Uncategorized

ಧರ್ಮಸ್ಥಳ ದೂರುದಾರ ಹೇಳಿದಲ್ಲಿ ಶವಗಳು ಸಿಗದೇ ಹೋದರೆ ಆತನನ್ನೇ ನೇಣಿಗೆ ಹಾಕಿ: ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಪ್ರಸ್ತುತ SIT ಶೋಧಿಸಿದ ಸ್ಥಳಗಳಲ್ಲಿ ಅನಾಮಿಕ ದೂರುದಾರ ಹೇಳಿದ ಯಾವುದೇ ಕುರುಹುಗಳು ಸಿಗದೇ ಹೋದಲ್ಲಿ ಆತನನ್ನೇ ನೇಣಿಗೆ ಹಾಕಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು,‌ ಧರ್ಮಸ್ಥಳ ದೇಗುಲ ಮತ್ತು ಅಲ್ಲಿನ ಧರ್ಮಾಧಿಕಾರಿಗಳಿಗೆ ಯಾವುದೇ ಕಳಂಕ ಬಾಧಿಸಲು ಬಿಡುವುದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ. ಆದರೆ ಶವಗಳು ಸಿಗುತ್ತಿಲ್ಲ. ಒಂದು ವೇಳೆ ಈ ತನಿಖೆಯಲ್ಲಿ ದೂರುದಾರ ಹೇಳಿದಂತೆ ಶವಗಳು ದೊರೆಯದಲ್ಲಿ ಆತನನ್ನು ಸುಮ್ಮನೆ ಬಿಡಬಾರದು, […]

ಧರ್ಮಸ್ಥಳ ದೂರುದಾರ ಹೇಳಿದಲ್ಲಿ ಶವಗಳು ಸಿಗದೇ ಹೋದರೆ ಆತನನ್ನೇ ನೇಣಿಗೆ ಹಾಕಿ: ಬೇಳೂರು ಗೋಪಾಲಕೃಷ್ಣ Read More »

ಬಾಬಾ ಬುಡನ್ ದರ್ಗಾದಲ್ಲೂ SIT ಉತ್ಖನನ ನಡೆಸಲು ರಾಜ್ಯ ಸರ್ಕಾರಕ್ಕೆ ಆಗ್ರಹ

ಚಿಕ್ಕಮಗಳೂರು: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಆರೋಪದಡಿ ಧರ್ಮಸ್ಥಳದ ಸುತ್ತಮುತ್ತ SIT ತನಿಖೆ ನಡೆಯುತ್ತಿದ್ದು, ಇದೇ ರೀತಿಯಲ್ಲಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿಯೂ ಉತ್ಖನನ ಕಾರ್ಯ ನಡೆಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವಕ್ತಾರ ಸಿ.ಎಚ್. ಲೋಕೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ದತ್ತಪೀಠದ ಆವರಣದಲ್ಲಿ ಗೋರಿಗಳಿದ್ದು, ಇವು ನಕಲಿಯೋ ಅಸಲಿಯೋ ಎಂಬ ಬಗ್ಗೆ ಉತ್ಖನನ ನಡೆಸುವುದು ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರ SIT ರಚಿಸುವಂತೆಯೂ ಆಗ್ರಹಿಸಿದ್ದಾರೆ. ದತ್ತಪೀಠ ಹಿಂದೂಗಳ ಧಾರ್ಮಿಕ ಸ್ಥಳ. ಅಲ್ಲಿ

ಬಾಬಾ ಬುಡನ್ ದರ್ಗಾದಲ್ಲೂ SIT ಉತ್ಖನನ ನಡೆಸಲು ರಾಜ್ಯ ಸರ್ಕಾರಕ್ಕೆ ಆಗ್ರಹ Read More »

ನಟಿ ರನ್ಯಾ ರಾವ್ ಮಲತಂದೆ ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಕಡ್ಡಾಯ ರಜೆ ಆದೇಶ ಹಿಂಪಡೆದ ಸರ್ಕಾರ

ಬೆಂಗಳೂರು: ದುಬೈ‌ನಿಂದ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬಂಧನದಲ್ಲಿರುವ ನಟಿ ರನ್ಯಾ ರಾವ್ ಮಲ ತಂದೆ, ಪೊಲೀಸ್ ಮಹಾನಿರ್ದೇಶಕ ಕೆ. ರಾಮಚಂದ್ರ ರಾವ್ ಅವರ ಕಡ್ಡಾಯ ರಜೆ ಆದೇಶ ಹಿಂಪಡೆದಿರುವ ರಾಜ್ಯ ಸರ್ಕಾರ, ಅವರನ್ನು ಮರು ನೇಮಿಸಿ ಆದೇಶಿಸಿದೆ. ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ನಟಿ ರನ್ಯಾ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ರಾಮಚಂದ್ರ ರಾವ್ ಅವರ ಸಂಭಾವ್ಯ ಪಾತ್ರದ ತನಿಖೆ ಮಾಡಲು ಅವರನ್ನು ಮಾರ್ಚ್ 15 ರಂದು ಕಡ್ಡಾಯ

