ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡರೂ ಕೆಲವು ಕ್ಷೇತ್ರಗಳಲ್ಲಿ ಬಗೆಹರಿಯದ ಗೊಂದಲ

ಬೆಂಗಳೂರು : ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಕಾಪುವಿನಿಂದ ವಿನಯ್‌ ಕುಮಾರ್‌ ಸೊರಕೆ, ಉಳ್ಳಾಲದಿಂದ ಯು. ಟಿ. ಖಾದರ್‌ ಮತ್ತು ಬೈಂದೂರಿನಿಂದ ಗೋಪಾಲ ಪೂಜಾರಿಯವರಿಗೆ ಟಿಕೆಟ್‌ ಸಿಗುವುದು ಖಾತರಿಯಾಗಿದೆ. ಆದರೆ ಗೊಂದಲದ ಗೂಡಾಗಿರುವ ಕಾರ್ಕಳ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಹೈಕಮಾಂಡಿನಿಂದಲೂ ಸಾಧ್ಯವಾಗಿಲ್ಲ.ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ಪ್ರಸ್ತಾಪಿಸಿದ ಬಹುತೇಕ ಎಲ್ಲ […]

ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡರೂ ಕೆಲವು ಕ್ಷೇತ್ರಗಳಲ್ಲಿ ಬಗೆಹರಿಯದ ಗೊಂದಲ Read More »

ಎಸ್‌ಡಿಪಿಐ-ಕಾಂಗ್ರೆಸ್‌ನ ನಂಟು ಕುರಿತು ತನಿಖೆ ಮತ್ತು ಚರ್ಚೆಯ ಅಗತ್ಯವಿದೆ: ಶೋಭಾ ಕರಂದ್ಲಾಜೆ

ಬೆಂಗಳೂರು : ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಅವುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಸ್‌ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜತೆ ಕಾಂಗ್ರೆಸ್‌ನ ನಂಟು ಕುರಿತು ತನಿಖೆ ಮತ್ತು ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವವರನ್ನು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ, ವಿದೇಶದ ನೆಲದಲ್ಲಿ ದೇಶ

ಎಸ್‌ಡಿಪಿಐ-ಕಾಂಗ್ರೆಸ್‌ನ ನಂಟು ಕುರಿತು ತನಿಖೆ ಮತ್ತು ಚರ್ಚೆಯ ಅಗತ್ಯವಿದೆ: ಶೋಭಾ ಕರಂದ್ಲಾಜೆ Read More »

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲು ಸಮ್ಮತಿಸದ ಹೈಕಮಾಂಡ್‌

ಬೆಂಗಳೂರು :ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಸಿದ್ದರಾಮಯ್ಯ ಇಚ್ಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸಮ್ಮತಿಸಿಲ್ಲ ಎನ್ನಲಾಗಿದೆ. ನಿಮಗೆ ಕೋಲಾರ ಸೂಕ್ತ ಅಲ್ಲ, ವರುಣಾದಿಂದಲೇ ಸ್ಪರ್ಧಿಸಿ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಅಂತ ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿ ಪಕ್ಷದ ನಾಯಕರ ಜೊತೆಗೆ ಹೋಗಿ ಚರ್ಚೆ ಮಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆಯ ಸಭೆಯಲ್ಲೇ ನನ್ನ ಟಿಕೆಟ್

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲು ಸಮ್ಮತಿಸದ ಹೈಕಮಾಂಡ್‌ Read More »

ಸಂಶೋಧನಾ ವರದಿಯ ಪ್ರಕಾರ ಕೊರೊನಾ ವೈರಸ್‌ಗೆ ಮೂಲ ಕಾರಣ ನಾಯಿ ಮಾಂಸ

ನ್ಯೂಯಾರ್ಕ್ : ಮೂರು ವರ್ಷದಿಂದ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್‌ಗೆ ಕಾರಣ ನಾಯಿ ಮಾಂಸ ಎಂದು ಸಂಶೋಧನಾ ವರದಿಯೊಂದು ಹೇಳುತ್ತಿದೆ. ಚೀನದ ವುಹಾನ್‌ನಲ್ಲಿರುವ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಈಗ ಅಂತಾರಾಷ್ಟ್ರೀಯ ತಜ್ಞರ ತಂಡ ಚೀನದ ವುಹಾನ್ ಪ್ರಾಂತದ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಹುವಾನನ್

