Uncategorized

ಅನ್ಯಧರ್ಮದ ‌ಸ್ಥಳಗಳಲ್ಲಿ ಶವ ಹೂತ ದೂರು ಬಂದರೆ ಧರ್ಮಸ್ಥಳ ಮಾದರಿಯಲ್ಲೇ ಕ್ರಮ ಕೈಗೊಳ್ಳುತ್ತೀರಾ?: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಧರ್ಮದ ಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನುವ ಬಗ್ಗೆ ದೂರುಗಳು ಬಂದಲ್ಲಿ ಧರ್ಮಸ್ಥಳದ ಮಾದರಿಯಲ್ಲೇ ಕಾರ್ಯಾಚರಣೆ ನಡೆಸುವ ತಾಕತ್ತು ಇದೆಯೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. SIT ಹೆಸರಿನಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಗಳ ಮೇಲೆ ಆಘಾತವನ್ನು ಉಂಟು ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರುದಾರ ‌ ಮುಸುಕುಧಾರಿ ದಿನಕ್ಕೊಂದರ ಹಾಗೆ ಶವ ಹೂಳಲಾಗಿದೆ […]

ಅನ್ಯಧರ್ಮದ ‌ಸ್ಥಳಗಳಲ್ಲಿ ಶವ ಹೂತ ದೂರು ಬಂದರೆ ಧರ್ಮಸ್ಥಳ ಮಾದರಿಯಲ್ಲೇ ಕ್ರಮ ಕೈಗೊಳ್ಳುತ್ತೀರಾ?: ಪ್ರಲ್ಹಾದ ಜೋಶಿ Read More »

ಪ್ರಧಾನಿ ಮೋದಿ ಅವರಿಂದ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ, ಆರೆಂಜ್ ಲೈನ್‌ಗೆ ಶಂಕುಸ್ಥಾಪನೆ

ಬೆಂಗಳೂರು: ಪ್ರಧಾನಿ ಮೋದಿ ಅವರು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ವರೆಗಿನ ಮೆಟ್ರೋ ಹಳದಿ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡಿದರು. ಇದರಿಂದಾಗಿ ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಸಹ ಇದೆ. ನಮ್ಮ ಮೆಟ್ರೋ ಆರೆಂಜ್ ಲೈನ್‌ಗೆ ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಿದರು. ಐಐಐಟಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಪ್ರಧಾನಿ ಮೋದಿ ಅವರು ಕಾಯಕ ಯೋಗಿ. ಅವರು ನಮ್ಮ ಕಾಲದ ನಿಜವಾದ

ಪ್ರಧಾನಿ ಮೋದಿ ಅವರಿಂದ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ, ಆರೆಂಜ್ ಲೈನ್‌ಗೆ ಶಂಕುಸ್ಥಾಪನೆ Read More »

ಅಂದು ಜೀವನ ಪದ್ಧತಿ – ಇಂದು ಆಚರಣೆ: ಸೀತಾರಾಮ ಕೇವಳ

ಪುತ್ತೂರು: ಬನ್ನೂರಿನ ಅಲುಂಬುಡದ ನಡೆದ ಆಟಿ ಆಚರಣೆ ಕೂಟವನ್ನು ಊರ ಗೌಡ ವಿಶ್ವನಾಥ ಗೌಡ ಕಲ್ಲಿಮಾರು ಉದ್ಘಾಟಿಸಿ, ಸಾಂಪ್ರದಾಯಿಕ ಆಚರಣೆಗಳ ಮಹತ್ತ್ವದ ಕುರಿತು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸೀತಾರಾಮ ಕೇವಳ ಮಾತನಾಡಿ, ಆಟಿಯ ಅವಧಿಯಲ್ಲಿ ಹಿಂದಣ ಕಾಲದಲ್ಲಿ ಬಡತನವೇ ಇತ್ತು. ಆ ಪರಿಸ್ಥಿತಿಯಲ್ಲಿ ಉಣ್ಣಲು ತಿನ್ನಲು ಇರದಿದ್ದ ಕಾರಣಕ್ಕಾಗಿ ಜನರು ಗೆಡ್ಡೆ- ಗೆಣಸುಗಳ ಮತ್ತು ಸೊಪ್ಪು-ಕಾಯಿಗಳ ಮೊರೆ ಹೋಗುತ್ತಿದ್ದುದು ಅನಿವಾರ್ಯವಾಗಿತ್ತು. ಇಂದು ನಾವು ಸಾಕಷ್ಟು ಸುಖಿಗಳಾಗಿದ್ದೇವೆ. ಆದರೆ ಇತಿಹಾಸವನ್ನು ಮರೆಯಬಾರದು. ಹಾಗಾದಾಗ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ

ಅಂದು ಜೀವನ ಪದ್ಧತಿ – ಇಂದು ಆಚರಣೆ: ಸೀತಾರಾಮ ಕೇವಳ Read More »

