ಪುತ್ತೂರು

ಜ. 12ರಂದು ವಿವೇಕಾನಂದಲ್ಲಿ ವಿವೇಕಾನಂದ ಜಯಂತಿ

ಪುತ್ತೂರು: ಹಿಂದುತ್ವ ರಾಷ್ಟ್ರೀಯತೆಯ ಸಂಕಲ್ಪದೊಂದಿಗೆ ನೆಹರೂನಗರ ವಿವೇಕಾನಂದ ಕ್ಯಾಂಪಸ್‍್ನಲ್ಲಿ ಜ. 12ರಂದು ವಿವೇಕಾನಂದ ಜಯಂತಿ ಆಚರಣೆ ಜರಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಎನ್ನುವ ಪರಮ ಸಂತನ ಹೆಸರಿನಲ್ಲಿ ಸಂಸ್ಕಾರವುಳ್ಳ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಬಂದಿದೆ.  ವಿದ್ಯಾಸಂಸ್ಥೆಗಳು ಕೇವಲ ಪದವಿ ನೀಡುವುದಲ್ಲ. ವಿದ್ಯಾಸಂಸ್ಥೆಗಳು ಸಾಮಾಜಿಕ ಹಿತ ಕಾಯಬೇಕು, ಸಾಮಾಜಿಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ […]

ಜ. 12ರಂದು ವಿವೇಕಾನಂದಲ್ಲಿ ವಿವೇಕಾನಂದ ಜಯಂತಿ Read More »

ಜ. 9ರಂದು ವಿವೇಕಾನಂದದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ

ಪುತ್ತೂರು: ಟಿಪ್ಪು ನಿಜ ಕನಸುಗಳು ನಾಟಕದ 21ನೇ ಪ್ರದರ್ಶನವು ಜ. 9ರಂದು ಸಂಜೆ 6.30ರಿಂದ ಪುತ್ತೂರು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕ ರಚಿಸಿ, ನಿರ್ದೇಶನ ಮಾಡಿರುವ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಚರಿತ್ರೆಕಾರರು ಬರೆದದ್ದೇ ಸತ್ಯ ಎಂದು ಅದನ್ನು ಪಠ್ಯವಾಗಿಸಿ ಇದೇ ಸತ್ಯ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ನಡೆದು ಬಂದಿತ್ತು. ಇದನ್ನು ಮೀರಿದ ಟಿಪ್ಪು ಕುರಿತ ಸತ್ಯದ ಅನಾವರಣ ಈ ನಾಟಕ

ಜ. 9ರಂದು ವಿವೇಕಾನಂದದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ Read More »

ಕಾಂಚನ: ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಹಾಗೂ ಸಂಸ್ಮರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಜತ್ತೂರು ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬಜತ್ತೂರು ಕಾಂಚನ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ಕಾಂಚನ: ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ Read More »

ಬಳ್ಪಕ್ಕೆ ಭೇಟಿ ನೀಡಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ| ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆಯ ಹಿನ್ನೆಲೆಯಲ್ಲಿ ಬಳ್ಪ ಶ್ರೀ ಭಾರತಿ ತೀರ್ಥ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಕಾವೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ವಿವರಿಸಲಾಯಿತು. ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ‌ ಜೊತೆಗೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವದ ಹಾಗೂ ರಜತ ತುಲಾಭಾರ ಹಾಗೂ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ

ಬಳ್ಪಕ್ಕೆ ಭೇಟಿ ನೀಡಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ| ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ Read More »

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಹೆತ್ತವರ ಸಭೆ

ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೋಷಕರ ಮಾರ್ಗದರ್ಶನ ಅಗತ್ಯ : ಸುಬ್ರಹ್ಮಣ್ಯ ನಟ್ಟೋಜ ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಿ ಸಾಧನೆ ಮಾಡುವಲ್ಲಿ ಉಪನ್ಯಾಸಕರ ಜೊತೆಗೆ ಪೋಷಕರ ಪಾತ್ರವೂ ಮಹತ್ತರವಾದುದು. ಪೋಷಕರು ನಿರಂತರವಾಗಿ ಉಪನ್ಯಾಸಕರು ಹಾಗೂ ಕಾಲೇಜಿನ ಸಂಪರ್ಕ ಹೊಂದಿದಲ್ಲಿ ವಿದ್ಯಾರ್ಥಿಗಳ ಪ್ರತಿಯೊಂದು ಚಟುವಟಿಕೆಗಳ ವಿವರ ದೊರೆತು ಅವರು ಸಮರ್ಪಕ ದಾರಿಯಲ್ಲಿ ನಡೆಯುವಂತೆ ಮಾಡಲು ಅನುಕೂಲವಾಗುತ್ತದೆ. ವಿಚಾರ ವಿನಿಮಯ ನಡೆದಾಗ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.ಅವರು

