ಬರೆಪ್ಪಾಡಿ ಯಲ್ಲಿ ಹೊಯ್ಸಳ ಕಾಲದ 800 ವರ್ಷ ಹಿಂದಿನ ವಿಗ್ರಹಗಳು ಪತ್ತೆ| 584 ವರ್ಷ ಹಿಂದಿನ ಕನ್ನಡ ಶಾಸನದ ಅಧ್ಯಯನ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕುದ್ಮಾರ್ ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಶ್ರೀ ಪಂಚಲಿಂಗೇಶ್ವರ – ಕೇಪುಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಗೂ ದೇವರ ತೀರ್ಥದ ಬಾವಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುಮಾರು 800 ವರ್ಷ ಹಳೆಯದು ಎನ್ನಲಾದ ಹೊಯ್ಸಳ ಕಾಲದ ಸುಮಾರು 9 ಲೋಹದ ವಿಗ್ರಹಗಳು ಪತ್ತೆಯಾಗಿದೆ. ಜೊತೆಗೆ ದೇವಸ್ಥಾನದ ಒಳ ಆವರಣದದಲ್ಲಿ ಸುಮಾರು 584 ವರ್ಷ ಹಳೆಯ ವಿಜಯನಗರ ಕಾಲದ 2 ಕನ್ನಡ ಶಿಲಾ ಶಾಸನ ಸ್ಥಾಪಿಸಿದ ಮಹತ್ವ ಮರು ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ […]










