ಧಾರ್ಮಿಕ

ಮಾ.7 : ಮಂಚಿ ಪುಚ್ಚೆಕೆರೆ ಮನೆಯಲ್ಲಿ ನೇಮೋತ್ಸವ

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ಮನೆಯಲ್ಲಿ ಶ್ರೀ ರುದ್ರಾಂಡಿ ಧರ್ಮದೈವ, ಕಲ್ಲುರ್ಟಿ, ಪಂಜುರ್ಲಿ ಹಾಗೂ ರಾಹುಗುಳಿಗ ದೈವಗಳಿಗೆ ನೇಮೋತ್ಸವ ಸೇವೆ ಮಾ.7 ಗುರುವಾರ ರಾತ್ರಿ 8:30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪುಚ್ಚೆಕೆರೆ ಮನೆಯ ಸೀತಾರಾಮ ಗೌಡ ತಿಳಿಸಿದ್ದಾರೆ.

ಮಾ.7 : ಮಂಚಿ ಪುಚ್ಚೆಕೆರೆ ಮನೆಯಲ್ಲಿ ನೇಮೋತ್ಸವ Read More »

ಮಾ.8 : ಕಜೆಮೂಲೆ ಕುಟುಂಬಸ್ಥರ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ | ನೇಮೋತ್ಸವ

ಸುಳ್ಯ: ಕಜೆಮೂಲೆ ಕುಟುಂಬಸ್ಥರ ಭೂಮಿ ದೈವಗಳ ದೈವಸ್ಥಾನದಲ್ಲಿ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳಾದ ಕುಪ್ಪೆ ಪಂಜುರ್ಲಿ, ಪಾಷಾಣಮೂರ್ತಿ, ಗುಳಿಗ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ಮಾ.8 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30 ರಿಂದ ಗಣಪತಿ ಹೋಮ, ಶುದ್ಧಕಲಶ, ನಾಗ ತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7 ಕ್ಕೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30

ಮಾ.8 : ಕಜೆಮೂಲೆ ಕುಟುಂಬಸ್ಥರ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ | ನೇಮೋತ್ಸವ Read More »

ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಗೊನೆ ಮುಹೂರ್ತ

ಕೆದಿಲ: ಮಾ.11 ರಂದು ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ನೇಮೋತ್ಸವಕ್ಕೆ ಗೊನೆಮುಹೂರ್ತ ಸೋಮವಾರ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೈ ಕೃಷ್ಣ ಭಟ್ ಕೇಶವ ಕೃಪ ಮೀರಾವನರವರು ದೈವದ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗೊನೆ ಮುಹೂರ್ತ ನಡೆಯಿತು. ಅರ್ಚಕ ಈಶ್ವರ ಪ್ರಕಾಶ್ ಪಂಜಿಬಲ್ಲೆ ವೈದಿಕ ವಿಧಿ ವಿಧಾನ ನೆರವೇರಿಸಿದರು ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಕುಲಾಲ್ ಗಾನದಕೊಟ್ಯ, ಕುದುಂಬ್ಲಾಡಿ ಗುತ್ತು ಬಾಳಪ್ಪ ಗೌಡ,

ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಗೊನೆ ಮುಹೂರ್ತ Read More »

ಶ್ರೀ ಆದಿಚುಂಚನಗಿರಿ ಮಠಕ್ಕೆ ದ.ಕ.ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭೇಟಿ | ಆಶೀರ್ವಾದ ನೀಡಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಮಂಗಳೂರು: ದ.ಕ.ಜಿಲ್ಲೆ ಒಕ್ಕಲಿಗರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಸಂಘದ ಪದಾಧಿಕಾರಿಗಳನ್ನು ಶ್ರೀಗಳು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಡಾ. ಧರ್ಮ ಪಾಲನಾಥ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಶ್ರೀ ಆದಿಚುಂಚನಗಿರಿ ಮಠಕ್ಕೆ ದ.ಕ.ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭೇಟಿ | ಆಶೀರ್ವಾದ ನೀಡಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ Read More »

ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ ಇಂದು ರಾತ್ರಿ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳು ಅಗೇಲು ಸೇವೆ ನಡೆಯುತ್ತಿದ್ದು, ಪ್ರತೀ ದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ್ಣುಕಾಯಿ, ಊದುಬತ್ತಿ, ಕರ್ಪೂರ, ಸೀಯಾಳ, ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಮೃತ, ಕಲಶ, ಬೀಡ, ಚಕ್ಕುಲಿ, ಹೂವು, ಹಾಲು ಹಾಗೂ ಹರಿಕೆ ಸಂಬಂಧ

ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗಜ್ಜ ದೈವದ ವರ್ಷಾವಧಿ ಮತ್ತು ಹರಕೆ ನೇಮೋತ್ಸವ Read More »

ಮಾ.1-2 : ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ | ನವೀಕೃತ ರಂಗ ಮಂಟಪ ಉದ್ಘಾಟನೆ

ಪುತ್ತೂರು: ಮೂಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ದೈವಗಳ ನೇಮೋತ್ಸವ ಹಾಗೂ ನವೀಕೃತ ರಂಗ ಮಂಟಪದ ಉದ್ಘಾಟನೆ ಮಾ.1 ಹಾಗೂ 2 ರಂದು ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯವಾಗಿ ಮುಂಡೂರು ಹಾಗೂ ಕೆದಂಬಾಡಿ ಗ್ರಾಮಕ್ಕೊಳಪಟ್ಟ ದೇವಸ್ಥಾನ ಎರಡು ವರ್ಷಗಳ ಹಿಂದೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬಳಿಕದ ಜಾತ್ರೋತ್ಸವದಲ್ಲಿ

ಮಾ.1-2 : ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ | ನವೀಕೃತ ರಂಗ ಮಂಟಪ ಉದ್ಘಾಟನೆ Read More »

ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ | ಪೆರುವೋಡಿ ಜಾತ್ರೆ ವೇಳೆ ಮೇಲಿನ ಮುಕ್ಕೂರಿನಿಂದ ದೈವಗಳ ಭಂಡಾರ ಬಂದು ಶ್ರೀ ರಕ್ತೇಶ್ವರಿ-ಶ್ರೀಉಳ್ಳಾಕುಲು ದೈವಕ್ಕೆ ನೇಮ ನೀಡಬೇಕು..! | ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂತು ಅನಾದಿ ಕಾಲದ ಆಚರಣೆ

ಮುಕ್ಕೂರು : ಅನಾದಿ ಕಾಲದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೆಯ ದಿನದಂದು ಮೇಲಿನ ಮುಕ್ಕೂರು ತರವಾಡಿನ ಭಂಡಾರದ ಮನೆಯಿಂದ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವ ಸಹಿತ ಪರಿವಾರ ದೈವದ ಭಂಡಾರವು ಪೆರುವೋಡಿ ಕ್ಷೇತ್ರಕ್ಕೆ ಬಂದು ದೈವ-ದೇವರ ಭೇಟಿ ನಂತರ ವಿಜೃಂಭಣೆಯ ನೇಮ ನಡೆಯುತಿತ್ತು ಎಂಬ ಅಂಶ ಮೇಲಿನ ಮುಕ್ಕೂರಿನಲ್ಲಿ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಿದೆ. ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಸ್ಥಳ

ಮೇಲಿನ ಮುಕ್ಕೂರು : ಸ್ಥಳ ಸಾನಿಧ್ಯ ಅಭಿವೃದ್ಧಿ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆ | ಪೆರುವೋಡಿ ಜಾತ್ರೆ ವೇಳೆ ಮೇಲಿನ ಮುಕ್ಕೂರಿನಿಂದ ದೈವಗಳ ಭಂಡಾರ ಬಂದು ಶ್ರೀ ರಕ್ತೇಶ್ವರಿ-ಶ್ರೀಉಳ್ಳಾಕುಲು ದೈವಕ್ಕೆ ನೇಮ ನೀಡಬೇಕು..! | ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂತು ಅನಾದಿ ಕಾಲದ ಆಚರಣೆ Read More »

