ಪುತ್ತೂರು

ಇಂದು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು: ಶಾಂತಿಮೊಗರು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ. 28ರಂದು ಕಿರು ಷಷ್ಠಿ ಪೂಜೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಇಂದು ಕುದ್ಮಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಕಿರುಷಷ್ಠಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಮಂಡಲ ರಂಗಪೂಜೆಯು ಮಂಗಳವಾರ ರಾತ್ರಿ ನಡೆದ ದೊಡ್ಡ ರಂಗಪೂಜೆಯೊಂದಿಗೆ ಸಮಾಪನಗೊಂಡಿತು. ಬುಧವಾರ ಹಾಗೂ ಗುರುವಾರ ದೇವಸ್ಥಾನದ ವಾರ್ಷಿಕ ಕಿರುಷಷ್ಠಿ ಉತ್ಸವ ನಡೆಯಲಿದೆ. ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆದು, ಮಧ್ಯಾಹ್ನ ಉಗ್ರಾಣ ಪೂಜೆ, ಮಹಾಪೂಜೆ ನೆರವೇರಿತು. ಸಂಜೆ ಗಣೇಶ ಪ್ರಾರ್ಥನೆ, ದೀಪಾರಾಧನೆ ನಡೆದು ಬಳಿಕ ದೊಡ್ಡರಂಗಪೂಜೆ ಜರಗಿತು. ಕಳೆದ ೪೮ ದಿನಗಳಿಂದ ನಿರಂತರವಾಗಿ ರಂಗಪೂಜೆ ಜರಗಿತ್ತು. ವಿವಿಧ ಭಜನಾ ತಂಡಗಳು ಭಜನಾ ಸೇವೆ ನೆರವೇರಿಸಿಕೊಟ್ಟಿತು. ಕೊನೆ ದಿನವಾದ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ Read More »

ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್: ಅರಣ್ಯಾಧಿಕಾರಿ ಅಮಾನತಿಗೆ ಆಗ್ರಹ

ಪುತ್ತೂರು: ಹಿಂದೂ ಭಜಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದಿದ್ದ ಅರಣ್ಯ ಇಲಾಖೆ ಅಧಿಕಾರಿಯನ್ನು ಬುಧವಾರದೊಳಗೆ ಅಮಾನತು ಮಾಡುವಂತೆ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರವಾದಿ ಬಗ್ಗೆ ಪೋಸ್ಟ್ ಮಾಡಿದ ಹಿಂದೂ ಯುವಕನನ್ನು ಪೋಲೀಸರು ತಕ್ಷಣ ಬಂಧಿಸಿದ್ದಾರೆ. ಆದರೆ ಹಿಂದೂಗಳ ಆಚರಣೆಯ ಬಗ್ಗೆ ಬರೆದ ಅಧಿಕಾರಿಯ ಮೇಲೆ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಭಜಕರ ಅವಹೇಳನಕಾರಿಯಾಗಿ ಬರೆದ ಅಧಿಕಾರಿಯನ್ನು ಸಮರ್ಥಿಸುವ ಕೆಲಸ

ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್: ಅರಣ್ಯಾಧಿಕಾರಿ ಅಮಾನತಿಗೆ ಆಗ್ರಹ Read More »

ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಪಂದ್ಯಾಟ | ವೈ.ಎಸ್.ವಿ. ವಾಮದಪದವು ವಿನ್ನರ್ಸ್

ಪುತ್ತೂರು: ೧೨ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ಧ ಕ್ರಿಕೆಟ್ ಪಂದ್ಯಾಟವು ಡಿ. ೨೦ರಿಂದ ೨೬ರತನಕ ೬ ದಿನಗಳ ಕಾಲ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ರೋಲಿಂಗ್ ಟ್ರೋಫಿಯನ್ನು ವೈ.ಎಸ್.ವಿ. ವಾಮದಪದವು ಪಡೆದುಕೊಳ್ಳುವ ಮೂಲಕ ವಿನ್ನರ್ಸ್ ಆಗಿ ಮೂಡಿಬಂದಿತು. ನಮೋ ಬ್ರದರ್ಸ್ ಬೋಳಂಗಡಿ ರನ್ನರ್ಸ್ ಆಗಿ ಗಮನ ಸೆಳೆಯಿತು.ಕಿಲ್ಲೆ ಕಪ್ ವಿನ್ನರ್ಸ್ ಆಗಿ ಫೈಟರ್ಸ್ ತೋಡಾರ್ ಪ್ರಥಮ, ಜಾನ್ ಜಿಗ್ಗರ್ ಸುಳ್ಯ ದ್ವಿತೀಯ ಸ್ಥಾನ ಗಳಿಸಿತು. ಗ್ರಾಮ ಕಪ್ನ ವಿನ್ನರ್ಸ್ ಆಗಿ ಎಮಿರೇಟ್ಸ್ ನೆಲ್ಯಾಡಿ ಪಡೆದುಕೊಂಡಿತು.

ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಪಂದ್ಯಾಟ | ವೈ.ಎಸ್.ವಿ. ವಾಮದಪದವು ವಿನ್ನರ್ಸ್ Read More »

ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಚಿಕ್ಕಮೂಡ್ನೂರು ಆರಿಗೋ ಶ್ರೀ ಬ್ರಹ್ಮ ಬೈದೆರ್ಗಳ ನೆಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗೊನೆ ಮುಹೂರ್ತ ನಡೆಯಿತು.ಚಿಕ್ಕ ಮಾಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪ್ರೇಮಂಡ ಗರೋಡಿಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಜನವರಿ 1ರಿಂದ 5ರ ವರೆಗೆ ಶ್ರೀ ಬೈದೆರ್ಗಳ ನೇಮೋತ್ಸವ ನಡೆಯಲಿದೆ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಡಾ. ಎಂ. ಅಶೋಕ್ ಪಡಿವಾಲ್ ಮೂಡಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ನರೇಂದ್ರ ಪಡಿವಾಳ್ ಮೂಡಾಯೂರ್

ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ Read More »

ಪುತ್ತೂರು ಭಾರತ್ ಸಿನೇಮಾಸ್ ವೇಳಾಪಟ್ಟಿ ಪ್ರಕಟ

ಪುತ್ತೂರು: ಜಿ.ಎಲ್. ಮಾಲಿನಲ್ಲಿ ಆರಂಭಗೊಂಡಿರುವ ಭಾರತ್ ಮಾಲ್ ಇದೀಗ ಮೂವಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿ. 27ರಂದು ಹೊಸ ವೇಳಾಪಟ್ಟಿಯನ್ನು ನೀಡಿದ್ದು, ಬುಕ್ಕಿಂಗಿಗಾಗಿ 8050253030 ಸಂಪರ್ಕಿಸುಂತೆ ಪ್ರಕಟಣೆ ತಿಳಿಸಿದೆ. ಒಟ್ಟು 3 ಸ್ಕ್ರೀನಿನಲ್ಲಿ ಕಾಂತಾರ (ಕನ್ನಡ), ಅವತಾರ್: ದ ವೇ (ಇಂಗ್ಲೀಷ್), ವೇದಾ (ಕನ್ನಡ), ವಿಐಪಿ’ಸ್ ಲಾಸ್ಟ್ ಬೆಂಚ್ (ತುಳು) ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿ ಸ್ಕ್ರೀನಿನಲ್ಲಿ ಒಟ್ಟು 4 ಪ್ರದರ್ಶನಗಳು ನಡೆಯುತ್ತಿವೆ. ಸ್ಕ್ರೀನ್ 1ರಲ್ಲಿ ಬೆಳಿಗ್ಗೆ 10.30ರಿಂದ 1.09ರವರೆಗೆ ಕಾಂತಾರಾ ಕನ್ನಡ. ಮಧ್ಯಾಹ್ನ 1.30ರಿಂದ 4.51ರವರೆಗೆ ಹಾಗೂ

ಪುತ್ತೂರು ಭಾರತ್ ಸಿನೇಮಾಸ್ ವೇಳಾಪಟ್ಟಿ ಪ್ರಕಟ Read More »

ಕ್ಯಾಪ್ಕೋ ನೌಕರರ ಪ್ರೈಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಪುತ್ತೂರು: ಕ್ಯಾಂಪ್ಕೋ ಸಂಸ್ಥೆ ಮತ್ತು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟ್ರಿ ಯೂನಿಯನ್ ಸಹಯೋಗದಲ್ಲಿ ಕ್ಯಾಂಪ್ಕೋ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ನೆಹರುನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಯೂನಿಯನ್ ಅಧ್ಯಕ್ಷ ತೀರ್ಥರಾಮ, ಮಹೇಶ್ ಪಿ., ಸುಭಾಗ್, ಮೋಹನ್ ಗೌಡ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಸಂಸ್ಥೆಯ ಅಧಿಕಾರಿ ಕೇಶವ ಪ್ರಸನ್ನ ಮತ್ತು ರಮೇಶ್ ಗೌಡ ಬಹುಮಾನ ವಿತರಿಸಿದರು.ಫಲಿತಾಂಶ:ಪಂದ್ಯಾಟದ ಪ್ರಥಮ ಸ್ಥಾನವನ್ನು ಟರ್ಬೋ ಟೈಟಾನ್ಸ್ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಮೆಗಾ ಸ್ವಸ್ತಿಕ್ ಪಾಲಾಯಿತು. ಮ್ಯಾನ್ ಆಫ್

