ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ
ಪುತ್ತೂರು: ಮಿತ್ತೂರು ಕುಕ್ಕರೆಬೆಟ್ಟು ಬಳಿ ಸೋಮವಾರ ಮಧ್ಯಾಹ್ನ ಭಾರೀ ಮಳೆಗೆ ಮರ ರಸ್ತೆಗೆ ಉರುಳಿ ಬಿದ್ದು ಪುತ್ತೂರು ಮಾಣಿ ನಡುವಣ ವಾಹನ ಸಂಚಾರ ಸ್ಥಗಿತಗೊಂಡಿತು. ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಮರ ಬಿದ್ದ ಪರಿಣಾಮ ಪುತ್ತೂರು ಮಾಣಿ ನಡುವಣ ಓಡಾಟ ನಡೆಸುವವರಿಗೆ ತೊಂದರೆ ಉಂಟಾಯಿತು. ವಾಹನಗಳು ಮುರ ಮತ್ತು ಇತರೆ ಮಾರ್ಗಗಳ ಮೂಲಕ ಸಂಚರಿಸಿತು.
ಮಿತ್ತೂರು ಬಳಿ ರಸ್ತೆಗೆ ಉರುಳಿದ ಮರ | ಸಂಚಾರದಲ್ಲಿ ವ್ಯತ್ಯಯ Read More »









