ಪುತ್ತೂರು

ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು; ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಕುರಿತು ಪೂರ್ವಭಾವಿ ಸಭೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಉಪ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರುಗಳಿಗೆ ಅವರವರ ಜವಾಬ್ದಾರಿಗಳನ್ನು ತಿಳಿಸಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಎಲ್ಲರ ಸಹಕಾರವನ್ನು ಕೋರಲಾಯಿತು. ಮಾ.21 ರಂದು ಪುತ್ತೂರಿನಲ್ಲಿ ಆಮಂತ್ರಣ ವಿತರಣೆ: ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಪುತ್ತೂರು ನಗರದಲ್ಲಿ ಆಮಂತ್ರಣ ಪತ್ರಿಕೆಯನ್ನು ಮಾ.21 ರಂದು ವಿತರಿಸುವುದಾಗಿ ತೀರ್ಮಾನಿಸಲಾಯಿತು. ಬೆಳಿಗ್ಗೆ 9.30 […]

ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ Read More »

ಎನ್.ಎಸ್.ಎಸ್.ನಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ | ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್ಎಸ್ ಶಿಬಿರ ಸಂಪನ್ನ ಸಮಾರಂಭದಲ್ಲಿ ರಾಧಾಕೃಷ್ಣ ಬೋರ್ಕರ್

ಪುತ್ತೂರು: ಎನ್ ಎಸ್ ಎಸ್ ನಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಯಶಸ್ವಿ ಮನುಷ್ಯರ ಯಶಸ್ಸಿನ ಗುಟ್ಟು ಸಮಯ ಪ್ರಜ್ಞೆ, ಒಬ್ಬ ವ್ಯಕ್ತಿಯು ಸಮಯವನ್ನು ಗೌರವಿಸದಿದ್ದರೆ ಸಮಯ ಅವನನ್ನು ಗೌರವಿಸುವುದಿಲ್ಲ. ಎನ್ಎಸ್ಎಸ್ ಸಮಯವನ್ನು ಗೌರವಿಸುವ ಪರಿಯನ್ನು ಕಲಿಸಿಕೊಡುತ್ತದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. ಅವರು ಮುಂಡೂರು ಶಾಲೆಯಲ್ಲಿ ಜರುಗಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಬುದ್ಧಿವಂತರಾಗದೆ ಜೀವನದಲ್ಲಿ ಮುಂದೆ ಬರಲು

ಎನ್.ಎಸ್.ಎಸ್.ನಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ | ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್ಎಸ್ ಶಿಬಿರ ಸಂಪನ್ನ ಸಮಾರಂಭದಲ್ಲಿ ರಾಧಾಕೃಷ್ಣ ಬೋರ್ಕರ್ Read More »

ಉತ್ತರಾಖಂಡದ ‘ಸರಸ್ ಫೇರ್’ಗೆ ಕಲ್ಲರ್ಪೆಯ ಅಂಬಿಕಾ ರಮೇಶ್

ಪುತ್ತೂರು: ಉತ್ತರಾಖಂಡ ರಾಜ್ಯದಲ್ಲಿ ಮಾರ್ಚ್ 19ರಿಂದ ನಡೆಯಲಿರುವ `ಸರಸ್ ಫೇರ್’ನಲ್ಲಿ ಪುತ್ತೂರಿನ ಅವನಿ ಸಂಜೀವಿನಿ ಸಂಘದ ಅಂಬಿಕಾ ರಮೇಶ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಸರಸ್ ಫೇರ್’ನಲ್ಲಿ ಭಾಗವಹಿಸಲು ರಾಜ್ಯದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಿಂದ ಪುತ್ತೂರಿನ ಕಲ್ಲರ್ಪೆ ನಿವಾಸಿ ಅಂಬಿಕಾ ರಮೇಶ್ ಭಾಗವಹಿಸುತ್ತಿದ್ದರೆ, ಇನ್ನೊಬ್ಬರು ರಾಯಚೂರಿನ ಸಿಂಧನೂರು ತಾಲೂಕಿನ ಲಕ್ಷ್ಮೀ. ಅಂಬಿಕಾ ರಮೇಶ್ ಅವರು ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿರುವ ಅಲಂಕಾರಿನ ಉತ್ಪನ್ನಗಳು, ಉಪ್ಪಿನಕಾಯಿ, ಸ್ನ್ಯಾಕ್ಸ್ ಮೊದಲಾದ ಉತ್ಪನ್ನಗಳನ್ನು `ಸರಸ್ ಫೇರ್’ನಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಮಾರ್ಚ್ 19ರಿಂದ

ಉತ್ತರಾಖಂಡದ ‘ಸರಸ್ ಫೇರ್’ಗೆ ಕಲ್ಲರ್ಪೆಯ ಅಂಬಿಕಾ ರಮೇಶ್ Read More »

