Uncategorized

ಧರ್ಮಸ್ಥಳ ಪ್ರಕರಣ: ಅಗೆದ ಗುಂಡಿಯಲ್ಲಿ ‌ನೀರು ತುಂಬಿ ಕಳೇಬರ ಪತ್ತೆ ಕಾರ್ಯಕ್ಕೆ ಹಿನ್ನಡೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ‌ಸಂಬಂಧಿಸಿದಂತೆ SIT ಅಧಿಕಾರಿಗಳ ತಂಡ ಈಗಾಗಲೇ ಗುರುತು ಮಾಡಿದ ಸ್ಥಳಗಳನ್ನು ಅಗೆದು ಕಳೇಬರಗಳನ್ನು ಹೊರತೆಗೆಯುವ ಕೆಲಸಕ್ಕೆ ಇಳಿದಿದೆ. ಶವಗಳನ್ನು ಹೂತಿಟ್ಟದ್ದಾಗಿ ಹೇಳಿರುವ ದೂರದಾರನ‌ ಸಮ್ಮುಖದಲ್ಲೇ ಈ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಸಹಾಯದೊಂದಿಗೆ ಇಂದು ಮುಂಜಾನೆಯಿಂದಲೇ ಕೆಲಸ ಆರಂಭ ಮಾಡಲಾಗಿದೆ. ಗುರುತು ಮಾಡಲಾದ ಒಂದನೇ ಸ್ಥಳದಲ್ಲಿ ಈಗಾಗಲೇ ನಾಲ್ಕು ಅಡಿಗಳಷ್ಟು ಅಗೆಯಲಾಗಿದ್ದರೂ ಯಾವುದೇ ರೀತಿಯ ಶವಗಳ ಗುರುತು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಸತತ ಮೂರು ತಾಸುಗಳ ಕಾಲ ಅಗೆಯಲಾಗಿದ್ದರೂ ಇಲ್ಲಿ […]

ಧರ್ಮಸ್ಥಳ ಪ್ರಕರಣ: ಅಗೆದ ಗುಂಡಿಯಲ್ಲಿ ‌ನೀರು ತುಂಬಿ ಕಳೇಬರ ಪತ್ತೆ ಕಾರ್ಯಕ್ಕೆ ಹಿನ್ನಡೆ Read More »

ಧರ್ಮಸ್ಥಳ ಪ್ರಕರಣ: ಶವಗಳ ಅವಶೇಷ ಹೊರತೆಗೆಯುವ ಕಾರ್ಯಾಚರಣೆಯಲ್ಲಿ SIT ತಂಡ

ಧರ್ಮಸ್ಥಳ: ಹಲವಾರು ಹೆಣಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ತಂಡ ದೂರುದಾರನ ಜೊತೆಗೆ ಧರ್ಮಸ್ಥಳ ಕಾಡಿನಲ್ಲಿ ಹೆಣಗಳ ಕಳೇಬರ ಹೊರತೆಗೆಯುವ ಪ್ರಕ್ರಿಯೆ ಆರಂಭ ಮಾಡಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಎಸ್‌ಐಟಿ ಅಧಿಕಾರಿಗಳು ಇಂದು ಮುಂಜಾನೆಯೇ ಕಚೇರಿಗೆ ಆಗಮಿಸಿದ್ದು, ಈ ಕಾರ್ಯದಲ್ಲಿ ವೈದ್ಯರ ತಂಡ ಸಹ ಜೊತೆಯಾಗಿದೆ. ಈಗಾಗಲೇ‌‌ ದೂರುದಾರ ‌ವ್ಯಕ್ತಿ ಗುರುತಿಸಿರುವ ‌ಸ್ಥಳಗಳಲ್ಲಿ ಮೃತದೇಹದ ಅವಶೇಷಗಳನ್ನು ಹೊರತೆಗೆವ ಕೆಲಸಕ್ಕೆ ತಯಾರಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಸಹಾಯಕ ಆಯುಕ್ತರ ಸಮ್ಮುಖದಲ್ಲೇ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ

ಧರ್ಮಸ್ಥಳ ಪ್ರಕರಣ: ಶವಗಳ ಅವಶೇಷ ಹೊರತೆಗೆಯುವ ಕಾರ್ಯಾಚರಣೆಯಲ್ಲಿ SIT ತಂಡ Read More »

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ನಾಗರ ಪಂಚಮಿ ಆಚರಣೆ

ಕಡಬ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ, ಕ್ಷೀರಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ದೇವಾಲಯದ ಭಕ್ತರು ನಾಗರ ಪಂಚಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ನಾಗರ ಪಂಚಮಿ ಆಚರಣೆ Read More »

ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ: ಯಾಕೆ ಗೊತ್ತಾ?

