ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಎನ್. ಆಯ್ಕೆ

ವಿಟ್ಲ: ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಎನ್‍. ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಶವಂತ ಎನ್. ಅವರು ವಿಟ್ಲ ಘಟಕದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಯುವವಾಹಿನಿ ವಿಟ್ಲ ಘಟಕ ಅವರನ್ನು ಅಭಿನಂದಿಸಿದೆ.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಎನ್. ಆಯ್ಕೆ Read More »

ಸ್ಕೂಟರ್ ಮೇಲೆ ಜಿಗಿದ ಕಡವೆ | ಇಬ್ಬರಿಗೆ ಗಾಯ

ಪುತ್ತೂರು: ಕಡವೆ ಜಿಗಿದ ಪರಿಣಾಮ ಚಲಿಸುತ್ತಿದ್ದ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಪಂಜ ಸಮೀಪ ನಡೆದಿದೆ. ಐವತ್ತೊಕ್ಲು ಗ್ರಾಮದ ನೇರಳ ಸುದರ್ಶನ ಹಾಗೂ ಪತ್ನಿ ಅಕ್ಷತಾ ಗಾಯಗೊಂಡವರು. ಸುಬ್ರಹ್ಮಣ್ಯದಿಂದ ತನ್ನ ಸ್ಕೂಟರ್‍ನಲ್ಲಿ ಪಂಜ ಕಡೆಗೆ ಬರುತ್ತಿದ್ದಾಗ ಎಡೋಣಿ ಎಂಬಲ್ಲಿ ಸ್ಕೂಟರ್ ಮೇಲೆ ಕಡವೆ ಜಿಗಿಯಿತು. ಪರಿಣಾಮ ಬಿದ್ದು ಸವಾರರಿಬ್ಬರು ಗಾಯಗೊಂಡರು ಎನ್ನಲಾಗಿದೆ. ಅಕ್ಷತಾ ಅವರ ತಲೆಗೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಸುದರ್ಶನ್‍ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಪಂಜ ಅರಣ್ಯ

ಸ್ಕೂಟರ್ ಮೇಲೆ ಜಿಗಿದ ಕಡವೆ | ಇಬ್ಬರಿಗೆ ಗಾಯ Read More »

ಸವಣೂರು ಯುವಕ ಮಂಡಲದ ಜಿತಾಕ್ಷ ಜಿ. ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ

ಸವಣೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಕೊಡಮಾಡುವ 2023-24ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ.ಜಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.30ರಂದು ಚಿಕ್ಕಮಗಳೂರಿನ ತರಿಕೆರೆಯಲ್ಲಿ ನಡೆಯಲಿದೆ. ಅವರನ್ನು ಯುವಕ ಮಂಡಲದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ

ಸವಣೂರು ಯುವಕ ಮಂಡಲದ ಜಿತಾಕ್ಷ ಜಿ. ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ Read More »

ಶ್ರೀನಿವಾಸ ಕಲ್ಯಾಣೋತ್ಸವ : ಮಧ್ಯಾಹ್ನ ಹದಿನೈದು ಸಾವಿರ ಭಕ್ತರಿಗೆ ಅನ್ನದಾನ | ರಾತ್ರಿ ಐವತ್ತು ಸಾವಿರ ಭಕ್ತಾದಿಗಳಿಗೆ ಅಡುಗೆ ತಯಾರಿ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವ ಭಾನುವಾರದಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಜರಗುತ್ತಿದ್ದು, ಮಧ್ಯಾಹ್ನ ಬರೋಬ್ಬರಿ 15 ಸಾವಿರ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ ಡಿ.25 ರ ಕಾರ್ಯಕ್ರಮ ಪ್ರಾರಂಭವಾಯಿತು. ಮಂಗಳೂರಿನ ರಾಗ ಲಾಸ್ಯ ತಂಡದಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು.