ಡಾ. ನಝೀರ್ ಅಹಮ್ಮದ್ ಕ್ಲಿನಿಕಿನಲ್ಲಿ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣೆ

ಪುತ್ತೂರು: ವೈದ್ಯಕೀಯ ತಜ್ಞ ಡಾ. ನಝೀರ್ ಅಹಮ್ಮದ್ ಡಯಾಬಿಟಿಕ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಮತ್ತು ಮೆರ್ಕ್ ಕಂಪೆನಿ ಸಹಯೋಗದಲ್ಲಿ ಥೈರಾಯಿಡ್ ಗ್ರಂಥಿಯ ಹಾಗೂ ಮಧುಮೇಹದ ಉಚಿತ ತಪಾಸಣೆ ಮಾ. 15ರಂದು ಕಲ್ಲಾರೆ ಕೃಷ್ಣ ಆರ್ಕೇಡಿನಲ್ಲಿರುವ ಡಾ. ನಝೀರ್ ಅಹಮ್ಮದ್ ರವರ ಕ್ಲಿನಿಕಿನಲ್ಲಿ ನಡೆಯಿತು. ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು

ಡಾ. ನಝೀರ್ ಅಹಮ್ಮದ್ ಕ್ಲಿನಿಕಿನಲ್ಲಿ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣೆ Read More »

ಮಾ.17 ರಿಂದ 19 : ಪಡುಮಲೆ (ಪಮ್ಮಲ) ಜುಮ್ಮಾ ಮಸ್ಜಿದ್ ನಲ್ಲಿ ಆಂಡ್ ನೇರ್ಚೆ, ಧಾರ್ಮಿಕ ಉಪನ್ಯಾಸ

ಪುತ್ತೂರು: ಪಡುಮಲೆ (ಪಮ್ಮಲ) ಜುಮ್ಮಾ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭಾವದ ಹೆಸರಲ್ಲಿ ನಡೆದುಕೊಂಡು ಬರುತ್ತಿರುವ ಆಂಡ್ ನೇರ್ಚೆ ಮೂರು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮಾ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ನಡೆಯಲಿದೆ ಎಂದು ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಡುಮಲೆ ಪ್ರದೇಶ ಮಸೀದಿ, ದೇವಸ್ಥಾನ, ದೈವಸ್ಥಾನಗಳನ್ನೊಳಗೊಂಡು ಸೌಹಾರ್ದತೆಯಿಂದ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದರು. ಮಾ.17 ರಂದು ಧ್ವಜಾರೋಹಣದೊಂದಿಗೆ

ಮಾ.17 ರಿಂದ 19 : ಪಡುಮಲೆ (ಪಮ್ಮಲ) ಜುಮ್ಮಾ ಮಸ್ಜಿದ್ ನಲ್ಲಿ ಆಂಡ್ ನೇರ್ಚೆ, ಧಾರ್ಮಿಕ ಉಪನ್ಯಾಸ Read More »

ಪುತ್ತೂರು: ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು:  ಹರೀಶ್ ಶಾಸ್ತ್ರಿ

ಪುತ್ತೂರು :,ಶಿಕ್ಷಣ ವೃತ್ತಿಯು  ಮಕ್ಕಳನ್ನು ತಿದ್ದುವ ಒಂದು ಅಭೂತಪೂರ್ವ ವೇದಿಕೆಯಾಗಿದೆ. ಸಮಾಜವನ್ನು ತಿದ್ದಲು ಹಾಗೂ ಮಕ್ಕಳ ಜೀವನ ಸರಿಪಡಿಸಲು ಶಿಕ್ಷಕ ವೃತ್ತಿ ಒಂದು ಪ್ರಮುಖ ವೃತ್ತಿ. ಶಿಕ್ಷಕನಾದವನು ಮಕ್ಕಳಿಂದ ಏನನ್ನು ನಿರೀಕ್ಷಿಸಬಾರದು. ಅವರ ಮನೋಭಾವವನ್ನು ಅರ್ಥೈಸಿಕೊಂಡು ಅವರೊಂದಿಗೆ ಬೆರೆಯಬೇಕು ಎಂದು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ್ ಶಾಸ್ತ್ರಿ ಹೇಳಿದರು. ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಭವಿಷ್ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ’ನಾನು ಯಾಕೆ ಅಧ್ಯಾಪಕ ವೃತ್ತಿ ಆಯ್ದುಕೊಂಡೆ’

ಪುತ್ತೂರು: ದೇಶ ಕಟ್ಟುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು:  ಹರೀಶ್ ಶಾಸ್ತ್ರಿ Read More »