ನಟಿ ರನ್ಯಾ ರಾವ್ ಮಲತಂದೆ ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಕಡ್ಡಾಯ ರಜೆ ಆದೇಶ ಹಿಂಪಡೆದ ಸರ್ಕಾರ Read More »

ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕರ್ನಾಟಕ ಚುನಾವಣಾ ಆಯೋಗಕ್ಕೆ ಜೆಡಿಎಸ್ ನಿಯೋಗ ದೂರು ನೀಡಿದೆ. ದೂರಿನಲ್ಲಿ, ಕಾಂಗ್ರೆಸ್ ಮತಗಳ್ಳತನದ ಆರೋಪ ದಲ್ಲಿ ಪ್ರತಿಭಟನೆ ನಡೆಸಿದ್ದು ಈ ಆರೋಪ ಸುಳ್ಳು. ಹಾಗೆಯೇ ಚುನಾವಣಾ ಆಯೋಗದ ವಿರುದ್ದ ಮಾಡಿರುವ ಆರೋಪ ಸಹ ಹುರುಳಿಲ್ಲದ್ದು. ಆದ್ದರಿಂದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ನಿಯೋಗದಲ್ಲಿ ಜೆಡಿಎಸ್ ಎಂಎಲ್‌ಸಿ ಕೆ.ಎ. ತಿಪ್ಪೆರುದ್ರಸ್ವಾಮಿ, ಮುಖಂಡರಾದ ಜವರಾಯಿ ಗೌಡ, ಹೆಚ್. ಎನ್. ದೇವರಾಜ್ ಸೇರಿದಂತೆ ಇನ್ನಿತರರು ಇದ್ದರು

ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್ Read More »

ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ. ಮಾರಿಯೆಟ್ ಬಿ‌. ಎಸ್. ಭೇಟಿ

ಪುತ್ತೂರು: ಶತಮಾನದ ಸನಿಹದಲ್ಲಿರುವ ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ. ಮಾರಿಯೆಟ್ ಬಿ. ಎಸ್. ಭೇಟಿ ಕಾರ್ಯಕ್ರಮ ನಡೆಯಿತು. ಶಾಲಾ ನಾಯಕ ಆಕಾಶ್ ನೇತೃತ್ವದಲ್ಲಿ ಬ್ಯಾಂಡ್ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಬೆಥನಿ ಸಂಸ್ಥೆಯ ಜನರಲ್ ಪ್ರೊಕ್ಯುರೇಟರ್ ವೈಲೆಟ್ ಬಿ. ಎಸ್., ಶಾಲಾ ಸಂಚಾಲಕಿ ಪ್ರಶಾಂತಿ ಬಿ. ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಮೊಟ್ಟೆತಡ್ಕ ಉಪಸ್ಥಿತರಿದ್ದರು. ಶಾಲಾ

ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ. ಮಾರಿಯೆಟ್ ಬಿ‌. ಎಸ್. ಭೇಟಿ Read More »

‌ಮತಗಳ್ಳತನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ?

ಬೆಂಗಳೂರು: ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡುತ್ತಿದ್ದ ಸಚಿವ ಕೆ. ಎನ್. ರಾಜಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪ ಮಾಡಿದ್ದ ಸಂದರ್ಭದಲ್ಲಿ ರಾಜಣ್ಣ ಅವರು ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದರು. ಮತಗಳ್ಳತನ ನಡೆದದ್ದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೆ ಈಗ ಹೇಳುತ್ತಿರುವುದು ನಾಚಿಕೆಯ ‌ಸಂಗತಿ. ವೋಟರ್ ಲಿಸ್ಟ್ ಮಾಡಿದ್ದು ನಮ್ಮದೇ ‌ಸರ್ಕಾರ ಇದ್ದಾಗ. ಆಗೇನು ಕಣ್ಮುಚ್ಚಿ ಕುಳಿತಿದ್ದಿರಾ

‌ಮತಗಳ್ಳತನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ? Read More »

ಪದ್ಮಲತಾ ಪ್ರಕರಣ: ಮರುತನಿಖೆಗೆ ದೂರು ಸಲ್ಲಿಸಲು SIT ಕಚೇರಿಗೆ ಆಗಮಿಸಿದ ಸಹೋದರಿ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ‌ಪದ್ಮಲತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೋರಿ ಪದ್ಮಲತಾ ಸಹೋದರಿ SIT ಕಚೇರಿಗೆ ಆಗಮಿಸಿ, ದೂರು ಸಲ್ಲಿಸಲು ಮುಂದಾಗಿದ್ದಾರೆ. ಕಳೆದ 38 ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಆ ಸಂದರ್ಭದಲ್ಲಿ ತನಿಖೆ ಮಾಡಲಾಗಿದ್ದರೂ ಯಾವುದೇ ಪ್ರಮುಖ ಸಾಕ್ಷ್ಯ ದೊರೆಯದ ಹಿನ್ನೆಲೆ ಕೇಸ್ ಮುಚ್ಚಿ ಹೋಗಿತ್ತು. ಆ ಸಂದರ್ಭದಲ್ಲಿ ಪದ್ಮಲತಾ ಶವವನ್ನು ದಫನ ಮಾಡಲಾಗಿತ್ತು. CPIM ನಾಯಕ ಬಿ.ಎಂ. ಭಟ್ ಮತ್ತು ಇತರರ ಜೊತೆಗೆ ಪದ್ಮಲತಾ ಸಹೋದರಿ ಇಂದ್ರಾವತಿ