ಕಡಬ ಪಟ್ಟಣ ಪಂಚಾಯತ್ ಚುನಾವಣಾ ಪ್ರಚಾರ

ಅಭ್ಯರ್ಥಿಗಳ ಪರ ಮತ ಯಾಚಿಸಿದ ಕಿಶೋರ್ ಕುಮಾರ್ ಪುತ್ತೂರು, ಭಾಗೀರಥಿ ಮುರುಳ್ಯ ಕಡಬ: ಸುಳ್ಯ ತಾಲೂಕು ಕಡಬ ಪಟ್ಟಣ ಪಂಚಾಯತ್‌ನ ಮಾಲೇಶ್ವರ ವಾರ್ಡ್ ನಂಬರ್ 5 ಮತ್ತು ವಿದ್ಯಾನಗರ ವಾರ್ಡ್ ನಂಬರ್ 6 ರ ಚುನಾವಣಾ ಪ್ರಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾದರು. ಈ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಮುರುಳ್ಯ, ವಾರ್ಡ್ ನಂಬರ್ 5 ರ ಅಭ್ಯರ್ಥಿ ಮತ್ತು ಮಹಾ ಶಕ್ತಿ

ಕಡಬ ಪಟ್ಟಣ ಪಂಚಾಯತ್ ಚುನಾವಣಾ ಪ್ರಚಾರ Read More »

ಟ್ರಂಪ್ ಸುಂಕ ನೀತಿ ಅಸಂಬದ್ಧ: ಅಮೆರಿಕಾದ ಪ್ರೊಫೆಸರ್ ಸ್ಟೀವ್ ಹ್ಯಾಂಕೆ

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ದೇಶಗಳ ಜೊತೆಗೆ ಟ್ರೇಡ್ ವಾರ್ ಆರಂಭಿಸಿದ್ದು, ಅವರನ್ನು ಅವರೇ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿವಿಯ ಪ್ರೊಫೆಸರ್ ಸ್ಟೀವ್ ಹ್ಯಾಂಕೆ ಹೇಳಿದ್ದಾರೆ. ಸಂಪೂರ್ಣ ಅಸಂಬದ್ಧ ಸುಂಕ ನೀತಿ ಟ್ರಂಪ್ ಅವರದ್ದು. ಅವರ ಅರ್ಥಶಾಸ್ತ್ರ ಸಂಪೂರ್ಣ ತಪ್ಪು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾವು ಭಾರತದ ಸರಕುಗಳಿಗೆ ಸುಂಕ ಹೆಚ್ಚಿಸಿರುವ ಬೆನ್ನಲ್ಲೇ ಹ್ಯಾಂಕ್ ಅವರು ಹೇಳಿಕೆ ನೀಡಿದ್ದು, ನೆಪೋಲಿಯನ್ ಸಲಹೆಯನ್ನು ಅನುಸರಿಸುವುದು,

ಟ್ರಂಪ್ ಸುಂಕ ನೀತಿ ಅಸಂಬದ್ಧ: ಅಮೆರಿಕಾದ ಪ್ರೊಫೆಸರ್ ಸ್ಟೀವ್ ಹ್ಯಾಂಕೆ Read More »

ಮತಗಳ್ಳತನ ಆರೋಪ: ರಾಗಾಗೆ ತಿರುಗೇಟು ನೀಡಿದ ಚುನಾವಣಾ ಆಯೋಗ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಗಳ್ಳತನ, ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ತಿರಗೇಟು ನೀಡಿದೆ. ಬಿಹಾರದ ಕರಡು ಮತದಾರರ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೂ ಕಾಂಗ್ರೆಸ್ ಯಾಕೆ ಆ‌ ಸಂದರ್ಭದಲ್ಲಿ ಪ್ರಶ್ನೆ ಮಾಡಿಲ್ಲ, ಆಯೋಗವನ್ನೇಕೆ ಸಂಪರ್ಕ ಮಾಡಿಲ್ಲ ಎಂದು ಚು. ಆಯೋಗ ಕೇಳಿದೆ. ಮತದಾನದ ಸಮಯದಲ್ಲಿ ಯಾವುದೇ ರೀತಿಯ ಆಕ್ಷೇಪಣೆಗಳನ್ನು ಮಾಡದ ಕಾಂಗ್ರೆಸ್, ಫಲಿತಾಂಶ ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಸುತ್ತದೆ. ಬಿಹಾರ ಚುನಾವಣಾ ಸಮಯದಲ್ಲಿ

ಮತಗಳ್ಳತನ ಆರೋಪ: ರಾಗಾಗೆ ತಿರುಗೇಟು ನೀಡಿದ ಚುನಾವಣಾ ಆಯೋಗ Read More »

