ಅಪಘಾತ

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು

ಪಿರಿಯಾಪಟ್ಟಣ : ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು ಮಂಗಳವಾರ  ಮುಂಜಾನೆ 4.30ಕ್ಕೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಮುದಾಸೀರ್, ಮುಜಾಯಿದ್, ಅಹ್ಮದ್ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ […]

ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ | ಮೂವರು ಮೃತ್ಯು Read More »

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ

ಬಂಟ್ವಾಳ : ಪುಣಚ ಸಮೀಪ ಮನೆಯ ಮೇಲೆ ಬೆಳಗ್ಗಿನ ಜಾವ ಪಿಕಪ್ ವಾಹನ ಬಿದ್ದ ಸ್ಥಳಕ್ಕೆ ಪುತ್ತಿಲ ಪರಿವಾರದವರು ತೆರಳಿ ಸಹಕರಿಸಿದರು. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಪರಿವಾರದ ಪ್ರಮುಖರು ಕಾರ್ಯಾಚರಣೆ ಸಂದರ್ಭ ಇಲಾಖೆಯೊಂದಿಗೆ ಕೈಜೋಡಿಸಿದರು. ಮಳೆ ಬರುತಿದ್ದಾಗ ಘಟನೆ ನಡೆದಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ಅರುಣ್ ಪುತ್ತಿಲ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಮನೆ ಮೇಲೆ ಬಿದ್ದ ಪಿಕಪ್ ವಾಹನ | ಇಲಾಖೆ ಜತೆ ಪುತ್ತಿಲ ಪರಿವಾರ ಕೈಜೋಡಿಸುವಿಕೆ Read More »

ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ಬಂಟ್ವಾಳ: ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ವಿಟ್ಲ ಸಮೀಪ ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಪಿಕಪ್ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಒಳಗಿದ್ದ ಮಹಿಳೆ ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ. ಕೂರೇಲು ಮಧ್ಯದ ಅಂಗಡಿಯ ಸಮೀಪ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದಿದೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಮಹಿಳೆ ಗಂಭೀರ ಪರಿಸ್ಥಿಯಲ್ಲಿದ್ದಾರೆ. ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ

ಮನೆ ಮೇಲೆ ಉರುಳಿದ ಪಿಕಪ್ | ಮನೆಯೊಳಗೆ ಸಿಲುಕಿಕೊಂಡ ಮಹಿಳೆ Read More »

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ

ಪುತ್ತೂರು: ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಮರವೊಂದು ಬಿದ್ದ ಘಟನೆ ಮುರದಲ್ಲಿ ನಡೆದಿದೆ. ಮುರ ಒಕ್ಕಲಿಗ ಗೌಡ ಸಮುದಾಯದ ಭವನದ ಬಳಿ ಘಟನೆ ನಡೆದಿದೆ. ಮುರ ನಿವಾಸಿ ಕುಶಲ ಎಂಬವರ ಎಲೆಕ್ಟ್ರಿಕ್ ಆಟೋ ರಿಕ್ಷಾದ ಮೇಲೆ ಮರ ಬಿದ್ದು ರಿಕ್ಷಾಕ್ಕೆ ಹಾನಿಯಾಗಿದೆ.

ಆಟೋ ರಿಕ್ಷಾದ ಮೇಲೆ ಮರ ಬಿದ್ದು ಹಾನಿ Read More »

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ

ಪುತ್ತೂರು: ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಡ್ನೂರು ದೇವಿನಗರ ಎಂಬಲ್ಲಿರುವ ರತ್ನಾವ ತಿ ಎಂಬವರ ಮನೆ ಬರೆ ಕುಸಿದ ಕಾರಣ ಜರಿದು ಬೀಳುವ ಹಂತದ್ದಲ್ಲಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬನ್ನೂರು ಗ್ರಾಮ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಗ್ರಾಪಂ ಪಿಡಿಒರವರಿಗೆ ಮನವಿ ಸಲ್ಲಿಸಲಾಯಿತು. ದೇವಿನಗರ ಸರ್ವೆ ನಂ 1ರಲ್ಲಿ ಎರಡು ಸೆಂಟ್ಸ್ ಸ್ಥಳದಲ್ಲಿ ರತ್ನಾವತಿಯವರ ಮನೆ ಇದ್ದು ಅದರ ಪಕ್ಕದಲ್ಲಿರುವ ಧರೆ ಮಳೆಗೆ ಕುಸಿಯುವ ಹಂತದಲ್ಲಿದ್ದು ಧರೆ ಜರಿದರೆ ಮನೆ ಬೀಳುವ ಅಪಾಯದಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸೇಡಿಯಾಪು-

ಪಡ್ನೂರು ದೇವಿನಗರದಲ್ಲಿ ಧರೆ ಕುಸಿದು ಮನೆ ಅಪಾಯದಲ್ಲಿ | ಕಾಂಗ್ರೆಸ್ ಬೂತ್ ಸಮಿತಿಯಿಂದ ಬನ್ನೂರು ಪಿಡಿಒಗೆ ಮನವಿ Read More »

ಪಿಕಪ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ : ಓರ್ವ ಮೃತ್ಯು, ಮಹಿಳೆ ಗಂಭೀರ

ಬೆಳ್ತಂಗಡಿ : ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಮಹಿಳೆ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಂದಾರು-ಕುಪ್ಪೆಟ್ಟಿ ರಸ್ತೆ ಬನಾರಿ ಎಂಬಲ್ಲಿ ಇಂದು ಅಪರಾಹ್ನ ನಡೆದಿದೆ. ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಪಿಕಪ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ : ಓರ್ವ ಮೃತ್ಯು, ಮಹಿಳೆ ಗಂಭೀರ Read More »

