ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ | ವೈಭವದಿಂದ ನಡೆಯಿತು ಹೊರೆ ಕಾಣಿಕೆ ಸಮರ್ಪಣೆ, ವಿವಿಧ ವೈದಿಕ ಕಾರ್ಯಕ್ರಮಗಳು | 300 ವರ್ಷಗಳ ಬಳಿಕ ಧರ್ಮಚಾವಡಿಯಲ್ಲಿ ನಡೆಯಿತು ನೇಮೋತ್ಸವ
ಪುತ್ತೂರು: ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಅಂಗವಾಗಿ ಬುಧವಾರ ಸಂಜೆ ಗ್ರಾಮಸ್ಥರಿಂದ ವೈಭವದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ 4 ಗಂಟೆಗೆ ಶಾಂತಿಮೊಗರು ದೇವಸ್ಥಾನದ ದ್ವಾರದ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ದೈವಸ್ಥಾನಕ್ಕೆ ಬಂದು ಸಮರ್ಪಣೆಯಾಯಿತು. ಸಂಜೆ 6.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ […]










