ಪುತ್ತೂರು

ಚಿಕ್ಕಪುತ್ತೂರು ನಿವಾಸಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ 7 ತಿಂಗಳ ಗರ್ಭಿಣಿ ರೇಷ್ಮಾ ಭಾನುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಚಿಂತನ್, ಅವರ ಪತ್ನಿ ಹಾಗು ಪುತ್ರಿ ವಾಸ್ತವ್ಯ ಹೊಂದಿದ್ದರು. 4 ವರ್ಷಗಳ ಹಿಂದೆಯಷ್ಟೆ ಚಿಂತನ್ ಅವರ ವಿವಾಹ ಸುರತ್ಕಲ್ ನ. ರೇಷ್ಮಾ ಅವರ ಜೊತೆ ನಡೆದಿತ್ತು. ಭಾನುವಾರ ರಾತ್ರಿ ರೇಷ್ಮಾ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಪೊಲೀಸರು […]

ಚಿಕ್ಕಪುತ್ತೂರು ನಿವಾಸಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ Read More »

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ

ನೆಲ್ಯಾಡಿ: ಖಾಸಗಿ ಬಸ್‍ ಹಿಟಾಚಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 18 ಕ್ಕೂ ಹಚ್ಚು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕದಲ್ಲಿ ಇಂದು  ಮುಂಜಾನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಾರ್ಕಳ ಪಡುಮನೆ ನಿವಾಸಿ ಶಂಕರನಾರಾಯಣ ಭಟ್ (41) ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಕಳದಿಂದ ಧರ್ಮಸ್ಥಳ ಮೂಲಕ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸು, ಲಾವತಡ್ಕ ಬಳಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಿಟಾಚಿ ಯಂತ್ರವನ್ನು ಸಾಗಿಸುತ್ತಿದ್ದ ಲಾರಿಗೆ

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ Read More »

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ ಭಾನುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶಾಲಾ ಮುಂದಿನ ಶೈಕ್ಷಣಿಕ ಚಟುವಟಿಕೆಗಳು, ಶಾಲಾ ನೀತಿ, ನಿಯಮಗಳ ಕುರಿತು ಚರ್ಚಿಸಲಾಯಿತು. ಮುಖ್ಯ ಅತಿಥಿಯಾಗಿ ಧಾರ್ಮಿಕ ಉಪನ್ಯಾಸಕ ದಾಮೋದರ ಶರ್ಮ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಸಂಚಾಲಕ ಭಾಸ್ಕರ ಆಚಾರ್ಯ ಹಿಂದಾರು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಕೇಶ್‍ ರೈ ಕೆಡೆಂಜಿ, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಸದಸ್ಯ ಹರೀಶ್‍  ಮುಖ್ಯ ಶಿಕ್ಷಕ ಪ್ರಸನ್ನ, ಕೆ.,

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕುರಿತು ಸಭೆ | ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಿಸಲು ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ತೀರ್ಮಾನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ವಠಾರದಲ್ಲಿರುವ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಗೊಳಿಸುವ ಬಗ್ಗೆ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ಆ ಪ್ರಕಾರ ತೀರ್ಮಾನ ಕೈಗೊಳ್ಳಲು ಶನಿವಾರ ಸಂಜೆ ನಡೆದ ದೇವಸ್ಥಾನದ ಕುರಿತ ಅಭಿವೃದ್ಧಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಯ್ಯಪ್ಪ ಗುಡಿ ಇರುವ ಸ್ಥಳದಲ್ಲಿ ರಥ ನಿಲುಗಡೆ ಆಗಬೇಕು ಅನ್ನುವ ಅಂಶ ಕಂಡು ಬಂದಿದೆ. ಜತೆಗೆ ಅಲ್ಲಿರುವ ನಾಗನ ಸಾನಿಧ್ಯವನ್ನು ದೇವಾಲಯದ ಗದ್ದೆಯಲ್ಲಿರುವ ಮೂಲ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕುರಿತು ಸಭೆ | ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಿಸಲು ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ತೀರ್ಮಾನ Read More »