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಹೆತ್ತವರ ಸಭೆ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 5ರಂದು ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಅಷ್ಠಬಂಧ ಲೇಪನ, ಬೆಳಿಗ್ಗೆ 11.14ಕ್ಕೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಂಗಪೂಜೆ, ಶ್ರೀ ಭೂತ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ನಾಲ್ಕಂಭ ಕ್ಷೇತ್ರದಲ್ಲಿ ಕಟ್ಟೆ ಪೂಜೆ, ಮಂತ್ರಾಕ್ಷತೆ ಹಾಗೂ ಬೆಳಂದೂರು ಲಕ್ಷ್ಮೀಪ್ರಿಯಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಜ. 6ರ ಕಾರ್ಯಕ್ರಮ:ಜ. 6ರಂದು ಬೆಳಿಗ್ಗೆ ಉಳ್ಳಾಕ್ಲು ಭಂಡಾರ ತೆಗೆಯಲಾಗುವುದು. ರಾತ್ರಿ 9ರಿಂದ

ಕುಂಬ್ಲಾಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

ಪುತ್ತೂರಿನಲ್ಲಿ ಮೀನುಗಾರಿಕಾ ಇಲಾಖೆಯ ಕಚೇರಿ ಕಾರ್ಯಾರಂಭ

ಪುತ್ತೂರು: ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿಯನ್ನು ಕೇಂದ್ರೀಕರಿಸಿಕೊಂಡು ಪುತ್ತೂರಿನಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯಾರಂಭ ಮಾಡಿದೆ.ಪುತ್ತೂರು ತಾಲೂಕು ಪಂಚಾಯತ್ ಕಟ್ಟಡದ ಹಿಂಬದಿಯ ಕೊಠಡಿಯಲ್ಲಿದೆ ಇಲಾಖೆಯ ಕಚೇರಿ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಇದೇ ಕೊಠಡಿಯಲ್ಲಿತ್ತು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಮಂಜುಳಾಶ್ರೀ ಶೆಣೈ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿದ್ದ ಕಚೇರಿಯ ವಿಸ್ತರಿತ ಭಾಗ ಇದೀಗ ಪುತ್ತೂರಿನಲ್ಲಿ ಕಾರ್ಯಾರಂಭ ಮಾಡಿದೆ. ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಹಲವು ಯೋಜನೆಗಳು ಇಲಾಖೆಯಲ್ಲಿದ್ದು, ಮೀನುಗಾರಿಕೆ ಕೃಷಿ

ಪುತ್ತೂರಿನಲ್ಲಿ ಮೀನುಗಾರಿಕಾ ಇಲಾಖೆಯ ಕಚೇರಿ ಕಾರ್ಯಾರಂಭ Read More »

ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿ

ಪುತ್ತೂರು: ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ವ-ಸಹಾಯ ಸಂಘಗಳ ಒಗ್ಗೂಡುವಿಕೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಪ್ರತಿಮಾ ಹಾರಾಡಿ, ಮಹಮ್ಮದ್ ಬಡಗನ್ನೂರು ತರಬೇತಿ ನಡೆಸಿಕೊಟ್ಟರು. ತರಬೇತಿಯಲ್ಲಿ ಮುಂಡೂರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ನ ಅದ್ಯಕ್ಷರು, ಸ್ಥಾಯಿ ಸಮಿತಿ ಸದಸ್ಯರು, ಪಿಡಿಓ, ಕಾರ್ಯದರ್ಶಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಆಯ್ದ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ

ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿ Read More »

ತಂಬುತ್ತಡ್ಕ: ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ

ಪುತ್ತೂರು: ಡೇ-ಎನ್.ಆರ್.ಎಲ್.ಎಂ. ಯೋಜನೆಯಡಿ ಸ್ಪಂದನ ಕೃಷಿ ಉತ್ಪಾದಕ ಸಂಘದ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ನ ತಂಬುತ್ತಡ್ಕದಲ್ಲಿ ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ ನಡೆಯಿತು. ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲೀಕರಣ ಆಗಬೇಕು ಎಂದ ಅವರು, ಸದ್ರಿ ಘಟಕಕ್ಕೆ ಹಳೆ ಸಿ.ಎ. ಬ್ಯಾಂಕ್ ಕಟ್ಟಡವನ್ನು ಬಾಡಿಗೆ ರಹಿತವಾಗಿ ನೀಡಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯತ್ ಉಪ್ಯಾಧ್ಯಕ್ಷ ವೆಂಕಟರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. NRLM ತಾಲೂಕು

ತಂಬುತ್ತಡ್ಕ: ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ Read More »

ಡ್ರಾಯಿಂಗ್ ಪರೀಕ್ಷೆ: ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳ ಸಾಧನೆ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ಸಿ.ಬಿ.ಎಸ್.ಇ.ಯಿಂದ ೧೫ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಆರ್ಯ ಎಂ. 50.50%, ಪ್ರಾರ್ಥನಾ ರೈ ಯು.ಎಸ್ 77.50%, ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿ ಸುರುಳಿ 75.83%, ಅರುಂಧತಿ ಎಲ್. ಆಚಾರ್ಯ 71.50%, ಸಿಂಚನಾ ಹರೀಶ್ 71.33%, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ.ಕೆ 72.17%, ಅಕ್ಷಜ್ ರೈ ಪಿ. 71.33% ಶೇಕಡವಾರು

ಡ್ರಾಯಿಂಗ್ ಪರೀಕ್ಷೆ: ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳ ಸಾಧನೆ Read More »

error: Content is protected !!
Scroll to Top