ನವದೆಹಲಿ: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಚರ್ಚೆಯ ವೇಳೆ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನೀವಿನ್ನೂ 20 ವರ್ಷಗಳ ಕಾಲ ವಿಪಕ್ಷದಲ್ಲೇ ಇರುತ್ತೀರಿ ಎಂದು ಹೇಳಿದ್ದಾರೆ. ವಿಪಕ್ಷಗಳು ಭಾರತದ ವಿದೇಶಾಂಗ ವ್ಯವಸ್ಥೆಗಳ ಮೇಲೆ ನಂಬಿಕೆ ಇರಿಸಿಲ್ಲ. ಆದರೆ ಇನ್ಯಾವುದೋ ರಾಷ್ಟ್ರದ ಮೇಲೆ ನಂಬಿಕೆ ಹೊಂದಿರುವುದಕ್ಕೆ ನಮ್ಮ ಆಕ್ಷೇಪ ಇದೆ. ಅವರ ಪಕ್ಷದಲ್ಲಿ ವಿದೇಶೀಯರ ಪ್ರಾಮುಖ್ಯತೆಯ ಬಗ್ಗೆ ನಮಗೆ ಆಕ್ಷೇಪ ಇದೆ ಎಂದು ಅವರು ತಿಳಿಸಿದ್ದಾರೆ. ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಹಾಗೆ ವಿದೇಶಾಂಗ

ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ: ಯಾಕೆ ಗೊತ್ತಾ? Read More »

170 ಗಂಟೆಗಳ ಕಾಲ ಭರತನಾಟ್ಯ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದ ಮಂಗಳೂರಿನ ರೆಮೋನಾ

ಮಂಗಳೂರು: ಸತತ ಏಳು ದಿನಗಳ ಕಾಲ ಭರತನಾಟ್ಯ ಮಾಡಿ ಮಂಗಳೂರಿನ ರೆಮೋನಾ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಜುಲೈ 28 ರಂದು ಸಂತ ಅಲೋಶಿಯಸ್ ವಿ.ವಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡ ರೆಮೋನಾ ಅವರ ದಾಖಲೆಯನ್ನು ಅಧಿಕೃತವಾಗಿ ಘೋಷಿಸಿ, ಪ್ರಶಸ್ತಿ ಪ್ರಧಾನಿಸಿದೆ. ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜುಲೈ 21 ರಂದು ರೆಮೋನಾ ಭರತನಾಟ್ಯ ಆರಂಭಿಸಿದ್ದು ರಾತ್ರಿ ಹಗಲೆನ್ನದೆ ನಿರಂತರವಾಗಿ ಜುಲೈ 28

170 ಗಂಟೆಗಳ ಕಾಲ ಭರತನಾಟ್ಯ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದ ಮಂಗಳೂರಿನ ರೆಮೋನಾ Read More »

ಧಾರ್ಮಿಕ ಮತಾಂಧತೆ, ದ್ವೇಷ ತುಂಬಿದ ರಾಷ್ಟ್ರದ ಜೊತೆ ಮಾತುಕತೆ ಅಸಾಧ್ಯ: ಪಾಕ್ ವಿರುದ್ಧ ಗುಡುಗಿದ ರಾಜನಾಥ್ ‌ಸಿಂಗ್

