ಪುತ್ತೂರು

ಕುಂಡಡ್ಕದ ಬಾಲಕ ಅಬೀಲ್ ನಾಪತ್ತೆ!!

ಬೆಳ್ಳಾರೆ: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ. 9ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು […]

ಕುಂಡಡ್ಕದ ಬಾಲಕ ಅಬೀಲ್ ನಾಪತ್ತೆ!! Read More »

ಪುತ್ತೂರು ಡಿವೈಎಸ್‍ಪಿ ಡಾ.ಗಾನ ಪಿ. ಕುಮಾರ್ ವರ್ಗಾವಣೆ

ಪುತ್ತೂರು: :ಪುತ್ತೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾಗಿ ಕರ್ತವ್ಯದಲ್ಲಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು. ಬಳಿಕ ಪುನಃ ಅವರನ್ನು ವರ್ಗಾವಣೆಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು.

ಪುತ್ತೂರು ಡಿವೈಎಸ್‍ಪಿ ಡಾ.ಗಾನ ಪಿ. ಕುಮಾರ್ ವರ್ಗಾವಣೆ Read More »

ಡಿ.1 – 4: ಪುತ್ತೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ | ಕ್ಷೇತ್ರದಾದ್ಯಂತ ಸಂಚರಿಸಲಿದೆ ಕ್ರೀಡಾ ರಥ, ಕ್ರೀಡಾಜ್ಯೋತಿ | 35 ಜಿಲ್ಲೆಗಳಿಂದ 2500 ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ

ಪುತ್ತೂರು: ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ಡಿ.1, 2, 3 ಹಾಗೂ 4ರಂದು ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಾಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟ ಪುತ್ತೂರಿಗೆ ಮೆರುಗು ತರಲಿದ್ದು, ಈ ನಿಟ್ಟಿನಲ್ಲಿ ವ್ಯವಸ್ಥೆಗಳು ಸಮರೋಪಾದಿಯಲ್ಲಿ ಸಜ್ಜುಗೊಳ್ಳುತ್ತಿವೆ ಎಂದು ಕ್ರೀಡಾಕೂಟ ಸಂಚಾಲಕ, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ತಿಳಿಸಿದರು. ಅವರು ಶುಕ್ರವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ರೀಡಾಕೂಟದ ಯಶಸ್ಸಿಗಾಗಿ ಸುಮಾರು 18 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ನಾಲ್ಕು ದಿನಗಳ ಕಾಲ

ಡಿ.1 – 4: ಪುತ್ತೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ | ಕ್ಷೇತ್ರದಾದ್ಯಂತ ಸಂಚರಿಸಲಿದೆ ಕ್ರೀಡಾ ರಥ, ಕ್ರೀಡಾಜ್ಯೋತಿ | 35 ಜಿಲ್ಲೆಗಳಿಂದ 2500 ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ Read More »

ಅರುಣ್ ಪುತ್ತಿಲರ ಹುಟ್ಟುಹಬ್ಬ: ಪೌರಕಾರ್ಮಿಕರ ಜೊತೆ ಸಹಭೋಜನ

ಪುತ್ತೂರು: ತನ್ನ ಹುಟ್ಟುಹಬ್ಬದ ದಿನದಂದು ಪುತ್ತೂರಿನ ಸ್ವಚ್ಛತಾ ಸೇನಾನಿ ಪೌರ ಕಾರ್ಮಿಕರ ಜೊತೆ ಅರುಣ್ ಕುಮಾರ್ ಪುತ್ತಿಲ ಸಹಬೋಜನಾ ನಡೆಸಿದರು. ಪುತ್ತೂರು ನಗರಸಭೆಯ ಎಂಬತ್ತಕ್ಕೂ ಮಿಕ್ಕಿ ಪೌರ ಕಾರ್ಮಿಕರಿಗೆ ಸಮುದಾಯ ಭವನದಲ್ಲಿ ಸಹಬೋಜನಾ ವ್ಯವಸ್ಥೆ ನಡೆಸಲಾಯಿತು. ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅರುಣ್ ಪುತ್ತಿಲರ ಹುಟ್ಟುಹಬ್ಬ: ಪೌರಕಾರ್ಮಿಕರ ಜೊತೆ ಸಹಭೋಜನ Read More »

ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಹಾಲಿ ಶಾಸಕ!

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುರವರು ಹಾವು ಕಡಿತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ವಿಚಾರ ಗೊತ್ತಾದ ತಕ್ಷಣವೇ ಶಾಸಕ ಅಶೋಕ್ ರೈಯವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮುಂಬೈ ಪ್ರವಾಸದಲ್ಲಿರುವ ಶಾಸಕ ಅಶೋಕ್ ರೈಯವರು  ಆಸ್ಪತ್ರೆಯಲ್ಲಿರುವ ಮಾಜಿ ಶಾಸಕರ ಪುತ್ರನ ಮೊಬೈಲ್ ಗೆ ಕರೆ ಮಾಡಿ ಮಠಂದೂರು ಜೊತೆ ಮಾತನಾಡಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಜೀವ ಮಠಂದೂರು ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಹಾಲಿ ಶಾಸಕ! Read More »

