ಧಾರ್ಮಿಕ

ಫೆ.14 : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಹಸ್ರ ಕುಂಕುಮಾರ್ಚನೆ ಸೇವೆ

ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ಸಹಸ್ರ ಕುಂಕುಮಾರ್ಚನೆ ಸೇವೆ ಫೆ.14 ಶುಕ್ರವಾರ ರಾತ್ರಿ 7.೦೦ ಗಂಟೆಗೆ ನಡೆಯಲಿದೆ. ಸರ್ವರ ಶ್ರೇಯೋಭಿವೃದ್ಧಿಗಾಗಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ರಾತ್ರಿ 7 ಗಂಟೆಗೆ ಸಹಸ್ರ ಕುಂಕುಮಾರ್ಚನೆ, 7.15 ರಿಂದ ಮಾತೆಯರಿಂದ ಲಲಿತ ಸಹಸ್ರನಾಮ ಪಾರಾಯಣ, 7.45 ಕ್ಕೆ ಭಜನೆ, 8.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಫೆ.14 : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಹಸ್ರ ಕುಂಕುಮಾರ್ಚನೆ ಸೇವೆ Read More »

ಫೆ.4 : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ

ಪುತ್ತೂರು: ನೆಹರುನಗರದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ  ವಾರ್ಷಿಕ ಜಾತ್ರೋತ್ಸವ ಫೆ.4 ಶನಿವಾರ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ  9.00 ಕ್ಕೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ, 11.30. ಕ್ಕೆ ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ರಾತ್ರಿ 7.30 ಕ್ಕೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡುವುದು. ರಾತ್ರಿ ಗಂಟೆ 9.30 ಕ್ಕೆ ಗೊಂದಳ ಪೂಜೆ, 12.00 ಕ್ಕೆ ಶ್ರೀ ಕಲ್ಕುಡ

ಫೆ.4 : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ Read More »

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು : ಪುತ್ತೂರಿನ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.೪ ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ವಿತರಣೆ ಮಂಗಳವಾರ ನಡೆಯಲಿದೆ. ನಗರದ ದರ್ಬೆಯಿಂದ ಬೊಳುವಾರು ತನಕ ನಡೆದ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದ್ದು, ಗ್ರಾಮಸ್ಥರು ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ Read More »

ಶ್ರೀ ಕುಕ್ಕುಮುಗೇರು ಉಳ್ಳಾಕುಲು ನೇಮೋತ್ಸವಕ್ಕೆ ಭಂಡಾರ ಆಗಮನ | ವೈಭವದಿಂದ ಸಾಗಿದ ಕೈಕಾರ ಶ್ರೀ ಕಿನ್ನಿಮಾಣಿ, ಮುಗೇರು ಕದಿಕೆ ಚಾವಡಿ ಶ್ರೀ ಪೂಮಾಣಿ ದೈವದ ಕಿರುವಾಳು ಭಂಡಾರ

ಪುತ್ತೂರು: ಒಳಮೊಗ್ರು ಗ್ರಾಮದ ರಾಜಮಾಡದಲ್ಲಿ ಜ. 30, 31ರಂದು ನಡೆಯಲಿರುವ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರದ ದೈವಗಳ ನೇಮೋತ್ಸವಕ್ಕೆ ಭಾನುವಾರ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ತೆರಳಿತು. ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು. ಸಂಜೆ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಮತ್ತು ಪರಿವಾರ ದೈವಗಳ

ಶ್ರೀ ಕುಕ್ಕುಮುಗೇರು ಉಳ್ಳಾಕುಲು ನೇಮೋತ್ಸವಕ್ಕೆ ಭಂಡಾರ ಆಗಮನ | ವೈಭವದಿಂದ ಸಾಗಿದ ಕೈಕಾರ ಶ್ರೀ ಕಿನ್ನಿಮಾಣಿ, ಮುಗೇರು ಕದಿಕೆ ಚಾವಡಿ ಶ್ರೀ ಪೂಮಾಣಿ ದೈವದ ಕಿರುವಾಳು ಭಂಡಾರ Read More »

ಇತಿಹಾಸ ಪ್ರಸಿದ್ಧ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಹೊನಲು ಬೆಳಕಿನ ಕಂಬಳ

ಪುತ್ತೂರು: ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳದ 30ನೇ ವರ್ಷದ ನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಂಬಳ ಕೂಟಕ್ಕೆ ಮೂರನೇ ತೀರ್ಪುಗಾರರಾಗಿ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಇತಿಹಾಸ ಪ್ರಸಿದ್ಧ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಹೊನಲು ಬೆಳಕಿನ ಕಂಬಳ Read More »

