ಡೆಂಗ್ಯೂಗೆ  ಬಾಲಕಿ ಮೃತ್ಯು

ಹಾಸನ : ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಬಾಲಕಿ ಮೃತಪಟ್ಟಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂವಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮೃತ ಬಾಲಕಿಯನ್ನು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಎಂದು ಗುರುತಿಸಲಾಗಿದೆ. ಬಾಲಕಿ ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿಯಾಗಿದ್ದು, ಕಳೆದ 4 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಮೂರು ದಿನದ ಹಿಂದೆ ಬಾಲಕಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ […]

ಡೆಂಗ್ಯೂಗೆ  ಬಾಲಕಿ ಮೃತ್ಯು Read More »

ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂಭ್ರಮ |ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಅಂತರ್ ಜಿಲ್ಲಾ ಭಾಷಣ, ದೇಶಭಕ್ತಿಗೀತೆ ಸ್ಪರ್ಧೆ

ಪುತ್ತೂರು: ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಐದು ಸಾವಿರ ರೂ. ಹಾಗೂ ದ್ವಿತೀಯ ಬಹುಮಾನ ಮೂರು ಸಾವಿರ ರೂ. ನೀಡಲಾಗುತ್ತದೆ. ಭಾಷಣ ಸ್ಪರ್ಧೆಗೆ ಭಾರತೀಯ ಸೈನ್ಯ – ಸಾಧನೆ

ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂಭ್ರಮ |ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಅಂತರ್ ಜಿಲ್ಲಾ ಭಾಷಣ, ದೇಶಭಕ್ತಿಗೀತೆ ಸ್ಪರ್ಧೆ Read More »

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋದ ಘಟನೆ ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ನಡೆದಿದೆ. ಮಣಿನಾಲ್ಕೂರು ಗ್ರಾಮದ ಕುಟೇಲು ಎಂಬಲ್ಲಿಗೆ ಸುರತ್ಕಲ್ ನ ಕಾನ ನಿವಾಸಿ ಮೈಕಲ್ (53) ನೀರು ಪಾಲಾದವರು. ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು Read More »

ಫೈನಾನ್ಸ್ ಗೆ ನುಗ್ಗಿ ದರೋಡೆಗೆ ಯತ್ನ | ಪ್ರಕರಣ ದಾಖಲು

ಮಂಗಳೂರು: ಖಾಸಗಿ ಫೈನಾನ್ಸ್ ಒಂದಕ್ಕೆ ದರೋಡೆಕೋರರು ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಬಜಪೆಯಲ್ಲಿ ನಡೆದಿದೆ. ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸೊಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಸಂಜೆ ಸುಮಾರು 4:30ರ ವೇಳೆಗೆ ಆಕ್ಟೀವದಲ್ಲಿ ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ನ ಒಳಗೆ ಏಕಾಏಕಿ ನುಗ್ಗಿ ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ

ಫೈನಾನ್ಸ್ ಗೆ ನುಗ್ಗಿ ದರೋಡೆಗೆ ಯತ್ನ | ಪ್ರಕರಣ ದಾಖಲು Read More »

ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜು.18 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದ್ದು, ಜು.18 ರ ವರೆಗೆ ಅವಧಿ ವಿಸ್ತರಿಸಿ ಕೋರ್ಟ್‍ ಆದೇಶ ನೀಡಿದೆ. ಈ ಮೂಲಕ ಆರೋಪಿಗಳಾಗಿ ಪೊಲೀಸರ ಬಲೆಗೆ ಬಿದ್ದಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸಹಿತ ಉಳಿದ ಆರೋಪಿಗಳಿಗೆ ಜು.4 ರ ತನಕ ಇದ್ದ ನ್ಯಾಯಾಂಗ ಬಂಧನ ವಿಸ್ತರಣೆಯಿಂದ ಸಂಕಷ್ಟ ಎದುರಾಗಿದೆ. ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಡ್ಜ್ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಎಲ್ಲ ಆರೋಪಿಗಳ

ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜು.18 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ Read More »

ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಶಿರ್ವ : ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಪಳ್ಳಿ ದಾದಬೆಟ್ಟು ನಿವಾಸಿ ಜಯರಾಮ ಆಚಾರ್ಯ- ಚಂದ್ರಿಕಾ ದಂಪತಿ ಪುತ್ರಿ ಭಾಗ್ಯಶ್ರೀ (16) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದ ಅವರು ಮಂಗಳವಾರ ಶಾಲೆಗೆ ಬಂದಿದ್ದರು. ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೆತ್ತವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ. ಮೃತರು ತಂದೆ

ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು Read More »

