ಧಾರ್ಮಿಕ

ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ಕೆಳಗಿನಕೇರಿ ಕೊಪ್ಪದಲ್ಲಿ ಮಾ. 30ರಂದು ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ. ಮಾ. 29ರಂದು ರಾತ್ರಿ 8ಕ್ಕೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಮಾ. 30ರಂದು ಶ್ರೀ ಕ್ಷೇತ್ರ ಕೊಪ್ಪದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16ರಂದು ತೆಪ್ಪೋತ್ಸವ | ಏ. 8ರೊಳಗೆ ಪುಷ್ಕರಣಿಯ ಶಿಲಾಮಯ ಕಟ್ಟೆ ಅರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಏಪ್ರಿಲ್ 16ರಂದು ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ಆಗಮನವಾಗಿ, ಶ್ರೀ ಮಹಾಲಿಂಗೇಶ್ವರ ದೇವರ ತೆಪ್ಪೋತ್ಸವ ನಡೆಯಲಿದೆ. ಆದ್ದರಿಂದ ಈಗಾಗಲೇ ಕಾಮಗಾರಿ ಆರಂಭವಾಗಿರುವ ಪುಷ್ಕರಣಿಯ ನಡುವಿರುವ ಕಟ್ಟೆ ಸಮರ್ಪಣೆಗೊಳ್ಳಲೇಕು. ಹೌದು! ಏಪ್ರಿಲ್ 8ರೊಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪುಷ್ಕರಣಿಯ ಕಟ್ಟೆ ಅರ್ಪಣೆ ಆಗಲೇಬೇಕು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪುಷ್ಕರಣಿಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಇದಕ್ಕಾಗಿ ದೇವಸ್ಥಾನದ ಮಧ್ಯಭಾಗದಲ್ಲಿದ್ದ ಹಳೆ ದೇವರ ಕಟ್ಟೆಯನ್ನು ಈಗಾಗಲೇ ಸಂಪೂರ್ಣ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16ರಂದು ತೆಪ್ಪೋತ್ಸವ | ಏ. 8ರೊಳಗೆ ಪುಷ್ಕರಣಿಯ ಶಿಲಾಮಯ ಕಟ್ಟೆ ಅರ್ಪಣೆ Read More »

ಪಜಿರೋಡಿ ಮೊಗೇರ್ಕಳ ದೇವಸ್ಥಾನ, ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಶಾಂತಿಗೋಡು ಗ್ರಾಮದ ಪಜಿರೋಡಿ ಅದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಏ. 29ರಿಂದ ಮೇ 1ರವರೆಗೆ ನಡೆಯಲಿದ್ದು, ಮಾ. 29ರಂದು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ಏ. 29ರಿಂದ ಮೇ 1ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 29ರಂದು ಬೆಳಿಗ್ಗೆ 9.30ಕ್ಕೆ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪ್ರಮುಖರಾದ ಹೊನ್ನಪ್ಪ ಪೂಜಾರಿ ಕೈಂದಾಡಿ,

ಪಜಿರೋಡಿ ಮೊಗೇರ್ಕಳ ದೇವಸ್ಥಾನ, ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವದ ಆಮಂತ್ರಣ ಬಿಡುಗಡೆ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಇಂದಿನ ಕಾರ್ಯಕ್ರಮ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಬುಧವಾರದ ಕಾರ್ಯಕ್ರಮ ಈ ಕೆಳಗಿನಂತಿದೆ. ವೈದಿಕ ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ 5 ರಿಂದ ಉಷಃಪೂಜೆ, ಅಂಕುರ ಪೂಜೆ, ಮಹಾಗಣಪತಿ ಹೋಮ, ಸೃಷ್ಟಿತತ್ತ್ವ ಹೋಮ, ತತ್ತ್ವಕಲಶ ಪೂಜೆ, ತತ್ತ್ವಕಲಶಾಭಿಷೇಕ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 5 ರಿಂದ ದೀಪಾರಾಧನೆ, ಅಧಿವಾಸಹೋಮ, ಕಲಶಾಧಿವಾಸ, ಅಧಿವಾಸಬಲಿ, ಮಹಾಪೂಜೆ,

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಇಂದಿನ ಕಾರ್ಯಕ್ರಮ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು: ಏ.10 ರಿಂದ ನಡೆಯಲಿರುವ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಮಂಗಳವಾರ ನಡೆಯಿತು. ದರ್ಬೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬೊಳುವಾರಿನ ಆಂಜನೇಯ ಮಂತ್ರಾಲಯದ ಬಳಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್.ರಾವ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ Read More »

ತಿರುಪತಿ ತಿರುಮಲ ದೇವಸ್ಥಾನಂ ಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ

ತಿರುಪತಿ: ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 10ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಧಿಕಾರಿಗಳ ಚೌಕಾಶಿ ಬಳಿಕ 3 ಕೋಟಿ ರೂ ದಂಡ ಕಟ್ಟಲಾಗಿದೆ ಎಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಿಂದ ಟಿಟಿಡಿ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮತ್ತು ರಾಜ್ಯ ಸರ್ಕಾರವು ಎಫ್‌ಸಿಆರ್‌ಎ

ತಿರುಪತಿ ತಿರುಮಲ ದೇವಸ್ಥಾನಂ ಗೆ 3 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ Read More »

ಏ.4-5 : ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ, ನೇಮೋತ್ಸವ | ಗೊನೆ ಮುಹೂರ್ತ

