ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ”

ಪುತ್ತೂರು: ವೈಕುಂಠಪುರ ವಿಷ್ಣು ಗೆಳೆಯರ ಬಳಗದ ವತಿಯಿಂದ ದ್ವಿತೀಯ ವರ್ಷದ ಪುರುಷ ಹಾಗೂ ಮಹಿಳೆಯರ ಸಾರ್ವಜನಿಕ ಹಿಂದೂ ಬಾಂಧವರ ಕೆಸರ್‍ ಡ್‍ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ-2023 ಜು.30 ರಂದು ಸಾಜ ಕಾಡ್ಲ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ನಡೆಯುವ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ ಕೂಟೇಲು ಉದ್ಘಾಟಿಸಲಿದ್ದು, ಬುಳೇರಿಕಟ್ಟೆ ಕಲ್ಲಕ್ಕಿನಾಯ ವುಡ್ ಫರ್ನೀಚರ್ & ಇಂಟಿರಿಯರ್ ಮಾಲಕ ಗಣೇಶ್ ಭಟ್ ಸುದನಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ರೈ ಮುಗೆರೋಡಿ, ಹಿರಿಯರಾದ […]

ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ” Read More »

ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಕುರಿತು ಅಂತರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2023”ಕ್ಕೆ ಚಾಲನೆ

ಪುತ್ತೂರು: ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ತಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟತೆ ಇರಬೇಕು . ಆ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸುವ ಛಲ ಇರಬೇಕು ಎಂದು ಎನ್‌ಐಟಿಕೆ ಸುರತ್ಕಲ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹಿತ್.ಪಿ.ತಹಿಲಿಯಾನಿ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗ ಹಾಗೂ ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು

ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಕುರಿತು ಅಂತರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2023”ಕ್ಕೆ ಚಾಲನೆ Read More »

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ

ಕೋಲ್ಕತ್ತ : ಹೊಸ ಮೊಬೈಲ್ ಫೋನ್ ಖರೀದಿಸಲು ತಮ್ಮ 8 ತಿಂಗಳ ಮಗುವನ್ನೇ ಮಾರಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಮಗುವನ್ನುಮಾರಿ ಹೊಸ ಫೋನ್ ಖರೀದಿಸಿದ್ದು ಮಾತ್ರವಲ್ಲದೆ ಈ ದಂಪತಿ ಜಾಲಿಟ್ರಿಪ್ ಕೂಡ ಮಾಡಿದ್ದರು. ಅವರ ಕೈಯಲ್ಲಿ ದುಬಾರಿ ಬೆಲೆಯ ಫೋನ್ ಕಂಡು ಸಂಶಯಗೊಂಡ ನೆರೆಹೊರೆಯವರು ಗುಸುಗುಸು ಮಾತನಾಡಲು ತೊಡಗಿದಾಗಲೇ ಖತರ್‌ನಾಕ್ ದಂಪತಿಯ ಗುಟ್ಟು ಬಯಲಾದದ್ದು. ದಂಪತಿಗೆ ಓರ್ವ ಪುತ್ರಿಯೂ ಇದ್ದು, 8 ತಿಂಗಳ ಹಿಂದೆ ಜನಿಸಿದ

ಮೊಬೈಲ್ ಖರೀದಿಗೆ 8 ತಿಂಗಳ ಮಗುವನ್ನೇ ಮಾರಿದ ದಂಪತಿ | ಪೊಲೀಸರ ಅತಿಥಿಯಾದ ದಂಪತಿ Read More »

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ

ಪುತ್ತೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೇ ಗಮನಿಸಿ. ನಿಮಗೆ ಕಲಿಕೆ ಕಷ್ಟವಾಗುತ್ತಿದೆಯೇ ? ಹಾಗಾದರೆ ತಡಮಾಡಬೇಡಿ. ಪ್ರತಿಷ್ಠಿತ ಪ್ರೇರಣಾ ಸಂಸ್ಥೆಗೆ ಭೇಟಿ ನೀಡಿ. ನುರಿತ ಬೋಧಕರಿಂದ ನೀಡುವ ಟ್ಯೂಷನ್ ತರಗತಿಯಲ್ಲಿ ಪಾಲ್ಗೊಳ್ಳಿ. ನಗರದ ಅರುಣಾ ಥಿಯೇಟರ್ ಎದುರುಗಡೆ ಇರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಈಗಾಗಲೇ ಆರಂಭಗೊಂಡಿದೆ. ನುರಿತ ಶಿಕ್ಷಕರುಗಳಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯದಲ್ಲಿ ಟ್ಯೂಷನ್ ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಟ್ಯೂಷನ್ ಜತೆಗೆ ಉಚಿತವಾಗಿ ಮೆಡಿಟೇಷನ್ ತರಗತಿಗಳನ್ನು ನೀಡಲಾಗುವುದು. ಶಿಕ್ಷಣಕ್ಕೆ

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ Read More »

ನರಿಮೊಗರು ಗ್ರಾಪಂಗೆ ಮಕ್ಕಳ ಕಲಿಕೆ ಪೂರಕ ಆಟಿಕೆ ಕೊಡುಗೆ

ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯ ಅವರು ನರಿಮೊಗ್ರು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಮಕ್ಕಳ ಕಲಿಕೆಗೆ ಪೂರಕ ಆಟಿಕೆಗಳನ್ನು ಕೊಡುಗೆಯಾಗಿ ನೀಡಿದರು. ಆಟಿಕೆಗಳಾದ PUZZLE STORY, SPELL  A WORD, LUDO, RUBIC CUBES ಮತ್ತು MBA entrance Exam, ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂಧರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ವಿದ್ಯಾ, ಉಪಾಧ್ಯಕ್ಷ ಸುಧಾಕರ ಕುಲಾಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು, ಸದಸ್ಯೆ ಸದಸ್ಯೆ ಹರಿಣಿ, ಕಾರ್ಯದರ್ಶಿ ಶೇಖ್