ವಾಹನ ಅಪಘಾತದಲ್ಲಿ ಮೃತಪಟ್ಟ ಸರ್ಪ | ಸ್ಥಳೀಯರಿಂದ ಸರ್ಪ ಸಂಸ್ಕಾರ ಕಾರ್ಯ

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ಪವೊಂದು ವಾಹನ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಕುರಿತು ಸರ್ಪ ಸಂಸ್ಕಾರ ಕಾರ್ಯ ಭಾನುವಾರ ಬೈಪಾಸ್ ರಸ್ತೆಯಲ್ಲಿರುವ ಅಪೂರ್ವ ಸೆಂಟರ್‍ ಬಳಿ ಇರುವ ಸತೀಶ್‍ ರೈ ಎಂಬವರ ಮನೆಯಲ್ಲಿ  ನಡೆಯಿತು. ಕೆಮ್ಮಿಂಜೆ ವೇ.ಮೂ. ಶ್ರೀಕೃಷ್ಣ ಕಲ್ಲೂರಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ವಾಹನ ಅಪಘಾತದಲ್ಲಿ ಮೃತಪಟ್ಟ ಸರ್ಪ | ಸ್ಥಳೀಯರಿಂದ ಸರ್ಪ ಸಂಸ್ಕಾರ ಕಾರ್ಯ Read More »

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನವೀಕೃತ ಕಚೇರಿ ’ಹಿಂದವಿ’ ಉದ್ಘಾಟನೆ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿವತಿಯಿಂದ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು 100 ಮಂದಿ ಜೋಡಿಯ ಸಾಮೂಹಿಕ ವಿವಾಹದ ಕಾರ್ಯಾಲಯವನ್ನು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಹಿಂದವಿ ಕಚೇರಿಯಲ್ಲಿ ಶನಿವಾರ ಉದ್ಘಾಟಿಸಲಾಯಿತು. ಪೂಂಜಾಲಕಟ್ಟೆ ಸ್ವಸ್ತಿಕ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ, ಹಲವಾರು ಸಾಮೂಹಿಕ ವಿವಾಹ ನಡೆಸುತ್ತಿರುವ ತುಂಗಪ್ಪ ಬಂಗೇರ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಕಾರ್ಯಕ್ರಮವಾಗಿ ಸಾಮೂಹಿಕ ವಿವಾಹ ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಹಣ ಮುಖ್ಯವಲ್ಲ. ಕಾರ್ಯಕರ್ತರ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನವೀಕೃತ ಕಚೇರಿ ’ಹಿಂದವಿ’ ಉದ್ಘಾಟನೆ Read More »

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ

ಪುತ್ತೂರು: ಸಂಚಾರ ಪೊಲೀಸ್ ಠಾಣೆ ಹೆಡ್‌ ಕಾನ್‍ ಸ್ಟೇಬಲ್ ಗೂನಡ್ಕ ನಿವಾಸಿ ಶಿವ ಪ್ರಸಾದ್ (51) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮುಂದಿನ ವರ್ಷದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎ ಎಸ್ ಐ ಭಡ್ತಿ ಹೊಂದಲಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಬಂಧು ಮಿತ್ರರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ Read More »

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿ ಸಭೆ ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಜರಗಿತು. ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಳ್ವ ಪಡುಮಲೆ, ಪ್ರತಿಷ್ಠಾನದ ಖಜಾಂಜಿ ಕೃಷ್ಣಶರ್ಮ ಅನಾರು, ಪಡುಮಲೆಯಲ್ಲಿ ಆ.17ರಂದು ಜರಗಲಿರುವ ಜಿಲ್ಲಾಮಟ್ಟದ ಕಾರ್ಯಾಗಾರ, ಕಯ್ಯೂರು ನಾರಾಯಣ ಭಟ್ ಶ್ರೀ ಎಡನೀರು ಮಠಾಧೀಶರ ಚಾತುರ್ಮಾಸ್ಯ ಕಾರ್ಯಕ್ರಮ,  ಸಹಕಾರಿ ಸಂಘದ ಚುನಾವಣೆ,

