ಶೈಕ್ಷಣಿಕ

ಅಕ್ಷಯ ಕಾಲೇಜಿನಲ್ಲಿ  ಗ್ರಂಥ ಪಾಲಕರ  ದಿನಾಚರಣೆ

ಪುತ್ತೂರು:  ಅಕ್ಷಯ  ಸಮೂಹ ಶಿಕ್ಷಣ ಸಂಸ್ಥೆಗಳ  ಪದವಿ ಕಾಲೇಜಿನಲ್ಲಿ   ರಾಷ್ಟ್ರೀಯ  ಗ್ರಂಥಪಾಲಕರ  ದಿನಾಚರಣೆ ಯನ್ನು  ಕಾಲೇಜಿನ  ಗ್ರಂಥಾಲಯ ಮತ್ತು  ಮಾಹಿತಿ ವಿಜ್ಞಾನ ಕೇಂದ್ರ  ಹಾಗೂ ಆಂತರಿಕ  ಗುಣಮಟ್ಟದ ಭರವಸೆಯ ಕೋಶದ  ಸಹಭಾಗಿತ್ವದಲ್ಲಿ   ಆಚರಿಸಲಾಯಿತು.  ಕಾರ್ಯಕ್ರಮದ  ಅಧ್ಯಕ್ಷತೆ ಯನ್ನು  ಕಾಲೇಜಿನ  ಉಪ ಪ್ರಾಂಶುಪಾಲರಾದ    ರಕ್ಷಣ್  ಟಿ ಆರ್  ದೀಪ  ಬೆಳಗಿಸಿ  ಉದ್ಘಾಟಿಸಿದರು. ಭಾರತದ ರಾಷ್ಟ್ರೀಯ ಗ್ರಂಥಾಲಯ  ಪಿತಾಮಹ  ಎನ್ನಿಸಿಕೊಂಡ  ಡಾ  ಎಸ್ ಆರ್  ರಂಗನಾಥನ್ ಅವರ  ಜನ್ಮದಿನ ವನ್ನು  ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ  ಕಾರ್ಯಕ್ರಮದಲ್ಲಿ    ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ  […]

ಅಕ್ಷಯ ಕಾಲೇಜಿನಲ್ಲಿ  ಗ್ರಂಥ ಪಾಲಕರ  ದಿನಾಚರಣೆ Read More »

ಅಂಬಿಕಾದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಪುತ್ತೂರು: ಕಠಿಣ ಪರಿಶ್ರಮವಿಲ್ಲದೆ ಸಫಲತೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಸಮಯ ವ್ಯರ್ಥ ಮಾಡದೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ವಿದ್ಯಾರ್ಥಿಗಳ ಹೆತ್ತವರು ಮಕ್ಕಳನ್ನು ಗಮನಿಸುತ್ತಿರಬೇಕು. ಅಂಬಿಕಾ ವಿದ್ಯಾಲಯ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ನೈತಿಕ ತರಗತಿ, ಮಾರ್ಗದರ್ಶನ ತರಬೇತಿಗಳು ನಡೆಯುತ್ತ ಇವೆ. ದೇಶಭಕ್ತಿಯನ್ನು ಮೂಡಿಸುವ ಕಾರ್ಯಕ್ರಮಗಳು , ಇಂಡಸ್ಟ್ರಿಯಲ್ ವಿಸಿಟ್, ಸಿ ಎ ಕೋಚಿಂಗ್ ತರಗತಿಗಳು, ಮೆಂಟರಿಂಗ್ ಸಿಸ್ಟಮ್ ಮುಂತಾದವುಗಳಿಂದ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆ, ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ವ್ಯವಸ್ಥೆಗಳೆಲ್ಲವೂ ಇವೆ ಎಂದು

ಅಂಬಿಕಾದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ Read More »

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92%

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಜೂನ್-ಜುಲೈ 2025ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿ. ಫ್ಯಾಶನ್ ಡಿಸೈನ್ ವಿಭಾಗವು ಶೇ.100% ಫಲಿತಾಂಶ ದಾಖಲಾಗಿದೆ. 22 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 10 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಮಧುರ (92%) ಪ್ರಥಮ, ಭಾರ್ಗವಿ (91%) ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬಿ.ಎಸ್ಸಿ. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೂಡಾ ಶೇ.100 ಫಲಿತಾಂಶ ಗಳಿಸಿದ್ದು, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92% Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ

