ರಾಜ್ಯ

ಬಾಲಿವುಡ್ ನಟಿ ಐಶ್ವರ್ಯಾ ರೈಯವರನ್ನು ಅವಮಾನಿಸಿದ ರಾಹುಲ್ ಗಾಂಧಿ | ಕಿಡಿ ಕಾರಿದ ಬಿಜೆಪಿ

ಹೊಸದಿಲ್ಲಿ: ಬಾಲಿವುಡ್ ಖ್ಯಾತ ನಟಿ ಕರ್ನಾಟಕದವರಾಗಿರುವ ಐಶ್ವರ್ಯಾ ರೈಯವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂದಿಸುವ ಮೂಲಕ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಈ ಕುರಿತು ಬಿಜೆಪಿ ರಾಹುಲ್ ವಿರುದ್ಧ ಕಿಡಿ ಕಾರಿದೆ. ಈ ವಿಚಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೂ ಟೀಕಾ ಪ್ರಹಾರ ಮಾಡಿದೆ. ಕನ್ನಡತಿಯೊಬ್ಬರಿಗೆ ನಿಮ್ಮ ಬಾಸ್ ಅವಮಾನ ಮಾಡುತ್ತಿರುವಾಗಲೂ ನಿಮ್ಮ ತಥಾಕಥಿತ ಕನ್ನಡದ ಹೆಮ್ಮೆಯ ಪ್ರಜ್ಞೆ ಜಾಗೃತವಾಗುತ್ತಿಲ್ಲವೇ ಎಂದು ಸಿದ್ಧರಾಮಯ್ಯನವರನ್ನು ಬಿಜೆಪಿ ಪ್ರಶ್ನಿಸಿದೆ. ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ […]

ಬಾಲಿವುಡ್ ನಟಿ ಐಶ್ವರ್ಯಾ ರೈಯವರನ್ನು ಅವಮಾನಿಸಿದ ರಾಹುಲ್ ಗಾಂಧಿ | ಕಿಡಿ ಕಾರಿದ ಬಿಜೆಪಿ Read More »

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ | ಸುತ್ತೋಲೆ ಹೊರಡಿಸಿದ ಸರಕಾರ | ಪ್ರಿಂಟ್ ಮಿಸ್ಟೆಕ್ ಎಂದು ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಇನ್ನುಮುಂದೆ ಕಡ್ಡಾಯವಲ್ಲ. ಹೀಗೊಂದು ಸುತ್ತೋಲೆಯನ್ನು ರಾಜ್ಯ ಸರಕಾರ ಫೆ.16 ರಂದು ಹೊರಡಿಸಿದೆ. ಈ ನಡುವೆ ರಾಜ್ಯ ಸರಕಾರದ ವಿರುದ್ಧ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯಲ್ಲಿ ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1 ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ | ಸುತ್ತೋಲೆ ಹೊರಡಿಸಿದ ಸರಕಾರ | ಪ್ರಿಂಟ್ ಮಿಸ್ಟೆಕ್ ಎಂದು ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ Read More »

ಕುಮ್ಕಿ ಭೂಮಿಯನ್ನು ಅಕ್ರಮ-ಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ | ಅಧಿವೇಶನದಲ್ಲಿ ಮನವಿ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಟ್ಟಾ ಕೃಷಿ ಭುಮಿಗೆ ಹೊಂದಿಕೊಂಡು ಸುಮಾರು 90 ಮೀಟರ್ ತನಕ ಅಥವಾ ನಾಲ್ಕೂವರೆ ಸಂಕೋಲೆ ಜಾಗವನ್ನು ಕುಮ್ಕಿ ಎಂಬ ಕಾರಣಕ್ಕೆ ರೈತರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ, ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಅವಕಾಶ ನೀಡುವಂತೆ ಶಾಸಕ ಅಶೋಕ್ ರೈ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ದ. ಕ. ಹಾಗೂ ಉಡುಪಿ ಜಿಲ್ಲೆಯ ಕೃಷಿಕರು ತಮ್ಮ ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ ಹಲವಾರು ವರ್ಷದಿಂದ

ಕುಮ್ಕಿ ಭೂಮಿಯನ್ನು ಅಕ್ರಮ-ಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ | ಅಧಿವೇಶನದಲ್ಲಿ ಮನವಿ ಮಾಡಿದ ಶಾಸಕ ಅಶೋಕ್ ರೈ Read More »

ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್‌ ಮೀಡಿಯಾ ಕೋ-ಕನ್ವಿನರ್ ಆಗಿ ಅಕ್ಷಯ್‌ ರೈ ದಂಬೆಕಾನ ಆಯ್ಕೆ