ಪದ್ಮಲತಾ ಪ್ರಕರಣ: ಮರುತನಿಖೆಗೆ ದೂರು ಸಲ್ಲಿಸಲು SIT ಕಚೇರಿಗೆ ಆಗಮಿಸಿದ ಸಹೋದರಿ Read More »

ಕೋಮುಸೌಹಾರ್ಧತೆಗೆ ಭಂಗ ತರುವ ಪೋಸ್ಟ್: ಪೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೋಮು ಸೌಹಾರ್ದತೆ ಕದಡುವಂತಹ ಸುಳ್ಳು ಸುದ್ದಿಗಳನ್ನು ಪೋಸ್ಟ್ ಹಾಕಿದ ಫೇಸ್‌ಬುಕ್ ಪೇಜ್ ‘ಭಾರತೀಯ ಸೇನೆ’ ಯ ನಿರ್ವಾಹಕರ ಮೇಲೆ ಸ್ವಯಂಪ್ರೇರಿತವಾಗಿ ‌ಪುತ್ತೂರು ನಗರ ಠಾಣೆಯ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಅಪರಾಧ ಸಂಖ್ಯೆ 70/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(1)(ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353(2) (ಸಾರ್ವಜನಿಕ ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಮುಸೌಹಾರ್ಧತೆಗೆ ಭಂಗ ತರುವ ಪೋಸ್ಟ್: ಪೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು Read More »

ಧರ್ಮಸ್ಥಳದ ಜೊತೆ ಇಡೀ ಜಗತ್ತು ಇದೆ: ಜನಾರ್ದನ ಪೂಜಾರಿ

ಉಳ್ಳಾಲ: ಕುದ್ರೋಳಿ ದೇವಸ್ಥಾನವನ್ನು ಸ್ಥಾಪಿಸಿದಾಗ ಎಷ್ಟು ಕಷ್ಚವಾಗಿದೆ ಎಂದು ನನಗೆ ಗೊತ್ತು. ಧರ್ಮಸ್ಥಳ ವಿಷಯದಲ್ಲೂ ಅದೇ ಕಷ್ಟ ಇದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ, ನಿಮ್ಮ ಜೊತೆಗೆ ದೇಶ ಮಾತ್ರವಲ್ಲ ಇಡೀ ಜಗತ್ತೇ ಇದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ. ಧರ್ಮಕ್ಕೆ ಚ್ಯುತಿ ಬಂದಾಗ ಜನಾರ್ದನ ಪೂಜಾರಿ ಅವರು ಸುಮ್ಮನೆ ಇರುವುದಿಲ್ಲ. ಎಲ್ಲರೂ ಪೂಜಾರಿ ಬಾಯಿ ಮುಚ್ಚಿದ್ದಾನೆ ಎಂದು ಹೇಳುತ್ತಾರೆ. ಆದರೆ ಧರ್ಮಕ್ಕೆ ಅಪಚಾರ ಆದಾಗ ಪೂಜಾರಿ ಮೌನವಾಗಿ ಇರುವುದಿಲ್ಲ ಎಂದು

ಧರ್ಮಸ್ಥಳದ ಜೊತೆ ಇಡೀ ಜಗತ್ತು ಇದೆ: ಜನಾರ್ದನ ಪೂಜಾರಿ Read More »

ಆರೋಪಕ್ಕೆ ದಾಖಲೆ ನೀಡಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೊಟೀಸ್

ನವದೆಹಲಿ: ಕರ್ನಾಟಕದ ಮಹಿಳೆಯೊಬ್ಬರು ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ದಾಖಲೆ ಸಲ್ಲಿಸುವಂತೆ ಚು. ಆಯೋಗ ರಾಗಾಗೆ ನೊಟೀಸ್ ನೀಡಿದೆ. ಈ ಆರೋಪ ಸುಳ್ಳು ಎಂಬುದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆರೋಪ ಮಾಡಿದ್ದ ರಾಹುಲ್ ಗಾಂಧಿ ಈ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ತೋರಿಸಿದ್ದ ದಾಖಲೆಗಳನ್ನು ನೀಡುವಂತೆ ಆಯೋಗ ತಿಳಿಸಿದೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸೇರಿದಂತೆ ಹಲವು

ಆರೋಪಕ್ಕೆ ದಾಖಲೆ ನೀಡಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೊಟೀಸ್ Read More »

error: Content is protected !!
Scroll to Top