ಕಾಣಿಯೂರು ಜಾತ್ರೋತ್ಸವ | ಫೆ.26- ಮಾ.1 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಜಾತ್ರೋತ್ಸವ

ಕಾಣಿಯೂರು: ಕಡಬ ತಾಲೂಕಿನ ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಉಡುಪಿ ಶ್ರೀ ಕಾಣಿಯೂರು ಮಠದ ‘ಕಾಣಿಯೂರು ಜಾತ್ರೆ’ ಫೆ.26 ರಿಂದ ಆರಂಭಗೊಂಡಿದ್ದು, ಮಾ.1 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಆದೇಶದಂತೆ ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.28 ಬುಧವಾರ ಬೆಳಿಗ್ಗೆ 7 ರಿಂದ ಮಲ್ಲಾರ ನೇಮ, ದೈಯರ ನೇಮ, ರಾತ್ರಿ 8 ರಿಂದ ಬಯ್ಯದ ಬಲಿ ನಡೆಯಲಿದೆ. ಫೆ.29 ಗುರುವಾರ ಮಧ್ಯಾಹ್ನ 12 ರಿಂದ

ಕಾಣಿಯೂರು ಜಾತ್ರೋತ್ಸವ | ಫೆ.26- ಮಾ.1 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಜಾತ್ರೋತ್ಸವ Read More »

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಕಡಬ: ಕಡಬ ತಾಲೂಕಿನ ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವ ಮಾ.9 ಶನಿವಾರ ಕುದ್ಮಾರು ಕಟ್ಟತ್ತಾರು ಕಟ್ಟೆಯಲ್ಲಿ (ದೈಪಿಲ ದ್ವಾರದ ಬಳಿ) ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 7.15 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು, ರಾತ್ರಿ 9 ಕ್ಕೆ

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ Read More »

ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಸಾನಿಧ್ಯ ಅಭಿವೃದ್ಧಿ ಹಿನ್ನೆಲೆ | ನಾಲ್ಕು ದಿನಗಳ ಅಷ್ಟಮಂಗಲ ಪ್ರಶ್ನಾ ಚಿಂತನೆ ಪ್ರಾರಂಭ

ಮುಕ್ಕೂರು :  ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಅಷ್ಟಮಂಗಲ ಪ್ರಶ್ನಾ ಚಿಂತನೆ ಫೆ.26 ರಂದು ಪ್ರಾರಂಭಗೊಂಡಿತು. ದೈವಜ್ಞ ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಪ್ರಾರಂಭಗೊಂಡು ಮೊದಲಾಗಿ ಸ್ವರ್ಣ ಪ್ರಶ್ನೆ ನಡೆದು ಸ್ವರ್ಣಾರೂಢರಾಶಿ ಪ್ರಕಾರ ಮುಂದಿನ ಪ್ರಕ್ರಿಯೆಗಳು ಸಂಜೆ ತನಕ ನಡೆಯಿತು. ಮಂಗಳವಾರವೂ ಪ್ರಶ್ನಾಚಿಂತನೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಪ್ರಮುಖರಾದ ಎಂ.ಕೆ. ಬಾಲಚಂದ್ರ

ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಸಾನಿಧ್ಯ ಅಭಿವೃದ್ಧಿ ಹಿನ್ನೆಲೆ | ನಾಲ್ಕು ದಿನಗಳ ಅಷ್ಟಮಂಗಲ ಪ್ರಶ್ನಾ ಚಿಂತನೆ ಪ್ರಾರಂಭ Read More »

error: Content is protected !!
Scroll to Top