ಬೆಂಗಳೂರು: ಪುತ್ತೂರು ಮೂಲದ ಅಕ್ಷಯ್‌ ರೈ ದಂಬೆಕಾನ ರವರು ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್‌ ಮೀಡಿಯಾ ಕೋ-ಕನ್ವಿನರ್ ಆಗಿ ಆಯ್ಕೆಯಾಗಿದ್ದಾರೆ.  ರಾಜ್ಯ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕರಾದ ಪ್ರಶಾಂತ್‌ ಮಾಕ್ನೂರುರವರು ಇಂದು ಘೋಷಿಸಿದ್ದಾರೆ, ಕಳೆದ ಹನ್ನೆರಡು ವರ್ಷಗಳ ಕಾಲ ಬಿಜೆಪಿ ಯುವಮೋರ್ಚಾದ ಮಂಡಲ ಜಿಲ್ಲೆ ಹಾಗೂ ರಾಜ್ಯದ ಹಲವಾರು ಜವಬ್ದಾರಿಯನ್ನು ನಿಭಾಯಿಸಿ,  ಬೆಂಗಳೂರು ಜಿಲ್ಲೆ ಖಜಾಂಜಿಯಾಗಿ ನಂತರ ರಾಜ್ಯದ ಕಾರ್ಯಕಾರಿಣಿ ಸದಸ್ಯರಾಗಿ ತದನಂತರ  ಮಾಧ್ಯಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಚುಣಾವಣೆಯ ತಮಿಳುನಾಡು ರಾಜ್ಯದ ವಿಧಾನ ಸಭಾ

ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್‌ ಮೀಡಿಯಾ ಕೋ-ಕನ್ವಿನರ್ ಆಗಿ ಅಕ್ಷಯ್‌ ರೈ ದಂಬೆಕಾನ ಆಯ್ಕೆ Read More »

ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಬಜೆಟ್ ನಲ್ಲಿ ಘೋಷಣೆ ಮಾಡಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಇಂದು ಘೋಷಿಸಿದ ಬಜೆಟ್‍ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಪ್ರಕಟಿಸಿದ್ದು ಈ ಮೂಲಕ ದಶಕಗಳ ಕನಸು ನನಸಾಗಿದೆ. ದಾವಣಗೆರೆಯಲ್ಲಿ ಇದೇ ಫೆ.3&4 ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಯೋಜಿಸಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಡೇರಿಸಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಧನ್ಯವಾದ ಸಲ್ಲಿಸಿದ್ದಾರೆ. ಬಸ್ ಪಾಸ್ ಬೇಡಿಕೆ ಈಡೇರಿಸಲು ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಹಂತದಲ್ಲಿಯೂ ಸಹಕಾರ

ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಬಜೆಟ್ ನಲ್ಲಿ ಘೋಷಣೆ ಮಾಡಿದ ಸಿಎಂ ಸಿದ್ಧರಾಮಯ್ಯ Read More »

ಬಿಜೆಪಿ ನಾಯಕರನ್ನು ಗೂಂಡಾಗಳು ಎಂದ ಸಿಎಂ. ಸಿದ್ಧರಾಮಯ್ಯ | ಭಾರೀ ಆಕ್ರೋಶ

ಬೆಂಗಳೂರು: ಬಿಜೆಪಿ ನಾಯಕರನ್ನು ಗೂಂಡಾಗಳು ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಈ ಪದ ಬಳಸಿದ ಕುರಿತು ಮಾತನಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಗೂಂಡಾಗಿರಿ ಮಾಡ್ತೀರಾ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾಲ್ಕೈದು ನಿಮಿಷದಲ್ಲಿ ಉತ್ತರಿಸಬಹುದಾಗಿದ್ದ ಪ್ರಶ್ನೆಗೆ ಸಿಎಂ ಸಿದ್ಧರಾಮಯ್ಯ ಉತ್ತರಿಸುವಾಗ ಗಂಟೆಗಟ್ಟಲೆ ಕೇಂದ್ರವನ್ನು ಟೀಕಿಸಿ ಆಕ್ಷೇಪ ವ್ಯಕ್ತಪಡಿಸಿದರು. ಅವರು ಉತ್ತರಿಸುವ ಬದಲು ಎಲ್ಲಾ ಪ್ರತಿಪಕ್ಷದ ಸದಸ್ಯರನ್ನು ಗೂಂಡಾಗಳು ಎಂದು

ಬಿಜೆಪಿ ನಾಯಕರನ್ನು ಗೂಂಡಾಗಳು ಎಂದ ಸಿಎಂ. ಸಿದ್ಧರಾಮಯ್ಯ | ಭಾರೀ ಆಕ್ರೋಶ Read More »

ಉಡುಪಿ ಕ್ಷೇತ್ರ ನನ್ನದೇ, ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ| ಬದಲಾವಣೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ ಸಚಿವೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಈ ಕ್ಷೇತ್ರ ನನ್ನದೇ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳುವ ಮೂಲಕ ಕ್ಷೇತ್ರದ ಟಿಕೇಟ್ ಬೇರೆಯವರಿಗೆ ಕೊಡುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಕನಿಷ್ಠ 5-6 ಕ್ಷೇತ್ರಗಳು ನನ್ನ ಹೆಸರನ್ನು ಹೇಳುತ್ತಿವೆ. ಆದರೆ ಉಡುಪಿ- ಚಿಕ್ಕಮಗಳೂರು ನನ್ನ ಕ್ಷೇತ್ರ. ಈ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು. ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ. ಉಡುಪಿ-ಚಿಕ್ಕಮಗಳೂರು

