ಧಾರ್ಮಿಕ

ಸೆ.10 : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ 27ನೇ ವರ್ಷದ ಮೊಸರು ಕುಡಿಕೆ ಉತ್ಸವ

ಶಾಂತಿಗೋಡು : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 27ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.10 ಭಾನುವಾರ ಶಾಂತಿಗೋಡು ಶಾಲಾ ವಠಾದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಂತಿಗೋಡು ಪ್ರಗತಿಪರ ಕೃಷಿಕ ಶಿವಪ್ಪ ಗೌಡ ಕಂರ್ಬಡ್ಕ ಉದ್ಘಾಟಿಸಲಿದ್ದು, ನರಿಮೊಗರು ಗ್ರಾಪಂ ಅಧ್ಯಕ್ಷೆ ಹರಿಣಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನರಿಮೊಗರು ಗ್ರಾಪಂ ಸದಸ್ಯರಾದ ನಾಗಮ್ಮ ಬಾಲಕೃಷ್ಣ ಗೌಡ ತೋಟ, ಆಶಾ ಸಚೀಂದ್ರ  ಬೊಳ್ಳೆಕ್ಕು. ಶಾಂತಿಗೋಡು ಶಾಲಾ […]

ಸೆ.10 : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ 27ನೇ ವರ್ಷದ ಮೊಸರು ಕುಡಿಕೆ ಉತ್ಸವ Read More »

ನರಿಮೊಗರು ಸರಸ್ವತಿ  ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ನರಿಮೊಗರು : ಜಗತ್ತು ತಾನು, ತನ್ನದು ಎಂಬ ಸ್ವಾರ್ಥದಲ್ಲಿ ಮುಳುಗಿರುವಾಗ ಪರಾರ್ಥಕ್ಕೋಸ್ಕರ ಬದುಕಿದ ಪುರುಷೋತ್ತಮ ಶ್ರೀ ಕೃಷ್ಣ ಭಗವಂತ,ಸೇವೆ ಎಂಬ ಮೌಲ್ಯವನ್ನು ಭಾರತೀಯರಲ್ಲಿ ತುಂಬಿದ. ಬೌದ್ಧಿಕ ಹಾಗೂ ಆಧ್ಯಾತ್ಮಿಕ ನಡೆಯನ್ನು ತನ್ನ ಬದುಕಿನಲ್ಲಿ ಬಾಳಿ ತೋರಿಸಿ ಆದರ್ಶವನ್ನು ತುಂಬಿದ ಎಂದು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಹೇಳಿದರು. ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿ ಇಂದಿಗೂ ಇತರರಿಗಾಗಿ ಮಿಡಿಯುವ ಹೃದಯಗಳಿದ್ದರೆ ಅದಕ್ಕೆ ಶ್ರೀ ಕೃಷ್ಣನ

ನರಿಮೊಗರು ಸರಸ್ವತಿ  ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ Read More »

ಸೆ.10 : ವೀರಮಂಗಲ  ಶ್ರೀಕೃಷ್ಣ ಕಲಾಕೇಂದ್ರದಿಂದ “ಶ್ರೀಕೃಷ್ಣ ಲೀಲೋತ್ಸವ”

ಪುತ್ತೂರು : ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀಕೃಷ್ಣ ಕಲಾ ಕೇಂದ್ರದ ವತಿಯಿಂದ 3ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವ ಸೆ.10 ಭಾನುವಾರ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರನಾಮಾರ್ಚನೆ, 9.30 ಕ್ಕೆ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, 10 ಕ್ಕೆ ನಡೆಯುವ ಮನರಂಜನಾ ಕಾರ್ಯಕ್ರಮವನ್ನು ವೀರಮಂಗಲ ಸ.ಹಿ.ಪ್ರಾ.ಶಾಲಾ ಸಹಶಿಕ್ಷಕಿ ಹರಿಣಾಕ್ಷಿ ಎಂ. ಉದ್ಘಾಟಿಸುವರು. 3.30 ಕ್ಕೆ ಗೋಪೂಜೆ, ಮುದ್ದುಕೃಷ್ಣ

ಸೆ.10 : ವೀರಮಂಗಲ  ಶ್ರೀಕೃಷ್ಣ ಕಲಾಕೇಂದ್ರದಿಂದ “ಶ್ರೀಕೃಷ್ಣ ಲೀಲೋತ್ಸವ” Read More »

ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ | ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು : ಭಗವಾನ್ ಶ್ರೀಕೃಷ್ಣನನ್ನು ನಾನಾ ನೆಲೆಯಿಂದ ಗುರುತಿಸುತ್ತಾ ಸಾಗುವುದಕ್ಕೆ ಸಾಧ್ಯವಿದೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದಿಂದ ತೊಡಗಿ ರಾಜತಾಂತ್ರಿಕ ವಿಚಾರಗಳವರೆಗೆ ಅಷ್ಟೂ ವಿಷಯಗಳಲ್ಲಿ ಶ್ರೀಕೃಷ್ಣ ನಮಗೆ ಮಾದರಿಯಾಗಿ ಕಾಣಿಸುತ್ತಾನೆ. ಆತನ ಒಂದೊಂದು ನಡೆಯ ಹಿಂದೆಯೂ ಒಂದೊಂದು ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಆತ ಕೃತಿಯ ಮೂಲಕ ತೋರಿಸಿದ್ದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಸಾಧ್ಯರಾದವರು ಆತನನ್ನು ಹೀಗಳೆಯುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದನ್ನು ಕಾಣಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.

ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ | ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಸೆ 6 : ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ, ಮುದ್ದುಕೃಷ್ಣ ಸ್ಫರ್ಧೆ

ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ ಹಾಗೂ ಕಾವು ಗೆಳೆಯರ ಬಳಗದ  ಪ್ರಾಯೋಜಕತ್ವದಲ್ಲಿ ಮುದ್ದು ಕೃಷ್ಣ ಸ್ಫರ್ಧೆ ಕಾವು  ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ 6  ರಂದು ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಅಟೋಟ ಕಾರ್ಯಕ್ರಮ ನಡೆಯಲಿದ್ದು ಪುರುಷರಿಗೆ ಕಬಡ್ಡಿ,ಹಗ್ಗ ಎಳೆಯುವುದು, ಚೆನ್ನಮಣೆ, ನಿಧಾನ ಬೈಕ್ ರೇಸ್, ಸೈಕಲ್ ರೇಸ್,

ಸೆ 6 : ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ, ಮುದ್ದುಕೃಷ್ಣ ಸ್ಫರ್ಧೆ Read More »

ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಶನ್ ಸೆಂಟರ್ ಶಾಲೆಯಲ್ಲಿ ಬಾಲ ಮುಕುಂದ ಕೃಷ್ಣವೇಷ ಸ್ಪರ್ಧೆ | ಮಕ್ಕಳೊಂದಿಗೆ ಸಂಭ್ರಮಿಸಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು : ಹಿನ್ನೆಲೆಯಲ್ಲಿ ಮಂಗಳೂರಿನ ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಷನ್ ಸೆಂಟರ್ (ಸಿಬಿಎಸ್ಇ) ಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ಬಾಲಮುಕುಂದ’ ಕೃಷ್ಣವೇಶ ಸ್ಪರ್ಧೆಯಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸಿದರು. ಬಿಜಿಎಸ್ ಕಾವೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದರು. ಪಾಲ್ಗೊಂಡ ಎಲ್ಲ ಮಕ್ಕಳಿಗೆ ನಾಲ್ಕು ಕೆಟಗೆರಿಯಲ್ಲಿ ಸ್ಪರ್ಧೆ ಮಾಡಿ ಪದಕ -ನಗದು ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಸಿಬಿಎಸ್ ಇ ಶಾಲೆಯ ಪ್ರಾಂಶುಪಾಲೆ ರೇಷ್ಮಾ ಸಿ ನಾಯರ್ , ಪ್ರಥಮ ದರ್ಜೆ

ಶ್ರೀ ಆದಿಚುಂಚನಗಿರಿ ಬಿಜಿಎಸ್ ಎಜ್ಯುಕೇಶನ್ ಸೆಂಟರ್ ಶಾಲೆಯಲ್ಲಿ ಬಾಲ ಮುಕುಂದ ಕೃಷ್ಣವೇಷ ಸ್ಪರ್ಧೆ | ಮಕ್ಕಳೊಂದಿಗೆ ಸಂಭ್ರಮಿಸಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

