ಪುತ್ತೂರು

ಶಿರಾಡಿ ರಾಜನ್ ದೈವದ ನೇಮೋತ್ಸವ | ಅನ್ಯಾಡಿಯಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಮಾ. 9ರಂದು ನಡೆಯಲಿರುವ ಕುದ್ಮಾರು ಅನ್ಯಾಡಿ ಶ್ರೀ ಶಿರಡಿ ರಾಜನ್ ದೈವದ ನೇಮೋತ್ಸವ ಹಿನ್ನೆಲೆಯಲ್ಲಿ ಜ. 8ರಂದು ಪೂರ್ವಭಾವಿ ಸಭೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೆಡೆಂಜಿ ಗುತ್ತಿನ ಪ್ರವೀಣ್ ಕುಮಾರ್ ಕೆಡೆಂಜಿ, ಆಡಳಿತ ಸಮಿತಿ ಉಪಾಧ್ಯಕ್ಷರಾದ ರೋಹಿತಕ್ಷ ಕೆಡೆಂಜಿಕಟ್ಟ, ಚೇನಪ್ಪ ಗೌಡ ನೂಜಿ, ದೇವಪ್ಪ ಗೌಡ ನಡುಮನೆ, ಕಾರ್ಯದರ್ಶಿ ನಾಗೇಶ್ ಕೆ. ಕೆಡೆಂಜಿ, ಕೋಶಾಧಿಕಾರಿ ಉಮೇಶ್, ಯೋಗೀಶ್ ಕೆಡೆಂಜಿ, ಉಮೇಶ್ ಕೆರೆನಾರು, ಊರಿನ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿರಾಡಿ ರಾಜನ್ ದೈವದ ನೇಮೋತ್ಸವ | ಅನ್ಯಾಡಿಯಲ್ಲಿ ಪೂರ್ವಭಾವಿ ಸಭೆ Read More »

ಆರೋಗ್ಯ ಉಚಿತ ತಪಾಸಣೆ, ಕಣ್ಣಿನ ಉಚಿತ ಪರೀಕ್ಷೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂಜೂರುಪಂಜ, ಜನಜಾಗೃತಿ ವೇದಿಕೆ ಬಲ್ನಾಡು ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು, ಪುತ್ತೂರು ರೋಟರ್ಯಾಕ್ಟ್ ಕ್ಲಬ್‍, ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣಾ ಕಾರ್ಯಕ್ರಮ ಹಾಗೂ ಕಣ್ಣಿನ ಉಚಿತ ಪರೀಕ್ಷೆ ಜ. 8ರಂದು ಕುಂಜೂರುಪಂಜ ಮಂಜುನಾಥ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀ ಕ್ಷೇತ್ರ

ಆರೋಗ್ಯ ಉಚಿತ ತಪಾಸಣೆ, ಕಣ್ಣಿನ ಉಚಿತ ಪರೀಕ್ಷೆ Read More »

ಕೃಷಿ ಅಂಗಳದಿಂದ ಬದುಕಿನ ಆರಂಭ | ಸಸ್ಯಜಾತ್ರೆಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾದರೂ ನಮ್ಮ ಚಿತ್ತ ಪಾರಂಪರಿಕ ಕೃಷಿಯತ್ತ ಹರಿಯಬೇಕಾದ ಅಗತ್ಯವಿದೆ. ನಮ್ಮೆಲ್ಲರ ಬದುಕು ಆರಂಭ ಆಗಿರುವುದೇ ಕೃಷಿ ಅಂಗಳದಿಂದ. ಆದ್ದರಿಂದ ಪಾರಂಪರಿಕ ಕೃಷಿಗೆ ಹಿಂದಿರುಗಲು ನಮ್ಮ ಮನೆ ಅಂಗಳಕ್ಕೆ ನಾವು ಹಿಂದಿರುಗುವ ಕೆಲಸ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ, ವಿವಿಧ ಒಕ್ಕೂಟ ಮತ್ತು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಕಿಲ್ಲೆ ಮೈದಾನದಲ್ಲಿ ಆರಂಭಗೊಂಡ ಸಸ್ಯಜಾತ್ರೆಯನ್ನು ಉದ್ಘಾಟಿಸಿ