ಪಾಲದಿಂದ ಬಿದ್ದು ನೀರು ಪಾಲಾದ ವ್ಯಕ್ತಿಯ ಶವ ಪತ್ತೆ

ಸುಳ್ಯ: ಪಾಲದಿಂದ ಬಿದ್ದು ನೀರು ಪಾಲಾದ ವ್ಯಕ್ತಿಯ ಶವ ಭಾನವಾರ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಕೂಲಿಕಾರ್ಮಿಕ ನಾರಾಯಣನ್ ಎಂಬವರು ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿದ್ದ ಸಂದರ್ಭ ಕಾಲು ಜಾರಿ ಹರಿಯುತ್ತಿದ್ದ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು. ತಕ್ಷಣದಿಂದಲೇ ಸುಳ್ಯ ಅಗ್ನಿಶಾಮಕ ದಳ ಹಾಗೂ ಎಸ್‍ ಡಿಆರ್ ಎಫ್, ಪೊಲೀಸ್ ಇಲಾಖೆ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿತ್ತು. ಅಲ್ಲದೆ ಕಲ್ಲುಗುಂಡಿಯ ವಿಖಾಯ ತಂಡ, ಪೈಚಾರಿನ ಮುಳುಗು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದರು.  ಇದೀಗ ಆಲೆಟ್ಟಿಯ ಕನ್ನಿಗುಂಡಿ ಬಳಿಯ ಪಯಸ್ವಿನಿ ಹೊಳೆ

ಪಾಲದಿಂದ ಬಿದ್ದು ನೀರು ಪಾಲಾದ ವ್ಯಕ್ತಿಯ ಶವ ಪತ್ತೆ Read More »

ಓಮ್ನಿ-ಸಿಫ್ಟ್ ಕಾರು ಡಿಕ್ಕಿ | ಪ್ರಯಾಣಿಕರಿಗೆ ಗಾಯ

ಬಂಟ್ವಾಳ : ಓಮ್ನಿಯೊಂದಕ್ಕೆ ಹಿಂದಿನಿಂದ ಬಂದ ಶಿಪ್ಟ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಪಲ್ಟಿಯಾಗಿ ಪ್ರಯಾಣಿಕರು ಕ ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಬಿ.ಸಿ.ರೋಡು-ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿರುವ ಪರ್ಲ ಚರ್ಚ್ ಬಳಿ ಕಾರು ಚಾಲಕ ರಾಯಿಸನ್ ಹಾಗೂ ಮಕ್ಕಳು ಸಹಿತ ಮೂವರು ಜನ ಹಾಗೂ ಸಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೆ ಗಾಯಗಳಾಗಿವೆ. ಡಿಕ್ಕಿಯ ರಭಸಕ್ಕೆ ಓಮ್ನಿ ಕಾರನ್ನು ಸ್ವಲ್ಪ ದೂರದ ವರೆಗೆ ತಳ್ಳಿಕೊಂಡು ಹೋಗಿದೆ. ಅಪಘಾತದಿಂದ ಕಾರಿನೊಳಗೆ ಸಿಲುಕಿದ್ದವರನ್ನು ಗಾಜು ಒಡೆದು ಹೊರಕ್ಕೆ

ಓಮ್ನಿ-ಸಿಫ್ಟ್ ಕಾರು ಡಿಕ್ಕಿ | ಪ್ರಯಾಣಿಕರಿಗೆ ಗಾಯ Read More »

ತೋಡಿಗೆ ಬಿದ್ದು ಮಹಿಳೆ ಸಾವು

ಕಾರ್ಕಳ:  ಮಹಿಳೆಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನದಾಯಿಪಾಲ್ಕೆಯಲ್ಲಿ ನಡೆದಿದೆ. ಬೇಬಿ ಶೆಟ್ಟಿ (57) ಮೃತಪಟ್ಟ ಮಹಿಳೆ ಶುಕ್ರವಾರ ಮಧ್ಯಾಹ್ನ ದನವನ್ನು ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಭಾರಿ ಮಳೆ ಯಾಗುತಿದ್ದರಿಂದ ತೋಡಿನಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುತಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತೋಡಿಗೆ ಬಿದ್ದು ಮಹಿಳೆ ಸಾವು Read More »

ಮನೆಗೆ ಗುಡ್ಡ ಜರಿದು ಮಹಿಳೆ ಮೃತ್ಯು | ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಬಂಟ್ವಾಳ : ಮನೆಗೆ ಗುಡ್ಡ ಜರಿದು ಮಹಿಳೆಯೋರ್ವಳು ಮೃತಪಟ್ಟ ಸಜಿಪ ಮುನ್ನೂರು ಗ್ರಾಮದ ನಂದಾವರದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದ್ದಾರೆ . ಅವಘಡ ಸಂಭವಿಸಿದ ಕುಟುಂಬಕ್ಕೆ ರೂ. ಐದು ಲಕ್ಷ ಪರಿಹಾರ ಮತ್ತು ಮನೆ ರಿಪೇರಿಗೆ 1.20 ಲಕ್ಷಪರಿಹಾರವನ್ನು ಸರಕಾರದಿಂದ ನೀಡುವ ಭರವಸೆ ನೀಡಿದರು. ಜೊತೆಗೆ ತಾಲೂಕಿನಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ತಾಲುಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಎಸ್.ವಿ.ಕೂಡಲಗಿ, ತಾ.ಪಂ. ಕಾರ್ಯ ನಿರ್ವಹಣಾ ಧಿಕಾರಿ

ಮನೆಗೆ ಗುಡ್ಡ ಜರಿದು ಮಹಿಳೆ ಮೃತ್ಯು | ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ Read More »

error: Content is protected !!
Scroll to Top