ಸಂಶೋಧನಾ ವರದಿಯ ಪ್ರಕಾರ ಕೊರೊನಾ ವೈರಸ್‌ಗೆ ಮೂಲ ಕಾರಣ ನಾಯಿ ಮಾಂಸ Read More »

ಮಾ.19 : ವಿಟ್ಲ ಪಂಚಾಯಿತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ

ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮಾ.19 ಭಾನುವಾರ ಚಂದಳಿಕೆ ಭಾರತ್ ಆಡಿಟೋರಿಯಂನಲ್ಲಿ ನಡೆಯಲಿದೆ. ಬೆಳಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ 9400 ಹಕ್ಕು ಪತ್ರ ವಿತರಣೆಯೂ ನಡೆಯಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ

ಮಾ.19 : ವಿಟ್ಲ ಪಂಚಾಯಿತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ Read More »

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್‌ ವಾರಂಟ್‌

ಉಕ್ರೇನ್‌ನಿಂದ ಮಕ್ಕಳ ಅಪಹರಣದ ಆರೋಪ ಮಾಸ್ಕೊ : ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧವೇ ಅರೆಸ್ಟ್‌ ವಾರೆಂಟ್‌ ಹೊರಡಿಸಿದೆ. ಉಕ್ರೇನ್‌ನಿಂದ ಮಕ್ಕಳ ಅಪಹರಣಕ್ಕೆ ಕಾರಣವಾದ ಯುದ್ಧ ಅಪರಾಧಗಳಿಗಾಗಿ ಈ ಬಂಧನ ವಾರೆಂಟ್‌ ಹೊರಡಿಸಲಾಗಿದೆ. ದೇಶವೊಂದರ ಜನರನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡುವ ಯುದ್ಧ ಅಪರಾಧಕ್ಕೆ ಪುಟಿನ್‌ ಕಾರಣ. ಇದರೊಂದಿಗೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಜನಸಂಖ್ಯೆಯನ್ನು (ಮಕ್ಕಳನ್ನು) ಕಾನೂನುಬಾಹಿರವಾಗಿ ವರ್ಗಾಯಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ ಎಂದು ಐಸಿಸಿ ಕೋರ್ಟ್‌

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್‌ ವಾರಂಟ್‌ Read More »

ಶಿವಮೊಗ್ಗ, ಮಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಇಬ್ಬರು ಉಗ್ರರ ವಿರುದ್ಧ ಚಾರ್ಜ್‌ಶೀಟ್

ಬೆಂಗಳೂರು : ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸುಡುವುದು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ.ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ (23) ಮತ್ತು ಸೈಯದ್ ಯಾಸಿನ್ (22) ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸಿದೆ

ಶಿವಮೊಗ್ಗ, ಮಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಇಬ್ಬರು ಉಗ್ರರ ವಿರುದ್ಧ ಚಾರ್ಜ್‌ಶೀಟ್ Read More »

ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರು: ಹಿಮಂತ್‌ ಬಿಸ್ವಾ ಶರ್ಮ ಟೀಕೆ