ಕೃಷಿ ಅಂಗಳದಿಂದ ಬದುಕಿನ ಆರಂಭ | ಸಸ್ಯಜಾತ್ರೆಗೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು Read More »

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ತುಳುವೆರೆ ಮೇಳೊ ಪೂರಕ | ತುಳುವೆರೆ ಮೇಳೊ 2023ಕ್ಕೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದು ತುಳುವಿನ ಮಾನ್ಯತೆ ಗಿಟ್ಟಿಸಿಕೊಳ್ಳಲು ಸಹಕಾರಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಬಂಟರ ಭವನದಲ್ಲಿ ಶನಿವಾರ ನಡೆದ ಪುತ್ತೂರು ತುಳುಕೂಟದ ಸುವರ್ಣ ಮಹೋತ್ಸವ ಹಾಗೂ ತಾಲೂಕು ತುಳುವೆರೆ ಮೇಳೊ-2023 ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸೆಗೆ ಭತ್ತ ತುಂಬುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಭಾಷೆ ಸಮಾಜದ ಜನಾಂಗ, ಸಂಸ್ಕೃತಿಯನ್ನು ಬೆಸುಗೆ ಮಾಡುವ ಮಹತ್ವವನ್ನು ಪಡೆದಿದೆ.

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ತುಳುವೆರೆ ಮೇಳೊ ಪೂರಕ | ತುಳುವೆರೆ ಮೇಳೊ 2023ಕ್ಕೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು Read More »

ಜ. 12ರಂದು ವಿವೇಕಾನಂದಲ್ಲಿ ವಿವೇಕಾನಂದ ಜಯಂತಿ

ಪುತ್ತೂರು: ಹಿಂದುತ್ವ ರಾಷ್ಟ್ರೀಯತೆಯ ಸಂಕಲ್ಪದೊಂದಿಗೆ ನೆಹರೂನಗರ ವಿವೇಕಾನಂದ ಕ್ಯಾಂಪಸ್‍್ನಲ್ಲಿ ಜ. 12ರಂದು ವಿವೇಕಾನಂದ ಜಯಂತಿ ಆಚರಣೆ ಜರಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಎನ್ನುವ ಪರಮ ಸಂತನ ಹೆಸರಿನಲ್ಲಿ ಸಂಸ್ಕಾರವುಳ್ಳ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಬಂದಿದೆ.  ವಿದ್ಯಾಸಂಸ್ಥೆಗಳು ಕೇವಲ ಪದವಿ ನೀಡುವುದಲ್ಲ. ವಿದ್ಯಾಸಂಸ್ಥೆಗಳು ಸಾಮಾಜಿಕ ಹಿತ ಕಾಯಬೇಕು, ಸಾಮಾಜಿಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ

ಜ. 12ರಂದು ವಿವೇಕಾನಂದಲ್ಲಿ ವಿವೇಕಾನಂದ ಜಯಂತಿ Read More »

ಜ. 9ರಂದು ವಿವೇಕಾನಂದದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ

ಪುತ್ತೂರು: ಟಿಪ್ಪು ನಿಜ ಕನಸುಗಳು ನಾಟಕದ 21ನೇ ಪ್ರದರ್ಶನವು ಜ. 9ರಂದು ಸಂಜೆ 6.30ರಿಂದ ಪುತ್ತೂರು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕ ರಚಿಸಿ, ನಿರ್ದೇಶನ ಮಾಡಿರುವ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಚರಿತ್ರೆಕಾರರು ಬರೆದದ್ದೇ ಸತ್ಯ ಎಂದು ಅದನ್ನು ಪಠ್ಯವಾಗಿಸಿ ಇದೇ ಸತ್ಯ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ನಡೆದು ಬಂದಿತ್ತು. ಇದನ್ನು ಮೀರಿದ ಟಿಪ್ಪು ಕುರಿತ ಸತ್ಯದ ಅನಾವರಣ ಈ ನಾಟಕ