ಪುತ್ತೂರಿನಲ್ಲಿ 12 ಮಾದರಿ ಮತಗಟ್ಟೆಗಳು | ಮತದಾನದ ಪೂರ್ವಸಿದ್ಧತೆಗಳ ಬಗ್ಗೆ ವಿವರಿಸಿದ ಸಹಾಯಕ ಆಯುಕ್ತ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 12 ಬೂತುಗಳನ್ನು ಮಾದರಿ ಬೂತುಗಳೆಂದು ಗುರುತಿಸಲಾಗಿದ್ದು, ಚುನಾವಣೆಯ ದಿನ ವಿಶೇಷ ಅಲಂಕಾರ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾದ 12 ಬೂತುಗಳನ್ನು ವಿಶೇಷ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಆ ಮತಗಟ್ಟೆಗಳಲ್ಲಿ ಈ ಬಾರಿ ಹೆಚ್ಚಿನ ಮತದಾನ ಆಗುವ ನಿಟ್ಟಿನಲ್ಲಿ ಸಖಿ, ಯಕ್ಷಗಾನ, ಕಂಬಳ, ನೀಲತರಂಗ, ಪರಂಪರೆ, ಗೋ ಗ್ರೀನ್, ಯುವ, ವಿಕಲಚೇತನ ಎಂದು ಗುರುತಿಸಿ, ವಿಶೇಷ ಅಲಂಕಾರ ಮಾಡಲಾಗುವುದು

ಪುತ್ತೂರಿನಲ್ಲಿ 12 ಮಾದರಿ ಮತಗಟ್ಟೆಗಳು | ಮತದಾನದ ಪೂರ್ವಸಿದ್ಧತೆಗಳ ಬಗ್ಗೆ ವಿವರಿಸಿದ ಸಹಾಯಕ ಆಯುಕ್ತ Read More »

ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲಿನಿಂದ ಬಾಲವನ ಅಂಗನವಾಡಿಗೆ ನೀರಿನ ಘಟಕ ಕೊಡುಗೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲಿನಿಂದ ಶಿವರಾಮ ಕಾರಂತರ ಬಾಲವನ ಅಂಗನವಾಡಿ ಕಟ್ಟಡಕ್ಕೆ ಸಂಪೂರ್ಣ ಪೈ೦ಟ್ ಕೆಲಸ ಪೂರ್ತಿಗೊಳಿಸಿ, ಬಾಲವನ ಅಂಗನವಾಡಿಗೆ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕೊಡುಗೆ ಯೋಜನೆಯನ್ನು ರೋಟರಿ ಜಿಲ್ಲೆ 3181 ವಲಯ 5ರ  ಅಸಿಸ್ಟೆ೦ಟ್ ಗವರ್ನರ್ ಎ. ಜಗಜೀವನ್ ದಾಸ್ ರೈ ಉದ್ಘಾಟಿಸಿದರು. ರೋಟರಿ ಸೆ೦ಟ್ರಲ್ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿಗೆ ರೋಟರಿ ಮೂಲಕ ನೀರಿನ ಘಟಕ ಮತ್ತು ಸುಣ್ಣ ಬಣ್ಣ ಬಳಿಯಲು ಸಹಕರಿಸಿದ ನಿವೃತ್ತ ಉಪನ್ಯಾಸಕ

ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲಿನಿಂದ ಬಾಲವನ ಅಂಗನವಾಡಿಗೆ ನೀರಿನ ಘಟಕ ಕೊಡುಗೆ Read More »

ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು : ನಗರದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಂಗಳವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಠದ ಶ್ರೀ ಸತ್ಯನಾರಾಯಣ ಗುಡಿಯಲ್ಲಿ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಪಂಚಗವ್ಯ ಪುಣ್ಯಾಹ, ಪುರಸ್ಸರ, ಕಲಶಾಭಿಷೇಕ, ಕಲಶ ಪ್ರತಿಷ್ಠೆ, 10.30 ರಿಂದ  ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಿತು. ಈ ಸಂದರರ್ಭದಲ್ಲಿ ಮಠದ ಟ್ರಸ್ಟಿಗಳಾದ

ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಪುತ್ತೂರು : ನಗರದ  ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.  ಸಮಾರಂಭದಲ್ಲಿ ವಿದ್ಯಾಲಯದ ಹಿರಿಯ ಶಿಕ್ಷಕಿ ಹಾಗೂ ಉಪ ಪ್ರಾoಶುಪಾಲೆ ಸುಜನಿ ಬೋರ್ಕರ್ ರವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸುಜನಿ ಬೋರ್ಕರ್, ಭಾರತೀಯ ಪರಂಪರೆಯಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ. ಯತ್ರ ನಾರ್ಯಸ್ತು ಪೂಜ್ಯoತೆ ರಮಂತೆ ತತ್ರ ದೇವತಾ: ಎಂಬ ನುಡಿಯಂತೆ ಎಲ್ಲಿ ಸ್ತ್ರೀಯರನ್ನು ಪೂಜ್ಯ ಭಾವದಿಂದ ನೋಡುತ್ತಾರೋ,

ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ Read More »

error: Content is protected !!
Scroll to Top