ಶ್ರೀನಿವಾಸ ಕಲ್ಯಾಣೋತ್ಸವ : ಮಧ್ಯಾಹ್ನ ಹದಿನೈದು ಸಾವಿರ ಭಕ್ತರಿಗೆ ಅನ್ನದಾನ | ರಾತ್ರಿ ಐವತ್ತು ಸಾವಿರ ಭಕ್ತಾದಿಗಳಿಗೆ ಅಡುಗೆ ತಯಾರಿ Read More »

ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಆಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆಗೆ ಆಮಂತ್ರಣ

ಧರ್ಮಸ್ಥಳ: ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನೀಡಲಾಯಿತು. ಡಾ.ಹೆಗ್ಗಡೆಯವರನ್ನು ಸೋಮವಾರ ಶ್ರೀ ಕ್ಷೇತ್ರದಲ್ಲಿ ಭೇಟಿ ಮಾಡಿ ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ  ಪ್ರೋ. ಎಂ. ಬಿ. ಪುರಾಣಿಕ್, ಪ್ರಾಂತ ಉಪಾಧ್ಯಕ್ಷ  ಯ. ಪೂವಪ್ಪ , ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ , ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ಜಿಲ್ಲಾಧ್ಯಕ್ಷ  ಡಾ.ಕೃಷ್ಣ ಪ್ರಸನ್ನ  ಮತ್ತಿತರರು ಉಪಸ್ಥಿತರಿದ್ದರು.

ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಆಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆಗೆ ಆಮಂತ್ರಣ Read More »

ನಾಳೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ

ಕಡಬ: ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗ ಗೌಡ ಸಮುದಾಯ ಭವದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆಗೆ ಸೋಮವಾರ ಕಡಬ ಶ್ರೀ ಗಣಪತಿ ದೇವಸ್ಥಾನ ವಠಾರದಲ್ಲಿ ಚಾಲನೆ ನೀಡಲಾಯಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ತೆಂಗಿನಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಸಹಿತ ಪದಾಧಿಕಾರಿಗಳು, ವಿವಿಧ ಸಮಿತಿ

ನಾಳೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ Read More »

ಕಡಬ ತಾಲೂಕು ಒಕ್ಕಲಿಗರ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ ಸಮುದಾಯ ಭವನ | ಒಕ್ಕಲಿಗ ಗೌಡ ಸಮುದಾಯದಿಂದ ಮೆಚ್ಚುಗೆ

ಕಡಬ: ಅತೀ ಹೆಚ್ಚು ಒಕ್ಕಲಿಗ ಗೌಡರ ಜನಸಂಖ್ಯೆ ಇರುವ ಕಡಬ ತಾಲೂಕಿನ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣದ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಅದಕ್ಕೆ ಕಾರಣ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಅವರು. ಬಿಳಿನೆಲೆಯ ಬೈಲು ಶಿವರಾಮ ಗೌಡರ ಮಗನಾದ ಸುರೇಶ್‌ ಗೌಡರ ಚತುರತೆಗೆ ಇದೀಗ ಒಕ್ಕಲಿಗ ಗೌಡ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ. ಬಡತನದಲ್ಲಿ ಹುಟ್ಟಿ ಬೆಳೆದ ಸುರೇಶ್ ಗೌಡರು ಮಂಗಳೂರಿನಲ್ಲಿ ನೆಲೆಸಿ 30 ವರ್ಷ ಸಂದಿದೆ. ಕ್ಲಾಸ್ 1 ವಿದ್ಯುತ್‌ ಗುತ್ತಿಗೆದಾರರಾದ ಸುರೇಶ್ ಗೌಡರ ಸಂಘಟನಾ

ಕಡಬ ತಾಲೂಕು ಒಕ್ಕಲಿಗರ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ ಸಮುದಾಯ ಭವನ | ಒಕ್ಕಲಿಗ ಗೌಡ ಸಮುದಾಯದಿಂದ ಮೆಚ್ಚುಗೆ Read More »

ಅಯೋಧ್ಯೆಗೆ ಬರಿಗಾಲಲ್ಲಿ ಹೊರಟ ಮುಸ್ಲಿಂ ಯುವತಿ | ಬಾಲ್ಯದಲ್ಲಿಯ ರಾಮಾಯಣದ ಕುರಿತ ಅಭಿರುಚಿ ಯಾತ್ರೆಗೆ ಕಾರಣವಂತೆ !