ಉಡುಪಿ ಕ್ಷೇತ್ರ ನನ್ನದೇ, ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ| ಬದಲಾವಣೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿದ ಸಚಿವೆ Read More »

ಆರೋಗ್ಯ ವ್ಯತ್ಯಯ | ಮಾಜಿ ಪ್ರಧಾನಿ ದೇವೇಗೌಡರು ಆಸ್ಪತ್ರೆಗೆ ದಾಖಲು !

ಮಂಗಳೂರು : ಆರೋಗ್ಯ ವ್ಯತ್ಯಗೊಂಡ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಚ್,ಡಿ ದೇವೇಗೌಡರನ್ನು ದಾಖಲು ಮಾಡಲಾಗಿದೆ ಎನ್ನಲಾಗಿದೆ. ದೇವೇಗೌಡರಿಗೆ ಗುರುವಾರ ಬೆಳಿಗ್ಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂಬ

ಆರೋಗ್ಯ ವ್ಯತ್ಯಯ | ಮಾಜಿ ಪ್ರಧಾನಿ ದೇವೇಗೌಡರು ಆಸ್ಪತ್ರೆಗೆ ದಾಖಲು ! Read More »

ಎಚ್‍. ಎಸ್‍. ಆರ್‍. ಪಿ. ನಂಬರ್ ಪ್ಲೇಟ್ ಅಳವಡಿಕೆ ಅವಧಿ ಮೂರು ತಿಂಗಳು ವಿಸ್ತರಣೆ | ವಾಹನ ಮಾಲಕರಿಗೆ ಗುಡ್ ನ್ಯೂಸ್

ಮಂಗಳೂರು: ಫೆ.17 ರಂದು ವಾಹನಗಳಿಗೆ ಹೆಚ್. ಎಸ್. ಆರ್. ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರಕಾರ ಗಡುವು ನೀಡಿದ್ದು, ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನಂಬ‌ರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿಸಿದ್ದ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬ‌ರ್ ಪ್ಲೇಟ್ (HSRP) ಅವಳಡಿಕೆ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಫೆಬ್ರವರಿ 17 ರೊಳಗೆ ಹೆಚ್. ಎಸ್. ಆ‌ರ್. ಪಿ

ಎಚ್‍. ಎಸ್‍. ಆರ್‍. ಪಿ. ನಂಬರ್ ಪ್ಲೇಟ್ ಅಳವಡಿಕೆ ಅವಧಿ ಮೂರು ತಿಂಗಳು ವಿಸ್ತರಣೆ | ವಾಹನ ಮಾಲಕರಿಗೆ ಗುಡ್ ನ್ಯೂಸ್ Read More »

ಇಬ್ಬರ ಸಾವಿಗೆ ಕಾರಣವಾದ ರಸ್ತೆ ಅಪಘಾತ | ಒಬ್ಬರು ಅಪಘಾತದಿಂದ ಮೃತಪಟ್ಟರೆ, ಇನ್ನೊಬ್ಬರು ಮನನೊಂದು ಆತ್ಮಹತ್ಯೆ

ಮಡಿಕೇರಿ: ರಸ್ತೆ ಅಪಘಾತವೊಂದು ಇಬ್ಬರ ಸಾವಿಗೆ ಕಾರಣವಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಎರಡು ಬೈಕ್‍ಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24) ಮೃತಪಟ್ಟರೆ, ಅಪಘಾತದಿಂದ ನೊಂದು ಅಪಘಾತವೆಸಗಿದ ಇನ್ನೊಂದು ಬೈಕ್ ಸವಾರ ಹೆಚ್‍. ಡಿ. ತಮ್ಮಯ್ಯ (57) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿಯ ಚೈನ್ ಗೇಟ್ ಬಳಿ ಅಪಘಾತ ಸಂಭವಿಸಿತ್ತು. ವಿದ್ಯಾರ್ಥಿ ಧನಲ್ ಸುಬ್ಬಯ್ಯ ಹಾಗೂ ಹೆಚ್. ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದವು. ಅಪಘಾತದಲ್ಲಿ ಧನಲ್

ಇಬ್ಬರ ಸಾವಿಗೆ ಕಾರಣವಾದ ರಸ್ತೆ ಅಪಘಾತ | ಒಬ್ಬರು ಅಪಘಾತದಿಂದ ಮೃತಪಟ್ಟರೆ, ಇನ್ನೊಬ್ಬರು ಮನನೊಂದು ಆತ್ಮಹತ್ಯೆ Read More »

error: Content is protected !!
Scroll to Top