ಸ್ವಯಂಘೋಷಿತ ಖಲಿಸ್ತಾನ ಕಮಾಂಡರ್ ಗಳಂತ ಸ್ವತಂತ್ರ ನಾಯಕರು ನಮಗೆ ಬೇಡ | ಸವಾಲುಗಳಿಗೆ ಪುತ್ತೂರಿನಲ್ಲಿ ಉತ್ತರಿಸಿದ ಡಿ.ವಿ. ಸದಾನಂದ ಗೌಡ | ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ |  ಗೂಂಡಾ ರಾಜ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ

ಪುತ್ತೂರು: ಪ್ರಚಾರ – ಅಪಪ್ರಚಾರಗಳಿಂದಲೇ ತಾನು ಇಲ್ಲಿಯವರೆಗೆ ಬೆಳೆದು ಬಂದಿದ್ದೇನೆ. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳಿಂದ ಸಂತೃಪ್ತನಾಗಿದ್ದೇನೆ. ಪುತ್ತೂರು ಸೇರಿದಂತೆ ರಾಜ್ಯದಲ್ಲಿ 130 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪುತ್ತೂರು ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೂಂಡಾ ರಾಜ್ಯವಾಗಿದ್ದ ಪುತ್ತೂರಲ್ಲಿ ಶಾಂತಿ ನೆಲೆಸಲು ಬಿಜೆಪಿ ಕಾರಣ. 90ರ ದಶಕದಲ್ಲಿ ಪುತ್ತೂರು ಹೇಗಿತ್ತು. ಸಂಜೆ 6 ಗಂಟೆ ನಂತರ ಪುತ್ತೂರಲ್ಲಿ ನಡೆದಾಡಲು ಸಾಧ್ಯವಿರಲಿಲ್ಲ. ಅಡಕೆ […]

ಸ್ವಯಂಘೋಷಿತ ಖಲಿಸ್ತಾನ ಕಮಾಂಡರ್ ಗಳಂತ ಸ್ವತಂತ್ರ ನಾಯಕರು ನಮಗೆ ಬೇಡ | ಸವಾಲುಗಳಿಗೆ ಪುತ್ತೂರಿನಲ್ಲಿ ಉತ್ತರಿಸಿದ ಡಿ.ವಿ. ಸದಾನಂದ ಗೌಡ | ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ |  ಗೂಂಡಾ ರಾಜ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ Read More »

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗೊಂದು ಕವಿಗೋಷ್ಠಿ

ಪುತ್ತೂರು: ಪುತ್ತೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ, ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್, ರೋಟರಿ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಮತದಾರರ ಜಾಗೃತಿಗೊಂದು ಕವಿಗೋಷ್ಠಿ ಕಾರ್ಯಕ್ರಮ ಮಂಗಳವಾರ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆಯಿತು. ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿ‍ರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ 5371 ಯುವ ಮತದಾರರಿದ್ದು, ಶೇ.100 ರಷ್ಟು ಮತದಾನ ಆಗುವ ಮೂಲಕ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗೊಂದು ಕವಿಗೋಷ್ಠಿ Read More »

ಪುತ್ತೂರಲ್ಲಿ ಸರಣಿ ಅಪಘಾತ: ನಾಲ್ಕು ಕಾರುಗಳಿಗೆ ಹಾನಿ

ಪುತ್ತೂರು: ಪುತ್ತೂರು ಬೈಪಾಸ್‌ ತೆಂಕಿಲ ರಸ್ತೆಯಲ್ಲಿ ಸೋಮವಾರ ಸಂಜೆ ಸರಣಿ ಅಪಘಾತ ಸಂಭವಿಸಿ ನಾಲ್ಕು ಕಾರುಗಳಿಗೆ ಹಾನಿಯಾಗಿವೆ. ಅಪಘಾತದ ರಭಸಕ್ಕೆ ಕಾರಿನ ಎರಡು ಏರ್‌ಬ್ಯಾಗ್‌ ತೆರೆದುಕೊಂಡ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರುಗಳ ಹಲವು ಭಾಗ ಜಖಂಗೊಂಡಿದೆ.