ಕ್ಯಾಪ್ಕೋ ನೌಕರರ ಪ್ರೈಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ Read More »

ಕೆಮ್ಮಾಯಿ ಜಾತ್ರೆ: ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರವನ್ನು ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಫೆ. 3ರಿಂದ 4ರವರೆಗೆ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆಯಲಿದೆ. ದೇವಾಲಯದ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಾಡಿತಾಯ, ಶ್ರೀದರ ಬೈಪಾಡಿತ್ತಾಯ, ಸದಾಶಿವ ಹೊಳ್ಳ, ರಾಜ ಭಟ್ ಕೆಮ್ಮಾಯಿ, ರಾಧಾಕೃಷ್ಣ ಹೆಗಡೆ ಬಡಾವು, ಸೋಮಪ್ಪ ಗೌಡ ಬಡಾವು, ಚಂದ್ರಶೇಖರ ಎಸ್. ಮೂಡಯೂರು, ಹೇಮಚಂದ್ರ ಕೆಮ್ಮಾಯಿ, ಶ್ರೀಮತಿ ಕೆಮ್ಮಾಯಿ, ಗೀತಾ ಕೆಮ್ಮಾಯಿ, ಭಜನಾ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆಮ್ಮಾಯಿ ಜಾತ್ರೆ: ಆಮಂತ್ರಣ ಪತ್ರ ಬಿಡುಗಡೆ Read More »

ಮಹಿಳೆಯರ ಆತ್ಮವಿಶ್ವಾಸ, ಕೌಶಲ್ಯ ಹೆಚ್ಚಿಸಲು ತರಬೇತಿ | ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿಯಲ್ಲಿ ಸುಕನ್ಯಾ

ಪುತ್ತೂರು: ಮಹಿಳೆಯರ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ವಿಶೇಷ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದು ತಾ.ಪಂ. ಯೋಜನಾಧಿಕಾರಿ ಸುಕನ್ಯಾ ಹೇಳಿದರು.ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಂಘಿಕ ನಡೆ ಸಮೃದ್ಧಿಯ ಕಡೆ ಮುಖಾಮುಖಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 1989ರಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು, ಪಂಚಾಯತ್ ರಾಜ್ ಸಂಸ್ಥೆಗಳನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳ ಸಾಮರ್ಥ್ಯವನ್ನು

ಮಹಿಳೆಯರ ಆತ್ಮವಿಶ್ವಾಸ, ಕೌಶಲ್ಯ ಹೆಚ್ಚಿಸಲು ತರಬೇತಿ | ಸಾಂಘಿಕ ನಡೆ ಸಮೃದ್ಧಿಯ ಕಡೆ ತರಬೇತಿಯಲ್ಲಿ ಸುಕನ್ಯಾ Read More »

ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆ

ಸುಳ್ಯ: ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆಯು ಡಿ. ೨೬ರಂದು ಸುಳ್ಯ ಕೆವಿಜಿ ಕ್ಯಾಂಪಸ್‌ನಲ್ಲಿ ನಡೆಯಿತು. ಸುಳ್ಯ ಕೆಜಿವಿ ಕ್ಯಾಂಪಸ್‌ನಲ್ಲಿರುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಲಾಯಿತು. ಬಳಿಕ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಸುಳ್ಯದ ಕರ್ಮ ಯೋಗಿ ಎಂದೇ ಕರೆಯಲ್ಪಡುವ ಡಾ. ಕುರುಂಜಿ ವೆಂಕಟರಮಣ ಗೌಡ ಅವರು, ನವ ಸುಳ್ಯದ ನಿರ್ಮಾತೃರೂ ಹೌದು. ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿದ್ಯಾಲಯವನ್ನು

ಡಾ. ಕುರುಂಜಿ ವೆಂಕಟರಮಣ ಗೌಡ ಅವರ ೯೪ನೇ ಹುಟ್ಟುಹಬ್ಬ ಆಚರಣೆ Read More »

error: Content is protected !!
Scroll to Top