ಮನೆಯ ಕೆರೆಗೆ ಬಿದ್ದು ಯುವಕ ಮೃತ್ಯು

ಬೆಳ್ತಂಗಡಿ: ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಮನೆಯ ಕೆರೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ಶನಿವಾರ ರಾತ್ರಿ ಬೆಳ್ತಂಗಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊತ್ತು ನಿವಾಸಿ ಸದಾಶಿವ ಶೆಟ್ಟಿಯ ಎಂಬವರ ಪುತ್ರ ಶೈಲೇಶ್ ಶೆಟ್ಟಿ(38) ಮೃತಪಟ್ಟವರು. ಒಬ್ಬನೇ ಮಗನಾಗಿರುವ ಶೈಲೇಶ್ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿರುವಾಗ ಮನೆಯ ಕೆರೆಗೆ ರಾತ್ರಿ ಬಿದ್ದು ಕೆಸರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ […]

ಮನೆಯ ಕೆರೆಗೆ ಬಿದ್ದು ಯುವಕ ಮೃತ್ಯು Read More »

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಾಡಿದ ಸಿಎಂ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ದೇವರ ಆಶೀರ್ವಾದ ಪಡೆದ ನಂತರ ಮಾತಾನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಒಳ್ಳೆಯ ಮಳೆಯಾಗಲಿ ರಾಜ್ಯ ಶಾಂತಿ ನೆಮ್ಮದಿಯಿಂದಿರಲಿ ಎಂದು ದೇವರಲ್ಲಿ ರಾಜ್ಯದ ಜನತೆ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯರು ಆಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಾಡಿದ ಸಿಎಂ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ Read More »

ನಾಳೆ (ಮೇ26) : ಪುತ್ತಿಲ ಪರಿವಾರ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯಿತಿ ಸಹಕಾರದೊಂದಿಗೆ ಸುಳ್ಯ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ಸೇವಾಶ್ರಯದ ಹಸ್ತಾಂತರ ಕಾರ್ಯಕ್ರಮ ಮೇ.26ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಹಲವು ವರ್ಷಗಳಿಂದ ವಾಸಯೋಗ್ಯವಾದ ಮನೆಯಿರದೆ ಪ್ಲಾಸ್ಟಿಕ್ ಜೋಪಡಿಯಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿಕೊಂಡುವಂತೆ ಮಹಿಳೆಯೋರ್ವರು ಫೋನ್ ಮಾಡಿ ಅರುಣ್ ಕುಮಾರ್ ಪುತ್ತಿಲರಿಗೆ 2023ರಲ್ಲಿ ತಿಳಿಸಿದರು. ಆ ಕುಟುಂಬಕ್ಕೆ ಸರಕಾರದ ಯಾವೂದೇ ಸೌಲಭ್ಯ ಪಡೆಯಲು ಕೆಲವೊಂದು ತೊಡಕುಗಳಿದ್ದವು. ನಗರ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತಿಲ

ನಾಳೆ (ಮೇ26) : ಪುತ್ತಿಲ ಪರಿವಾರ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ Read More »

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024

ಪುತ್ತೂರು: ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆಗ ಅವುಗಳಿಗೆಲ್ಲ ಯೋಚಿಸಿ ಪರಿಹಾರವನ್ನು ಕಂಡುಕೊಂಡು ಮುಂದುವರೆಯುವ ಶಕ್ತಿ ನಮ್ಮಲ್ಲಿರಬೇಕು. ಉದ್ಯಮ ಕ್ಷೇತ್ರಕ್ಕೆ ಕೌಶಲ್ಯವೆನ್ನುವುದು ಅತ್ಯಗತ್ಯ. ಬದಲಾವಣೆಗೆ ನಾವು ಹೊಂದಿಕೊಂಡು ನಮ್ಮ ಕೆಲಸದಲ್ಲಿ ಹೊಸತನವನ್ನು ಕಂಡು ಯಶಸ್ವಿಗೊಳ್ಳಬೇಕು ಅದಕ್ಕಾಗಿ ನಿರಂತರವಾದ ಕಲಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದು ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್. ಕೆ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದ  ವಾಣಿಜ್ಯ ವಿಭಾಗ, ಕಾಮರ್ಸ್ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024 Read More »