ನವದೆಹಲಿ: ಎಲ್ಲರ ಚಿತ್ತ ಅಯೋಧ್ಯೆ ರಾಮ ಮಂದಿರದ ಮೇಲಿದೆ. ಜ..22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ಈಗಾಗಲೇ ಸಜ್ಜಾಗುತ್ತಿದೆ. ಇತ್ತ ರಾಮನ ಭಕ್ತಿಯಲ್ಲಿ ಮುಳುಗಿದ ಯುವತಿಯೊಬ್ಬಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ರಾಮನ ಭಕ್ತಿಯಲ್ಲಿ ಮುಳುಗಿರುವ ಶಬ್ನಂ ಭುಜದ ಮೇಲೆ ಕೇಸರಿ ಧ್ವಜ, ಬೆನ್ನಿನಲ್ಲಿ ರಾಮ ಮಂದಿರದ ಫೋಟೋ ಮತ್ತು ತಲೆ ಮೇಲೆ ಹಿಜಾಬ್ ಧರಿಸಿರುವ ಯುವತಿ. ಮುಂಬೈನಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸುಮಾರು 1,500

ಅಯೋಧ್ಯೆಗೆ ಬರಿಗಾಲಲ್ಲಿ ಹೊರಟ ಮುಸ್ಲಿಂ ಯುವತಿ | ಬಾಲ್ಯದಲ್ಲಿಯ ರಾಮಾಯಣದ ಕುರಿತ ಅಭಿರುಚಿ ಯಾತ್ರೆಗೆ ಕಾರಣವಂತೆ ! Read More »

ಉಪ್ಪಿನಂಗಡಿ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ !

ಪುತ್ತೂರು: ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಮೇಲೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಟ್ರಾಫಿಕ್ ದಟ್ಟಣಿ ಉಂಟಾದ ಘಟನೆ ಸೋಮವಾರ ನಡೆದಿದೆ. ಬೆಳ್ತಂಗಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ನಾಲ್ಕು ಕಾರುಗಳು ಉಪ್ಪಿನಂಗಡಿ ಸೇತುವೆಯ ಮೇಲೆ ಒಂದರ ಹಿಂದೆ ಒಂದರಂತೆ ಡಿಕ್ಕಿಯಾಗಿದೆ. ಅಪಘಾತದಿಂದ ಕಾರುಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ಈ ಘಟನೆ ನಡೆದ ಕಾರಣ ಎರಡು ದಿಕ್ಕುಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು ವಾಹನಗಳ ಸುಗಮ

ಉಪ್ಪಿನಂಗಡಿ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ ! Read More »

ಮೃತಪಟ್ಟ ಅಪರಿಚಿತ ವ್ಯಕ್ತಿ | ಗುರುತು ಪತ್ತೆಗೆ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ

ಸುಬ್ರಹ್ಮಣ್ಯ: ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಾರಿಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಕಡಬ ಠಾಣೆ ಪ್ರಕಟಣೆ ನೀಡಿದೆ. ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಸೈಲ್ವೇ ಸ್ಟೇಷನ್‍ ಬಳಿ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಬಿದ್ದುಕೊಂಡಿದ್ದನ್ನು ಗಮನಿಸಿ 108 ಅಂಬುಲೆನ್ಸ್‍ ನಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು 30-35 ವರ್ಷ ಪ್ರಾಯದ 7 ಫೀಟ್ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ

ಮೃತಪಟ್ಟ ಅಪರಿಚಿತ ವ್ಯಕ್ತಿ | ಗುರುತು ಪತ್ತೆಗೆ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ Read More »

error: Content is protected !!
Scroll to Top