ಪ್ರಧಾನಿ ಮೋದಿ ಅವರಿಗೆ ಮಹಿಳೆಯರು, ಮಕ್ಕಳಿಂದ ರಕ್ಷಾ ಬಂಧನ

ನವದೆಹಲಿ: ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ನವದೆಹಲಿಯ ಅವರ ನಿವಾಸದಲ್ಲಿ ಮಕ್ಕಳು, ಮಹಿಳೆಯರು ರಕ್ಷೆ ಕಟ್ಟಿ ಸಂಭ್ರಮಿಸಿದರು. ಪ್ರಧಾನಿ ಅವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸಹೋದರಿಯರು ರಕ್ಷೆ ಕಟ್ಟಿದರು. ಹಾಗೆಯೇ ಪ್ರಧಾನಿ ಮೋದಿ ಅವರ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರು, ಹಾಗೂ ಇತರ ಸಿಬ್ಬಂದಿಯ ಹೆಣ್ಣು ಮಕ್ಕಳು ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ. ಹಾಗೆಯೇ ಶಾಲಾ ಮಕ್ಕಳು ಸಾಮೂಹಿಕವಾಗಿ ಪ್ರಧಾನಿ ಮೋದಿ ಅವರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಣೆಯನ್ನು ಸಂಭ್ರಮಿಸಿದರು.

ಪ್ರಧಾನಿ ಮೋದಿ ಅವರಿಗೆ ಮಹಿಳೆಯರು, ಮಕ್ಕಳಿಂದ ರಕ್ಷಾ ಬಂಧನ Read More »

ಬಾದಾಮಿಯಲ್ಲಿ ಮತ ಖರೀದಿ : ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ?

ಮೈಸೂರು: ಮತಗಳ್ಳತನ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಈ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದರಲ್ಲಿ ‌ಕೆಲವು ಸತ್ಯವಿದೆ. ಈ ಬಗ್ಗೆ ನಮ್ಮ ಲೀಗಲ್ ಟೀಂ ಜೊತೆಗೆ ಚರ್ಚೆ ನಡೆಸಿ ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಮತಗಳ್ಳತನಕ್ಕೆ ಸಂಬಂಧಿಸಿದ ಹಾಗೆ ನಾವು ಸಂಶೋಧನೆ ಮಾಡುತ್ತಿದ್ದೆವು. ಈಗ ಅದು ಸತ್ಯ ಎಂದು ಗೊತ್ತಾಗಿದೆ. ಹಾಗಾಗಿ ನಾವು ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ. ಎಂಬತ್ತು ಜನರು ಒಂದೇ ಕೊಠಡಿಯಲ್ಲಿ

ಬಾದಾಮಿಯಲ್ಲಿ ಮತ ಖರೀದಿ : ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ? Read More »

ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಬಾಗಲಕೋಟೆ: ಜೊತೆಯಲ್ಲಿ ಓದುವ ವಿದ್ಯಾರ್ಥಿಗಳ ರ್ಯಾಗಿಂಗ್‌ಗೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗುಳೇದಗುಡ್ಡ‌ದಲ್ಲಿ ‌ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ಬಿ.ಎ. ವಿದ್ಯಾರ್ಥಿನಿ ಅಂಜಲಿ ಮುಂಡಾಲಸ(21) ಎಂದು ಗುರುತಿಸಲಾಗಿದೆ. ಅಂಜಲಿಗೆ ಶುಕ್ರವಾರ ಸಹಪಾಠಿಗಳು ರ್ಯಾಗಿಂಗ್ ಮಾಡಿದ್ದರು. ಈ ವಿಷಯದಿಂದ ಅಂಜಲಿ ಬಹಳಷ್ಟು ನೊಂದಿದ್ದರು. ಮಾನಸಿಕ ಕಿರುಕುಳ ಅನುಭವಿಲಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುಳೇದಗುಡ್ಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ Read More »

ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ ಯೋಧ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಾಗರ: ಮೈಸೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಉಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಗಳೆಮನೆ ನಿವಾಸಿ ಅಗ್ನಿವೀರ ಯೋಧ ಮೃತಪಟ್ಟಿದ್ದಾರೆ. ಯೋಧ ಪ್ರಜ್ವಲ್ (21) ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ಇವರು ಅಗ್ನಿವೀರ್ ನೇಮಕಾತಿಯಡಿ ‌ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿಕ್ಕಿಂ‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವಾರವಷ್ಚೇ ರಜೆಯ ಕಾರಣಕ್ಕೆ ಊರಿಗೆ ಬಂದಿದ್ದರು. ಖಾಸಗಿ ಕೆಲಸದ ಕಾರಣದಿಂದ ಮೈಸೂರಿಗೆ ತೆರಳಿದ್ದ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರಜ್ವಲ್ ಮೃತದೇಹವನ್ನು ‌ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳ ಜೊತೆಗೆ

ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ ಯೋಧ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ Read More »

error: Content is protected !!
Scroll to Top