ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ 7ನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ | ಶಾಸಕ ಸಂಜೀವ ಮಠಂದೂರು ಭಾಗಿ
ಪುತ್ತೂರು: ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಆಶ್ರಯದಲ್ಲಿ ಏಳನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ ಮಾ12 ರಂದು ಕಲರ್ಪೆ ತರವಾಡು ಮನೆಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂರ್ತೆಯ ಕಲಸ ಮಾಡುವುದನ್ನು ಯುವ ಪೀಳಿಗೆಗೆ ನಾವು ತಿಳಿಸುವ ಕೆಲಸ ಮಾಡಬೇಕು.ಸಮಾಜಕದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಕೆಲಸ ಬಿಲ್ಲವ ಸಮಾಜ ಮಾಡಿದೆ ಎಂದ ಅವರು, ಕೋಟಿ ಚೆನ್ನಯ ಹುಟ್ಟಿದ ಊರು ಪುತ್ತೂರಿನ ಬಸ್ಸು ತಂಗುಧಾಣಕ್ಕೆ ಕೋಟಿ ಚೆನ್ನಯ ನಾಮಕರಣ ಕಾರ್ಯಕ್ರಮ […]










