ಶೈಕ್ಷಣಿಕ

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ: ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ

ಸುಳ್ಯ: ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಆನ್ ಲೈನ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿವಿಧ ಶಾಲೆಗಳ ಹಾಗೂ ಸಾರ್ವಜನಿಕವಾಗಿ ಪಿಯುಸಿವರೆಗಿನ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು, ಸ್ಪರ್ಧಿಗಳ ಹಾಡಿನ ಪ್ರಸ್ತುತಿ, ಸ್ವರ-ತಾಳ, ಲಯ, ಹೊಂದಾಣಿಕೆಯನ್ನು ಆಧಾರವಾಗಿಟ್ಟುಕೊಂಡು ತೀರ್ಪುಗಾರರ ಮೌಲ್ಯಮಾಪನದ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಧಾನಕರ ಬಹುಮಾನದೊಂದಿಗೆ ವಿಜೇತ ತಂಡಗಳನ್ನು ಆಯ್ಕೆಮಾಡಲಾಯಿತು. […]

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ: ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ Read More »

ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಕಡಬ: ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿನ ವಾರ್ಷಿಕೋತ್ಸವ ಡಿ. 13 ರಂದು ನಡೆಯಲಿದ್ದು, ಆ ಹಿನ್ನೆಲೆ ಇಂದು ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಮುಖ್ಯ ಗುರು ಮಿನಿ ವರ್ಗೀಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವರಾಜ್ ನೂಜಿ, ಕೋಶಾಧಿಕಾರಿ ಯಶೋದರ ಕೆಡೆಂಜಿಕಟ್ಟ , ಯೋಗೀಶ್ ಬರೆಪ್ಪಾಡಿ ,ಉಮೇಶ್ ಕೆರೆನಾರು,ಚಿದಾನಂದ ಕೆರೆನಾರು,ನಿವೃತ್ತ ಮುಖ್ಯ ಗುರುಗಳಾದ ಕುಶಾಲಪ್ಪ ಗೌಡ ಬರಮೇಲು ಸೇರಿದಂತೆ

ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ಕರ್ನಾಟಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಿಂಚಿದ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನ

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರಪರಿನಿರ್ವಾಣ ದಿನಾಚರಣೆಯ ಉದ್ಘಾಟನ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನದ ಮೂಲಕ ಅಪಾರ ಮೆಚ್ಚುಗೆ ಗಳಿಸಿದರು. ಮೈಸೂರಿನ ದಸರಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಅವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ

ಕರ್ನಾಟಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಿಂಚಿದ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆ ಗಾಯನ Read More »

ಎವಿಜಿ ಶಾಲೆಯಲ್ಲಿ ಸ್ಕೌಟ್- ಗೈಡ್ ,ಕಬ್ – ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನೆ

ಪುತ್ತೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಸ್ಕೌಟ್- ಗೈಡ್, ಕಬ್ -ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನಾ ಸಮಾರಂಭವು ದಿನಾಂಕ 4.12.2025 ರಂದು ನಡೆಯಿತು.ಆರಂಭದಲ್ಲಿ ಸ್ಕೌಟ್ ಧ್ವಜವನ್ನು ಅರಳಿಸುವ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು. ಭಾರತ ಸ್ಕೌಟ್ ಗೈಡ್ ನ ಪುತ್ತೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ಫಾ. ವಿಜಯ ಹಾರ್ವಿನ್ ರವರು ದೀಪ ಬೆಳಗಿಸಿ , ಬ್ಯಾಜ್ ನೀಡಿ ,ಸ್ಕಾರ್ಫ್ ತೊಡಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎವಿಜಿ ಶಾಲೆಯಲ್ಲಿ ಸ್ಕೌಟ್- ಗೈಡ್ ,ಕಬ್ – ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನೆ Read More »

ಪುತ್ತೂರಿನ ಮೆಡಿಕಲ್ ಕಾಲೇಜು ಕನಸಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಪುತ್ತೂರು: ತಾಲೂಕಿನ ಜನರಿಗೆ ಶುಭ ಸುದ್ದಿ ಎಂಬಂತೆ ಪುತ್ತೂರಿನ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಅಧಿಕೃತ ಮಾನ್ಯತೆ ದೊರಕಿದೆ. ಈ ಕಾರಣಕ್ಕೆ ಶಾಸಕ ಅಶೋಕ್ ರೈ ಅವರು ದೇವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ‌ಶಾಸಕರು, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಆದೇಶ ಸಿಕ್ಕಿದೆ. ಹಾಗೆಯೇ 300 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗೂ ಅನುಮೋದನೆ ದೊರೆತಿದೆ. ಸಿಎಂ ‌ಸಿದ್ದರಾಮಯ್ಯ ಅವರು ಶಿಲಾನ್ಯಾಸ, ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರ ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಅನುಮೋದನೆ ನೀಡಿದ

ಪುತ್ತೂರಿನ ಮೆಡಿಕಲ್ ಕಾಲೇಜು ಕನಸಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ Read More »

ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ದ. ಕ. ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಡಯಟ್ ಮಂಗಳೂರು ಮತ್ತು ಪುತ್ತೂರು ಕೊಂಬೆಟ್ಟಿನ ಸರಕಾರಿ ಪ್ರೌಢಶಾಲೆ ಆಶ್ರಯದಲ್ಲಿ ದ.ಕ. ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ಮಾದರಿ ಜರಗಿತು. ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ತಲಾ 14 ಮಾದರಿಗಳ ಮತ್ತು ಶಿಕ್ಷಕರ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಫಲಿತಾಂಶದ ವಿವರ: ವೈಯಕ್ತಿಕ ವಿಭಾಗದಲ್ಲಿ ಮಂಗಳೂರು ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ಸೋನಲ್ ಶನಾ ಅಂಚನ್ (ಪ್ರಥಮ), ಮೂಡಬಿದಿರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ

ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ದ. ಕ. ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ Read More »

ಕರಾಟೆ: ದೀಪ್ತ ಡಿ.ಕೆ. ಸುಳ್ಯದಲ್ಲಿ ಪ್ರಥಮ, ಮಂಗಳೂರಿನಲ್ಲಿ ದ್ವಿತೀಯ

ಪುತ್ತೂರು: ಸುಳ್ಯದಲ್ಲಿ ನಡೆದ ಇಂಪ್ಯಾಕ್ಟ್ ಆರ್ಟ್ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್ 2025ರ ಸ್ಪರ್ಧೆಯಲ್ಲಿ IKMA ಪುತ್ತೂರು ಸಂಸ್ಥೆಯ ವಿದ್ಯಾರ್ಥಿನಿ ಕು. ದೀಪ್ತ ಡಿ.ಕೆ. ಕಟಾ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಹಾಗೆಯೇ ಮಂಗಳೂರಿನ ಫಾ. ಮುಲ್ಲರ್ ಒಳಾಂಗಡ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತ ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್ 2025-26 ರಲ್ಲಿ ಪಾಯಿಂಟ್ ಫೈಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅವರು IKMA

ಕರಾಟೆ: ದೀಪ್ತ ಡಿ.ಕೆ. ಸುಳ್ಯದಲ್ಲಿ ಪ್ರಥಮ, ಮಂಗಳೂರಿನಲ್ಲಿ ದ್ವಿತೀಯ Read More »

ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು SDMC ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ವಹಿಸಿದ್ದರು. ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಅವರು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವ್ಯಕ್ತಿತ್ವ ವಿಕಸನ ಹಾಗೂ ಸ್ವಾಸ್ಥ್ಯ ಸಂಕಲ್ಪ ತರಬೇತುದಾರಾದ ಡಾ. ಅನುರಾಧಾ ಕುರುಂಜಿ (ಉಪನ್ಯಾಸಕರು) ಮಾತನಾಡಿ, ಯುವಜನತೆ ಮನಸ್ಸು ಮತ್ತು ಬುದ್ಧಿಯನ್ನು

ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ Read More »

ಕರಾಟೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ಸುಳ್ಯದಲ್ಲಿ ನಡೆದ ದ.ಕ. ಆಟ್೯ ಎಂಡ್ ಸ್ಪೋಟ್೯ ಎಸೋಸಿಯೇಷನ್ ನಡೆಸಿದ ನ್ಯಾಷನಲ್ ಲೆವೆಲ್ ಒಪನ್ ಕರಾಟೆ ಚಾಂಪಿಯನ್ 2025ರ ಸ್ಪರ್ಧೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ 3ನೇ ತರಗತಿಯ ತನಯ್ ಡಿ. ಕೆ. ದ್ವಿತೀಯ ಸ್ಥಾನ, 2ನೇ ತರಗತಿಯ ಅವಿ ಅಶ್ವಿನ್ ಶೆಟ್ಟಿ ತೃತೀಯ, ಪಡೆದಿದ್ದಾರೆ. ಇವರಿಗೆ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರ ವೃಂದ ಅಭಿನಂದನೆ ಸಲ್ಲಿಸಿದೆ.

ಕರಾಟೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ Read More »

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ:

ಪುತ್ತೂರು : ಅಕ್ಷಯ ಪದವಿ ಕಾಲೇಜಿನಲ್ಲಿ ದ.ಕ ಹಾಗೂ ಕೊಡಗು ಜಿಲ್ಲಾಮಟ್ಟದ ನಾಲ್ಕನೇ ವರ್ಷದಅಟರ್ನೆಸ್ 2K25 ಪಿಯು ಫೆಸ್ಟ್ ಅತ್ಯುತ್ತಮವಾಗಿ ಸಂಪನ್ನಗೊಂಡಿತು. 18 ಕಾಲೇಜುಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಬಡ್ಡಿ ತರಬೇತುದಾರ ಪ್ರಶಾಂತ್ ರೈ ಕೈಕಾರ (ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡ ಪುತ್ತೂರು) ಆಗಮಿಸಿದ್ದು, ಅವರನ್ನು ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ: Read More »

error: Content is protected !!
Scroll to Top