ಭಜನೆ ಇದ್ದಲ್ಲಿ ವಿಭಜನೆ ಇಲ್ಲ : ಸಂತೋಷ್ ಪಿ ಅಳಿಯೂರು | ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆ
ಪುತ್ತೂರು: ಸಮರ್ಪಣಾಭಾವ, ಭಕ್ತಿ ಶ್ರದ್ಧೆಯಿಂದ ಮಾಡುವ ಭಗವಂತನ ಸ್ಮರಣೆ ಭಗವಂತನಿಗೇ ತಲುಪುತ್ತದೆ. ಭಜನೆ, ನಾಮಾವಳಿಗಳಿಂದ ಮಾಡಿದ ಭಗವತ್ಸೇವೆ ನಾವು ಮಾಡಿದ ಕರ್ಮಗಳಿಂದ ಮುಕ್ತವಾಗಿಸುತ್ತದೆ ಎಂದು ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಂಚಾಲಕ ಸಂತೋಷ್ ಪಿ. ಅಳಿಯೂರು ಹೇಳಿದರು. ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ 9ನೇ ವಾರ್ಷಿಕ ಮಹಾಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಚಟುವಟಿಕೆಗಳಲ್ಲಿ ಪರಸ್ಪರ ಕೈಜೋಡಿಸಿ ಮುಂದುವರಿದಾಗ ಸಂಘಟನೆ ಯಶಸ್ವಿಯಾಗಿ ಬೆಳೆಯುತ್ತದೆ. ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಪರಮಪೂಜ್ಯ […]










