ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಪ್ರಯಾಣಿಕರಿಗೆ ಗಾಯ
ಪುತ್ತೂರು: ತಾಲೂಕು ಸರ್ವೆ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಅಪರಾಹ್ನ ಸುಮಾರು 12.30 ಕ್ಕೆ ಸಂಭವಿಸಿದೆ. ಎರಡೂ ಕಾರುಗಳಲ್ಲಿ ಇದ್ದ ಪ್ರಯಾಣಿಕರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಕಡೆಗೆ ವಸಂತ ಎಂಬವರು ಚಲಾಯಿಸುತ್ತಿದ್ದ ಟಾಟಾ ಪಂಚ್ ಕಾರು ಹಾಗೂ ಸವಣೂರು ಕಡೆಗೆ ಚಲಾಯಿಸುತ್ತಿದ್ದ ಚಿದಾನಂದ ಎಂಬವರ ಮಾರುತಿ ಸಿಲಿರಿಯೊ ಕಾರುಗಳು ಡಿಕ್ಕಿಯಾಗಿವೆ. ಸರ್ವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸಿತ್ತಿರುವುದು ವಿಷಾದನೀಯವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯವರು ಸೂಕ್ತ ಎಚ್ಚರಿಕೆಯ […]
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಪ್ರಯಾಣಿಕರಿಗೆ ಗಾಯ Read More »







