ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ.ಕ. ಜಿಲ್ಲೆಯಿಂದ 34,340 ವಿದ್ಯಾರ್ಥಿಗಳು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ

ಪುತ್ತೂರು : ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.ಈ ಹಿನ್ನಲೆಯಲ್ಲಿ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆಗಳು ನಡೆದಿದೆ. ಮಾ.9 ರಿಂದ 29 ರ ತನಕ ಪರೀಕ್ಷೆ ನಡೆಯಲಿದ್ದು, ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಹೊಸ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿ ಅಭ್ಯರ್ಥಿಗಳು ಸೇರಿದಂತೆ 34,340 ಮಂದಿ ಪರೀಕ್ಷೆಗೆ  ನೋಂದಾವಣೆ ಮಾಡಿಕೊಂಡಿದ್ದು, ಪರೀಕ್ಷೆ ಬರೆಯಲಿದ್ದಾರೆ. ದ.ಕ.ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅಗತ್ಯ ಭದ್ರತೆ ಒದಗಿಸಲಾಗಿದೆ. […]

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ.ಕ. ಜಿಲ್ಲೆಯಿಂದ 34,340 ವಿದ್ಯಾರ್ಥಿಗಳು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ Read More »

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

ಬೆಂಗಳೂರು: ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪುರುಷರನ್ನೊಳಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ ಅವರು ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪುರುಷರಿಗೆ ಜಾಗೃತಿ ಅಗತ್ಯತಾಯಿಯೊಂದಿಗೆ ಜನ್ಮಪೂರ್ವದ ಸಂಬಂಧವಿದ್ದು, ಇದೊಂದು ಪವಿತ್ರ ಸಂಬಂಧ. ಮನುಕುಲದ ಮುಂದುವರಿಕೆ ನಿರಂತರವಾಗಿ ತಾಯಿಂದಿರು ಮಾಡಿದ್ದಾರೆ. ತಮ್ಮ ತಾಯಿ, ಮಕ್ಕಳು, ಪತ್ನಿಯಿಂದ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ Read More »

ಎಸ್ ಡಿಪಿಐ ಮಹಿಳಾ ಘಟಕದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಎಸ್ ಡಿಪಿಐ ಮಹಿಳಾ ಘಟಕದ ವತಿಯಿಂದ ಬುಧವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿನ 120ಕ್ಕು ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಯನಾಡಿದ ಎಸ್  ಡಿಪಿಐ ವಿಮೆನ್ ಇಂಡಿಯಾ ಮೂಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರಿಯಾ ಅವರು ಇಂದು ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರಿಗೆ ಸಂವಿಧಾನ ದತ್ತವಾದ ಹಕ್ಕು ಮತ್ತು ನ್ಯಾಯ ಸಮರ್ಪಕವಾಗಿ ಸಿಗುತ್ತಿಲ್ಲ.  ರಾಜಕೀಯ ಇಚ್ಛಾಶಕ್ತಿ ಮಹಿಳೆಯರಲ್ಲಿ ಬೆಳೆದಾಗ ಅವರಿಗೆ ಸಮರ್ಪಕ ನ್ಯಾಯ

ಎಸ್ ಡಿಪಿಐ ಮಹಿಳಾ ಘಟಕದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ. Read More »

ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಕುರಿತ ವಿಚಾರಗೋಷ್ಠಿ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಆಲೋಚಿಸುವ ಶಕ್ತಿ ಇದೆ. ಈ ಚಿಂತನೆಗಳಿಗೆ ಮೂರ್ತ ರೂಪ ಕೊಡುವ ಮೂಲಕ ಅದನ್ನೊಂದು ವಿನ್ಯಾಸವನ್ನಾಗಿಸಿದರೆ ಹೊಸ ಹೊಸ ಉತ್ಪನ್ನಗಳು ಉದ್ಭವಿಸುವುದಕ್ಕೆ ಸಾಧ್ಯವಿದೆ ಎಂದು ಬೆಂಗಳೂರಿನ ವಿದ್ಯಾಕೋಶ ಫ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಐಐಎಸ್ಸಿ ಬೆಂಗಳೂರಿನ ಪ್ರಾಜೆಕ್ಟ್ ನೆಟ್‌ವರ್ಕ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಚಿಂತನೆ ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ

ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಕುರಿತ ವಿಚಾರಗೋಷ್ಠಿ Read More »

ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಡಾ.ಮಾಣಿಕ್‌ ಸಹಾ ಪ್ರಮಾಣ ವಚನ ಸ್ವೀಕಾರ

ಅಗರ್ತಲಾ: ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾ ಮಾಣಿಕ್ ಸಹಾ ಇಂದು ಪ್ರಮಾಣವಚನ ಸ್ವೀಕರಿಸಿದರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಡಾ ಮಾಣಿಕ್ ಸಹಾ ಅವರಿಗೆ ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಂಗಳವಾರವೇ ರಾಜ್ಯಕ್ಕೆ ಆಗಮಿಸಿದ್ದಾರೆ. ಮಾಣಿಕ್ ಸಹಾ 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಮಾರ್ಚ್ 2022

ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಡಾ.ಮಾಣಿಕ್‌ ಸಹಾ ಪ್ರಮಾಣ ವಚನ ಸ್ವೀಕಾರ Read More »

