ರಾಜ್ಯ

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು

ನಕಲಿ ಸರ್ಟಿಫಿಕೆಟ್‌ ಮೂಲಕ ಲಾಯರ್‌ ಡಿಗ್ರಿ ಪಡೆದಿರುವುದು ಬಯಲು ಬೆಂಗಳೂರು : ಪ್ರಸ್ತುತ ಬಿಗ್‌ಬಾಸ್‌ ಸ್ಪರ್ಧಿಯಾಗಿರುವ ವಕೀಲ ಕೆ.ಎನ್‌.ಜಗದೀಶ್‌ ನಕಲಿ ಪ್ರಮಾಣಪತ್ರದ ಮೂಲಕ ಲಾಯರ್‌ ಡಿಗ್ರಿ ಪಡೆದುಕೊಂಡಿರುವ ವಂಚನೆ ಬೆಳಕಿಗೆ ಬಂದ ಬಳಿಕ ಬಾರ್‌ ಕೌನ್ಸಿಲ್‌ ಅವರನ್ನು ಅಮಾನ್ಯಗೊಳಿಸಿದೆ. ಇನ್ನು ಮುಂದೆ ಜಗದೀಶ್‌ ಕರಿಕೋಟು ಹಾಕಿಕೊಂಡು ಕೋರ್ಟ್‌ನಲ್ಲಿ ವಾದ ಮಾಡುವಂತಿಲ್ಲ.ವಕೀಲಿಕೆಯಿಂದ ಹೆಚ್ಚಾಗಿ ತನ್ನ ಅತಿರೇಕದ ವರ್ತನೆ ಮತ್ತು ವಿವಾದಗಳಿಂದಲೇ ಪ್ರಸಿದ್ಧಿಗೆ ಬಂದಿದ್ದ ಜಗದೀಶ್‌ ಅವರನ್ನು ಇದೇ ಮಾನದಂಡದ ಮೇಲೆ ಈ ಸಲ ಬಿಗ್‌ಬಾಸ್‌ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. […]

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು Read More »

ಸಾವರ್ಕರ್‌ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು : ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು ಮತ್ತು ಮಾಂಸಹಾರ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಾಹ್ಮಣ ಸಮುದಾಯದ ಸಾವರ್ಕರ್ ಮಾಂಸ ಸೇವಿಸುತ್ತಿದ್ದರು.‌ ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಸ್ಟ್‌ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು

ಸಾವರ್ಕರ್‌ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು : ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ Read More »

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ

ಸಾಹಿತಿ ಹಂಪನಾ ಅವರಿಂದ ಉತ್ಸವಗಳ ವಿಧ್ಯುಕ್ತ ಉದ್ಘಾಟನೆ, ಪುಷ್ಪಾರ್ಚನೆ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಇಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಉದ್ಘಾಟಿಸಿದರು. ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳಗ್ಗೆ 9.29ಕ್ಕೆ ಶುಭ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತವಾಗಿದೆ. ಇದು ಅರಮನೆ ಹಬ್ಬವಲ್ಲ. ಜನರ ಆರಿಸಿದ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ Read More »

50 ಕೋ.ರೂ. ಕೊಡಲು ಧಮಕಿ : ಕುಮಾರಸ್ವಾಮಿ ವಿರುದ್ಧ ದೂರು

ಚನ್ನಪಟ್ಟಣ ಉಪಚುನಾವಣೆಗೆ ಹಣ ಹೊಂದಿಸಿಕೊಡಲು ಜೀವ ಬೆದರಿಕೆ ಎಂದು ಆರೋಪ ಬೆಂಗಳೂರು: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪರಿಷತ್‌ ಸದಸ್ಯ ರಮೇಶ್ ಗೌಡ 50 ಕೋ.ರೂ.ಗೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್‌ ನಾಯಕ ವಿಜಯ್‌ ಟಾಟಾ ಎಂಬವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವಿಜಯ್ ಟಾಟಾ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷರಾಗಿದ್ದಾರೆ.ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ

50 ಕೋ.ರೂ. ಕೊಡಲು ಧಮಕಿ : ಕುಮಾರಸ್ವಾಮಿ ವಿರುದ್ಧ ದೂರು Read More »