ನವದೆಹಲಿ: ಪ್ರಜಾಪ್ರಭುತ್ವದ ಗಂಧಗಾಳಿ ಇಲ್ಲದ, ಭಾರತದ ವಿರುದ್ಧ ಸದಾ ಧಾರ್ಮಿಕ ಮತಾಂಧತೆ ಮತ್ತು ದ್ವೇಷವನ್ನೇ ಉಸಿರಾಡುವ ದೇಶದ ಜೊತೆಗೆ ಮಾತುಕತೆ ಅಸಾಧ್ಯ ಎಂದು ಪಾಕ್ ವಿರುದ್ಧ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗೆಗಿನ ವಿಪಕ್ಷಗಳ ಗೊಂದಲಗಳಿಗೆ ಉತ್ತರಿಸಿದ ಅವರು, ಯಾವುದೇ ರಾಷ್ಟ್ರ ಪ್ರಜಾಪ್ರಭುತ್ವ ಲಕ್ಷಣಗಳನ್ನು ಹೊಂದಿದ್ದರೆ, ನಾಗರಿಕವಾಗಿದ್ದರೆ ಅಂತಹ ರಾಷ್ಟ್ರಗಳ ಜೊತೆಗೆ ಮಾತುಕತೆ ನಡೆಸಬಹುದು. ಪ್ರಜಾಪ್ರಭುತ್ವದ ಅಂಶವೇ ಗೊತ್ತಿಲ್ಲದ ದೇಶದ ಜೊತೆ ಮಾತುಕತೆ ಅಸಾಧ್ಯ ಎಂದಿದ್ದಾರೆ. ಹಾಗೆಯೇ ಉಗ್ರವಾದದ ಭಾಷೆ ಭಯ,

ಧಾರ್ಮಿಕ ಮತಾಂಧತೆ, ದ್ವೇಷ ತುಂಬಿದ ರಾಷ್ಟ್ರದ ಜೊತೆ ಮಾತುಕತೆ ಅಸಾಧ್ಯ: ಪಾಕ್ ವಿರುದ್ಧ ಗುಡುಗಿದ ರಾಜನಾಥ್ ‌ಸಿಂಗ್ Read More »

ಆಪರೇಷನ್ ಸಿಂಧೂರ್ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ನವದೆಹಲಿ: ಲೋಕಸಭೆಯಲ್ಲಿ ಭಾರತ ಪಾಕ್ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. ಭಾರತವು ಈ‌ ದಾಳಿಯ ಸಂದರ್ಭದಲ್ಲಿ ಕೇಂದ್ರೀಕರಿಸಿದ್ದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು. ಪಾಕಿಸ್ತಾನ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿತ್ತು ಮತ್ತು ನಾವು ಆಗಿರಲಿಲ್ಲ. ನಮಗೆ ಸವಾಲಾಗಿ ಪರಿಣಮಿಸಿದ್ದು ಇದೇ ವಿಷಯವಾಗಿತ್ತು ಎಂದು ಹೇಳಿದ್ದಾರೆ. ಪಾಕಿಸ್ತಾನವನ್ನು ಗಡಿಯಾಚೆಗಿನ ಉಗ್ರವಾದಕ್ಕೆ ಹೊಣೆ ಮಾಡುವುದಕ್ಕೆ ಭದ್ರತಾ ಮಂಡಳಿಯ ಅನುಮೋದನೆ ಪಡೆಯುವುದು, ಪಹಲ್ಗಾಮ್ ದಾಳಿಯನ್ನು ನಡೆಸಿದವರನ್ನು ನ್ಯಾಯದ

ಆಪರೇಷನ್ ಸಿಂಧೂರ್ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು? Read More »

ಆಪರೇಷನ್ ಸಿಂಧೂರ್ ಐತಿಹಾಸಿಕ ಮಿಲಿಟರಿ ಕ್ರಮ: ರಾಜನಾಥ್ ಸಿಂಗ್

ನವದೆಹಲಿ: ಲೋಕಸಭೆಯಲ್ಲಿ ಇಂದು ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆದಿದೆ. ಈ ಸಂಬಂಧ ಮಾಹಿತಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಅನ್ನು ಭಾರತ ಮೇ ತಿಂಗಳಲ್ಲಿ ನಡೆಸಿದ್ದು, ನೂರಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ. ಸುಮಾರು ಒಂಬತ್ತು ಭಯೋತ್ಪಾದಕ ಮೂಲಸೌಕರ್ಯ ಗುರಿಗಳನ್ನು ಹೊಡೆದುರುಳಿಸಲಾಗಿದೆ. ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಈ ಆಪರೇಷನ್ ನಡೆಸಲಾಗಿದೆ ಎಂದರು. ಹೊಡೆದುರುಳಿಸಲಾದ ಉಗ್ರರು ಮುಜಾಹಿದ್ದೀನ್, ಲಷ್ಕರ್ ಮತ್ತು ಹಿಜ್ಬುಲ್ ಸಂಘಟನೆಗಳ

