ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ದತ್ತಹೋಮ

ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ದತ್ತಜಯಂತಿ ಅಂಗವಾಗಿ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ದತ್ತಹೋಮ ನಡೆಯಿತು. ಅರ್ಚಕರು ವೈದಿಕ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ದತ್ತಮಾಲಧಾರಿಗಳು ಉಪಸ್ಥಿತರಿದ್ದರು

ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ದತ್ತಹೋಮ Read More »

ಮುರುವ ಸರಕಾರಿ ಪ್ರೌಢ ಶಾಲೆ ರಸ್ತೆಗೆ ಶಿಲಾನ್ಯಾಸ

ಪುತ್ತೂರು: ಮಾಣಿಲ ಗ್ರಾಮದ ಮುರುವ ಸರಕಾರಿ ಪ್ರೌಢ ಶಾಲೆಗೆ ತೆರಳುವ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನಡೆಯಿತು. ಶಾಸಕ ಅಶೋಕ್ ರೈ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಮಾತನಾಡಿ, ಹಲವು ವರ್ಷಗಳ ಬೇಡಿಕೆ ಈ ಬಾರಿ ಈಡೇರಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ಬಳಕೆಯಾಗಲಿದೆ ಎಂದು ಹೇಳಿದರು. ಈ ವೇಳೆ ಶಾಲೆಯ ಸ್ಥಳ ದಾನಿ ಮುರುವ ಮಹಾಬಲೆಭಟ್

ಮುರುವ ಸರಕಾರಿ ಪ್ರೌಢ ಶಾಲೆ ರಸ್ತೆಗೆ ಶಿಲಾನ್ಯಾಸ Read More »

ಡಿ.24-25 : ನಡೆಯಲಿದೆ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ | ಹರಿದು ಬಂತು ಬೃಹತ್ ಹೊರೆಕಾಣಿಕೆ

ಪುತ್ತೂರು: ಡಿ.24 ಹಾಗೂ 25 ರಂದು ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಕಾರ್ಯಕ್ರಮದ ಅಂಗವಾಗಿ ಬೃಹತ್ ಹೊರೆಕಾಣಿಕೆ ಮೆರವಣಿಗೆ ಶನಿವಾರ ಸಂಜೆ ದರ್ಬೆ ವೃತ್ತದಿಂದ ಸಾಗಿ ಬಂತು. ತಾಲೂಕಿನಾದ್ಯಂತದಿಂದ ಬಂದ ಹೊರೆಕಾಣಿಕೆ ದರ್ಬೆ ವೃತ್ತದಲ್ಲಿ ಸೇರಿ ಅಲ್ಲಿ ಉದ್ಘಾಟನೆಗೊಂಡು ಚೆಂಡೆ, ವಾದ್ಯಗಳೊಂದಿಗೆ ಹೊರೆಕಾಣಿಕೆ ನೂರಾರು ವಾಹನಗಳಲ್ಲಿ ಮುಖ್ಯರಸ್ತೆಯಿಂದ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಗೆ

ಡಿ.24-25 : ನಡೆಯಲಿದೆ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ | ಹರಿದು ಬಂತು ಬೃಹತ್ ಹೊರೆಕಾಣಿಕೆ Read More »

ರಜೆಗೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು

ಕೊಪ್ಪಳ: ರಜೆಗೆ ಊರಿಗೆ  ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕರಡಿಗುಡ್ಡ ಬಳಿ ನಡೆದಿದೆ. ಕುಷ್ಟಗಿ ತಾಲೂಕಿನ ಯರೇಗೊನಾಳದ ಸುರೇಶ ವಜ್ರದ (33) ಅಪಘಾತದಲ್ಲಿ ಸಾವನ್ನಪ್ಪಿದ ಯೋಧ. ಮೃತ ಯೋಧ ಸಿ ಆರ್ ಪಿ ಎಫ್ ನಲ್ಲಿ ಜೆಡಿ2 ಆಗಿ ಸೇವೆ ಸಲ್ಲಿಸುತ್ತಿದ್ದರು. 2012 ರಲ್ಲಿ ಸೇವೆ ಸೇರಿದ್ದ ಸುರೇಶ ಅವರು, ಈಗ ಹೈದ್ರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 18 ರಂದು ಕರ್ತವ್ಯದಿಂದ ರಜೆ ಪಡೆದು ಗ್ರಾಮಕ್ಕೆ ಸ್ವಗ್ರಾಮಕ್ಕೆ ಆಗಮಿಸಿದ್ದರು. ಆದರೆ,

ರಜೆಗೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು Read More »

ಕ್ರೆಟಾ -ಓಮ್ನಿ ಕಾರು ಡಿಕ್ಕಿ : ಓರ್ವ ಮೃತ್ಯು

ಕಡಬ: ಕ್ರೆಟಾ ಹಾಗೂ ಓಮ್ನಿ ಕಾರು ಡಿಕ್ಕಿ ಹೊಡೆದುಕೊಂಡ ಪರಿಣಾಮ ಓರ್ವ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಶನಿವಾರ ಮಧ್ಯಾಹ್ನ ನಡೆದಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ಮಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು

ಕ್ರೆಟಾ -ಓಮ್ನಿ ಕಾರು ಡಿಕ್ಕಿ : ಓರ್ವ ಮೃತ್ಯು Read More »

ಹಿಜಾಬ್ ನಿಷೇಧ ಹಿಂಪಡೆದರೆ ರಾಜ್ಯದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿ | ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ

ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಹೇಳಿಕೆ ನೀಡಿರುವುದು ಅತ್ಯಂತ ಕಳವಳಕಾರಿಯಾಗಿದೆ. ಈ ಮೂಲಕ ಕಾಂಗ್ರೇಸ್ ಸರಕಾರದ ಮುಸಲ್ಮಾನರ ತುಷ್ಠೀಕರಣ ಮಿತಿ ಮೀರುತ್ತಿದ್ದು, ಹಿಜಾಬ್ ನಿಷೇಧವನ್ನು ಹಿಂಪಡೆದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿಯನ್ನು ಆರಂಭಿಸುವುದಾಗಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಎರಡು ವರ್ಷಗಳ ಹಿಂದೆ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಕುರಿತು ತೀರ್ಪು ನೀಡಿರುವ ಉಚ್ಛ

ಹಿಜಾಬ್ ನಿಷೇಧ ಹಿಂಪಡೆದರೆ ರಾಜ್ಯದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿ | ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ Read More »

ಎಳವೆಯಲ್ಲಿ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವುದೇ ಹಿಂದೂ ಧರ್ಮಕ್ಕೆ ಸವಾಲು | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶೃತಿ ಭಟ್

ಪುತ್ತೂರು: ಧರ್ಮದ ಬಗೆಗೆ ಎಳವೆಯಿಂದ ಸರಿಯಾದ ಮಾರ್ಗದರ್ಶನ ಇರದಿರುವುದೇ ಹಿಂದೂ ಧರ್ಮ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲವೆನಿಸಿದೆ. ಯಾವಾಗ ಸನಾತನ ಧರ್ಮದ ಉತ್ಕೃಷ್ಟತೆ ಎಳೆಯ ವಯಸ್ಸಿನಿಂದಲೇ ಅರ್ಥವಾಗುತ್ತದೋ ಆಗ ಮತಾಂತರದಂತಹ ವಿಕೃತತೆಗೆ ಅವಕಾಶವಾಗುವುದಿಲ್ಲ. ಸನಾತನ ಹಿಂದೂ ಧರ್ಮದ ಮೇರು ಸಂಗತಿಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸ್ವಯಂಸೇವಕಿ ಶೃತಿ ಭಟ್ ಹೇಳಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ

ಎಳವೆಯಲ್ಲಿ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವುದೇ ಹಿಂದೂ ಧರ್ಮಕ್ಕೆ ಸವಾಲು | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶೃತಿ ಭಟ್ Read More »

