ಆಕರ್ಷಣ್ ಇಂಡಸ್ಟ್ರೀಸ್ ನಿಂದ 5 ತಾಲೂಕಿನ ಗ್ರಾಹಕರಿಗೆ ಭರ್ಜರಿ ಕೊಡುಗೆ | 5 ಚಿನ್ನ, 25 ಬೆಳ್ಳಿ ನಾಣ್ಯ ಗೆಲ್ಲುವ ಸುವರ್ಣಾವಕಾಶ

ಪುತ್ತೂರು: ವಿವಿಧ ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಕ್ಷೇತ್ರದಲ್ಲಿ, ವಿಶೇಷವಾಗಿ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನ್ನಗಳ ತಯಾರಿಕೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ, ತಂತ್ರಜ್ಞಾನ ಹಾಗೂ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಒತ್ತಿ ಯಶಸ್ಸಿನ ಹೆಜ್ಜೆಯನ್ನು ಇಡುತ್ತಿದೆ. ಕೃಷಿಕರ ಅನುಕೂಲಕ್ಕಾಗಿ ವಿವಿಧ ಕೃಷಿ ಉಪಯೋಗಿ ಉತ್ಪನ್ನಗಳಾದ ಡ್ರ್ಯಾಗನ್ ಫ್ರುಟ್ ಸ್ಟ್ಯಾಂಡ್, ಬೇಲಿ ಕಂಬ, ವಿಯೆಟ್ನಾಮ್ ಮಾಡೆಲ್ ಪೆಪ್ಪರ್ ಫಾರ್ಮ್ ಕಾಂಕ್ರೀಟ್ ಪೋಲ್ ಹಾಗೂ ವಯ್ ಪೋಲ್ ಗಳನ್ನು ಮಾರಾಟ ಮಾಡುತ್ತಿದೆ. ಇದೀಗ […]

ಆಕರ್ಷಣ್ ಇಂಡಸ್ಟ್ರೀಸ್ ನಿಂದ 5 ತಾಲೂಕಿನ ಗ್ರಾಹಕರಿಗೆ ಭರ್ಜರಿ ಕೊಡುಗೆ | 5 ಚಿನ್ನ, 25 ಬೆಳ್ಳಿ ನಾಣ್ಯ ಗೆಲ್ಲುವ ಸುವರ್ಣಾವಕಾಶ Read More »

ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಗಣೇಶ್ ಉದನಡ್ಕ ಆಯ್ಕೆ

ಕಾಣಿಯೂರು: ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಆಯ್ಕೆಯಾಗಿದ್ದಾರೆ. ಗಣೇಶ್ ಉದನಡ್ಕ ಪುತ್ತೂರು ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕರಾಗಿದ್ದಾರೆ. ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಕಾಣಿಯೂರು ಗ್ರಾಪಂ ಉಪಾಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಕಾಣಿಯೂರು ವರ್ತಕ ಸಂಘದ ಅಧ್ಯಕ್ಷರಾಗಿ, ಕಾಣಿಯೂರು ಕಣ್ವರ್ಪಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾಗಿ, ಪುಣ್ಚತ್ತಾರು ಶ್ರೀ ಹರಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ, ಹಲವಾರು

ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಗಣೇಶ್ ಉದನಡ್ಕ ಆಯ್ಕೆ Read More »

ಇಂದು ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

ಪುತ್ತೂರು: 5ನೇ ವರ್ಷದ ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾಟ ಇಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಪುತ್ತೂರು ನಗರ ಉಪವಿಭಾಗದ ಸಾರಥ್ಯದಲ್ಲಿ ಪುತ್ತೂರು, ಸುಳ್ಯ, ಕಡಬ, ನೆಲ್ಯಾಡಿ ಮತ್ತು ಸಬ್ರಮಣ್ಯ ಮೆಸ್ಕಾಂ ಉಪವಿಭಾಗಗಳಿಂದ ಸುಮಾರು 12 ತಂಡಗಳು ಆಡಲಿವೆ ಪ್ರತಿ  ದಿನ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಒಂದು ದಿನದ ಪಂದ್ಯಾಟವನ್ನು ಪ್ರತಿ ವರ್ಷ ಪುತ್ತೂರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ.  ಇವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ. ಮೆಸ್ಕಾಂ ನ