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ : ಎಪಿಎಂಸಿಯಿಂದ 12 ಟನ್‌ ವಶ

ವಿಪರೀತ ಬೆಲೆ ಏರಿಕೆ ಪರಿಣಾಮ ಕಳ್ಳದಾರಿಯ ಮೂಲಕ ಬರುತ್ತಿದೆ ಚೀನದ ಬೆಳ್ಳುಳ್ಳಿ ಉಡುಪಿ: ನಿಷೇಧಿತ ಚೀನ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಗುಣಮಟ್ಟದ ಶಂಕೆ ಹಿನ್ನೆಲೆಯಲ್ಲಿ 12 ಟನ್ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ.ನಗರಸಭೆ ಕಮಿಷನರ್ ರಾಯಪ್ಪ ನೇತೃತ್ವದ ತಂಡ ಮತ್ತು ಎಪಿಎಂಸಿ ಅಧಿಕಾರಿಗಳು ದಾಳಿ ನಡೆಸಿ ಚೀನ ಬೆಳ್ಳುಳ್ಳಿ ದಾಸ್ತಾನು ಪರಿಶೀಲಿಸಿದರು. ಚೀನ ಬೆಳ್ಳುಳ್ಳಿಯಲ್ಲಿ ಅತಿಯಾದ ಕೀಟನಾಶಕ ಅಂಶ ಇರುವುದರಿಂದ ಭಾರತ ಸರ್ಕಾರ

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ : ಎಪಿಎಂಸಿಯಿಂದ 12 ಟನ್‌ ವಶ Read More »

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ

ಗನ್‌ಮ್ಯಾನ್‌ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ ಬೆಂಗಳೂರು : ಕಿತ್ತೂರು ಉತ್ಸವದ ಉದ್ಘಾಟಿಸುವ ವೇಳೆ ಜ್ಯೋತಿ ಬೆಳಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿ ತಾಗಿ ತುಸು ಹೊತ್ತು ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬಟ್ಟೆಗೆ ಬೆಂಕಿ ಹತ್ತಿಕೊಂಡಿರುವುದನ್ನು ಕಂಡ ಗನ್‌ಮ್ಯಾನ್​ ಕೂಡಲೇ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ, ಕಿತ್ತೂರು

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ Read More »

ದಿಢೀರ್‌ ಎಂದು ಗಗನಮುಖಿಯಾದ ತೆಂಗಿನಕಾಯಿ ಬೆಲೆ : ಹಬ್ಬದ ಸಮಯದಲ್ಲಿ ಜನ ಕಂಗಾಲು

ತೆಂಗಿನೆಣ್ಣೆ ಬೆಲೆಯಲ್ಲಿ 100 ರೂ. ಏರಿಕೆ ಪುತ್ತೂರು: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈಗ ತೆಂಗಿನಕಾಯಿ ಕೂಡ ಶಾಕ್‌ ಕೊಡಲಾರಂಭಿಸಿದೆ. ಟೊಮೆಟೊ, ಈರುಳ್ಳಿ, ತರಕಾರಿ, ಅಡುಗೆ ಎಣ್ಣೆ, ಹೂ, ಹಣ್ಣು… ಹೀಗೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೇ ಏರುತ್ತಲೇ ಇದೆ. ಇದರ ಜೊತೆಗೆ ಈಗ ತೆಂಗಿನಕಾಯಿ ಕೂಡ ಸೇರಿಕೊಂಡಿದೆ. ಅದರಲ್ಲೂ ಸಾಲು ಸಾಲು ಹಬ್ಬಗಳು ಬರುತ್ತಿರುವಾಗಲೇ ತೆಂಗಿನಕಾಯಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿರುವುದು ಜನರ ಕೈಸುಡಲಾರಂಭಿಸಿದೆ. ಕರಾವಳಿ ಭಾಗದಲ್ಲಿ ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು.