ಎಸ್‍ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದಲ್ಲಿ ಮೇಳೈಸುತ್ತಿರುವ ಕುಣಿತ ಭಜನೆ | ಮಾಲಕರ ತಾಯಿ ರಾಮಕ್ಕ ಅವರಿಂದ ದೀಪ ಬೆಳಗಿಸಿ ಚಾಲನೆ

ಕಡಬ: ಎಸ್‍.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ನಡೆಯುವ ಕುಣಿತ ಭಜಣೆ ಕಾರ್ಯಕ್ರಮದಲ್ಲಿ ಎಸ್‍ ಆರ್ ಕೆ ಲ್ಯಾಡರ್ಸ್ ಮಾಲಕರಾದ ಕೇಶವ ಅಮೈ ಅವರ ತಾಯಿ ರಾಮಕ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ರಜತ ಸಂಭ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇಶವ ಅಮೈ ಅವರ ಕುಟಂಬಸ್ಥರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಎಸ್‍ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದಲ್ಲಿ ಮೇಳೈಸುತ್ತಿರುವ ಕುಣಿತ ಭಜನೆ | ಮಾಲಕರ ತಾಯಿ ರಾಮಕ್ಕ ಅವರಿಂದ ದೀಪ ಬೆಳಗಿಸಿ ಚಾಲನೆ Read More »

ಕಾವು ಪಂಚವಟಿ ನಗರದಲ್ಲಿ ಅಪಾಯಕಾರಿ ಮರ | ತುರ್ತು ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ

ಪುತ್ತೂರು: ಕಾವು ಮೇಲಿನಪೇಟೆಯ ಮಧ್ಯಭಾಗದಲ್ಲಿ ದೇವದಾರು ಜಾತಿಯ ಎರಡು ಮರಗಳಿದ್ದು ಬುಡಸಮೇತ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನದಂತಿದೆ. ಮರದ ಕೆಳಗೆ ಹಲವು ಅಂಗಡಿಗಳಿದ್ದು,ರಿಕ್ಷಾ ನಿಲ್ದಾಣವೂ ಇದೆ. ಮೆಸ್ಕಾಂ ಟಿ.ಸಿ.,ತಂತಿಗಳು, ಪಂಚಾಯಿತಿ ಕಟ್ಟಡಗಳೂ ಇದ್ದು, ನೂರಾರು ಸಾರ್ವಜನಿಕರು ಓಡಾಡುತ್ತಿರುವುದರಿಂದ ಅಪಾಯ ಕಟ್ಟಿಟ್ಟಬುತ್ತಿ. ಅನಾಹುತಗಳಾಗುವ ಮೊದಲೇ ಸಂಬಂಧಪಟ್ಟ ಇಲಾಖೆಗಳು ತುರ್ತುಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.

ಕಾವು ಪಂಚವಟಿ ನಗರದಲ್ಲಿ ಅಪಾಯಕಾರಿ ಮರ | ತುರ್ತು ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ Read More »

ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಅವರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಬೆಳ್ಳಿಯ ಏಣಿ ಅರ್ಪಿಸಿ ಗೌರವ ವಂದನೆ

ಕಡಬ: ಎಸ್‍.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಸಿಬ್ಬಂದಿಗಳಿಂದ ಸಂಸ್ಥೆಯ ಮಾಲಕರಾದ ಕೇಶವ ಅಮೈ ಅವರನ್ನು ಸನ್ಮಾನಿಸಿ, ಗೌರವ ವಂದನೆ ಸಲ್ಲಿಸಿದರು. ಸಿಬ್ಬಂದಿಗಳು ಬೆಳ್ಳಿಯ ಏಣಿ ನೀಡಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಅವರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಬೆಳ್ಳಿಯ ಏಣಿ ಅರ್ಪಿಸಿ ಗೌರವ ವಂದನೆ Read More »