ಎಡನೀರು ಶ್ರೀ ಮಠದಲ್ಲಿ ತೃತೀಯ ಚಾತುರ್ಮಾಸ್ಯ | ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು: ಎಡನೀರು ಶ್ರೀ ಮಠದಲ್ಲಿ ಸಚ್ಚಿದಾನಂದ ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ ಅಂಗವಾಗಿ ಪುತ್ತೂರಿನಿಂದ ಶ್ರೀ ಮಠಕ್ಕೆ  ಹೊರೆಕಾಣಿಕೆ ಸೋಮವಾರ ಸಮರ್ಪಣೆಯಾಯಿತು. ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಹೊರೆಕಾಣಿಕೆ ವಾಹನಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭಲ್ಲಿ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಡಾ.ಭಾಸ್ಕರ್ ಎಸ್‍, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಕಾರ್ಯದರ್ಶಿ ಯು.ಪೂವಪ್ಪ, ಪ್ರಭಾಕರ ಮುಗೇರು, ಶರತ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು

ಎಡನೀರು ಶ್ರೀ ಮಠದಲ್ಲಿ ತೃತೀಯ ಚಾತುರ್ಮಾಸ್ಯ | ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ Read More »

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ : ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ

ಪುತ್ತೂರು: ನಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡಿದಾಗ ನಂಬಿಕೆಗೆ ಪುಷ್ಟಿ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲವನ್ನು ತಿಳಿದು ಬೆಳೆಸುವಲ್ಲಿ ಮಾಡುವ ಆಚರಣೆಗೆ ಅರ್ಥ ಬರುತ್ತದೆ. ಈ ಉದ್ದೇಶವಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಕೆಲಸ ಮಾಡುತ್ತಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಹೇಳಿದರು. ಅವರು ವಿಶ್ವ ಹಿಂದೂ ಪರಿಷತ್ ಹಾಗೂ ಮೊಸರು ಕುಡಿಗೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಅಂಗವಾಗಿ ದಿ.ನಿತಿನ್ ಕುಮಾರ್ ನಿಡ್ಪಳ್ಳಿ ಸ್ಮರಣಾರ್ಥ ಭಾನುವಾರ

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ : ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ Read More »

ಲೋಕಕಲ್ಯಾಣಾರ್ಥ, ಹಿಂದೂ ಬಾಂಧವರ ಏಕತೆಗಾಗಿ ಮನೆ ಮನೆಯಲ್ಲಿ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ” ಕ್ಕೆ ಚಾಲನೆ

ಪುತ್ತೂರು: ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಸೆ.24ರ ತನಕ ಭಕ್ತರು ಮನೆ ಮನೆಯಲ್ಲೇ ಮಾಡುವ ’ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ ಯಜ್ಞ’ ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.2 ರಂದು ಉದಯ ಕಾಲ 6.30 ಕ್ಕೆ ಸಂಕಲ್ಪದೊಂದಿಗೆ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಜಪ ಯಜ್ಞವನ್ನು ಉದ್ಘಾಟಿಸಿದಂತೆ ಇತರ ಕೇಂದ್ರಗಳಲ್ಲೂ ಜಪ ಯಜ್ಞ

ಲೋಕಕಲ್ಯಾಣಾರ್ಥ, ಹಿಂದೂ ಬಾಂಧವರ ಏಕತೆಗಾಗಿ ಮನೆ ಮನೆಯಲ್ಲಿ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ” ಕ್ಕೆ ಚಾಲನೆ Read More »

ಸೆ.7 : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ “ಶ್ರೀಕೃಷ್ಣ ಲೀಲೋತ್ಸವ”

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ “ಶ್ರೀ ಕೃಷ್ಣ ಲೀಲೋತ್ಸವ”ದ ಉದ್ಘಾಟನಾ ಸಮಾರಂಭ  ಸೆ.7 ಗುರುವಾರ ಬೆಳಿಗ್ಗೆ 9.30 ಕ್ಕೆ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿದೆ. ಕಾಯ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಜಯ್ ಕೃಷ್ಣ ತಂತ್ರಿ ಕೆಮ್ಮಿಂಜೆ ಸಮಾರಂಭ ಉದ್ಘಾಟಿಸಲಿದ್ದು, ಸಾಂದೀಪನಿ ಸಂಸ್ಥೆಯ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉದ್ಯಮಿ ಮೋಹನ್ ಬಾಬು ಜೆ., ಪುತ್ತೂರಿನ ಉದ್ಯಮಿ ಅಶ್ವಿನಿ ರಾಜೇಶ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ

ಸೆ.7 : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ “ಶ್ರೀಕೃಷ್ಣ ಲೀಲೋತ್ಸವ” Read More »

error: Content is protected !!
Scroll to Top