ಪುತ್ತೂರು

ಪುತ್ತೂರು ಸರ್ವ ಜನಾಂಗದ ತೋಟ | ಅಮೃತ ನಗರೋತ್ಥಾನ ಕಾಮಗಾರಿ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜನರು ಸ್ವಾಭಿಮಾನದ ಬದುಕು ಸಾಗಿಸಲು ಬೇಕಾದ ಅಗತ್ಯತೆಗಳನ್ನು ಪೂರೈಸುವ ದೃಷ್ಟಿಕೋನದಿಂದ ಪುತ್ತೂರು ನಗರಸಭೆ ಆಲೋಚಿಸುತ್ತಿದೆ. ಇದು ಸಾಧ್ಯವಾದಾಗ ಸಾರ್ಥಕತೆಯನ್ನು ನಾವು ಕಾಣುತ್ತೇವೆ. ಆದ್ದರಿಂದ ಕುವೆಂಪು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟ ಪುತ್ತೂರು ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಪುತ್ತೂರು ನಗರಸಭೆ ಆಶ್ರಯದಲ್ಲಿ ರವಿವಾರ ಪುತ್ತೂರು ಪುರಭವನದಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4ರ ಯೋಜನೆಯಲ್ಲಿ ಪುತ್ತೂರು ನಗರಸಭೆಗೆ ಮಂಜೂರಾಗಿರುವ 30 ಕೋಟಿ ರೂ. ಮೊತ್ತದ ಯೋಜನೆಯಲ್ಲಿ 16.96 ಕೋಟಿ ರೂ. ವೆಚ್ಚದ […]

ಪುತ್ತೂರು ಸರ್ವ ಜನಾಂಗದ ತೋಟ | ಅಮೃತ ನಗರೋತ್ಥಾನ ಕಾಮಗಾರಿ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಪುತ್ತೂರಿನ ಯುವಕ ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಮೃತ್ಯು | ಮೃತದೇಹ ಭಾರತಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲು ಶಾಸಕ ಸಂಜೀವ ಮಠಂದೂರು ಒತ್ತಾಯ

ಪುತ್ತೂರು: ಬನ್ನೂರು ಆರ್.ಟಿ.ಓ. ಕಚೇರಿ ಬಳಿಯ ನಿವಾಸಿ ಸುಬ್ರಹ್ಮಣ್ಯ ಟಿ.ಎ. ಅವರು ಅಮೆರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಸರಕಾರ ಸೂಕ್ತ ಸೂಚನೆ ನೀಡುವಂತೆ ಶಾಸಕ ಸಂಜೀವ ಮಠಂದೂರು ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದಾರೆ. ಪುತ್ತೂರು ನಗರಸಭೆ ವ್ಯಾಪ್ತಿಗೆ ಒಳಪಟ್ಟ ಬನ್ನೂರು ಸಮೀಪದ ನಿವಾಸಿ ಟಿ. ಅನಂತಕೃಷ್ಣ ಭಟ್ ಅವರ ಪುತ್ರ ಸುಬ್ರಹ್ಮಣ್ಯ ಟಿ.ಎ. (30 ವ.) ಮೃತಪಟ್ಟ ಯುವಕ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ನಡೆದ

ಪುತ್ತೂರಿನ ಯುವಕ ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಮೃತ್ಯು | ಮೃತದೇಹ ಭಾರತಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲು ಶಾಸಕ ಸಂಜೀವ ಮಠಂದೂರು ಒತ್ತಾಯ Read More »

ಸಂಸ್ಕೃತಿ, ಪರಂಪರೆ ಮುಂದುವರಿಕೆಗೆ ಸಂಸ್ಮರಣಾ ಕಾರ್ಯಕ್ರಮ ಪೂರಕ: ಮಠಂದೂರು

ಪುತ್ತೂರು: ನಮ್ಮ ಸಂಸ್ಕಾರ – ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪರಂಪರೆಗೆ ಹಸ್ತಾಂತರಿಸುವ ಮಹಾತ್ಕಾರ್ಯ ವನ್ನು ಸ್ವಾಮೀಜಿಯವರ ಸಂಸ್ಮರಣ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಮಾಡಬೇಕಾಗಿದೆ. ಸಮಾಜದ ಬೆಳವಣಿಗೆಯಲ್ಲಿ, ಸಂಘಟಾನಾತ್ಮಕವಾಗಿ ಮುಂದುವರಿಯಲು ಇಂತಹ ಕಾರ್ಯಕ್ರಮ ಅವಶ್ಯಕ ಮತ್ತು ಅನಿವಾರ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಜ. 22ರಂದು ಪುತ್ತೂರಿನಲ್ಲಿ ನಡೆಯಲಿರುವ ಬೈರವೈಕ್ಯರಾಗಿರುವ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯೋತ್ಸವ ಸಲುವಾಗಿ ಕೊಳ್ತಿಗೆ ಗ್ರಾಮದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಂಗಳೂರು ಶಾಖಾಮಠದ

