Uncategorized

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಮೀನುಗಾರರಿಂದ ‌ರಕ್ಷಣೆ

ಮಂಗಳೂರು: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ನಡೆದಿದೆ. ಆತ್ಮಹತ್ಯಾ ಪಾಯಿಂಟ್ ಎಂದೇ ಗುರುತಿಸಲಾಗಿದೆ. ಸೇತುವೆಯ ತಡೆಬೇಲಿಗೆ ವಾಹನವೊಂದು ‌ಗುದ್ದಿದ ಪರಿಣಾಮ ಹಾನಿಯಾಗಿ ಕೆಲವು ದಿನಗಳಾಗಿದೆ. ಇಲ್ಲಿಂದಲೇ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ‌ತಿಳಿದು ಬಂದಿದೆ. ಅವರನ್ನು ಸಮೀಪದಲ್ಲೇ ಇದ್ದ ಮೀನುಗಾರರು ರಕ್ಷಿಸಿದ್ದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ‌ವ್ಯಕ್ತಿ ನಾಗುರಿ ಪ್ರದೇಶದವರಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಮೀನುಗಾರರಿಂದ ‌ರಕ್ಷಣೆ Read More »

ಅಕ್ರಮ ಸಂಬಂಧಕ್ಕೆ ಬಲಿಯಾದ ಮಹಿಳೆ: ಅನಾಥರಾದ ಪುಟಾಣಿ ಮಕ್ಕಳು

ಚಿಕ್ಕಬಳ್ಳಾಪುರ: ವಿವಾಹಿತ ಪ್ರಿಯತಮೆಗೆ ಚಾಕು ಚುಚ್ಚಿ ವ್ಯಕ್ತಿಯೊಬ್ಬ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತೇಜಸ್ವಿನಿ ಎಂಬಾಕೆಯೇ ‌ಮೃತ ದುರ್ದೈವಿ. ಕೌಟುಂಬಿಕ ಕಲಹದ ಹಿನ್ನೆಲೆ ಆಕೆ ತನ್ನ ಇಬ್ಬರು ಮಕ್ಕಳ ಜೊತೆಗೆ ಏಕಾಂಗಿ ಜೀವನ ನಡೆಸುತ್ತಿದ್ದಳು. ಇದೀಗ ಆಕೆಯ ಸಾವಿನಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಕೊಲೆಗಾರ ಆರೋಪಿಯನ್ನು ಸಂದೀಪ್ ಎಂದು ಗುರುತಿಸಲಾಗಿದೆ. ತೇಜಸ್ವಿನಿ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಅವರೇ ನೀಡಿದ ಕೋಣೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಸಾಕಿಕೊಂಡು ದಿನ ದೂಡುತ್ತಿದ್ದಳು. ಈ ವೇಳೆ ಸಂದೀಪ್ ಎಂಬಾತ ಆಕೆಯ ಜೊತೆ

ಅಕ್ರಮ ಸಂಬಂಧಕ್ಕೆ ಬಲಿಯಾದ ಮಹಿಳೆ: ಅನಾಥರಾದ ಪುಟಾಣಿ ಮಕ್ಕಳು Read More »

ಪರಿಶಿಷ್ಟ ಪಂಗಡಗಳ ಕಾಲನಿಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಅಶೋಕ್ ಕುಮಾರ್ ರೈ ಹರ್ಷ