ಪುತ್ತೂರು: ತಿಥಿಗಳಿಗೆ ಅನುಸಾರವಾಗಿ ಹಬ್ಬಗಳನ್ನು ಆಚರಿಸುವುದು ನಮ್ಮ ದೇಶದ ಸಂಸ್ಕೃತಿ. ಶ್ರಾವಣ ಹುಣ್ಣಿಮೆಯ ಪುಣ್ಯ ದಿನದಂದು ನಾವು ರಕ್ಷಾ ಬಂಧನವನ್ನು ಆಚರಿಸುತ್ತೇವೆ. ವಿವೇಕಾನಂದ ರಂತಹ ಶ್ರೇಷ್ಠ ವ್ಯಕ್ತಿಗಳ ಹೆಸರಲ್ಲಿ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ನಿಮ್ಮಂತ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ರಕ್ಷೆಯಲ್ಲಿ ಕೇಸರಿ ಬಣ್ಣವನ್ನು ಯಾಕೆ ಬಳಸುತ್ತೇವೆ ಎಂದರೆ ಕೇಸರಿ ತ್ಯಾಗದ ಸಂಕೇತವಾಗಿದೆ. ತ್ಯಾಗ ಮತ್ತು ಸೇವೆ ನಮ್ಮ ದೇಶದ ಆತ್ಮವಿದ್ದಂತೆ ಅದನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಸುಭಾಶ್ಚಂದ್ರ ಕಳಂಜ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ Read More »

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಆಶಾದೀಪ

ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2025 ವಿದ್ಯಾರ್ಥಿಗಳ ಪರೀಕ್ಷಾ ಕನಸುಗಳನ್ನು ನನಸುಗೊಳಿಸಲು. “ವಿದತ್ ಲರ್ನಿಂಗ್ ಸೆಂಟರ್ ” ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಗಸ್ಟ್ 17, 2025ರಂದು ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. 11 ಮತ್ತು 12 ನೇ ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ JEE, KCET, NEET ತಯಾರಿ ನಡೆಸಲು ವಿಶೇಷ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ ಫೀಸ್’ನಲ್ಲಿ 90%ರಷ್ಟು ರಿಯಾಯಿತಿ ಪಡೆಯುವ ಸುವರ್ಣಾವಕಾಶ ಲಭ್ಯವಿದೆ. KCET,

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಆಶಾದೀಪ Read More »

ಮೊಟ್ಟೆ ಕೊಡುವ ಕಡೆ ಕಲಿಯಲ್ಲ ಎಂದು ಶಾಲೆ ಬಿಟ್ಟ 70 ಮಕ್ಕಳು

ಕಾವೆರಿದ ಶಾಲೆಯಲ್ಲಿ ಮೊಟ್ಟೆ ವಿತರಣೆ ವಿವಾದ ಬೆಂಗಳೂರು: ಸರ್ಕಾರವೇನೋ ಮಕ್ಕಳಲ್ಲಿ ಪೌಷ್ಟಕಾಂಶದ ಕೊರತೆಯಾಗಬಾರದು ಎಂಬ ಕಾಳಜಿಯಿಂದ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡುತ್ತಿದೆ. ಆದರೆ ಕೆಲವೆಡೆ ಮೊಟ್ಟೆಗೆ ಭಾರಿ ವಿರೋಧವೂ ವ್ಯಕ್ತವಾಗುತ್ತದೆ. ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ 70 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ತೊರೆದ ಘಟನೆ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ವಿಚಾರದಲ್ಲಿ ಪರ ವಿರೋಧ ಚರ್ಚೆ ಸೃಷ್ಟಿಯಾಗಿತ್ತು. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಶಾಲೆ ಬಿಡಿಸುವುದಾಗಿ ಕೆಲವು ಪೋಷಕರು ಈ ಹಿಂದೆಯೇ

ಮೊಟ್ಟೆ ಕೊಡುವ ಕಡೆ ಕಲಿಯಲ್ಲ ಎಂದು ಶಾಲೆ ಬಿಟ್ಟ 70 ಮಕ್ಕಳು Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ

ಪುತ್ತೂರು: ರಕ್ಷಾಬಂಧನ ಸಹೋದರ -ಸಹೋದರಿಯರ ಸಂಬಂಧಕ್ಕೆ ಮಾತ್ರ ಸೀಮಿತವಾಗದೆ ವಿಶ್ವಬಂಧುತ್ವಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸಂಪ್ರದಾಯಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಪ್ರತೀ ಹಬ್ಬದಲ್ಲೂ ಬದುಕಿಗೆ ಬೇಕಾದ ಸಂದೇಶಗಳು ಇರುತ್ತದೆ.ಅವುಗಳನ್ನು ನಾವು ಅರಿತುಕೊಳ್ಳಬೇಕು. ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಈ ರಕ್ಷಾಬಂಧನ. ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹರು ಆದ ಡಾ. ಜಯಪ್ರಕಾಶ್ ಎಂ. ಹೇಳಿದರು. ನರೇಂದ್ರ ಪದವಿ ಪೂರ್ವಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ರಕ್ಷಾಬಂಧನ ಆಚರಣೆಯ ಮಹತ್ವವನ್ನು ತಿಳಿಸಿದರು.ರಕ್ಷಾಬಂಧನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ Read More »

ಭಾರತ ವಿಶ್ವಗುರವಾಗಲು ಸಂಸ್ಕೃತಿಯನ್ನು ಕಾಪಾಡಬೇಕಿದೆ – ಭವ್ಯಾ ನಿಡ್ಪಳ್ಳಿ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಆಟಿ ಆಚರಣೆ ಕೂಟ ಮತ್ತು ಬನ್ನೂರು ಒಕ್ಕಲಿಗ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಅವರು ಶಿಖರೋಪನ್ಯಾಸ ನೀಡಿದರು.  ಇಂದಿನ ಕಾರ್ಯಕ್ರಮವು ಭಾರತ ವಿಶ್ವಗುರುವಾಗಲು ನೆರವಾಗುವ ಕಾರ್ಯಕ್ರಮವಾಗಿದೆ ಏಕೆಂದರೆ ಭಾರತ ಗಟ್ಟಿಯಾಗಬೇಕಾದರೆ ಪ್ರತಿಯೊಂದು ಸಮುದಾಯವೂ ತಳಮಟ್ಟದಲ್ಲಿ ಗಟ್ಟಿಯಾಗಬೇಕು. ಆ ಕೆಲಸ ಇಂದು ಇಲ್ಲಿ ಆಗಿದೆ ಎಂದರು. ಆಟಿ ಆಚರಣೆಯ ನೆಪದಲ್ಲಿ

ಭಾರತ ವಿಶ್ವಗುರವಾಗಲು ಸಂಸ್ಕೃತಿಯನ್ನು ಕಾಪಾಡಬೇಕಿದೆ – ಭವ್ಯಾ ನಿಡ್ಪಳ್ಳಿ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ

ಪುತ್ತೂರು: ಶಾಲಾ ಮಕ್ಕಳ ಪ್ರತಿಭಾ ದರ್ಪಣವಾದ ಭಿತ್ತಿಪತ್ರ ‘ಡಿಕ್ಷನ್’ಇದನ್ನು ಪುತ್ತೂರಿನ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು ಅವರು ಲೋಕಾರ್ಪಣೆಗೊಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಗೋಡೆಯಲ್ಲಿ ಗೀಚಿದ್ದಕ್ಕೆ ಅವರಿಗೆ ಗದರಿಸಬಾರದು, ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಬೇಕು ಎಂದರು. ಇದು ಪೋಷಕರ ಜವಾಬ್ದಾರಿಯಾಗಬೇಕು ಎಂದು ಕಿವಿಮಾತು ಹೇಳಿದರು. ‘ಡಿಕ್ಷನ್’ ಎಂಬ ಹೆಸರು ಸೂಚಿಸಿದ ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ ಸರಳ ಬರವಣಿಗೆಯ ಕುರಿತು ಮಕ್ಕಳಿಗೆ ಸಲಹೆ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಫಿಲೋ ಪ್ರತಿಭಾ ಪ್ರಶಸ್ತಿ

ಪುತ್ತೂರು: ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ನಡೆಸಿದ ’ಫಿಲೋ ಪ್ರತಿಭಾ’ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ ಗಳಿಸಿದೆ. ಶಾಲಾ ವಿದ್ಯಾರ್ಥಿಗಳಾದ ಕುಶಿತಾ ಮತ್ತು ಶ್ರೇಯಾ ರಂಗೋಲಿಯಲ್ಲಿ ಪ್ರಥಮ, ಸಾಯೀಶ್ವರಿ ಮತ್ತು ದೀಕ್ಷಾ ಎಂ. ಮುಖವರ್ಣಿಕೆಯಲ್ಲಿ ದ್ವಿತೀಯ ಹಾಗೂ ಅದ್ವಿಜ್ ಜಿ. ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಫಿಲೋ ಪ್ರತಿಭಾ ಪ್ರಶಸ್ತಿ Read More »

error: Content is protected !!
Scroll to Top