ಆಪರೇಷನ್ ಸಿಂಧೂರ್ ಐತಿಹಾಸಿಕ ಮಿಲಿಟರಿ ಕ್ರಮ: ರಾಜನಾಥ್ ಸಿಂಗ್ Read More »

ಧರ್ಮಸ್ಥಳ ಪ್ರಕರಣ: ದೂರುದಾರನ ಜೊತೆ ಸ್ಥಳ ಮಹಜರು ಮಾಡಿದ SIT ಅಧಿಕಾರಿಗಳು

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆಯನ್ನು ತೀವ್ರಗೊಳಿಸಿರುವ SIT ತಂಡ, ದೂರುದಾರ ವ್ಯಕ್ತಿಯ ಜೊತೆಗೆ ನೇತ್ರಾವತಿ ಸ್ನಾನಘಟ್ಟದ ಪ್ರದೇಶದಲ್ಲಿ ಮಹಜರು ಪ್ರಕ್ರಿಯೆ ಆರಂಭ ಮಾಡಿದೆ. ಈ ಪ್ರಕ್ರಿಯೆ ನಡೆಸುವುದಕ್ಕೂ ಮೊದಲು ತನಿಖಾಧಿಕಾರಿಗಳಾದ ಅನುಚೇತ್, ಜಿತೇಂದ್ರ ಕುಮಾರ್, ಸಿ.ಎ. ಸೈಮನ್ ಅವರು ಬೆಳ್ತಂಗಡಿ ಠಾಣೆಗೂ ಭೇಟಿ ನೀಡಿದ್ದು ದೂರುದಾರನ ಜೊತೆಗೆ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಆ‌ ಬಳಿಕ ಇಂದು ಮದ್ಯಾಹ್ನ ಆತನನ್ನು ಭಾರೀ ಭದ್ರತೆಯಲ್ಲಿ ಸ್ಥಳಕ್ಕೆ ಕರೆತಂದು ಮಹಜರು ಪ್ರಕ್ರಿಯೆ ಆರಂಭಿಸಲಾಗಿದೆ.

ಧರ್ಮಸ್ಥಳ ಪ್ರಕರಣ: ದೂರುದಾರನ ಜೊತೆ ಸ್ಥಳ ಮಹಜರು ಮಾಡಿದ SIT ಅಧಿಕಾರಿಗಳು Read More »

ಬಿಜೆಪಿ ಏನೇ ಮಾಡಿದರೂ 2028 ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ: ಸಿಎಂ ‌ಸಿದ್ದರಾಮಯ್ಯ

ಮಂಡ್ಯ: ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದ್ದು, ಆ‌ ಸುಳ್ಳುಗಳನ್ನು ಯಾರೂ ನಂಬದಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿಯವರ ಮತ್ತೊಂದು ಹೆಸರೇ ಸುಳ್ಳು. ಅವರ ಸುಳ್ಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ನಾನು ಗೊಬ್ಬರ ಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅದನ್ನು ರಾಜಕೀಯ ಮಾಡುವ ಕೆಲಸ ಬಿಜೆಪಿ ಮಾಡಿದೆ. ರಾಜ್ಯ ಸರ್ಕಾರ ಗೊಬ್ಬರ ತಯಾರಿಸುವುದಿಲ್ಲ. ಕೇಂದ್ರ ಸರ್ಕಾರ

ಬಿಜೆಪಿ ಏನೇ ಮಾಡಿದರೂ 2028 ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ: ಸಿಎಂ ‌ಸಿದ್ದರಾಮಯ್ಯ Read More »

error: Content is protected !!
Scroll to Top