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಗುಡ್ಡ ಕುಸಿತದಿಂದ ಹಾನಿ : 5.70 ಲಕ್ಷ ರೂ. ಪರಿಹಾರ ವಿತರಣೆ

ಪುತ್ತೂರು: ಈ ಬಾರಿಯ ಮಳೆಯ ಆರಂಭದಲ್ಲಿ ಮಳೆಯ ತೀವ್ರತೆಯಿಂದ 82 ಮನೆಗಳು ಭಾಗಶಃ ಹಾನಿಗೊಳ ಗಾಗಿದ್ದು, ಈ ಮನೆಗಳಿಗೆ ತಲಾ ರೂ.6500ನಂತೆ ಒಟ್ಟು ರೂ.533000 ಪ್ರಾಕೃತಿಕವಿಕೋಪ ಹಿನ್ನಲೆಯಲ್ಲಿ ಪರಿಹಾರವನ್ನು ಪುತ್ತೂರು ತಹಶೀಲ್ದಾರ್ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿತ್ತು. ತಾಲೂಕಿನಲ್ಲಿ 3 ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿ ತಲಾ 3000 ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 22 ಬೆಳೆಹಾನಿ ಪ್ರಕರಣಗಳ ವರದಿಯಾಗಿದ್ದು, ಶೇ33ಕ್ಕಿಂತ ಹೆಚ್ಚು ಬೆಳೆಹಾನಿಯಾದ

ಗುಡ್ಡ ಕುಸಿತದಿಂದ ಹಾನಿ : 5.70 ಲಕ್ಷ ರೂ. ಪರಿಹಾರ ವಿತರಣೆ Read More »

ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ | ಮುಖ್ಯಮಂತ್ರಿಯಾಗಿ ಶಿವಶನ್ಮಯಿ, ಉಪ ಮುಖ್ಯಮಂತ್ರಿಯಾಗಿ ಖದೀಜತ್ ರಿಝಾ

ಪುತ್ತೂರು: ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಮಂತ್ರಿಮಂಡಲ ಮಕ್ಕಳ ಚುನಾವಣೆ ಮೂಲಕ ನಡೆದು ಮುಖ್ಯಮಂತ್ರಿಯಾಗಿ ಶಿವಶನ್ಮಯಿ ಮತ್ತು ಉಪ ಮುಖ್ಯಮಂತ್ರಿಯಾಗಿ ಖದಿಜತ್ ರಿಝಾ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಯಶ್ವಿತ್, ಉಪಮಂತ್ರಿಯಾಗಿ ನಿಖಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀದೇವಿ, ಉಪಮಂತ್ರಿಯಾಗಿ ವರ್ಷಾ, ಸ್ವಚ್ಛತಾ ಮಂತ್ರಿಯಾಗಿ ಅಶ್ವಿನಿ, ಉಪಮಂತ್ರಿಯಾಗಿ ರುಸೈನಾ, ಆರೋಗ್ಯ ಮಂತ್ರಿಯಾಗಿ ತನುಶ್ರೀ ಉಪಮಂತ್ರಿಯಾಗಿ ಲಕ್ಷಿತಾ, ಶಿಕ್ಷಣ ಮಂತ್ರಿಯಾಗಿ ಅಬ್ಝಲ್, ಉಪಮಂತ್ರಿಯಾಗಿ ಚಿಂತನ, ನೀರಾವರಿ ಮಂತ್ರಿಯಾಗಿ ನಮೃತ್, ಉಪಮಂತ್ರಿಯಾಗಿ ನಿಖಿಲ್,ಆಹಾರ ಮಂತ್ರಿಯಾಗಿ ಶಾಶ್ವತ್, ಉಪಮಂತ್ರಿಯಾಗಿ

ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ | ಮುಖ್ಯಮಂತ್ರಿಯಾಗಿ ಶಿವಶನ್ಮಯಿ, ಉಪ ಮುಖ್ಯಮಂತ್ರಿಯಾಗಿ ಖದೀಜತ್ ರಿಝಾ Read More »

error: Content is protected !!
Scroll to Top