ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ 2022

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ 2022 ಡಿ. 25ರಂದು ಬೆಳಿಗ್ಗೆ 9 ಗಂಟೆಗೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. 7 ವಲಯದ ತಂಡಗಳ ಕ್ರೀಡೋತ್ಸವ ಇದಾಗಿದ್ದು, ವಿವಿಧ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೆಟ್ ನಡೆಯಲಿದೆ. ಹಗ್ಗಜಗ್ಗಾಟಕ್ಕೆ 9 ಜನರ […]

ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ 2022 Read More »

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣಗೊಳಿಸಿದ ರಾಜ್ಯ ಸರ್ಕಾರ

ಪುತ್ತೂರು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ.ಎಸ್. ಬಾನೊಳಿ ಅವರು ಆದೇಶ ಹೊರಡಿಸಿದ್ದು, 2017ರ ಮೇ 5ರ ಆದೇಶದಂತೆ ರಾಜ್ಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳಗೊಳ್ಳಲಿದೆ. ಇದುವರೆಗೆ ಗ್ರಾ.ಪಂ. ಅಧ್ಯಕ್ಷರಿಗೆ 3 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 1 ಸಾವಿರ ರೂ.ವನ್ನು ತಿಂಗಳ

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣಗೊಳಿಸಿದ ರಾಜ್ಯ ಸರ್ಕಾರ Read More »

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್

ಸಿನೆಮಾದಲ್ಲಿ ಹುಡುಗಿಯರು ನಟಿಸುವುದು ಅಪರಾಧ ಎಂಬ ಕಾಲದಲ್ಲಿ ಆಕೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು! ಇದನ್ನು ಹೇಳಿದರೆ ನೀವು ಖಂಡಿತವಾಗಿ ನಗಬಹುದು, ಆದರೆ ಆ ಕಾಲ ಹಾಗಿತ್ತು.ಶತಮಾನದ ಹಿಂದೆ ಭಾರತದಲ್ಲಿ ದಾದಾಸಾಹೇಬ್ ಫಾಲ್ಕೆ ಅವರು ‘ರಾಜಾ ಹರಿಶ್ಚಂದ್ರ ‘ ಸಿನೆಮಾ ಮಾಡಲು ಹೊರಟಾಗ ಚಂದ್ರಮತಿಯ ಪಾತ್ರದಲ್ಲಿ ಅಭಿನಯ ಮಾಡಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಹಲವು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೂ ಯಾರೂ ರೆಸ್ಪಾನ್ಸ್ ಮಾಡಲಿಲ್ಲ. ಕೊನೆಗೆ ಅಡುಗೆ ಮಾಡಲು ಬಂದಿದ್ದ ಒಬ್ಬ ಚಂದದ ಹುಡುಗನಿಗೆ ಸೀರೆ

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್ Read More »

ಕಗ್ಗದ ಸಂದೇಶ-ಆಟ ಅವನದ್ದು; ಪಾತ್ರ ನಮ್ಮದು…

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ|ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ?|ಅಧಿಕಾರ ಪಟ್ಡವನು ನಿನಗಾರು ಕಟ್ಟಿಹರು|ವಿಧಿಯ ಮೇಸ್ತ್ರಿಯೆ ನೀನು–ಮಂಕುತಿಮ್ಮ||ಜೀವನದಲ್ಲಿ ನಾವು ಎಣಿಸಿದ ಹಾಗೆ ನಡೆಯದಿದ್ದಾಗ ಅದೇಕೆ ನಡೆಯಲಿಲ್ಲ? ಅದೇಕೆ ನಿಂತು ಹೋಯಿತು ಎಂದು ಮನದಲ್ಲಿಯೇ ಕೋಪದಿಂದ ಕುದಿಯುತ್ತಿರುವುದೇಕೆ? ಯಾವುದು ನಡೆಯಬೇಕು ಮತ್ತು ಯಾವುದು ನಡೆಯಬಾರದು ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ನಿನಗೆ ಯಾರು ಕೊಟ್ಟಿದ್ದಾರೆ? ವಿಧಿಯನ್ನು ನಿರ್ವಹಿಸುವ ನಿರ್ವಾಹಕನೋ ನೀನು? ಎಂದು ಮಾನ್ಯ ಡಿವಿಜಿಯವರು ಈ ಮುಕ್ತದಲ್ಲಿ ಪ್ರಶ್ನಿಸಿದ್ದಾರೆ. ಜಗತ್ತಿನಲ್ಲಿ ಯಾವುದು ನಾವು ಎಣಿಸಿದ ಹಾಗೆ ನಡೆಯುವುದಿಲ್ಲ. ವಿಧಿಯ ನಿಯಮದಂತೆ ಎಲ್ಲವೂ ಸಾಗುವುದು. ಹೀಗೇಕೆ ಎಂದು

