ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ
ಕಡಬ: ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡವರು. ಗಾಯಗೊಂಡ ಚೋಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪರಿಸರದಲ್ಲಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ.
ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ Read More »