ಸಂಸ್ಕೃತಿ, ಪರಂಪರೆ ಮುಂದುವರಿಕೆಗೆ ಸಂಸ್ಮರಣಾ ಕಾರ್ಯಕ್ರಮ ಪೂರಕ: ಮಠಂದೂರು Read More »

ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ. ದಿನಕರ ಅಡಿಗ

ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ. ಜೆ. ದಿನಕರ ಅಡಿಗ ನೇಮಕಗೊಂಡಿದ್ದಾರೆ.ಡಿಸಿಆರ್‌ನ ಪ್ರಧಾನ ವಿಜ್ಞಾನಿಯಾಗಿದ್ದ ಅವರು, ಇದೀಗ ಪದೋನ್ನತಿಗೊಂಡು ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.ತೋಟಗಾರಿಕಾ ವಿಷಯದಲ್ಲಿ ೩ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದ್ದ ಡಾ. ಅಡಿಗರು, ತನ್ನ ಪ್ರೌಢ ಪ್ರಬಂಧವನ್ನು ಉನ್ನತ ಶ್ರೇಣಿಯೊಂದಿಗೆ ಪೂರೈಸಿದ್ದರು. ಬಳಿಕ ಸೆಂಟ್ರಲ್ ಕಾಫಿ ರೀಸರ್ಚ್ ಇನ್‌ಸ್ಟಿಟ್ಯೂಟ್, ಕಿತ್ತೂರು ರಾಣಿ ಚೆನ್ನಮ್ಮ ಕಾಲೇಜ್ ಆಫ್ ಹಾರ್ಟಿಕಲ್ಚರ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ, ೨೦೦೭ರಲ್ಲಿ ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ

ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ. ದಿನಕರ ಅಡಿಗ Read More »

ಬಾಲಗಂಗಾಧರನಾಥ ಸ್ವಾಮೀಜಿಗೆ ಅವರೇ ಸಾಟಿ: ಧರ್ಮಪಾಲನಾಥ ಸ್ವಾಮೀಜಿ | ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಪೂರ್ವಭಾವಿ ಸಭೆ

ಪುತ್ತೂರು: ಸುಧೀರ್ಘ ಇತಿಹಾಸ ಹಾಗೂ ಪರಂಪರೆ ಹೊಂದಿರುವ ನಾಥ ಪರಂಪರೆಯ ೭೨ ಜಗದ್ಗುರುಗಳನ್ನು ಕಂಡಿರುವ ಆದಿಚುಂಚನಗಿರಿ ಧರ್ಮ ಪೀಠಾಧ್ಯಕ್ಷರಾಗಿದ್ದ, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಧನೆಗೆ ಅವರೇ ಸಾಟಿ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಡಿಸೆಂಬರ್ ೨೨ರಂದು ನಡೆಯಲಿರುವ ಆದಿಚುಂಚನಗಿರಿ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.ಶುಕ್ರವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರಗಿದ ಸಭೆಯಲ್ಲಿ ಮಾತನಾಡಿದ ಅವರು,

ಬಾಲಗಂಗಾಧರನಾಥ ಸ್ವಾಮೀಜಿಗೆ ಅವರೇ ಸಾಟಿ: ಧರ್ಮಪಾಲನಾಥ ಸ್ವಾಮೀಜಿ | ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಪೂರ್ವಭಾವಿ ಸಭೆ Read More »

ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾರತೀಯ ಸೇನೆಯಿಂದ ಇತ್ತೀಚೆಗೆ ನಿವೃತ್ತಿಗೊಂಡ ಯೋಧ ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ವಿಶ್ವನಾಥ ಶೆಣೈ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ದೊರಕುವುದೇ ಒಂದು ಅಪೂರ್ವ ಸಂಗತಿ. ಇತ್ತೀಚೆಗೆ ಅಗ್ನಿವೀರ್ ಎಂಬ ಯೋಜನೆಯ ಮೂಲಕ ಯುವಶಕ್ತಿ ಭಾರತೀಯ ಸೈನ್ಯವನ್ನು ಸೇರಿಕೊಳ್ಳುವುದಕ್ಕೆ ಅವಕಾಶಗಳು

ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ Read More »

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ಇದರ ವತಿಯಿಂದ ನಿವೃತ್ತ ಶಿಕ್ಷಕಿಗೆ ಅಭಿನಂದನೆ