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಅನಾವರಣಗೊಂಡ ಫಿಲೋ ಉತ್ಸವ  

ಪುತ್ತೂರು: ಶಿಕ್ಷಣ ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದ್ದು, ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಜ್ಞಾನವುಳ್ಳ ನಾಗರಿಕನನ್ನಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಫುಟ್ರಾಡೋ ಹೇಳಿದರು. ಸಂತ ಫಿಲೋಮಿನಾ  ಪದವಿ ಪೂರ್ವ ಕಾಲೇಜಿನಲ್ಲಿ ಡಿ.23 ರಂದು ನಡೆದ ‘ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಶಿಕ್ಷಣ ಎಲ್ಲರನ್ನೂ ಸಬಲಗೊಳಿಸುತ್ತದೆ. ಇದು ಆಧುನಿಕ ಮತ್ತು ಕೈಗಾರಿಕೀಕರಣಗೊಂಡ ಜಗತ್ತನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಅನಾವರಣಗೊಂಡ ಫಿಲೋ ಉತ್ಸವ   Read More »

ಗ್ಯಾಸ್ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ | ಗಡುವು ಇಲ್ಲ ಎಂದ ಸರಕಾರ

ಮಂಗಳೂರು : ಗ್ಯಾಸ್ ಬಳಕೆದಾರರು ಗ್ಯಾಸ್ ಏಜನ್ಸಿಗೆ ತೆರಳಿ ಆಧಾರ  ಬಯೋಮೆಟ್ರಿಕ್ ದೃಢೀಕರಣ ನೀಡಲು ಯಾವುದೇ ಗಡುವು ನಿಗದಿಪಡಿಸಿಲ್ಲ. ಗ್ಯಾಸ್ ಸಂಪರ್ಕ ಇರುವವರು ತಮ್ಮ ಏಜನ್ಸಿಗೆ ತೆರಳಿ ಬಯೋಮೆಟ್ರಿಕ್ ನೀಡಬಹುದಾಗಿದೆ ಮೊದಲ ಆದ್ಯತೆಯಲ್ಲಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವರು ಬಯೋಮೆಟ್ರಿಕ್ ನೀಡಬೇಕಾಗಿದೆ. ಉಳಿದಂತೆ, ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಹಿಂದೆ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳು ಬಯೋಮೆಟ್ರಿಕ್ ನೀಡಬೇಕಾಗಿದೆ. ಆದರೆ ಈ ದೃಢೀಕರಣ ನೀಡಲು ಕೇಂದ್ರ ಸರ್ಕಾರ ಯಾವುದೇ ಗಡುವು ವಿಧಿಸಿಲ್ಲ. ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು

ಗ್ಯಾಸ್ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ | ಗಡುವು ಇಲ್ಲ ಎಂದ ಸರಕಾರ Read More »

ದತ್ತ ಜಯಂತಿಗೆ ಬಿಗಿ ಬಂದೋಬಸ್ತ್ | ಭದ್ರತೆಗಾಗಿ 4 ಸಾವಿರ ಪೊಲೀಸರ ನಿಯೋಜನೆ | ಸಿಸಿ ಕ್ಯಾಮರಾ ಅಳವಡಿಕೆ

ಚಿಕ್ಕಮಗಳೂರು: ದತ್ತ ಜಯಂತಿ ಸಂದರ್ಭದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿಕ್ರಮ್‌ ಅಮಟೆ ತಿಳಿಸಿದ್ದಾರೆ. ಡಿ. 24 ರಿಂದ 26 ರವರೆಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ವತಿಯಿಂದ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅನಸೂಯ ಜಯಂತಿ, ಶೋಭಾಯಾತ್ರೆ ಹಾಗೂ ದತ್ತಪಾದುಕೆ ದರ್ಶನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಸೂಕ್ತ

ದತ್ತ ಜಯಂತಿಗೆ ಬಿಗಿ ಬಂದೋಬಸ್ತ್ | ಭದ್ರತೆಗಾಗಿ 4 ಸಾವಿರ ಪೊಲೀಸರ ನಿಯೋಜನೆ | ಸಿಸಿ ಕ್ಯಾಮರಾ ಅಳವಡಿಕೆ Read More »

error: Content is protected !!
Scroll to Top