ಕಗ್ಗದ ಸಂದೇಶ-ಆಟ ಅವನದ್ದು; ಪಾತ್ರ ನಮ್ಮದು… Read More »

ಅಶಿಸ್ತಿನ ಹೇಳಿಕೆ ಸಹಿಸಲ್ಲ: ಅಬ್ದುಲ್ ಕುಂಞಿಯನ್ನು ಉಚ್ಚಾಟಿಸಿ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ

ಪುತ್ತೂರು: ಬಿಜೆಪಿ ಪ್ರಮುಖರು ಹಾಗೂ ಪಕ್ಷದ ಬಗ್ಗೆ ಜರೆದು, ಅಶಿಸ್ತಿನಿಂದ ಮಾತನಾಡಿದ್ದ ಬಿಜೆಪಿ ಕಾರ್ಯಕರ್ತ, ಕೆಡಿಪಿ ಸದಸ್ಯ ಅಬ್ದುಲ್ ಕುಂಞಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸದರು, ಶಾಸಕರಾದಿಯಾಗಿ ಬಿಜೆಪಿ ಪ್ರಮುಖರ ಬಗ್ಗೆ ಅಶಿಸ್ತಿನಿಂದ ಮಾತನಾಡಿದ್ದು ಮಾತ್ರವಲ್ಲ, ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆಯೂ ಆಧಾರರಹಿತ ಹೇಳಿಕೆ ನೀಡಿರುವುದು ಆಡಿಯೋದಲ್ಲಿ ದಾಖಲಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಪುತ್ತೂರು ಬಿಜೆಪಿ ಮಂಡಲದ

ಅಶಿಸ್ತಿನ ಹೇಳಿಕೆ ಸಹಿಸಲ್ಲ: ಅಬ್ದುಲ್ ಕುಂಞಿಯನ್ನು ಉಚ್ಚಾಟಿಸಿ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ Read More »

ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’

ಬೆಂಗಳೂರು: ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’ ಭಾನುವಾರ ಬೆಂಗಳೂರಿನ ಅರಮನೆ ವೈದಾನದಲ್ಲಿ ಜರಗಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಶಕ್ತಿ ಸಂಗಮ ಕಾರ್ಯಕ್ರಮ ಜರಗಿದ್ದು, ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಪ್ರಕೋಷ್ಠಗಳ ಇಂತಹ ಶಕ್ತಿ ಸಂಗಮವು, ಪಕ್ಷದ ಕಾರ್ಯಚಟುವಟಿಕೆಗಳಿಗೆ ಹೊಸ ಶಕ್ತಿಯನ್ನು

ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’ Read More »

ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ವಾರ್ಷಿಕ ಕ್ರೀಡಾಕೂಟ | ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘ ಆಯೋಜನೆ