ದಿಢೀರ್‌ ಎಂದು ಗಗನಮುಖಿಯಾದ ತೆಂಗಿನಕಾಯಿ ಬೆಲೆ : ಹಬ್ಬದ ಸಮಯದಲ್ಲಿ ಜನ ಕಂಗಾಲು Read More »

ಸಿದ್ದರಾಮಯ್ಯನವರಿಗೆ ತಿಳಿಸದೆ ಮುಡಾ ಸೈಟ್‌ ಹಿಂದಿರುಗಿಸುವ ನಿರ್ಧಾರ ಕೈಗೊಂಡ ಪತ್ನಿ ಪಾರ್ವತಿ

ಭಾರಿ ಸಂಚಲನ ಸೃಷ್ಟಿಸಿದ ಪಾರ್ವತಿ ಸಿದ್ದರಾಮಯ್ಯನವರ ಭಾವನಾತ್ಮಕ ಪತ್ರ ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ಕೇಸ್‌ಗಳು ದಾಖಲಾಗಿರುವಂತೆಯೇ ಈ ಹಗರಣ ಹಠಾತ್‌ ತಿರುವು ಪಡೆದುಕೊಂಡಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಪತಿಗೆ ತಿಳಿಸದೆಯೇ ತನ್ನ ಹೆಸರಿಗೆ ಮಂಜೂರಾಗಿದ್ದ ಎಲ್ಲ 14 ನಿವೇಶನಗಳನ್ನು ಮುಡಾಕ್ಕೆ ಮರಳಿಸಲು ನಿರ್ಧರಿಸಿದ್ದು, ಈ ಕುರಿತು ಅವರು ಬರೆದಿರುವ ಪತ್ರ ಸಂಚಲನ ಉಂಟು ಮಾಡಿದೆ. ತಾನೂ ಯಾರಲ್ಲೂ ಚರ್ಚಿಸದೆ ಅತ್ಮಸಾಕ್ಷಿ ಪ್ರಕಾರ ಸೈಟ್‌ಗಳನ್ನು ವಾಪಸ್‌ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ

ಸಿದ್ದರಾಮಯ್ಯನವರಿಗೆ ತಿಳಿಸದೆ ಮುಡಾ ಸೈಟ್‌ ಹಿಂದಿರುಗಿಸುವ ನಿರ್ಧಾರ ಕೈಗೊಂಡ ಪತ್ನಿ ಪಾರ್ವತಿ Read More »

ಮುಡಾ ಹಗರಣ : ಇ.ಡಿ.ಯಿಂದ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲು

ಇ.ಡಿ.ಗಿದೆ ವಿಚಾರಣೆಗೆ ಕರೆಯುವ, ಬಂಧಿಸುವ ವಿಶೇಷಾಧಿಕಾರ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ನಾಲ್ವರ ವಿರುದ್ಧ ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌ (ಇಸಿಐಆರ್‌) ದಾಖಲಿಸಿಕೊಂಡಿದೆ. ಈಗಾಗಲೇ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಹಿತ ಕೆಲವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇದೀಗ ಇ.ಡಿ. ಕೂಡ ರಂಗ ಪ್ರವೇಶ ಮಾಡಿರುವುದರಿಂದ ಸಿದ್ದರಾಮಯ್ಯನವರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.ಮೈಸೂರು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರೂ

ಮುಡಾ ಹಗರಣ : ಇ.ಡಿ.ಯಿಂದ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲು Read More »

ಮುಡಾ ಹಗರಣ : ಇಂದಿನಿಂದ ತನಿಖೆ ಶುರು

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭ ಮಾಡಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೊದಲು ದೂರುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ. ಜೊತೆಗೆ ದೂರುದಾರರಿಂದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಸಂಗ್ರಹ ಮಾಡಲಿದ್ದಾರೆ.ಇನ್ನೊಂದೆಡೆ ನಿವೃತ್ತ ನ್ಯಾ. ದೇಸಾಯಿ ತನಿಖಾ ಸಮಿತಿ ಬಳಿಯಿರುವ ದಾಖಲೆ ಪಡೆಯಲು ಕಾನೂನು ಪ್ರಕ್ರಿಯೆ ಶುರುವಾಗಲಿದೆ. ಆ ದಾಖಲೆಗಳು ಸಿಕ್ಕ ನಂತರ ಆರೋಪಿಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ.ಮುಡಾ ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್

ಮುಡಾ ಹಗರಣ : ಇಂದಿನಿಂದ ತನಿಖೆ ಶುರು Read More »

error: Content is protected !!
Scroll to Top