ಜು.06: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ 2 ನೇ ವರ್ಷಕ್ಕೆ ಪಾದಾರ್ಪಣೆ

ಬೆಳ್ಳಾರೆ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂ‍ಘದ ಬೆಳ್ಳಾರೆ ಶಾಖೆ ಒಂದು ವರ್ಷ ಪೂರೈಸಿ 2 ನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಲಿದೆ. ಪಾದಾರ್ಪಣೆ ಅಂಗವಾಗಿ ಜು.06 ಶುಕ್ರವಾರ ಬೆಳಿಗ್ಗೆ ಗಣಹೋಮ ಮತ್ತು ಲಕ್ಷ್ಮೀಪೂಜೆ ನಡೆಯಲಿದೆ. ಈ ಕುರಿತು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಜು.06: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ 2 ನೇ ವರ್ಷಕ್ಕೆ ಪಾದಾರ್ಪಣೆ Read More »

ಸುಳ್ಯ ಕೃಷಿಕ ಸೀತಾರಾಮ ಗೌಡ ಆತ್ಮಹತ್ಯೆ

ಸುಳ್ಯ: ಸುಳ್ಯದ ಮಡಪ್ಪಾಡಿ ಕೃಷಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಳ್ಯ ತಾಲೂಕು ಮಡಪ್ಪಾಡಿ ಬಲ್ಕಜೆ ಸೀತಾರಾಮ ಗೌಡ (55) ಆತ್ಮಹತ್ಯೆ ಮಾಡಿಕೊಂಡವರು. ಅಡಿಕೆ ತೋಟಕ್ಕೆ ಹಳದಿ ಎಲೆ ರೋಗ ಬಾಧೆಯಿಂದ ಅಡಿಕೆ ಕೃಷಿ ಇಲ್ಲದಂತಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಬುಧವಾರ ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿದ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಫಲಕಾರಿಯಾಗದೇ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

ಸುಳ್ಯ ಕೃಷಿಕ ಸೀತಾರಾಮ ಗೌಡ ಆತ್ಮಹತ್ಯೆ Read More »

ಮಂಗಳೂರು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ .ಎನ್  IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ .ಎನ್  IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು. 2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ .ಎನ್  IPS ಅಧಿಕಾರ ಸ್ವೀಕಾರ Read More »

ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವ ಕೈಗೊಳ್ಳದ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆ | ನಗರಸಭಾ ಬಿಜೆಪಿ ಸದಸ್ಯರಿಂದ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ | 7 ದಿನದೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಧರಣಿ ಎಚ್ಚರಿಕೆ : ನಿಕಟಪೂರ್ವ ಅಧ್ಯಕ್ಷ ಜೀವಂಧ‌ರ್ ಜೈನ್.

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆ, ಅಪಾಯಕಾರಿ ಮರದ ಗೆಲ್ಲುಗಳ ತೆರವು,ರಸ್ತೆ ಬದಿ ಗಿಡಗಂಟಿಗಳ ತೆರವು, ಮುಂತಾದ ಮಳೆಗಾಲದ ಮುಂಚಿತವಾಗಿಯೇ ಮಾಡಬೇಕಾದ ಕಾಮಗಾರಿಗಳನ್ನು ನಿರ್ವಹಿಸದೇ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಮತ್ತು ವಿವಿಧ ಅನುದಾನ ಕಾಮಗಾರಿಗಳ ಕುರಿತು ಬೇಡಿಕೆ ಮುಂದಿಟ್ಟು ಪುತ್ತೂರು ನಗರಸಭೆ ಬಿಜೆಪಿ ಸದಸ್ಯರ ವತಿಯಿಂದ ಇಂದು ನಗರಸಭೆ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ಭಾರಿ ಮಳೆಗಾಲದ ಪೂರ್ವಭಾವಿಯಾಗಿ ನಗರಸಭೆಯಿಂದ ನಡೆಯುವ ಮುನ್ನೆಚ್ಚರಿಕೆ ಕ್ರಮ, ಗ್ರಾಸ್ ಕಟ್ಟಿಂಗ್ ಕೂಡಾ ಮಾಡಿಲ್ಲ. ಅದೇ ರೀತಿ 15

ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವ ಕೈಗೊಳ್ಳದ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆ | ನಗರಸಭಾ ಬಿಜೆಪಿ ಸದಸ್ಯರಿಂದ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ | 7 ದಿನದೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಧರಣಿ ಎಚ್ಚರಿಕೆ : ನಿಕಟಪೂರ್ವ ಅಧ್ಯಕ್ಷ ಜೀವಂಧ‌ರ್ ಜೈನ್. Read More »

error: Content is protected !!
Scroll to Top