ತಿರುಪತಿ ಚಿನ್ನದ ಲೇಪನ ಕಾರ್ಯ ಮುಂದೂಡಿಕೆ

ಎರಡು ವರ್ಷದಲ್ಲಿ ಮುಗಿಸುವ ಸಲುವಾಗಿ ಜಾಗತಿಕ ಟೆಂಡರ್‌ ತಿರುಪತಿ: ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಚಿನ್ನದ ಲೇಪನದ ಕೆಲಸಕ್ಕಾಗಿ ಜಾಗತಿಕ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಸಮಯದೊಳಗೆ ಚಿನ್ನದ ಲೇಪನ ಕಾರ್ಯ ಮುಗಿಯುವಂತಾಗಲು ಮತ್ತು ಯಾವುದೇ ವಿಳಂಬ ತಪ್ಪಿಸುವ ಸಲುವಾಗಿ ಜಾಗತಿಕ ಟೆಂಡರ್‌ ಕರೆಯಲಾಗುತ್ತದೆ ಎಂದು ಟಿಟಿಡಿ ಆಡಳಿತ ಮಾಹಿತಿ ನೀಡಿದೆ.ಚಿನ್ನದ ಲೇಪನ ಕಾರ್ಯ ಗೋವಿಂದರಾಜ ಸ್ವಾಮಿ ಟೆಂಪಲ್‌ನಲ್ಲಿ ನಡೆಯಲಿದೆ. ತಿರುಮಲ ದೇಗುಲದಲ್ಲಿ ಈ

ತಿರುಪತಿ ಚಿನ್ನದ ಲೇಪನ ಕಾರ್ಯ ಮುಂದೂಡಿಕೆ Read More »

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ

ಪುತ್ತೂರು: ಯುವಿಕ ಪಟ್ಟೆ ಎಂಬ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಳ್ಳಲಾಗಿದೆ. ಬಿರಮಲೆ ಗುಡ್ಡದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಮಧ್ಯಾಹ್ನ ಮಗುವಿನ ಹುಟ್ಟುಹಬ್ಬವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ನಡೆಯಿತು. ಕೇಕ್ ಕತ್ತರಿಸಿ, ಮೊಂಬತ್ತಿ ಬೆಳಗಿಸಿ, ಪಾರ್ಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಇಂದಿನ ದಿನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮಗುವಿಗೆ ಹಾಗೂ ಜನರಿಗೆ ದೇಶಪ್ರೇಮದ ಪ್ರಜ್ಞೆ ಜಾಗೃತವಾಗಿಸಲು ಇದು ಸಹಕಾರಿಯಾಗಿದೆ. ಕುಟುಂಬ ಸದಸ್ಯರ

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ Read More »

ಪುತ್ತೂರು ದೇಗುಲದಲ್ಲಿ ಎಸ್.ಪಿ.ವೈ.ಎಸ್.ಎಸ್.ನಿಂದ 108 ಸೂರ್ಯ ನಮಸ್ಕಾರ

ಪುತ್ತೂರು: ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು. ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ರಾಮದಾಸ ಗೌಡ, ಸಮಿತಿಯ ಪ್ರಾಂತ ಸಂಚಾಲಕ ಹರೀಶ್, ಕಾರ್ಯಕ್ರಮ ಸಂಚಾಲಕ ರಾಮಚಂದ್ರ, ಸಮಿತಿಯ ಮಹಾಲಿಂಗೇಶ್ವರ ಶಾಖೆಯ ಮುಖ್ಯ ಶಿಕ್ಷಕಿ ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು. ಅ.ರಾ. ರಾಮಸ್ವಾಮಿ

ಪುತ್ತೂರು ದೇಗುಲದಲ್ಲಿ ಎಸ್.ಪಿ.ವೈ.ಎಸ್.ಎಸ್.ನಿಂದ 108 ಸೂರ್ಯ ನಮಸ್ಕಾರ Read More »

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಸಂಪ್ಯದಿಂದ ಕುಂಜೂರು ಪಂಜ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಕಾಮಗಾರಿಗೆ ಜ. 27ರಂದು ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ತಾಯಿಯ ಪಾತ್ರ ನಿರ್ವಹಿಸುತ್ತಾರೆ. ಹಲವು ಮಕ್ಕಳನ್ನು ತನ್ನ ಮಕ್ಕಳಂತೆ ಶಿಕ್ಷಕರು ಪೋಷಿಸುತ್ತಾರೆ, ಶಿಕ್ಷಣ ನೀಡುತ್ತಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪ್ರೋತ್ಸಾಹ ನೀಡುತ್ತಾ, ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವೂ ಶಾಲೆಗಳಲ್ಲಿ ಆಗುತ್ತದೆ ಎಂದರು.ಪ್ರೀತಮ್ ಪುತ್ತೂರಾಯ ಮಾತನಾಡಿ, ಮುಂದಿನ ಪೀಳಿಗೆಗೆ ಅನುಕೂಲ ಆಗುವಂತೆ ಕುಂಜೂರುಪಂಜದಿಂದ

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು Read More »

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು  ಹೊನಲು‌ ಬೆಳಕಿನ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಬೆಳಿಗ್ಗೆ ಚಾಲನೆ ನೀಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಿದ್ದರು. ಈ ಸಂದರ್ಭದಲ್ಲಿ  ಕಂಬಳ ಸಮಿತಿ ಗೌರವ

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ Read More »

error: Content is protected !!
Scroll to Top