ಪುತ್ತೂರು: ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ವಲಯದ ಆಶ್ರಯದಲ್ಲಿ ಕಡಬ ಸಂತ ಜೋಕಿಮರ ಶಾಲಾ ಮೈದಾನದಲ್ಲಿ ಕಡಬ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟ ರವಿವಾರ ನಡೆಯಿತು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಬಿಳಿನೆಲೆ ಕಾರ್ಯಕ್ರಮ ಉದ್ಘಾಟಿಸಿದರು. ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ನಿವೃತ್ತ

ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ವಾರ್ಷಿಕ ಕ್ರೀಡಾಕೂಟ | ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘ ಆಯೋಜನೆ Read More »

ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳುವುದಕ್ಕೆ ಎನ್‌ಎಸ್‌ಎಸ್ ಸಹಕಾರಿ | ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟಿಸಿ ಸತ್ಯಜಿತ್ ಉಪಾಧ್ಯಾಯ

ಪುತ್ತೂರು: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಮಾಡಲು ಕಾಲೇಜು ಹಂತದಲ್ಲಿ ವಿವಿಧ ಯೋಜನೆಗಳಿರುವುದನ್ನು ಗಮನಿಸಬಹುದು. ಅಂತಹ ಆಲೋಚನೆಯೊಂದಿಗೆ ರೂಪುಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಲ್ಲಿ ಶಿಸ್ತು, ಸ್ವಚ್ಛತೆ, ನಾಯಕತ್ವ ಗುಣ, ಸಮಯಪಾಲನೆ ಹಾಗೂ ಸಾಮಾಜಿಕ ಕಳಕಳಿಯನ್ನು ತುಂಬುವ ಕಾರ್ಯವನ್ನು ಮಾಡುತ್ತದೆ. ಶ್ರಮದಾನ, ವಿಶೇಷ ಶಿಬಿರಗಳಲ್ಲಿ ನಡೆಸುವ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಹೇಳಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ

ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳುವುದಕ್ಕೆ ಎನ್‌ಎಸ್‌ಎಸ್ ಸಹಕಾರಿ | ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟಿಸಿ ಸತ್ಯಜಿತ್ ಉಪಾಧ್ಯಾಯ Read More »

ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ

ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ಟೆಹ್ರಾನ್‌ : ಹಿಜಾಬ್‌ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದ ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ತರನೆಹ್‌ ಅಲಿದೋಸ್ತಿ ಅವರನ್ನು ಇರಾನ್‌ ಪೊಲೀಸರು ಬಂಧಿಸಿದ್ದಾರೆ. ಅಲಿದೋಸ್ತಿ ʼದ ಸೇಲ್ಸ್‌ಮ್ಯಾನ್‌ʼ ಚಿತ್ರಕ್ಕಾಗಿ ಓಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ ಮತ್ತು ಇರಾನ್‌ನ ಜನಪ್ರಿಯ ನಟಿ.ಇತ್ತೀಚೆಗೆ ಇರಾನ್‌ ಸರಕಾರ ಹಿಜಾಬ್‌ ವಿರೋಧಿ ಹೋರಾಟದಲ್ಲಿದ್ದ ಯುವಕನನ್ನು ಗಲ್ಲಿಗೇರಿಸಿದ್ದು, ಅವರನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವುದಕ್ಕೆ ನಟಿಯನ್ನು ಬಂಧಿಸಲಾಗಿದೆ.ಹಿಜಾಬ್‌ ಬೆಂಬಲಿಸಿದ ಅನೇಕ ಗಣ್ಯರಿಗೆ ಇರಾನ್‌ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ಅಲಿದೋಸ್ತಿ ತನ್ನ ಪೋಸ್ಟ್‌

ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ Read More »

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 49.65 ಲಕ್ಷ ರೂ.ದಂಡ ವಿಧಿಸಿದೆ.ರಾಮಚಂದ್ರ ಜಿ. ಎಂಬವರಿಂದ ನಂಜೇಗೌಡ ಅವರು 40 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದ್ದರಿಂದ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ದಂಡ ಪಾವತಿಸದಿದ್ದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ Read More »

error: Content is protected !!
Scroll to Top