ಪುತ್ತೂರು: ಸರ್ಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಶಿಷ್ಟ ಪಂಗಡ ಕಾಲನಿಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಶಾಸಕ ಅಶೋಕ್ ರೈ ಅವರು ಸಲ್ಲಿಸಿದ್ದ ಮನವಿಗೆ ‌ಸಕಾರಾತ್ಮಕ ಸ್ಪಂದನ ನೀಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಹುತೇಕ ಪ.ಪಂ. ಕಾಲೋನಿಗಳು ಅಭಿವೃದ್ಧಿಯಿಂದ ವಿಮುಖವಾಗಿವೆ. ಅಶೋಕ್ ರೈ ಅವರು ಚುನಾವಣಾ ಸಮಯದಲ್ಲಿ ಅವುಗಳ ಅಭಿವೃದ್ಧಿಯ ಭರವಸೆ ನೀಡಿದ್ದರು. ಈ ಹಿಂದೆಯೂ ಅವರು ಅಭಿವೃದ್ಧಿ ಮಾಡಲು ಅನುದಾನ ನೀಡಿದ್ದು, ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರ ಒಂದು ಕೋಟಿ ರೂ.

ಪರಿಶಿಷ್ಟ ಪಂಗಡಗಳ ಕಾಲನಿಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಅಶೋಕ್ ಕುಮಾರ್ ರೈ ಹರ್ಷ Read More »

ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ

ಧಾರ್: ಮಧ್ಯಪ್ರದೇಶದ ಭೋಜ್‌ಶಾಲಾ ಸಂಕೀರ್ಣದ ಒಳಗಿರುವ ಕಮಲ್ ಮೌಲಾ ‌ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳಿಂದ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ‌ವರದಿ ತಿಳಿಸಿದೆ. ಈ ವರದಿಯನ್ನು ರಾಜ್ಯ ಹೈಕೋರ್ಟ್‌ನ ಇಂದೋರ್ ಪೀಠಕ್ಕೂ ‌ಸಲ್ಲಿಕೆ ಮಾಡಲಾಗಿದ್ದು, ಅದರಲ್ಲಿ ಈ ಕಮಾಲ್ ಮೌಲಾ ಮಸೀದಿಯನ್ನು ಹಿಂದು ಸಮುದಾಯದ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಂ ಪಕ್ಷದವರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ. ವೈಜ್ಞಾನಿಕ ತನಿಖೆಗಳು, ಸಮೀಕ್ಷೆಗಳು ಮತ್ತು ಉತ್ಪನನಗಳು,

ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ Read More »

ಮಂಗಳೂರು ನಗರದಲ್ಲೂ ಚಿರತೆ ಓಡಾಟ!

ಜನವಸತಿ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಆತಂಕ ಮಂಗಳೂರು: ನಗರದ ಮರೋಳಿ ಮತ್ತು ಶಕ್ತಿನಗರ ಪರಿಸರದಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆಯೂ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಫೆಬ್ರವರಿ 17ರಿಂದ ಶಕ್ತಿನಗರ, ಮರೋಳಿ ಮತ್ತು ಹತ್ತಿರದ ರೈಲ್ವೆ ಹಳಿ ಬಳಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶಕ್ತಿನಗರದ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯು ಗೇಟ್ ಮೂಲಕ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಸತಿ

ಮಂಗಳೂರು ನಗರದಲ್ಲೂ ಚಿರತೆ ಓಡಾಟ! Read More »

ಬುಲೆಟ್‌ನಲ್ಲಿ ಜಾಲಿ ರೈಡ್‌ ಮಾಡುವಾಗ ಅಪಘಾತ : ಓರ್ವ ಯುವತಿ ಸಾವು, ಇನ್ನೋರ್ವ ಗಂಭೀರ

ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸುವಾಗ ಹಂಪ್‌ನಲ್ಲಿ ಪಲ್ಟಿ ಬೆಂಗಳೂರು : ಬುಲೆಟ್ ಬೈಕ್‌ನಲ್ಲಿ ಸ್ನೇಹಿತೆಯರಿಬ್ಬರು ಜಾಲಿ ರೈಡ್‌ ಮಾಡುವಾಗ ಅಪಘಾತ ಸಂಭವಿಸಿದ ಓರ್ವ ಯುವತಿ ಮೃತಪಟ್ಟು ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ಸಂಭವಿಸಿದೆ. ಬೈಕ್‌ ವೇಗವಾಗಿ ಚಲಾಯಿಸುವಾಗ ಹಂಪ್ಸ್ ಕಾಣದೆ ಬೈಕ್‌ ಪಲ್ಟಿಯಾಗಿ ಯುವತಿಯವರು ರಸ್ತೆಗೆ ಹಾರಿ ಬಿದ್ದಿದ್ದು, ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಈ ಅಪಘಾತ ನಡೆದಿದ್ದು, ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ ಎನ್ನಲಾಗಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ

ಬುಲೆಟ್‌ನಲ್ಲಿ ಜಾಲಿ ರೈಡ್‌ ಮಾಡುವಾಗ ಅಪಘಾತ : ಓರ್ವ ಯುವತಿ ಸಾವು, ಇನ್ನೋರ್ವ ಗಂಭೀರ Read More »

ಭೀಕರ ಅಪಘಾತ : ಮಗು ಸಹಿತ ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆಕೆರೆ ಸಮೀಪ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ

ಭೀಕರ ಅಪಘಾತ : ಮಗು ಸಹಿತ ನಾಲ್ವರು ಸ್ಥಳದಲ್ಲೇ ಸಾವು Read More »

ಮಂಗಳೂರು : ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಂದಲೇ ಕಾಪರ್‌ ಕೇಬಲ್‌ ಕಳವು

ಮಂಗಳೂರು: ಬಿಎಸ್​ಎನ್ಎಲ್​​​​​ ಕಚೇರಿಯ ಅಧಿಕಾರಿಗಳೇ 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಎಸ್‌ಎನ್‌ಎಲ್‌ ಅಸಿಸ್ಟೆಂಟ್​​ ಆಫೀಸ್​​ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜಾಯಿಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು : ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಂದಲೇ ಕಾಪರ್‌ ಕೇಬಲ್‌ ಕಳವು Read More »

ಭೀಕರ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು

ಕಾರು, ಕ್ಯಾಂಟರ್‌, ಬೈಕ್‌ ನಡುವೆ ಡಿಕ್ಕಿ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು, ಘಟನೆ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್

ಭೀಕರ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು Read More »

ಮಂಗಳೂರು: ಸಂಸದರ ಜೊತೆಗೆ ಪತ್ನಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡಿದ್ದ ಗಂಡನಿಗೆ ಜೈಲು ಶಿಕ್ಷೆ

ದಾಂಪತ್ಯ ವಿರಸದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಸಂಸದರ ಚಾರಿತ್ರ್ಯಹನನ ಮಾಡಿದ್ದ ಅಪರಾಧಿ ಮಂಗಳೂರು: ದಕ್ಷಿಣ ಕನ್ನಡದ ಮಾಜಿ ಸಂಸದರ ಜೊತೆಗೆ ತನ್ನ ಪತ್ನಿಗೆ ಸಂಬಂದ ಕಲ್ಪಿಸಿ ಅಪಪ್ರಚಾರ ಮಾಡಿದ್ದ ದುಷ್ಟ ಪತಿಗೆ ಮಂಗಳೂರಿನ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಮುಂಬೈಯ ಮಿರಾರೋಡ್‌ ನಿವಾಸಿ ಸತೀಶ್‌ ಶೆಟ್ಟಿ ಶಿಕ್ಷೆಗೊಳಗಾದ ಅಪರಾಧಿ. ಸತೀಶ್‌ ಶೆಟ್ಟಿಗೆ ಪತ್ನಿ ಜೊತೆ ಮನಸ್ತಾಪ ಇತ್ತು. ಮಕ್ಕಳಾದ ಮೇಲೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ

ಮಂಗಳೂರು: ಸಂಸದರ ಜೊತೆಗೆ ಪತ್ನಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡಿದ್ದ ಗಂಡನಿಗೆ ಜೈಲು ಶಿಕ್ಷೆ Read More »

error: Content is protected !!
Scroll to Top