ಇಂದು ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ Read More »

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೆಕ್ಸ್ ಟೈಲ್ಸ್ ಸೆಂಟರ್ ಮಾಲಕ ಯಾಹೀಯಾ ಹಾಜಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಚಿಕ್ಕಪುತ್ತೂರು ನಿವಾಸಿಯಾಗಿರುವ ಅವರು ಕಂಬಳಬೆಟ್ಟು ದಿ.ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ Read More »

ರಾಮಾಯಣ, ಮಹಾಭಾರತ ಪರೀಕ್ಷೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಪುತ್ತೂರು : ಬೆಂಗಳೂರು ಭಾರತ ಸಂಸ್ಕೃತಿ ಪ್ರತಿಷ್ಠಾನದವರು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8 ವಿದ್ಯಾರ್ಥಿಗಳಿಗೆ ವಿಶಿಷ್ಠ ಶ್ರೇಣಿಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. 2023-24 ರಲ್ಲಿ ಸಂಘಟಿಸಲಾದ ಪರೀಕ್ಷೆಗಳಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 450 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಮಾಯಣ ವಿಭಾಗದಲ್ಲಿ ಎಂಟನೆಯ ತರಗತಿಯ ಅಪೇಕ್ಷಾ ಎನ್., ಸಾನ್ವಿ ಎಸ್. ಪ್ರಭು, ಅವನಿ ಘಾಟೆ, ಮತ್ತು ಸಾನ್ವಿಕಾ ಎಸ್. ಹಾಗೂ ಮಹಾಭಾರತ

ರಾಮಾಯಣ, ಮಹಾಭಾರತ ಪರೀಕ್ಷೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಚಿನ್ನದ ಪದಕ Read More »

ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಿದ 25ರ ಹರೆಯದ ಯುವಕ ಅನಿಲ್ ಜಾನ್ ಸಿಕ್ವೇರಾ | ಜಡ್ಜ್ ಹುದ್ದೆಗೇರಿದ ಅತೀ ಕಿರಿಯ ವ್ಯಕ್ತಿ

ಮಂಗಳೂರು: ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಿದ ಅತೀ ಕಿರಿಯ ವ್ಯಕ್ತಿ ಎಂಬುದಕ್ಕೆ ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ 25 ರ ಹರೆಯದ ಯುವಕ ಅನಿಲ್ ಜಾನ್ ಸಿಕ್ವೇರಾ ಪಾತ್ರರಾಗಿದ್ದಾರೆ. 2023 ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಹುದ್ದೆಗೇರಿದ್ದಾರೆ. ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್ ಎಲ್ ಬಿ. ಪೂರೈಸಿದ ಜಾನ್ ಸಿಕ್ವೇರಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ

ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಿದ 25ರ ಹರೆಯದ ಯುವಕ ಅನಿಲ್ ಜಾನ್ ಸಿಕ್ವೇರಾ | ಜಡ್ಜ್ ಹುದ್ದೆಗೇರಿದ ಅತೀ ಕಿರಿಯ ವ್ಯಕ್ತಿ Read More »

ಆರ್.ಡಿ.ಸಿ ಯಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ರಾಜ್ಯಮಟ್ಟದಲ್ಲಿ ಕಾಲೇಜಿನ ಹೆಸರನ್ನು ಗುರುತಿಸುವಂತೆ ಮಾಡಿದ ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಒಬ್ಬಳು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅದಕ್ಕೆ ನಮ್ಮ ಅಧ್ಯಾಪಕರು ಉತ್ತಮ ಸಹಕಾರ ನೀಡುತ್ತಾರೆ. ಜೊತೆಗೆ ಹೆತ್ತವರ ಸಹಕಾರವು ಇರುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇನ್ನೂ ಸಾಧನೆ ಮಾಡಬೇಕು. ಆ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಗಣಪತಿ ಭಟ್ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)