ಇಡಿ ಸಮನ್ಸ್‌ಗೆ ಪ್ರತಿಕ್ರಿಯಿಸಿದ ಕೆಸಿಆರ್ ಪುತ್ರಿ ಕೆ. ಕವಿತಾ: ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇನೆ ಆದರೆ ಸಮಯ ಕೇಳುತ್ತೇನೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಬಂಧನದ ಬಳಿಕ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಬಿಆರ್ ಎಸ್ ನಾಯಕಿ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ. ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಏಜೆನ್ಸಿಯು ವಿಚಾರಣೆಗೆ ಒಳಪಡಿಸಿದ

ಇಡಿ ಸಮನ್ಸ್‌ಗೆ ಪ್ರತಿಕ್ರಿಯಿಸಿದ ಕೆಸಿಆರ್ ಪುತ್ರಿ ಕೆ. ಕವಿತಾ: ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇನೆ ಆದರೆ ಸಮಯ ಕೇಳುತ್ತೇನೆ Read More »

ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವಾರ್ಷಿಕೋತ್ಸವ

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವರ್ಷದ ವಾರ್ಷಿಕೋತ್ಸವ ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಭಜನಾ ಮಂಡಳಿಯಲ್ಲಿ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 9 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಾಗ ತಂಬಿಲ, ದೈವಗಳಇಗೆ ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಊರ

ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ 30ನೇ ವಾರ್ಷಿಕೋತ್ಸವ Read More »

ವಿಶ್ವ ಮಹಿಳಾ ದಿನಾಚರಣೆ : ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ

ಪುತ್ತೂರು : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ  ಉಚಿತ ಆರೋಗ್ಯ ತಪಾಸಣೆ ಬುಧವಾರ ನಡೆಯಿತು. ಮಣಿಪಾಲ್ ಸಿಗ್ಮಾ  ಹಾಗೂ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್ ಬೊಳುವಾರು ವತಿಯಿಂದ ನಡೆಯಿತು. ತಪಾಸಣೆಯಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿದರು.

ವಿಶ್ವ ಮಹಿಳಾ ದಿನಾಚರಣೆ : ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ Read More »

ಪರಿಸರ ಜಾಗೃತಿಗೆ ಸಾಕ್ಷಿಯಾಗಲಿರುವ ಶ್ರೀ ಮಾರಿಯಮ್ಮ ಬ್ರಹ್ಮಕಲಶೋತ್ಸವ

ದೇವಸ್ಥಾನಕ್ಕೆ ಬಳಸಿದ ಮರದ ಬದಲಾಗಿ 500 ಸಸಿ ನೆಡುವ ಸಂಕಲ್ಪ ಕಾರ್ಕಳ : ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ನಾಡಿನಲ್ಲಿ ಕಲೆ, ಸಂಸ್ಕೃತಿ, ವೈವಿಧ್ಯಮಯ ಆಚಾರ ವಿಚಾರ, ಶಿಲ್ಪಕಲೆಗಳಿಗೆ ಪ್ರಸಿದ್ಧಿ ಪಡೆದ ಕಾರ್ಕಳದ ನಗರದಲ್ಲಿ ನಡೆಯುತ್ತಿರುವ ಶ್ರೀ ಮಾರಿಗುಡಿ ಬ್ರಹ್ಮಕಲಶೋತ್ಸವವು ಪರಿಸರ ಜಾಗೃತಿಗೆ ಸಾಕ್ಷಿಯಾಗಲಿದೆ. ದೇವಾಲಯದ ನವೀಕರಣದ ಕೆಲಸ ಕಾರ್ಯಗಳಿಗೆ ಅನೇಕ ಮರಗಳನ್ನು ಬಳಸಿದ್ದು, ಇದಕ್ಕೆ ಪ್ರತಿಯಾಗಿ 500 ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯ ಸಂಕಲ್ಪವನ್ನು ಜೀರ್ಣೊದ್ಧಾರ ಸಮಿತಿ ಹೊಂದಿದೆ. ಅರಣ್ಯ ಇಲಾಖೆಯವರಿಂದ ತೆಳ್ಳಾರು ರಸ್ತೆಯಲ್ಲಿನ ಕುಂಬ್ರಪದವಿನಲ್ಲಿ ಜಾಗ

ಪರಿಸರ ಜಾಗೃತಿಗೆ ಸಾಕ್ಷಿಯಾಗಲಿರುವ ಶ್ರೀ ಮಾರಿಯಮ್ಮ ಬ್ರಹ್ಮಕಲಶೋತ್ಸವ Read More »

ವಿಮಾನದಲ್ಲಿ ಸಿಗರೇಟ್‌ ಸೇವಿಸಿದ ಯುವತಿಯ ಬಂಧನ

ಬೆಂಗಳೂರು : ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವತಿಯೊಬ್ಬಳನ್ನು ವಾಯುಯಾನ ಸುರಕ್ಷಾ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಲಾಗಿದೆ.ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಸೇದಿದ್ದಳು. ಆಕೆಯನ್ನು ಭಾನುವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ ಭಾನುವಾರ ತಡರಾತ್ರಿ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಸಿಗರೇಟ್‌ ಸೇದಿದ್ದಾಳೆ. ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ.ವಿಮಾನ ಲ್ಯಾಂಡ್‌ ಆಗುವ 30 ನಿಮಿಷ

ವಿಮಾನದಲ್ಲಿ ಸಿಗರೇಟ್‌ ಸೇವಿಸಿದ ಯುವತಿಯ ಬಂಧನ Read More »

error: Content is protected !!
Scroll to Top