ಪುತ್ತೂರಲ್ಲಿ ಸರಣಿ ಅಪಘಾತ: ನಾಲ್ಕು ಕಾರುಗಳಿಗೆ ಹಾನಿ Read More »

ಪ್ರಜಾಪ್ರಭುತ್ವದ ಹಬ್ಬಕ್ಕೆ ವಿದ್ಯುಕ್ತ ಚಾಲನೆ | ಮತ ಚಲಾಯಿಸಿದ ಹಿರಿಯ ನಾಗರಿಕರು, ವಿಕಲಚೇತನರು

ಪುತ್ತೂರು: ಪ್ರಜಾಪ್ರಭುತ್ವದ ಹಬ್ಬವಾದ ಮತದಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳು ಸೋಮವಾರ ತಾಲೂಕಿನ ವಿವಿಧ ಕಡೆಗಳ ಮನೆಗಳಿಗೆ ತೆರಳಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರಿಂದ ಮತದಾನ ಮಾಡಿಸಿದರು. ಇದೇ ಮೊದಲ ಬಾರಿಗೆ ಮತದಾನ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸ್ವತಃ ಮನೆಗಳಿಗೆ ತೆರಳಿ ಮತದಾನ ನಡೆಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ತಾಲೂಕು ಆಡಳಿತ ಸೌಧದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ನಡೆದು, ಮತದಾನದ ಪ್ರಕ್ರಿಯೆ ನಡೆಯಿತು. ಸಂಜೆ ಡಿಮಸ್ಟರಿಂಗ್ ನಡೆಯಿತು.

ಪ್ರಜಾಪ್ರಭುತ್ವದ ಹಬ್ಬಕ್ಕೆ ವಿದ್ಯುಕ್ತ ಚಾಲನೆ | ಮತ ಚಲಾಯಿಸಿದ ಹಿರಿಯ ನಾಗರಿಕರು, ವಿಕಲಚೇತನರು Read More »

ಪೇರಮಜಲು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಜೆಡಿಎಸ್‌ನಿಂದ ಕಡಬ ತಹಸೀಲ್ದಾರ್‌ಗೆ ಮನವಿ

ಕಡಬ : ಶಿರಾಡಿ ಗ್ರಾಮದ ಪೇರಮಜಲು ಕಾಲೋನಿಯಲ್ಲಿ ಕೊಳವೆಬಾವಿಗೆ ಪಂಪು ಅಳವಡಿಸದೇ ಇರುವುದರಿಂದ ಕೊಳವೆ ಬಾವಿ ಕೆಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಕಡಬ ಜಾತ್ಯಾತೀತ ಜನತಾ ದಳದ ವತಿಯಿಂದ ನೀರಿನ ಸಮಸ್ಯೆ ಬಗೆಹರಿಸುವಂತೆ ಕಡಬ ತತಹಸೀಲ್ದಾರ್ ಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ನೇತೃತ್ವದಲ್ಲಿ ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಪೇರಮಜಲು ಕಾಲೋನಿಯಲ್ಲಿ ಸುಮಾರು 50 ಕ್ಕೂ ಹೆಚ್ಚು

ಪೇರಮಜಲು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಜೆಡಿಎಸ್‌ನಿಂದ ಕಡಬ ತಹಸೀಲ್ದಾರ್‌ಗೆ ಮನವಿ Read More »

ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಬಿರುಸಿನ ಮತ ಪ್ರಚಾರ

ಪುತ್ತೂರು: ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರದ ವೇಗ ಮತ್ತಷ್ಟು ಹೆಚ್ಚುತ್ತಿದೆ. ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಕಾರ್ಯಕರ್ತರೊಂದಿಗೆ ಫೀಲ್ಡ್ ಗೆ ಇಳಿದು ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಇಂದು ಬಡಗನ್ನೂರು, ಪಡುಮಲೆಯಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚನೆ ನಡೆಸಿದರು ಹಾಗೂ ಪಡುಮಲೆ ಕಿನ್ನಿಮಣಿ ಪೂಮಣಿ ದೈವಸ್ಥಾನ ಹಾಗೂ ಪಡುಮಲೆ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಬಿರುಸಿನ ಮತ ಪ್ರಚಾರ Read More »

ಕಾಂಗ್ರೆಸ್ ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸಿದೆ | ಬಿಜೆಪಿ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ

ಪುತ್ತೂರು: ಹಿಂದಿನ ಕಾಂಗ್ರೆಸ್ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯ ಕುರಿತು ಇಂದು ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರು ಆಲೋಚನೆ ಮಾಡಬೇಕಾಗಿದ್ದು, ಘಟನೆಗೆ ಉತ್ತರ ನೀಡಲು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಅವರು ಸೋಮವಾರ ತೆಂಕಿಲ ಬೈಪಾಸ್ ಬಳಿಯ ದರ್ಶನ್ ಹಾಲ್ ನಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಳೆದ 9 ದಶಕಗಳಿಂದ ಕಾಂಗ್ರೆಸ್ ದಲಿತರನ್ನು ಓಟ್