ಪುತ್ತೂರು ತಾಲೂಕಿನ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳ ಶಿಕ್ಷಕ- ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರ

ಪುತ್ತೂರು:  ತಾಲೂಕಿನಲ್ಲಿ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳಾದ ಬೆಥನಿ ಪ್ರೌಢಶಾಲೆ, ಪಾಂಗ್ಲಾಯ್ ಬೆಥನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಾಗಾರ ಶುಕ್ರವಾರ ಬೆಥನಿ ಶಾಲೆಯ ಸಭಾಂಗಣದಲ್ಲಿ, ನಡೆಯಿತು. ಬೆಥನಿ ಶಾಲಾ ಸಂಚಾಲಕಿ ವಂ. ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಕುಲಶೇಖರ ಜೀವಂಧಾರ ಸಮಾಜ ಸೇವಾ ಸಂಘದ ಕಾರ್ಯದರ್ಶಿ ವಂ. ಭಗಿನಿ ಅನ್ನಾ ಮರಿಯ, ಕುಲಶೇಖರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಲಿಟ್ಲ್ ಫ್ಲವರ್

ಪುತ್ತೂರು ತಾಲೂಕಿನ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳ ಶಿಕ್ಷಕ- ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರ Read More »

ಮೇ 27 : ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ

ಪುತ್ತೂರು: ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಮೇ 27 ಸೋಮವಾರ ಮಧ್ಯಾಹ್ನ 2.30 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ನಡೆಯಲಿದೆ. ವಿಶ್ರಾಂತ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿ’ಸೋಜ ದೀಪ ಪ್ರಜ್ವಲನೆ ಮಾಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‍.ಆರ್‍. ಕೃತಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಡಾ.ವರದರಾಜ ಚಂದ್ರಗಿರಿ ಕೃತಿ ಪರಿಚಯ ಮಾಡಲಿದ್ದು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಮ ಕೆ. ಕೃತಿಕಾರರ ಪರಿಚಯ ಮಾಡುವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

ಮೇ 27 : ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ, ಕವಿಗೋಷ್ಠಿ Read More »

ಎಸ್‍.ಆರ್.ಕೆ.ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ | ಸ್ವಯಂ ಸೇವಕರಿಗೆ ಟಿ ಶರ್ಟ್ ವಿತರಣೆ

ಕಡಬ: ಕೊಯಿಲ ಗ್ರಾಮದ ಕಲಾಯಿಗುತ್ತಿನಲ್ಲಿ ನಡೆಯಲಿರುವ ಖ್ಯಾತ ಕೃಷಿ ಯಂತ್ರೋಪಕರಣಗಳ ಸಂಸ್ಥೆ ಎಸ್‍ ಆರ್ ಕೆ ಲ್ಯಾಡರ್ಸ್ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮದಲ್ಲಿ ಎಲ್ಲಾ ಸ್ವಯಂ ಸೇವಕರಿಗೆ ಟಿ ಶರ್ಟ್ ವಿತರಿಸಲಾಯಿತು. ಸಂಸ್ಥೆಯ ಮಾಲಕರಾದ ಕೇಶವ ಅಮೈ ಅವರು ಸ್ವಯಂ ಸೇವಕರಿಗೆ ಟಿ ಶರ್ಟ್ ವಿತರಿಸಿದರು. ಕಾರ್ಯಕ್ರಮಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗುತ್ತಿದ್ದು. ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಎಸ್‍.ಆರ್.ಕೆ.ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ | ಸ್ವಯಂ ಸೇವಕರಿಗೆ ಟಿ ಶರ್ಟ್ ವಿತರಣೆ Read More »

error: Content is protected !!
Scroll to Top