ಜ. 9ರಂದು ವಿವೇಕಾನಂದದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ Read More »

ಕಾಂಚನ: ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಹಾಗೂ ಸಂಸ್ಮರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಜತ್ತೂರು ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬಜತ್ತೂರು ಕಾಂಚನ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ಕಾಂಚನ: ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ Read More »

ಬಳ್ಪಕ್ಕೆ ಭೇಟಿ ನೀಡಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ| ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆಯ ಹಿನ್ನೆಲೆಯಲ್ಲಿ ಬಳ್ಪ ಶ್ರೀ ಭಾರತಿ ತೀರ್ಥ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಕಾವೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ವಿವರಿಸಲಾಯಿತು. ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ‌ ಜೊತೆಗೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವದ ಹಾಗೂ ರಜತ ತುಲಾಭಾರ ಹಾಗೂ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ

ಬಳ್ಪಕ್ಕೆ ಭೇಟಿ ನೀಡಿದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ| ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಭಾವಿ ಸಭೆ Read More »

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಹೆತ್ತವರ ಸಭೆ

ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೋಷಕರ ಮಾರ್ಗದರ್ಶನ ಅಗತ್ಯ : ಸುಬ್ರಹ್ಮಣ್ಯ ನಟ್ಟೋಜ ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಿ ಸಾಧನೆ ಮಾಡುವಲ್ಲಿ ಉಪನ್ಯಾಸಕರ ಜೊತೆಗೆ ಪೋಷಕರ ಪಾತ್ರವೂ ಮಹತ್ತರವಾದುದು. ಪೋಷಕರು ನಿರಂತರವಾಗಿ ಉಪನ್ಯಾಸಕರು ಹಾಗೂ ಕಾಲೇಜಿನ ಸಂಪರ್ಕ ಹೊಂದಿದಲ್ಲಿ ವಿದ್ಯಾರ್ಥಿಗಳ ಪ್ರತಿಯೊಂದು ಚಟುವಟಿಕೆಗಳ ವಿವರ ದೊರೆತು ಅವರು ಸಮರ್ಪಕ ದಾರಿಯಲ್ಲಿ ನಡೆಯುವಂತೆ ಮಾಡಲು ಅನುಕೂಲವಾಗುತ್ತದೆ. ವಿಚಾರ ವಿನಿಮಯ ನಡೆದಾಗ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.ಅವರು

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಹೆತ್ತವರ ಸಭೆ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 5ರಂದು ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಅಷ್ಠಬಂಧ ಲೇಪನ, ಬೆಳಿಗ್ಗೆ 11.14ಕ್ಕೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಂಗಪೂಜೆ, ಶ್ರೀ ಭೂತ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ನಾಲ್ಕಂಭ ಕ್ಷೇತ್ರದಲ್ಲಿ ಕಟ್ಟೆ ಪೂಜೆ, ಮಂತ್ರಾಕ್ಷತೆ ಹಾಗೂ ಬೆಳಂದೂರು ಲಕ್ಷ್ಮೀಪ್ರಿಯಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಜ. 6ರ ಕಾರ್ಯಕ್ರಮ:ಜ. 6ರಂದು ಬೆಳಿಗ್ಗೆ ಉಳ್ಳಾಕ್ಲು ಭಂಡಾರ ತೆಗೆಯಲಾಗುವುದು. ರಾತ್ರಿ 9ರಿಂದ

ಕುಂಬ್ಲಾಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

error: Content is protected !!
Scroll to Top