ಗ್ರಾಮೀಣ ಭಾಗ ರಾಜ್ಯ ರಾಜಧಾನಿಗೆ ನೇರ ಸಂಪರ್ಕ | ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚಿಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು
ಪುತ್ತೂರು: ಗಡಿಭಾಗವಾದ ಪಾಣಾಜೆ – ಬೆಟ್ಟಂಪಾಡಿ ಜನರು ರಾಜ್ಯ ರಾಜಧಾನಿಯನ್ನು ಸುಲಭವಾಗಿ ಸಂಪರ್ಕ ಸಾಧಿಸುವಂತಾಗಬೇಕು ಎಂಬ ದೃಷ್ಟಿಯಿಂದ ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಕೋಚ್ ಬಸ್ ಆರಂಭವಾಗಿದೆ. ಪಾಣಾಜೆ ಪರಿಸರದ ಜನರ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪಾಣಾಜೆಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಬಸ್ ಸೇವೆಗೆ ಡಿ. 16ರಂದು ರಾತ್ರಿ ಪಾಣಾಜೆಯಲ್ಲಿ ತೆಂಗಿನಕಾಯಿ ಒಡೆದು ಚಾಲನೆ ನೀಡಿ, ಮಾತನಾಡಿದರು. ಪಾಣಾಜೆ ಭಾಗದ ಜನರು ಬೆಂಗಳೂರಿಗೆ ತೆರಳುಬೇಕು ಎಂದರೆ, ಪುತ್ತೂರಿನಿಂದ ಬಸ್ ಹಿಡಿಯಬೇಕಿತ್ತು. […]










