷನ್‌ ಸಿಂಧೂರ ಮುಂದುವರಿಯಲಿದೆ. ಮೂರೂ ಸಶಸ್ತ್ರ ಪಡೆಗಳು ಯುದ್ಧ ಸನ್ನದ್ಧತೆಯಲ್ಲಿದ್ದು, ಯಾವುದೇ ಸಂಭಾವ್ಯ ದಾಳಿಯನ್ನು ಎದುರಿಸಲು ಸಮರ್ಥವಾಗಿದ್ದೇವೆ. ಕದನ ವಿರಾಮ ಘೋಷಣೆಯಾಗಿದ್ದರೂ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಇನ್ನೂ ಸಕ್ರಿಯವಾಗಿದೆ ಎಂಬ ಸಂದೇಶವನ್ನು ಭಾರತದ

ಮುಗಿದಿಲ್ಲ ಆಪರೇಷನ್‌ ಸಿಂದೂರ : ಪಾಕ್‌ ಜೊತೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲ Read More »

19 ದಿನಗಳ ಬಳಿಕ ಶಾಂತವಾದ ಗಡಿ

ಶೆಲ್‌, ಗುಂಡಿನ ದಾಳಿಯಿಲ್ಲದೆ ನೆಮ್ಮದಿಯಾಗಿ ನಿದ್ದೆ ಮಾಡಿದ ಜನ ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ​ ನಡುವೆ ಕಳೆದ 19 ದಿನಗಳಿಂದ ಮೊದಲ ಬಾರಿ ನಿನ್ನೆ ರಾತ್ರಿ ಗಡಿ ಶಾಂತವಾಗಿತ್ತು. ಯುದ್ಧ ಪ್ರಾರಂಭವಾದ ಬಳೀಕ ನಿತ್ಯ ಶೆಲ್ಲಿಂಗ್‌ ಮತ್ತಿತರ ದಾಳಿ ನಡೆಯುತ್ತಿದ್ದ ಗಡಿಯಲ್ಲಿ ನಿನ್ನೆ ರಾತ್ರಿ ಒಂದೇ ಒಂದು ಗುಂಡು ಹಾರಿಲ್ಲ. ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಗಡಿ ಪ್ರದೇಶಗಳಲ್ಲಿ ಯಾವುದೇ ಹೊಸ ಘಟನೆಗಳು ಅಥವಾ ಕದನ ವಿರಾಮ ಉಲ್ಲಂಘನೆಗಳು ವರದಿಯಾಗಿಲ್ಲ. ಶಾಂತಿ ನೆಲೆಸಿದೆ ಎಂದು ಭಾರತೀಯ

19 ದಿನಗಳ ಬಳಿಕ ಶಾಂತವಾದ ಗಡಿ Read More »

ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸಿದರೆ ಮಾತ್ರ ಮಾತುಕತೆ

ಅಮೆರಿಕಕ್ಕೆ ಭಾರತದ ಸ್ಪಷ್ಟ ನಿಲುವು ತಿಳಿಸಿದ ಪ್ರಧಾನಿ ಮೋದಿ ನವದೆಹಲಿ: ಪಾಕಿಸ್ಥಾನ ಮತ್ತೆ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡುತ್ತೇವೆ. ಆ ಕಡೆಯಿಂದ ಗುಂಡು ಹಾರಿಸಿದರೆ ಇಲ್ಲಿಂದಲೂ ಗುಂಡು ಸಿಡಿಯುತ್ತದೆ. ನಮಗೆ ಯಾರ ಮಧ್ಯಸ್ಥಿಕೆ ಕೂಡ ಬೇಕಾಗಿಲ್ಲ ಎಂದು ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​ ಜೊತೆ ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಮೋದಿ ಫೋನ್ ಮೂಲಕ ಮಾತುಕತೆ ನಡೆಸಿ ಭಾರತದ ನಿಲುವನ್ನು ತಿಳಿಸಿದ್ದಾರೆ. ಕಾಶ್ಮೀರದ ಬಗ್ಗೆ ಭಾರತ

ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸಿದರೆ ಮಾತ್ರ ಮಾತುಕತೆ Read More »

ಭೀಕರ ಅಪಘಾತ : 13 ಮಂದಿ ಸ್ಥಳದಲ್ಲೇ ಸಾವು

ರಾಯ್​ಪುರ: ಛತ್ತೀಸ್​ಗಢದ ರಾಯ್​ಪುರದಲ್ಲಿ ಟ್ರೇಲರ್ ಟ್ರಕ್ ಹಾಗೂ ಲಾರಿ ಮುಖಾಮುಖಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿ 11 ಜನರು ಗಾಯಗೊಂಡಿದ್ದಾರೆ. ರಾಯ್‌ಪುರ ಜಿಲ್ಲೆಯ ರಾಯ್‌ಪುರ-ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಮಡಿದವರಲ್ಲಿ ನಾಲ್ಕು ಮಕ್ಕಳು ಮತ್ತು ಒಂಬತ್ತು ಮಹಿಳೆಯರು ಸೇರಿದ್ದಾರೆ. ಚೌಥಿಯಾ ಛಟ್ಟಿಯಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಲಾರಿಯಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ರಾಯ್‌ಪುರದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರಾಯ್‌ಪುರ ಎಸ್‌ಪಿ

ಭೀಕರ ಅಪಘಾತ : 13 ಮಂದಿ ಸ್ಥಳದಲ್ಲೇ ಸಾವು Read More »

error: Content is protected !!
Scroll to Top