ಶಬರಿಮಲೆ ಯಾತ್ರೆಗೆ ಸರ್ಕಾರದಿಂದ ಮಾನ್ಯತೆ ನೀಡಿದ ಶ್ರೀಲಂಕಾ
ಕೊಲಂಬೊ: ಶ್ರೀಲಂಕಾದ ಅಯ್ಯಪ್ಪ ಭಕ್ತರು ವಾರ್ಷಿಕ ತೀರ್ಥಯಾತ್ರೆಯನ್ನು ಶಬರಿಮಲೆಗೆ ಕೈಗೊಳ್ಳಬಹುದು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಶ್ರೀಲಂಕಾದ ಭಕ್ತರು ಸಹ ಅಯ್ಯಪ್ಪನನ್ನು ಆರಾಧಿಸುತ್ತಾರೆ. ಹಾಗೆಯೇ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಅಯ್ಯಪ್ಪ ಭಕ್ತರು ಪ್ರತಿ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಶಬರಿಮಲೆ ಯಾತ್ರೆಗೆ ಸರ್ಕಾರದ ಮಾನ್ಯತೆಯನ್ನು ಅಲ್ಲಿನ ಸರ್ಕಾರ ನೀಡಿರುವುದಾಗಿದೆ. ವರ್ಷದ ಪ್ರತಿ ನವೆಂಬರ್ ತಿಂಗಳಿನಿಂದ ಡಿಸೆಂಬರ್ ವರೆಗೆ ಮಂಡಲ ಪೂಜೆ ಮತ್ತು ಜನವರಿಯಲ್ಲಿ ಮರಕ ಸಂಕ್ರಮಣ ಶಬರಿಮಲೆಯಲ್ಲಿ ನಡೆಯುತ್ತದೆ.
ಶಬರಿಮಲೆ ಯಾತ್ರೆಗೆ ಸರ್ಕಾರದಿಂದ ಮಾನ್ಯತೆ ನೀಡಿದ ಶ್ರೀಲಂಕಾ Read More »