ಶ್ರೀ ಭಾರತಿ ಮತ್ತು ಗೋಪಾಲಕೃಷ್ಣ ಕಿಲಂಗೋಡಿಯವರ ಮನೆಯಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜಾ ಕರ‍್ಯಕ್ರಮ‌ದ ಬಳಿಕ ನಡೆದ ಸಮಾರಂಭದಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ಇದರ ಶತಮಾನೋತ್ಸದ ಶತಕರ‍್ಯಕ್ರಮದ ಅಂಗವಾಗಿ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಿವೃತ್ತ ಮುಖ್ಯಗುರು ಶ್ರೀಮತಿ ರೇವತಿ ಕುಕ್ಕಂಬಳ್ಳ ಅವರನ್ನು ಗೌರವಿಸಿ ಅಭಿನಂದಿಸಲಾಯಿತು .ಕರ‍್ಯಕ್ರಮದಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ನ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ‌,ನರ‍್ದೇಶಕ ವಿಷ್ಣು ಪ್ರಭು ಸೇರಿದಂತೆ

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ಪುತ್ತೂರು ಇದರ ವತಿಯಿಂದ ನಿವೃತ್ತ ಶಿಕ್ಷಕಿಗೆ ಅಭಿನಂದನೆ Read More »

ಹುತಾತ್ಮ ಸೈನಿಕರ ಮನೆಯಲ್ಲಿ ಶತ್ ಶತ್ ನಮನ | ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾರ್ಯಕ್ರಮ

ಪುತ್ತೂರು: ೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಘಟಕದ ಆಶ್ರಯದಲ್ಲಿ ಶತ್ ಶತ್ ನಮನ ವಿಶೇಷ ಕಾರ್ಯಕ್ರಮ ಹವಾಲ್ದಾರ್ ದಿ. ಪರಮೇಶ್ವರ ಕೆ. ಅವರ ದೋಲ್ಪಾಡಿ ಮನೆಯಲ್ಲಿ ನಡೆಯಿತು. ಸೈನಿಕರ ಪರಾಕ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಅವರಿಗೆ ಗೌರವ ಅರ್ಪಿಸಲು ಹಾಗೂ ಅವರ ಕುಟುಂಬಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಶತ್ ಶತ್ ನಮನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ೧೯ ವರ್ಷಗಳ ಹಿಂದೆ ಭೂಸೇನೆಗೆ ಸೇರ್ಪಡೆಗೊಂಡ ಯೋಧ ಪರಮೇಶ್ವರ ಗೌಡ ಅವರು ಬೆಂಗಳೂರಿನಲ್ಲಿ

ಹುತಾತ್ಮ ಸೈನಿಕರ ಮನೆಯಲ್ಲಿ ಶತ್ ಶತ್ ನಮನ | ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾರ್ಯಕ್ರಮ Read More »

ಅಕ್ಷಯ ಕಾಲೇಜಿನಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ ಕಾರ್ಯಕ್ರಮ ಜರಗಿತು.ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಪುತ್ತೂರು ಅಕ್ಷಯ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.ಕಾಟಿಪಳ್ಳ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ. ದಯಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಟಿಪಳ್ಳ ಶ್ರೀ ನಾರಾಯಣಗುರು ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗುಣವತಿ ರಮೇಶ್ ಅವರು ನಾರಾಯಣಗುರುಗಳ ಸಾಮಾಜಿಕ ಸುಧಾರಣೆ ಹಾಗೂ ಅವರ ಚಿಂತನೆಗಳ ಬಗ್ಗೆ

ಅಕ್ಷಯ ಕಾಲೇಜಿನಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ Read More »

ಎನ್‌ಆರ್‌ಎಲ್‌ಎಂ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

ಪುತ್ತೂರು: ಎನ್‌ಆರ್‌ಎಲ್‌ಎಂ ಯೋಜನೆಯ ಕಟ್ಟಡಕ್ಕೆ ನಿರ್ಮಾಣಕ್ಕೆ ಬನ್ನೂರಿನ ಬೀರಿಗದಲ್ಲಿ ಶನಿವಾರ ಶಾಸಕ ಸಂಜೀವ ಮಠಂದೂರು ಅವರು ಶಂಕುಸ್ಥಾಪನೆ ನೆರವೇರಿಸಿದರು.ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು. ಎನ್‌ಆರ್‌ಎಲ್‌ಎಂ ಯೋಜನೆಯಡಿ ಸಂಜೀವಿನಿ ಒಕ್ಕೂಟ ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಹಲವು ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬೀರಿಗದಲ್ಲಿ ಕಟ್ಟಡಕ್ಕೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಸುಮಾರು ೧೮.೫ ಲಕ್ಷ ರೂ. ವೆಚ್ಚದಲ್ಲಿ ಯೋಜನೆಯು ಕಾರ್ಯಗತಗೊಳ್ಳಲಿದೆ.

ಎನ್‌ಆರ್‌ಎಲ್‌ಎಂ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ Read More »

error: Content is protected !!
Scroll to Top