ನವ ಭಾರತಕ್ಕೆ ಮದರಸ ಶಿಕ್ಷಣದ ಅಗತ್ಯವಿಲ್ಲ ಬೆಳಗಾವಿ : ಕಾಂಗ್ರೆಸಿಗರು ಬಾಬರಿ ಮಸೀದಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ, ರಾಮಮಂದಿರದ ಬಗ್ಗೆ ಮಾತನಾಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಟೀಕಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರಿಗೆ ಜನರು ತಕ್ಕ ಪಾಠ ಕಲಿಸಬೇಕು, ಅವರನ್ನು ದೇಶದಿಂದ ಕಿತ್ತೊಗೆಯುವ ಅಗತ್ಯವಿದೆ.ಅಸ್ಸಾಂ ಸೇರಿದಂತೆ ಇಡೀ ಉತ್ತರ ಭಾರತ ಎಂದೂ ಔರಂಗಜೇಬನ ಆಡಳಿತದ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆದರೂ, ಕಮ್ಯುನಿಸ್ಟ್‌ ಸಾಹಿತಿಗಳು ಇಡೀ ಭಾರತ ಔರಂಗಜೇಬನ ಅಧೀನದಲ್ಲಿತ್ತು ಎಂದು ತಿರುಚಿದ

ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರು: ಹಿಮಂತ್‌ ಬಿಸ್ವಾ ಶರ್ಮ ಟೀಕೆ Read More »

ತಡರಾತ್ರಿ ಹೋಟೆಲ್‌ನಲ್ಲಿ ಲೇಡಿಸ್ ಪಾರ್ಟಿ: ಬಜರಂಗದಳ ಕಾರ್ಯಕರ್ತರಿಂದ ತೀವ್ರ ವಿರೋಧ

ಶಿವಮೊಗ್ಗ : ನಗರದಲ್ಲಿ ಶುಕ್ರವಾರ ರಾತ್ರಿ ಹೋಟೆಲೊಂದರಲ್ಲಿ ನಡೆಯುತ್ತಿದ್ದ ‘ಲೇಟ್‌ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ.ಕುವೆಂಪು ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರು ಲೇಟ್ ನೈಟ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ನಂತರ ಮಹಿಳೆಯರು, ಪುರುಷರು ಮತ್ತು ಕೆಲವು ಮಕ್ಕಳು ಸೇರಿದಂತೆ ಹಲವರು ಹೋಟೆಲ್‌ನಿಂದ ಹೊರಗೆ ಬರುತ್ತಿರುವುದು ಕಂಡುಬಂತು. ತಡರಾತ್ರಿ ಪಾರ್ಟಿ ಆಯೋಜಿಸಲಾಗಿದೆ ಎಂದು ಬಜರಂಗದಳದ ಮುಖಂಡ ರಾಜೇಶ್ ಗೌಡ

ತಡರಾತ್ರಿ ಹೋಟೆಲ್‌ನಲ್ಲಿ ಲೇಡಿಸ್ ಪಾರ್ಟಿ: ಬಜರಂಗದಳ ಕಾರ್ಯಕರ್ತರಿಂದ ತೀವ್ರ ವಿರೋಧ Read More »

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ…

ರೋಬೋಟಿಗೂ ಇವರಿಗೂ ವ್ಯತ್ಯಾಸ ಇದೆಯಾ? ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಾನವೀಯ ಸಂಬಂಧಗಳ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬಂದ ನನಗೆ ತುಂಬ ಆಶ್ಚರ್ಯ ಮತ್ತು ಆಘಾತ ತಂದು ಕೊಟ್ಟ ಒಂದು ಸಂಬಂಧದ ಬಗ್ಗೆ ಇವತ್ತು ಬರೆಯಬೇಕು. ಇಂತಹವರು ನಮ್ಮ ಸುತ್ತ ಇದ್ದರೂ ಇರಬಹುದು.ಒಂದು ನಿಜವಾದ ಉದಾಹರಣೆಯಿಂದ ಇಂದು ನನ್ನ ಲೇಖನ ಆರಂಭಿಸುವೆ. ಆ ಕುಟುಂಬ ತುಂಬಾನೇ ವಿಚಿತ್ರ ಆಗಿತ್ತು ನಮ್ಮ ಊರಿನಲ್ಲಿ ಮಧ್ಯಮ ವರ್ಗದ ಒಂದು ವಿಚಿತ್ರವಾದ ಕುಟುಂಬ ಇತ್ತು. ಆ ಕುಟುಂಬದಲ್ಲಿ ಮಾತುಕತೆ ನಿಂತು

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ… Read More »

error: Content is protected !!
Scroll to Top