ಕಾಂಗ್ರೆಸ್ ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸಿದೆ | ಬಿಜೆಪಿ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ Read More »

ಕೆ.ಆರ್.ಎಸ್ ಪಕ್ಷಕ್ಕೆ ನಮ್ಮ ಬೆಂಬಲ: ನೀತಿ ತಂಡ ಘೋಷಣೆ

ಕಡಬ: ಭ್ರಷ್ಟಾಚಾರ ಮುಕ್ತ ಕರ್ನಾಟನ ನಿರ್ಮಾಣದ ಕನಸು ಹೊತ್ತಿರುವ ಕರ್ನಾಟಕ ರಾಷ್ಟ ಸಮಿತಿ(ಕೆ.ಅರ್.ಎಸ್) ಪಕ್ಷ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಫರ್ಧೆಗೆ ಇಳಿದಿದ್ದು ಪಕ್ಷದ ಅಭ್ಯರ್ಥಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸುವುದಲ್ಲದೆ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸಾಮಾಜಿಕ ಸಂಘಟನೆ ನೀತಿ ತಂಡ ಘೋಷಣೆ ಮಾಡಿದೆ. ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಸೇರಿ ನಿರ್ಮಿಸಿರುವ ಕರ್ನಾಟಕ ರಾಷ್ಟ್ರ

ಕೆ.ಆರ್.ಎಸ್ ಪಕ್ಷಕ್ಕೆ ನಮ್ಮ ಬೆಂಬಲ: ನೀತಿ ತಂಡ ಘೋಷಣೆ Read More »

ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಕಾಲಿಗೆ ಚಕ್ರ ಕಟ್ಟಿ ಹಗಲು ರಾತ್ರಿಯೆನ್ನದೆ ಭರ್ಜರಿ ಮತ ಪ್ರಚಾರ

ಪುತ್ತೂರು: ಪುತ್ತೂರು ಕ್ಷೇತ್ರ ಈಗಾಗಲೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು ಮತ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೇಸ್ ನ  ತತ್ವ ಸಿದ್ಧಾಂತಗಳಿಂದ ಬೇಸರಗೊಂಡು ಹೊರ ಬಂದು  ಜೆಡಿಎಸ್ ನಿಂದ ಟಿಕೆಟ್ ಗಿಟ್ಟಿಸಿಕೊಂಡ ದಿವ್ಯ ಪ್ರಭಾ ಗೌಡ ರವರು ಜೆಡಿಎಸ್ ಅಸ್ತಿತ್ವವನ್ನ ಪುತ್ತೂರಿನಲ್ಲಿ ತೋರಿಸಲು ಗೆಲುವಿಗಾಗಿ ಹಗಲು ರಾತ್ರಿ ಎನ್ನದೇ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ದಿನ ಹತ್ತಿರ ಬರುತ್ತಿದ್ದಂತೆ ಲೆಕ್ಕಾಚಾರಗಳು ಮೇಲೆ ಕೆಳಗೆ ಆಗುತ್ತಿದ್ದು ಜೆಡಿಎಸ್ ನ 

ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಕಾಲಿಗೆ ಚಕ್ರ ಕಟ್ಟಿ ಹಗಲು ರಾತ್ರಿಯೆನ್ನದೆ ಭರ್ಜರಿ ಮತ ಪ್ರಚಾರ Read More »

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆ.ಪಿ. ನಡ್ಡಾ

ಬೆಂಗಳೂರು: ಬೆಂಗಳೂರಿನ ಶಾಂಗ್ರಿಲಾ ಹೊಟೇಲ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯ ಪ್ರಮುಖ ಅಂಶಗಳು: 1. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವರ್ಷಕ್ಕೆ ಮೂರು ಅಡುಗೆ ಅನಿಲ ವಿತರಣೆ (ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಯಂದು ಉಚಿತ ಸಿಲಿಂಡರ್ ವಿತರಣೆ) 2. ಗುಣಮಟ್ಟದ ಆಹಾರ ಒದಗಿಸುವುದಕ್ಕಾಗಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ. 3. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುವುದು. 4. ಬಿಪಿಎಲ್

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆ.ಪಿ. ನಡ್ಡಾ Read More »

error: Content is protected !!
Scroll to Top