ಪುತ್ತೂರು: ಶ್ರೀ ಕ್ಷೇತ್ರ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ, ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ನೇಮೋತ್ಸವ, ಸಾಮೂಹಿಕ ನಾಗತಂಬಿಲ ಏ.4 ಹಾಗೂ 5 ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಮಂಗಳವಾರ ನಡೆಯಿತು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ, ಮುಖ್ಯ ಪರಿಚಾರಕ ಬಾಲಕೃಷ್ಣ ಕೆ. ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜನಾರ್ದನ ಎ.ಹೇಮಳ, ಟ್ರಸ್ಟ್ ಅಧ್ಯಕ್ಷ ನಾರಾಯಣ ಕೋರ್ಜೆ, ಆಡಳಿತ ಮಂಡಳಿ ಸದಸ್ಯರಾದ ಜಯಾನಂದ

ಏ.4-5 : ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ, ನೇಮೋತ್ಸವ | ಗೊನೆ ಮುಹೂರ್ತ Read More »

ಗಂಗಮ್ಮ ತಾಯಿಗೆ ಪಂಜುರ್ಲಿ ದೈವದಂತೆ ಅಲಂಕಾರ : ಕರಾವಳಿಯಲ್ಲಿ ವಿರೋಧ

ಕಾಂತಾರ ಸಿನಿಮಾದ ಪ್ರಭಾವದಿಂದಲೇ ಇಷ್ಟೆಲ್ಲ ಅಪಸವ್ಯ ಅಗುತ್ತಿರುವುದು ಎಂದು ಆಕ್ರೋಶ ಮಂಗಳೂರು : ಕರಾವಳಿ ಹೊರತುಪಡಿಸಿ ಬೇರೆ ಎಲ್ಲೂ ದೈವಾರಾಧನೆಯ ಸಂಪ್ರದಾಯವಿಲ್ಲ. ಆದರೆ ಕಾಂತಾರ ಸಿನೆಮಾದ ಪ್ರಭಾವದಿಂದಾಗಿ ವಿವಿಧೆಡೆಯಲ್ಲಿ ದೈವರಾಧನೆ ಅಥವಾ ಅದನ್ನು ಹೋಲುವಂಥ ಆರಾಧನೆ ಮಾಡಿ ಜನರಿಗೆ ಮಂಕುಬುದ್ದಿ ಎರಚಲು ಯತ್ನಿಸುತ್ತಿರುವ ಘಟನೆಗಳು ಸಂಭವಿಸುತ್ತಿದ್ದು, ಇದನ್ನು ತುಳುನಾಡಿನವರು ಬಲವಾಗಿ ವಿರೋಧಿಸುತ್ತಿದ್ದಾರೆ.‘ಕಾಂತಾರ’ ಸಿನಿಮಾ ಬಿಡುಗಡೆ ಆದ ನಂತರ ಬಹಳಷ್ಟು ಜನರಿಗೆ ಕರಾವಳಿ ಸಂಸ್ಕೃತಿ, ಪಂಜುರ್ಲಿ ದೈವದ ಪರಿಚಯ ಆಯ್ತು. ಆದರೆ ಕೆಲವೆಡೆ ಇದಕ್ಕೆ ತದ್ವಿರುದ್ಧವಾಗಿ ಪಂಜುರ್ಲಿ ದೈವದ

ಗಂಗಮ್ಮ ತಾಯಿಗೆ ಪಂಜುರ್ಲಿ ದೈವದಂತೆ ಅಲಂಕಾರ : ಕರಾವಳಿಯಲ್ಲಿ ವಿರೋಧ Read More »

ಮಾ.2-3 : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ : ಗೊನೆ ಮುಹೂರ್ತ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶಾಂತಿಗೋಡು  ಮಾರ್ಚ್ 2 ಹಾಗೂ 3 ರಂದು ನಡೆಯಲಿರುವ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಮಾ 28 ಮಂಗಳವಾರ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ದೇವಸ್ಥಾನ ಅರ್ಚಕ ರಾಮಕೃಷ್ಣ ಭಟ್ ಗೊನೆಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶುಬ್ರಹ್ಮಣ್ಯ ತೋಲ್ಪಾಡಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೋನಪ್ಪ ಗೌಡ ಕೈಂಡಾಡಿ, ಸುಬ್ರಮಣ್ಯ ಹೆಬ್ಬಾರ್ ಸೇರಾಜೆ, ಬಾಬು ಗೌಡ ಕೈಂಡಾಡಿ, ವಿಶ್ವನಾಥ ಬಲ್ಯಾಯ ಮುಂದೋಡಿ, ಕೂಸಪ್ಪ

ಮಾ.2-3 : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ : ಗೊನೆ ಮುಹೂರ್ತ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಇಂದಿನ ಕಾರ್ಯಕ್ರಮ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಮಂಗಳವಾರದ ಕಾರ್ಯಕ್ರಮ ಈ ಕೆಳಗಿನಂತಿದೆ. ವೈದಿಕ ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ 5 ರಿಂದ ಉಷಃಪೂಜೆ, ಅಂಕುರ ಪೂಜೆ, ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಅನುಜ್ಞಾ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5 ರಿಂದ ದೀಪಾರಾಧನೆ, ತ್ರಿಕಾಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ರಿಂದ ಉಪ್ಪಿನಂಗಡಿ ರಾಮನಗರ ಶಾರದ ವನಿತಾ

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಇಂದಿನ ಕಾರ್ಯಕ್ರಮ Read More »

error: Content is protected !!
Scroll to Top