ನರಿಮೊಗರು ಗ್ರಾಪಂಗೆ ಮಕ್ಕಳ ಕಲಿಕೆ ಪೂರಕ ಆಟಿಕೆ ಕೊಡುಗೆ Read More »

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ

ಕೇರಳ : ಕೇರಳದ ಬಡ ಕುಟುಂಬಕ್ಕೆ ಸೇರಿದ 11 ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ಗುಂಪೊಂದು ಲಾಟರಿ ಖರೀದಿಸಿ 10 ಕೋಟಿ ರೂ. ಬಂಪರ್ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಈ ತಂಡದ ನಾಲ್ಕನೇ ಪ್ರಯತ್ನ ಇದಾಗಿದ್ದು, ಇದೀಗ ಭರ್ಜರಿ ಯಶಸ್ಸು ಗಳಿಸಿದ್ದಾರೆ. ತಂಡದ ಯಾರ ಬಳಿಯೂ ಸ್ವತಂತ ಟಿಕೇಟ್ ಖರೀದಿಗೆ ಹಣವಿರಲಿಲ್ಲ. ಹಾಗಾಗಿ ಗುಂಪಾಗಿ 250 ರೂ. ಪಾವತಿಸಿ ಟಿಕೇಟ್ ಖರೀದಿಸಿದ್ದರು. BR-92 ಲಕ್ಕಿ ಡ್ರಾದ ವಿಜೇತ ಟಿಕೇಟ್  Mb200261 ಆಗಿತ್ತು. ಈ ತಂಡ ಕೇರಳ

ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ Read More »

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥ

ಬೈಲಹೊಂಗಲ : ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಸಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡು ಮತ್ತೆ ಶಾಲೆಗೆ ತೆರಳಿದ್ದಾರೆ. ಗುರುವಾರ ರಾತ್ರಿ ಮಕ್ಕಳಿಗೆ ಚಿಕನ್, ಪನೀರ್ ನೀಡಲಾಗಿತ್ತು. ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದರು. ವಿಷಯ ತಿಳಿದ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ, ಪ್ರಭಾರಿ ತಹಶೀಲ್ದಾರ್ ಜೆ.ಸಿ.ಅಷ್ಟಗಿಮಠ, ಡಿವೈಎಸ್ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಕಂದಾಯ ನಿರೀಕ್ಷಕ

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 38 ವಿದ್ಯಾರ್ಥಿಗಳು ಅಸ್ವಸ್ಥ Read More »

ಇಂಗು ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಪುತ್ತೂರು: ಪಡುವನ್ನೂರು ಗ್ರಾಮದಲ್ಲಿ ಇಂಗು ಗುಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ. ಪಡುವನ್ನೂರು ಗ್ರಾಮದ ಗುರಿಯಡ್ಕ ನಿವಾಸಿ ಐತ್ತಪ್ಪ ಮೂಲ್ಯ ಎಂಬವರೇ ಮೃತಪಟ್ಟವರು. ಐತ್ತಪ್ಪ ಮೂಲ್ಯ ಸುಮಾರು ಒಂದು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ರಾತ್ರಿ ಸಮಯದಲ್ಲಿ ಅವರು ಯಾರಿಗೂ ಹೇಳದೆ ಹೊರಗೆ ಹೋಗುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಊಟ ಮಾಡಿ ಮಲಗಿದವರು ಸೋಮವಾರ ಬೆಳಗ್ಗೆ ನಾಪತ್ತೆಯಾಗಿದ್ದರು. ಬುಧವಾರ ಮೃತದೇಹ ನೆರೆಮನೆಯ ಶೀನ ಗೌಡ ಮಾಪಳ ಎಂಬವರ ಮನೆ ಬಳಿಯ ಇಂಗು ಗುಂಡಿಯಲ್ಲಿ ಪತ್ತೆಯಾಗಿದೆ.

ಇಂಗು ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಡಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ದೀಪ ಪ್ರಜ್ವಲನೆ ಮಾಡಿ ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಐಕ್ಯೂಎಸಿ ಸಂಯೋಜಕರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ Read More »

ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ | ನಗರಸಭೆಯಿಂದ ದಾಳಿ

ಪುತ್ತೂರು: ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಪುತ್ತೂರು ನಗರದ ಮುಖ್ಯರಸ್ತೆಯ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಹಲವು ಕಡೆ ದಾಳಿ ನಡೆಸಿದ ಅಧಿಕಾರಿಗಳು 12 ಕೆಜಿ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿಯರಾದ ಶ್ವೇತಾ ಕಿರಣ್, ವರಲಕ್ಷ್ಮೀ, ಸೂಪರ್ ವೈಸರ್ ಗಳಾದ ನಾಗೇಶ್ ಮತ್ತು ಅಮಿತ್, ರಾಧಾಕೃಷ್ಣ ಸಹಿತ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ | ನಗರಸಭೆಯಿಂದ ದಾಳಿ Read More »

error: Content is protected !!
Scroll to Top