ಆರ್.ಡಿ.ಸಿ ಯಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ Read More »

ಕ್ರೀಡಾಕೂಟದಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ ಏಳಿಗೆಗೆ ಕೈಜೋಡಿಸಬೇಕು | ಮಂಗಳೂರು ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಒಕ್ಕಲಿಗರ ಪ್ರೀಮಿಯರ್ ಲೀಗ್-2024 ಕ್ರಿಕಟ್ ಪಂದ್ಯಾಟದಲ್ಲಿ ಅಕ್ಷಯ ಕುರುಂಜಿ

ಮಂಗಳೂರು: ಮಂಗಳೂರು ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಒಕ್ಕಲಿಗರ ಪ್ರೀಮಿಯಾರ್ ಲೀಗ್-2024 ಮಂಗಳೂರು (ವಿಪಿಎಲ್) ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಪ್ರಥಮ ಬಾರಿಗೆ ಅದ್ಧೂರಿಯಾಗಿ ನಡೆಯಿತು. ಸುಳ್ಯ ಅಕಾಡೆಮಿ ಆಫ್‍ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕುರುಂಜಿ ಉದ್ಘಾಟನಾ ಸಮಾರಂಭಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಯುವ ಸಮುದಾಯದ ಸಂಘಟನೆಗಾಗಿ ಹಮ್ಮಿಕೊಂಡ ಇಂತಹ ಪಂದ್ಯಾಟಗಳಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ

ಕ್ರೀಡಾಕೂಟದಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ ಏಳಿಗೆಗೆ ಕೈಜೋಡಿಸಬೇಕು | ಮಂಗಳೂರು ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಒಕ್ಕಲಿಗರ ಪ್ರೀಮಿಯರ್ ಲೀಗ್-2024 ಕ್ರಿಕಟ್ ಪಂದ್ಯಾಟದಲ್ಲಿ ಅಕ್ಷಯ ಕುರುಂಜಿ Read More »

ಶಿವಸೇನೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಮಹಾರಾಷ್ಟ್ರ: ಶಿವಸೇನೆಯ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಇಂದು ವಿಧಿವಶರಾಗಿದ್ದಾರೆ. ಮನೋಹರ್ ಜೋಶಿ ಅವರು ಹೃದಯಾಘಾತದಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ನಸುಕಿನ ಜಾವ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಶಿವಸೇನೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ Read More »

ಮುರದಲ್ಲಿ ಟಿಪ್ಪರ್-ದ್ವಿಚಕ್ರ ವಾಹನ ಡಿಕ್ಕಿ | ಟಿಪ್ಪರ್ ಚಾಲಕ ಬಿ. ಕೆ. ಮಹಮ್ಮದ್ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಮುರದಲ್ಲಿ ಸಂಭವಿಸಿದ ಟಿಪ್ಪ‌ರ್ ಹಾಗೂ ಸ್ಕೂಟ‌ರ್ ನಡುವಿನ ಅಪಘಾತದಲ್ಲಿ, ದ್ವಿಚಕ್ರ ವಾಹನ ಸವಾರ ತೇಜಸ್ ಸಾವನ್ನಪ್ಪಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಎಂಬವರು ನೀಡಿದ ದೂರಿನ ಮೇರೆಗೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಫೆ.22 ರಂದು ಸಂಜೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರು ಟಿಪ್ಪ‌ರ್ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಬಕ ಗ್ರಾಮದ ಮುರ ಎಂಬಲ್ಲಿ,

ಮುರದಲ್ಲಿ ಟಿಪ್ಪರ್-ದ್ವಿಚಕ್ರ ವಾಹನ ಡಿಕ್ಕಿ | ಟಿಪ್ಪರ್ ಚಾಲಕ ಬಿ. ಕೆ. ಮಹಮ್ಮದ್ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು Read More »

error: Content is protected !!
Scroll to Top