ಸಂಜೀವ ಮಠಂದೂರು ಭೇಟಿಯಾದ ಪುತ್ತಿಲ

ಪುತ್ತೂರು: ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಆರೋಗ್ಯ ವಿಚಾರಿಸಿದರು. ಗುರುವಾರ ಸಂಜೆ ವಾಕಿಂಗ್ ಮಾಡುತ್ತಿದ್ದ ವೇಳೆ ಸಂಜೀವ ಮಠಂದೂರು ಅವರಿಗೆ ವಿಷದ ಹಾವು ಕಚ್ಚಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದರು. ಶುಕ್ರವಾರ ಬೆಳಿಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದೀಗ ಅರುಣ್ ಕುಮಾರ್ ಪುತ್ತಿಲ ಅವರು ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದರು. ಬಿಜೆಪಿ ಮಂಡಲ

ಸಂಜೀವ ಮಠಂದೂರು ಭೇಟಿಯಾದ ಪುತ್ತಿಲ Read More »

ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜದ ಆತ್ಮಿ ಗೌಡ ಎಸ್. ಆಯ್ಕೆ

ಪುತ್ತೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜ ಗ್ರಾಮದ ನಾಲ್ಕು ವರ್ಷದ ಆತ್ಮಿ ಗೌಡ  ಎಸ್‍. ಆಯ್ಕೆಯಾಗಿದ್ದಾರೆ. ಮೆಗಾ ಆಡಿಷನ್ ನ.18 ಹಾಗೂ 19 ರಂದು ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ರಾಜ್ಯಾದ್ಯಂತ ನಡೆಸಿದ ಮೊದಲ ಹಂತದ ಆಡಿಷನ್‍ ನಲ್ಲಿ ಸುಮಾರು 30 ಸಾವಿರ ಪ್ರತಿಭೆಗಳು ಭಾಗವಹಿಸಿದ್ದು, ಆತ್ಮಿ ಗೌಡ ಎಸ್‍ ಮುಂದಿನ ಹಂತದ ಮೆಗಾ ಆಡಿಷನ್‍ ಗೆ ಆಯ್ಕೆಯಾಗಿದ್ದಾರೆ. ಆತ್ಮಿ ಗೌಡ ಈ ಹಿಂದೆ

ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಮೆಗಾ ಆಡಿಷನ್‍ ಗೆ ರಾಮಕುಂಜದ ಆತ್ಮಿ ಗೌಡ ಎಸ್. ಆಯ್ಕೆ Read More »

ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಪೆರ್ನೆ ವಲಯದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ ನ ಉದ್ಘಾಟನಾ ಸಮಾರಂಭವು ಪೆರ್ನೆ ಅಯೋಧ್ಯಾನಗರದ ಶ್ರೀ ರಾಮಚಂದ್ರ ಪ್ರೌಢ ಶಾಲೆಯಲ್ಲಿ ನಡೆಯಿತು. ಪೆರ್ನೆ ಬಿ ಒಕ್ಕೂಟದ ಅಧ್ಯಕ್ಷೆ ಯಶೋಧಾ ಕ್ಲಾಸ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶೇಖರ್ ರೈ ಶುಭ ಹಾರೈಸಿದರು. ವಲಯದ ಮೇಲ್ವಿಚಾರಕಿ ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ

ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ ಉದ್ಘಾಟನೆ Read More »

ವಿಷ ಸೇವಿಸಿ ಆತ್ಮಹತ್ಯೆ!

ಸುಳ್ಯ: ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಚೆಂಬು ಗ್ರಾಮದ ದೊಡ್ಡಜೆಯಲ್ಲಿ ನಡೆದಿದೆ. ಚೆಂಬು ಗ್ರಾಮದ ದೊಡ್ಡಜೆ ಉದಯ (38) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಮನೆಯಲ್ಲಿ ವಿಷ ಸೇವಿಸಿದ್ದರು. ಮನೆಯವರು ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ವಿಷ ಸೇವಿಸಿ ಆತ್ಮಹತ್ಯೆ! Read More »

ಸಂಪರ್ಕ ರಸ್ತೆಗೆ ದಿ. ಸುಧಾಕರ ಶೆಟ್ಟಿ ಹೆಸರಿಡಲು ಅಖಿಲ ಕರ್ನಾಟಕ ಹಿರಿಯ ಸೇವಾ ಪ್ರತಿಷ್ಠಾನ ಮನವಿ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಕೇಂದ್ರ ಸಮಿತಿ ಮತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ಕೆಎಸ್‍ ಆರ್‍ ಟಿಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣದ ಸಂಪರ್ಕ ರಸ್ತೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ದಿ.ಸುಧಾಕರ ಶೆಟ್ಟಿ ಅವರ ಹೆಸರು ಇಡುವಂತೆ ಪುತ್ತೂರು ಸಹಾಯಕ ಆಯುಕ್ತರು ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ನೇತೃತ್ವದಲ್ಲಿ

ಸಂಪರ್ಕ ರಸ್ತೆಗೆ ದಿ. ಸುಧಾಕರ ಶೆಟ್ಟಿ ಹೆಸರಿಡಲು ಅಖಿಲ ಕರ್ನಾಟಕ ಹಿರಿಯ ಸೇವಾ ಪ್ರತಿಷ್ಠಾನ ಮನವಿ Read More »

error: Content is protected !!
Scroll to Top