ಕುದ್ಮಾರು ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ | ಸಭಾ ಕಾರ್ಯಕ್ರಮ
ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ನಡೆಯಿತು. ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಕಳೆದ 48 ವರ್ಷಗಳಿಂದ ಬೈದೆರುಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದರ ಜತೆಗೆ ಊರಿನ ಎಲ್ಲಾ ಸಮುದಾಯದವರು ಕ್ಷೇತ್ರದ ಭಕ್ತರಾಗಿ ಕ್ಷೇತ್ರ ಅಭಿವೃದ್ಧಿಯಾಗಿದೆ. ತೊಂದರೆಗೊಳಗಾದವರಿಗೆ ಕೋಟಿ-ಚೆನ್ನಯರ ಅಭಯ ನೀಡಿದೆ. ಇಲ್ಲಿ ಬೇರೆ […]










